HOME
CINEMA NEWS
GALLERY
TV NEWS
REVIEWS
CONTACT US

ಶ್ಯಾಡೊ ಯುಎ ಪ್ರಮಾಣಪತ್ರ
ಕಾಮನ್ ಮ್ಯಾನ್ ಪಾತ್ರವನ್ನು ನಿರ್ವಹಿಸಿರುವ ನಾಯಕ ವಿನೋದ್‍ಪ್ರಭಾಕರ್ ಚಿತ್ರ ‘ಶ್ಯಾಡೊ’ಗೆ ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಕ್ಕೆ ಕಟ್ ಹೇಳದೆ ಕ್ಲೀನ್ ಯುಎ ಪ್ರಮಾಣ ಪತ್ರ ನೀಡಿರುವುದು ತಂಡಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ಹಿಂದಿನ ಚಿತ್ರಗಳಿಗೆ ಡಬ್ಬಿಂಗ್‍ಗೆಂದು ಹದಿನೈದು ದಿನ ತೆಗೆದುಕೊಳ್ಳುತ್ತಿದ್ದ ಮರಿಟೈಗರ್ ಇದನ್ನು ಮೂರು ದಿನದಲ್ಲಿ ಮುಗಿಸಿರುವುದು ಹೆಮ್ಮೆಯ ವಿಷಯವಾಗಿದೆ. ನಾಯಕಿಯಾಗಿ ಆಮದು ನಟಿ ಶೋಭಿತರಾಣ. ಭ್ರಷ್ಟ ಪೋಲೀಸ್ ಅಧಿಕಾರಿಯಾಗಿ ಶರತ್‍ಲೋಹಿತಾಶ್ವ, ಉಳಿದಂತೆ ಗಿರಿ, ಶ್ರವಣ್, ಸತ್ಯದೇವ್ ಮುಂತಾದವರು ನಟಿಸಿದ್ದಾರೆ. ಕತೆ ಆನಂದ್‍ರವಿ, ಛಾಯಾಗ್ರಹಣ ಮನೋಹರ್‍ಜೋಷಿ, ರಾಮ್‍ನಾರಾಯಣ್ ಸಾಹಿತ್ಯದ ಗೀತೆಗಳಿಗೆ ಅಚ್ಚು ರಾಗ ಒದಗಿಸಿದ್ದಾರೆ.

ಹಿನ್ನಲೆ ಸಂಗೀತ ಚರಣ್‍ಅರ್ಜುನ್, ಸಂಕಲನ ಚೋಟ.ಕೆ.ಪ್ರಸಾದ್, ಸಾಹಸ ವಿನೋಧ್, ನೃತ್ಯ ಸುದೀರ್ ನಿರ್ವಹಿಸಿದ್ದಾರೆ. ಹಿಂದಿ ಡಬ್ಬಿಂಗ್ ಹಕ್ಕುಗಳು ಉತ್ತಮ ಬೆಲೆಗೆ ಬೇಡಿಕೆ ಬಂದಿದೆ. ಟಾಲಿವುಡ್‍ನ ಸ್ಟಾರ್ ನಿರ್ದೇಶಕ ಪೂರಿಜಗನ್ನಾಥ್ ಪಟ್ಟಾಶಿಷ್ಯ ರವಿಗೌಡ ಚಿತ್ರಕ್ಕೆ ಸಂಭಾಷಣೆ, ಚಿತ್ರಕತೆ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಚಕ್ರವರ್ತಿ ನಿರ್ಮಾಣ ಮಾಡಿರುವ ಸಿನಿಮಾದ ಟ್ರೈಲರ್, ಟೀಸರ್ ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
14/04/19

ಹೊಸ ವರ್ಷಕ್ಕೆ ಬಿದ್ದೆ ಬಿದ್ದೆ ವಿಡಿಯೋ ಹಾಡು
ಲೀಡಿಂಗ್ ಸ್ಟಾರ್ ವಿನೋಧ್‍ಪ್ರಭಾಕರ್ ಕಾಮನ್ ಮ್ಯಾನ್ ಆಗಿ ಅಭಿನಯಿಸಿರುವ ‘ಶ್ಯಾಡೊ’ ಚಿತ್ರದ ‘ಬಿದ್ದೆ ಬಿದ್ದೆ’ ವಿಡಿಯೋ ಹಾಡನ್ನು ಅಭಿಮಾನಿಗಳಿಗೆ ಹೊಸ ವರ್ಷದ ಮೊದಲ ದಿನದಂದು ಯೂ ಟ್ಯೂಬ್‍ನಲ್ಲಿ ಬಿಡಲಾಗಿದೆ. ಅಚ್ಚು ಸಂಗೀತದ ಗೀತೆಗೆ ಜೀನ್ಸ್ ಡ್ರೆಸ್‍ನಲ್ಲಿ ನಾಯಕ, ಹರಿಷಿನ ಬಣ್ಣದ ಶರ್ಟ್, ಪ್ಯಾಂಟ್ ಧರಿಸಿರುವ ನಾಯಕಿ ಶೋಭಿತರಾಣ ಹಾಡಿನಲ್ಲಿ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವುದು ಬಳ್ಳಾರಿಯ ರವಿಗೌಡ. ಇನ್ಸ್‍ಪೆಕ್ಟರ್ ಆಗಿ ಶರತ್‍ಲೋಹಿತಾಶ್ವ, ಕಾಮಿಡಿ ಪಾತ್ರದಲ್ಲಿ ಲೋಕೇಶ್ ಮುಂತಾದವರು ನಟಿಸಿದ್ದಾರೆ. ಛಾಯಗ್ರಹಣ ಮನೋಹರ್‍ಜೋಷಿ, ಸಾಹಸ ವಿನೋಧ್, ಸಂಕಲನ ಚೋಟ.ಕೆ.ಪ್ರಸಾದ್ ಅವರದಾಗಿದೆ. ಟಾಲಿವುಡ್‍ನ ನಿರ್ಮಾಪಕ ಚಕ್ರವರ್ತಿ.ಚ ಮೊದಲ ಬಾರಿ ಕನ್ನಡ ಚಿತ್ರಕ್ಕೆ ಹಣ ಹೂಡಿದ್ದಾರೆ. ಆದಿತ್ಯಾ ಮ್ಯೂಸಿಕ್ ಆಡಿಯೋವನ್ನು ಹೊರ ತಂದಿದೆ. ಶ್ರೀ ಕನಕದುರ್ಗ ಚಲನಚಿತ್ರ ಮೂಲಕ ಸಿದ್ದಗೊಂಡಿರುವ ಸಿನಿಮಾವು ಸದ್ಯದಲ್ಲೆ ಬಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
2/01/19

ಸಿಎಂಗೆ ದರ್ಶನ್ ಸಾಥ್
ಛಾಲೆಂಜಿಂಗ್ ಸ್ಟಾರ್ ದರ್ಶನ್ ಸಿಎಂಗೆ ಸಾಥ್ ನೀಡುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು. ಸಿಎಂ ಅಂದರೆ ಚೀಫ್ ಮಿನಿಸ್ಟರ್ ಆಗಿಲ್ಲ. ಅದು ಕಾಮನ್ ಮ್ಯಾನ್ . ಇಂತಹ ಪಾತ್ರವನ್ನು ‘ಶ್ಯಾಡೊ’ ಚಿತ್ರದಲ್ಲಿ ನಾಯಕ ವಿನೋಧ್ ಪ್ರಭಾಕರ್ ನಿಭಾಯಿಸಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ದರ್ಶನ್ ಮಾತನಾಡಿ ಟೈಗರ್ ಕಂಡರೆ ತುಂಬಾ ಪ್ರೀತಿ. ಅವರ ಯಾವುದೇ ಸಿನಿಮಾದ ಕಾರ್ಯಕ್ರಮವಿರಲಿ ಅಲ್ಲಿ ನನ್ನ ಹಾಜರಿ ಖಂಡಿತ ಇರುತ್ತದೆ. ಅವರ ಆಗು ಹೋಗುಗಳನ್ನು ಬಲ್ಲವನಾಗಿ, ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಎರಡು ಚಿತ್ರದ ಮುಂಗಡವನ್ನು ಕ್ಯಾರವಾನ್ ಇರುವಾಗಲೇ ಕೊಡಿಸಿದ್ದೆ. ಅವರು ಎಲ್ಲಾ ಪಾತ್ರಕ್ಕೂ ಶ್ರದ್ದೆ ವಹಿಸುತ್ತಾರೆ. ಕಂಠದಾನದಲ್ಲಿ ತೊಂದರೆಯಾಗಿ ಶಸ್ತ್ರಚಿಕಿತ್ಸೆ ಮಾಡಿಸಿದ್ದರಿಂದ ಆರೋಗ್ಯವಾಗಿದ್ದಾರೆ. ತಂದೆಯಂತೆ ಕಂಠ ಇದೆ. ಎಲ್ಲರ ಫೋನ್ ನಂತರ ರಿಸೀವ್ ಮಾಡಿದರಾಯಿತು. ಆದರೆ ಇವರ ಫೋನ್ ಬಂದಾಗ ತಕ್ಷಣ ಸಂದೇಶದಲ್ಲಿ ಉತ್ತರ ಕೊಡುತ್ತೇನೆ. ಮಾಸ್ ಚಿತ್ರವು ಎಲ್ಲರಿಗೂ ತಲುಪಲಿ ಎಂದರು.

ಇದಕ್ಕೂ ಮುನ್ನ ತಂಡವು ಚಿತ್ರದ ಕುರಿತು ಮಾತನಾಡಿದರು. ಛಾಲೆಜಿಂಗ್ ಪ್ರತಿ ಸಿನಿಮಾದಲ್ಲಿ ಅವಕಾಶ ಇದ್ದೇ ಇರುತ್ತೆ. ಇದರಲ್ಲೂ ಅವರ ಶಿಪಾರಸ್ಸು ಇರಬಹುದು. ದರ್ಶನ್, ತೂಗದೀಪಶ್ರೀನಿವಾಸ್ ಸಿನಿಮಾದಲ್ಲಿ ಅಪ್ಪ ನಟಿಸಿದ್ದಾರೆ. ಅವರ ಪ್ರೇರಣೆಯಿಂದ ನಾನು ನಟನಾಗಿರಬಹುದೆಂದು ಇನ್ಸೆಪೆಕ್ಟರ್ ಪಾತ್ರ ಮಾಡಿರುವ ಶರತ್‍ಲೋಹಿತಾಶ್ವ ಹೇಳಿದರು. ಹುಟ್ಟಿದ್ದು ಬಳ್ಳಾರಿ. ನೆಲಕಂಡಿದ್ದು ಆಂದ್ರ. ಇವರ ಹೆಸರು ನಿರ್ದೇಶಕ ರವಿಗೌಡ. ಪೂರಿಜಗನ್ನಾಥ್ ಶಿಷ್ಯನಾಗಿದ್ದರಿಂದ ಗುರುಗಳ ರೀತಿಯಲ್ಲೆ ಮಾಸ್, ಆಕ್ಷನ್ ಕುರಿತ ಚಿತ್ರ ಮಾಡಿರುವುದು ಟೀಸರ್ ನೋಡಿದಾಗ ತಿಳಿದುಬಂತು. ಅದನ್ನೆ ತೆಲುಗುದಲ್ಲಿ ನಿರ್ದೇಶಕರು ಹೇಳುತ್ತಾ ಜಾಸ್ತಿ ಸಮಯ ತೆಗೆದುಕೊಂಡರು.

ಗೆಳತನಕ್ಕೆ ಅರ್ಥ ದರ್ಶನ್ ಮುಂದೆ ಬರುತ್ತಾರೆ. ಖಿನ್ನತೆಯಲ್ಲಿದ್ದಾಗ ನಿನ್ನಲಿ ಪ್ರತಿಭೆ ಇದೆ. ಮುಂದುವರೆಸು ಅಂತ ಧೈರ್ಯ ತುಂಬಿದರು. ನಾನೇ ಎಲ್ಲೆ ಇದ್ದರೂ ತಿರುಗಿ ನಿಂತರೆ ನೀನರಬೇಕೆಂದು ಹೇಳಿದ್ದರು. ನನ್ನ ಸಲುವಾಗಿ ತಾವರಕರೆಯಿಂದ ಬಿಡುವು ಮಾಡಿಕೊಂಡು ಬಂದಿದ್ದಾರೆ. ಹಿಂದೆಯಲ್ಲಾ ಚಿತ್ರಕ್ಕೆ ಡಬ್ಬಿಂಗ್ ಮಾಡಲು 15 ದಿವಸ ತೆಗೆದುಕೊಳ್ಳುತ್ತಿದ್ದೆ. ಆಪರೇಶ್‍ನ್ ಮಾಡಿಸಿದ ನಂತರ ಮೂರೇ ದಿನಕ್ಕೆ ಮುಗಿಸಿದ್ದೇನೆ. ಇಷ್ಟೆಲ್ಲಾಕ್ಕೆ ಕಾರಣವಾಗಿದ್ದು ರಾಂನಾರಾಯಣ್. ಅವರು ಹೇಳದೆ ಹೋಗಿದ್ದರೆ ನನಗೆ ತಿಳಿದಿರುತ್ತಿರಲಿಲ್ಲ. ಅಭಿಮಾನಿಗಳಿಗೆ ಖುಷಿ ಪಡಿಸಿವುದೇ ನನ್ನ ಧ್ಯೇಯವೆಂದು ಚಿತ್ರೀಕರಣದ ಅನುಭವಗಳನ್ನು ವಿನೋಧ್‍ಪ್ರಭಾಕರ್ ಹಂಚಿಕೊಂಡರು. ನಿರ್ಮಾಪಕ ಚ.ಚಕ್ರವರ್ತಿ, ಕಾಮಿಡಿಕಿಲಾಡಿಗಳು ಖ್ಯಾತಿಯ ಲೋಕೇಶ್, ಸಾಹಿತಿ ರಾಂನಾರಾಯಣ್ ಚುಟುಕು ಮಾತಿಗೆ ವಿರಾಮ ಹಾಕಿದರು. ನಾಯಕಿ ಶೋಭಿತರಾಣ ಅನುಪಸ್ಥಿತಿಗೆ ಕಾರಣ ತಿಳಿಯಲಿಲ್ಲ.
ಸಿನಿ ಸರ್ಕಲ್.ಇನ್ ನ್ಯೂಸ್
14/12/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore