HOME
CINEMA NEWS
GALLERY
TV NEWS
REVIEWS
CONTACT US
ಪ್ರೀತಿ ಸಂಕೇತದ ಸೇರುನನ್ನ ತೋಳಲ್ಲಿ
‘ಲೈಫ್ 360’ ಚಿತ್ರದಲ್ಲಿ ನಟಿಸಿದ್ದ ಅರ್ಜುನ್‍ಕಿಶೋರ್‍ಚಂದ್ರ ‘ಸೇರುನನ್ನ ತೋಳಲ್ಲಿ’ ಐದು ನಿಮಿಷದ ವಿಡಿಯೋಆಲ್ಬಂಗೀತೆಗೆರಚನೆ,ಸಾಹಿತ್ಯಮತ್ತು ನಾಯಕನಾಗಿ ನಟಿಸಿದ್ದು, ‘ಭಿನ್ನ’ ಸಿನಿಮಾದ ನಾಯಕಿ ಪಾಯಲ್‍ರಾಧಕೃಷ್ಣಜೋಡಿಯಾಗಿದ್ದಾರೆ. ವೈದ್ಯರಾಗಿ ವಿನಾಯಕ್‍ಜೋಷಿ ಕಾಣಿಸಿಕೊಂಡಿದ್ದಾರೆ.ರ್ಯಾಪರ್ ಸಿದ್ದು ಆಲ್ಬಂನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ‘ಸೇರು ನಿನ್ನ ತೋಳಲ್ಲಿ, ನನ್ನಾಣೆ ನೀನೇ ನನ್ನ ಉಸಿರಲ್ಲಿ’ ಸಾಹಿತ್ಯವಿರುವಗೀತೆಯಲ್ಲಿಎಲ್ಲಾ ಎಲ್ಲೆಗಳನ್ನು ಮೀರಿದ ನಿಜವಾದ ಪ್ರೀತಿಏನೆಂಬುದನ್ನು ಹೇಳಲಾಗಿದೆ. ಚಿಕ್ಕಮಗಳೂರು, ಬೆಂಗಳೂರು ಸುಂದರ ತಾಣಗಳಲ್ಲಿ ಮೂರು ದಿನಗಳ ಕಾಲ ಚಿತ್ರೀಕರಿಸಿದ್ದು, ಸುಮಾರು ಏಳು ಲಕ್ಷಖರ್ಚುಆಗಿರುತ್ತದೆ. ಸಂಗೀತ,ಗಾಯನ ಹಾಗೂ ನಿರ್ದೇಶನಅದ್ವಿಕ್, ಛಾಯಾಗ್ರಹಣಅಭಿಮನ್ಯು ಸದಾನಂದ್‍ಅವರದಾಗಿದೆ. ಗಗನ್.ಜೆ.ಗೌಡ-ಸುನಿಲ್‍ಕುಮಾರ್‍ಜಂಟಿಯಾಗಿಕ್ರಾಂತಿಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡಿರುವ ಹಾಡನ್ನುಡಿಸಿ ಕ್ರಿಯೇಶನ್ಸ್ ಬಿಡುಗಡೆ ಮಾಡಿದ್ದಾರೆ.

ಸದರಿಗೀತೆಯುಇತ್ತೀಚೆಗಷ್ಟೆ ಪ್ರಾರಂಭಗೊಂಡಿರುವಭಾನುಪ್ರತಾಪ್.ಎಸ್. ಒಡೆತನದ’50 ಎಂಎಂ’ ಸ್ಟುಡಿಯೋದಲ್ಲಿಚಿತ್ರೀಕರಣೋತ್ತರ ಕೆಲಸಗಳು ನಡೆದಿದೆ.ಸ್ಟುಡಿಯೋಅತ್ಯಾಧುನಿಕತಂತ್ರಜ್ಘಾನ ಒಳಗೊಂಡಿದ್ದು, ಇದರಲ್ಲಿಡಿಐ, ಎಡಿಟಿಂಗ್, ಕಲರ್‍ಗ್ರೇಡಿಂಗ್, ವಿಎಫ್‍ಎಕ್ಸ್, ಡಬ್ಬಿಂಗ್ ಮುಂತಾದ ಸೌಲಭ್ಯಗಳು ಆಕರ್ಷಕದರದಲ್ಲಿ ಲಭ್ಯವಿರುತ್ತದೆ.ಮುಂದೆಕ್ರಾಂತಿಕ್ರಿಯೇಶನ್ಸ್ ಹಾಗೂ 50 ಎಂಎಂ ಸ್ಟುಡಿಯೋ ಸೇರಿಕೊಂಡು ಸಿನಿಮಾ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ.
14/03/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore