HOME
CINEMA NEWS
GALLERY
TV NEWS
REVIEWS
CONTACT US
ಫಸ್ಟ್ ಆಫ್ ಕಾಮಿಡಿ ಸೆಕೆಂಡ್ ಆಫ್ ಎಮೋಶನಲ್
ಮೊದಲರ್ದ ಹಾಸ್ಯ, ವಿರಾಮದ ನಂತರ ಭಾವನೆಗಳು ತುಂಬಿಕೊಂಡಿದೆ ಎಂದು ನೋಡಿದವರು ಹೇಳುತ್ತಿದ್ದಾರೆಂದು ನಿರ್ದೇಶಕ ಎ.ಹರ್ಷ ‘ಸೀತಾರಾಮ ಕಲ್ಯಾಣ’ ಚಿತ್ರದ ಸಂತೋಷಕೂಟದಲ್ಲಿ ಹೇಳುತ್ತಿದ್ದರು. ಮಾತು ಮುಂದು ವರೆಸುತ್ತಾ ಕೊನೆಯ ಎರಡು ನಿಮಿಷದ ಸನ್ನಿವೇಶಗಳು ಟ್ರಂಪ್ ಕಾರ್ಡ್ ಎನ್ನುತ್ತಿದ್ದಾರೆ. ಫಸ್ಟ್ ಆಫ್ ಕಾಮಿಡಿ, ಸೆಕೆಂಡ್ ಆಫ್ ಎಮೋಶನ್ಸ್ ಎಂದು ಹೇಳುತ್ತಿದ್ದಾರೆ. ವಿತರಕರಾದ ಜಯಣ್ಣ-ಭೋಗೇಂದ್ರ ಹಿಟ್ ಆಗಿದೆ ಎಂದು ಹೇಳಿರುವುದು ನೆಮ್ಮದಿ ತಂದಿದೆ. 5-6 ಬಾರಿ ಕ್ಲೈಮಾಕ್ಸ್‍ನ್ನು ಬದಲಾವಣೆ ಮಾಡಲಾಗಿತ್ತು. ನಿರ್ದೇಶಕ ಒಬ್ಬನಿಂದ ಸಿನಿಮಾ ಆಗುವುದಿಲ್ಲ. ತಂಡವು ಸೇರಿಕೊಂಡರೆ ಮಾತ್ರ ಇದೆಲ್ಲವು ಸಾದ್ಯವೆಂದು ಎಲ್ಲರನ್ನು ವೇದಿಕೆಗೆ ಆಹ್ವಾನಿಸಿದರು.

ಇದಕ್ಕೂ ಮೈಕ್ ತಗೆದುಕೊಂಡ ನಾಯಕ ನಿಖಿಲ್‍ಕುಮಾರ್ ಐದನೇ ದಿನಕ್ಕೆ ಕಾಲಿಟ್ಟಿದೆ. ರಶ್ ಕಡಿಮೆಯಾಗಿಲ್ಲ. ಎಲ್ಲೆ ಹೋದರೂ ಮೊದಲರ್ಧದಲ್ಲಿ ಕಾಮಿಡಿ ಇದ್ದರೆ, ವಿರಾಮದ ನಂತರ ಭಾವನೆಗಳು ತುಂಬಿಕೊಂಡಿವೆ. ಒಳ್ಳೆ ಚಿತ್ರಕೊಡಬೇಕೆಂಬ ಬಯಕೆ ಇತ್ತು. ಅದರಂತೆ ನಿರ್ದೇಶಕರು ಕತೆಯನ್ನು ಚೆನ್ನಾಗಿ ರೂಪಿಸಿ ತೆರೆ ಮೇಲೆ ತಂದಿದ್ದಾರೆ. ನಿನ್ನ ರಾಜ ಹಾಡು ಸೂಪರ್ ಆಗಿದೆ ಎಂದು ಪ್ರತಿಯೊಬ್ಬರ ಕಲಾವಿದರ, ತಂತ್ರಜ್ಘರ ಹೆಸರನ್ನು ನೆನಪಿಸಿಕೊಂಡು ಎಲ್ಲರಿಗೂ ಕೃತಜ್ಘತೆ ಸಲ್ಲಸಿದರು.

ಇಂತಹ ಖುಷಿ ಮತ್ತೆ ಸಿಗೋದಿಲ್ಲ ಶಾಶ್ವತವಾಗಿ ಉಳಿಯುತ್ತೆ. ಮಾಸ್-ಕ್ಲಾಸ್ ಸೇರಿದರೆ ಫ್ಯಾಮಲಿ ಆಡಿಯನ್ಸ್ ಆಗುತ್ತದೆ. ಅದೇ ರೀತಿ ಎಲ್ಲಾ ವರ್ಗದವರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಮುಂದೆ 50-100ನೇ ದಿನ ಸಮಾರಂಭದಲ್ಲಿ ಭೇಟಿ ಮಾಡೋಣವೆಂದು ಚಿಕ್ಕಣ್ಣ ಹೇಳಿದರು. ಸಕ್ಸಸ್ ಮೀಟ್ ಎಂದರೆ ಟಾನಿಕ್ ಇದ್ದಂತೆ. ನನಗೆ ಇಷ್ಟವಾದ ಸಂಗೀತ ನಿರ್ದೇಶಕರು ರಾಗ ಸಂಯೋಜನೆ ಮಾಡಿರುವುದು ಖುಷಿ ತಂದಿದೆ. ಕನ್ನಡ ಜನತೆಯು ಒಳ್ಳೆ ಚಿತ್ರವನ್ನು ಕೈಬಿಡೋಲ್ಲವೆಂದು ಮತ್ತೋಮ್ಮೆ ಸಾಬೀತು ಆಗಿದೆ ಅಂತ ರವಿಶಂಕರ್ ವಿರಾಮ ತೆಗೆದುಕೊಂಡರು. ಸೈಮಾ ಕಾರ್ಯಕ್ರಮದಲ್ಲಿ ನಿಖಿಲ್ ಸರ್ ಭೇಟಿ ಮಾಡಿ ಒಂದು ಸಿನಿಮಾ ಮಾಡುವ ಎಂದು ಹೇಳಿದ್ದರು. ಅದು ಈಗ ಸೀತಾರಾಮಕಲ್ಯಾಣವಾಗಿದೆ ಎಂದು ಅರೇ ಅರೇ ಗೀತೆಯ ತುಣಕನ್ನು ಸಂಗೀತ ನಿರ್ದೇಶಕ ಅನೂಪ್‍ರುಬೆನ್ಸ್ ಹಾಡಿದರು.

ಪ್ರಾಮಾಣಿಕ ವಿಮರ್ಶೆ ಬರೆದಿರುವುದಕ್ಕೆ ಥ್ಯಾಂಕ್ಸ್. ಚಿತ್ರದ ಯಶಸ್ಸಿನಿಂದ ಎಲ್ಲರಿಗೂ ಸಕ್ಸಸ್ ಸಿಕ್ಕಂತೆ ತಂತ್ರಜ್ಘರ ಜೀವನದಲ್ಲಿ ಬರಲಿ. ನಿಖಿಲ್ ಮುಂದಿನ ಯೋಜನೆಗಳು ಚೆನ್ನಾಗಿ ಹೋಗಲಿ ಎಂದು ನನ್ನ ರಾಜ ರಾಣಿ ನೀನು ಗೀತೆಯ ಸಾಲನ್ನು ನಾಯಕಿ ರಚಿತಾರಾಂ ಹಾಡಿದರು. ಹಿಂದೆ ಹೇಳಿದಂತೆ ನಾವು ಸೇಫ್ ಆಗಿದ್ದೇವೆ. ಹುಬ್ಬಳ್ಳಿ ಕಡೆಯಲ್ಲಿ ಒಳ್ಳೆ ಗಳಿಕೆ ಬರುತ್ತಿದೆ. ಬೆಂಗಳೂರಿನಲ್ಲಿ ಪಿಕ್‍ಅಪ್ ಆಗುತ್ತಿದೆ. ಜೀ ವಾಹಿನಿಯವರು ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಎಷ್ಟು ಖರ್ಚು ಆಗಿದೆ, ಲಾಭ ಬಂದಿದೆ ಎಂದು ಅಂಕಿಅಂಶಗಳಲ್ಲಿ ಹೇಳುವುದು ಬೇಡವೆಂದು ಕಾರ್ಯನಿರ್ವಾಹಕ ನಿರ್ಮಾಪಕ ಸುನಿಲ್ ಪ್ರಶ್ನೆಗಳಿಂದ ಜಾರಿಕೊಂಡರು. ಶಿವರಾಜ್.ಕೆ.ಆರ್.ಪೇಟೆ, ಜ್ಯೋತಿರೈ, ರಾಕೇಶ್, ಚೇತನ್, ಲಹರಿಚಂದ್ರಶೇಖರ್ ಇನ್ನು ಮುಂತಾದವರು ಖುಷಿಯನ್ನು ಹಂಚಿದಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
30/01/19ಕಲರ್‍ಫುಲ್ ಸೀತಾರಾಮನ ಕಲ್ಯಾಣ
ಅದ್ದೂರಿ ಚಿತ್ರ ‘ಸೀತಾರಾಮ ಕಲ್ಯಾಣ’ ವನ್ನು ಒಂದು ಲೈನ್‍ದಲ್ಲಿ ಕತೆಯನ್ನು ಹೇಳುವುದು ಕಷ್ಟ ಅನಿಸುತ್ತದೆ. ನಂಬಿಕೆ, ವಿಶ್ವಾಸ, ಪ್ರೀತಿ, ಸ್ನೇಹ, ಹಾಸ್ಯ ಇವೆಲ್ಲದರ ಜೊತೆಗೆ ತಂದೆ-ಮಗನ ಭಾವನಾತ್ಮಕ ಸನ್ನಿವೇಶಗಳು ಮತ್ತು ಸ್ನೇಹಿತರಿಬ್ಬರ ನಡುವಿನ ವೈಮನಸ್ಸು ಇವೆಲ್ಲವು ಬಂದು ಹೋಗುತ್ತವೆ. ನೋಡುಗ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿದ್ದರಿಂದ ಅವರಿಗೆ ಏನೇನು ಬೇಕೋ ಅವೆಲ್ಲ ಅಂಶಗಳು ಇರುವುದು ಪ್ಲಸ್ ಪಾಯಿಂಟ್. ಅಂದರೆ ಇಂಪಾದ ಹಾಡುಗಳು, ಮೈ ಜುಂ ಅನಿಸುವ ಸಾಹಸ, ಪಂಚಿಂಗ್ ಡೈಲಾಗ್ ಇವೆಲ್ಲಕ್ಕೂ ಕಳಸಪ್ರಾಯವಿಟ್ಟಂತೆ ಕಣ್ಣನ್ನು ಒದ್ದೆ ಮಾಡಿಸುವ ಸೆಂಟಿಮೆಂಟ್ ಸಂಭಾಷಣೆಗಳು, ದೃಶ್ಯಗಳು. ಆಹಾ, ಓಹೋ ಅನ್ನುವಂತ ಕತೆ ಇಲ್ಲದೆ ಇದ್ದರೂ ಇದು ನಮ್ಮ ನೇಟಿವಿಟಿಗೆ ಹೇಳಿಮಾಡಿಸಿದಂತೆ ಸೀತಾರಾಮ ಇಷ್ಟವಾಗುತ್ತದೆ. ಕೆಲವೊಂದು ಸನ್ನಿವೇಶಗಳು ತೆಲುಗು ಮಾಯೆಯಂತೆ ಕಂಡು ಬಂದರೂ ಮುಂದೆ ಅದ್ಬುತ ಸೀನ್‍ಗಳು ನಾವು ಅಂದುಕೊಂಡಿದ್ದನ್ನು ಮರೆಸುತ್ತವೆ. ಕೊನೆಗೆ ಚಿತ್ರಮಂದಿರದಿಂದ ಹೊರಬಂದಾಗ ನಾವೊಂದು ಉತ್ತಮ ಸಿನಿಮಾ ನೋಡಿದೆ ಅಂತ ಭಾಸವಾಗುವುದು ಖಚಿತ.

ಕನಿಷ್ಟ ಕಲಾವಿದರುಗಳನ್ನು ಬಳಿಸಿಕೊಂಡು ಸಿನಿಮಾ ಮುಗಿಸುವ ಕಾಲದಲ್ಲಿ, ಬದಲಾವಣೆ ಎನ್ನುವಂತೆ ಇದರಲ್ಲಿ ಬರೋಬ್ಬರಿ 130 ಕಲಾವಿದರು ನಟನೆ ಮಾಡಿರುವುದು ವಿಶೇಷ. ಹಾಗಂತ ಎಲ್ಲಿಯೂ ಇವರುಗಳನ್ನು ತುರುಕದೆ ಸನ್ನಿವೇಶಕ್ಕೆ ತಕ್ಕಂತೆ ಬಂದುಹೋಗುತ್ತಾರೆ. ಸ್ನೇಹಿತರ ನಡುವಿನ ಮುನಿಸು ಮುಂದೆ ಹೇಗೆ ದೊಡ್ಡ ರಾದ್ದಾಂತಕ್ಕೆ, ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದು ಚಿತ್ರದ ಹೈಲೈಟ್ ಆಗಿದೆ. ನಾಯಕ ನಿಖಿಲ್‍ಕುಮಾರ್ ನಟನೆಯಲ್ಲಿ ಪರವಾಗಿಲ್ಲ. ಆದರೆ ಅವರ ಡ್ಯಾನ್ಸ್, ಫೈಟ್ ಎಲ್ಲರಿಗೂ ಇಷ್ಟವಾಗುತ್ತಾರೆ. ಸಂಪ್ರದಾಯಸ್ಥ ಹುಡುಗಿಯಾಗಿ ನಾಯಕಿ ರಚಿತಾರಾಂ ಕೊಟ್ಟ ಕೆಲಸನವನ್ನು ನೀಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಶರತ್‍ಕುಮಾರ್, ರವಿಶಂಕರ್, ಚಿಕ್ಕಣ್ಣ , ಮಧುಬಾಲ, ಭಾಗ್ಯಶ್ರೀ, ಕಾಮಡಿ ಕಿಲಾಡಿ ಕಲಾವಿದರು ನಗಿಸಿ ಹೋಗುತ್ತಾರೆ. ಅನೂಪ್‍ರುಬೆನ್ಸ್ ಸಂಗೀತದಲ್ಲಿ ಎರಡು ಹಾಡುಗಳು ಮೆಲುಕು ಹಾಕುವಂತಿದೆ. ಸ್ವಾಮಿ.ಜೆ ಛಾಯಾಗ್ರಹಣ, ರಾಮ್-ಲಕ್ಷಣ್ ಸಾಹಸ , ರಘುನಿಡುವಳ್ಳಿ ಸಂಭಾóಷಣೆ ಸನ್ನಿವೇಕ್ಕೆ ಪೂರಕವಾಗಿದೆ. ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಪಕಿಯಾಗಿ ಎರಡನೆ ಪ್ರಯತ್ನದಲ್ಲಿ ಸಪಲರಾಗಿದ್ದಾರೆ ಎನ್ನಬಹುದು.
ಸಿನಿ ಸರ್ಕಲ್.ಇನ್ ವಿಮರ್ಶೆ
27/01/19ಎಲ್ಲಾ ಅಂಶಗಳು ಇರುವ ಕಮರ್ಷಿಯಲ್ ಚಿತ್ರ
ಪ್ರಸಕ್ತ ವರ್ಷದ ಅದ್ದೂರಿ ಚಿತ್ರ ‘ಸೀತಾರಾಮ ಕಲ್ಯಾಣ’ ಜನವರಿ 25ರಂದು ಬಿಡುಗಡೆಯಾಗುತ್ತಿರುವುದರಿಂದ ತಂಡವು ಕೊನೆ ಬಾರಿ ಮಾದ್ಯಮದ ಮುಂದೆ ಹಾಜರಾಗಿತ್ತು. 19ರಂದು ಟೀಸರ್‍ನ್ನು ಬಿಡುಗಡೆ ಮಾಡಲಾಗಿ, ಇಲ್ಲಿಯವರಗೆ 10 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಹಿನ್ನಲೆ ಸಂಗೀತ ಮನಸ್ಸು ಕದಡುತ್ತೆ. ಅದಕ್ಕೆತಕ್ಕಂತೆ ರಾಮ್-ಲಕ್ಷಣ್ ಸಾಹಸ ಸನ್ನಿವೇಶಕ್ಕೆ ಪೂರಕವಾಗಿದೆ. 130 ಕಲಾವಿದರು, 130 ದಿವಸದಲ್ಲಿ ಊಟಿ ಹೂರತುಪಡಿಸಿ, ಉಳಿದವನ್ನು ಕರ್ನಾಟಕದ ಸುಂದರ ತಾಣಗಳಲ್ಲಿ ಸೆರೆಹಿಡಿಯಲಾಗಿದೆ. ಎಲ್ಲಾ ಪಾತ್ರಗಳು ಗೊಂದಲವಾಗದೆ ಕ್ಲೈಮಾಕ್ಸ್‍ದಲ್ಲಿ ಅರ್ಥವಾಗುವಂತೆ ಹೇಳಲಾಗಿದೆ. ಒಂದು ಹಂತದಲ್ಲಿ ರೈತರು ವಿಜ್ಘಾನಿಗಳು ಅಂತ ಬಿಂಬಿಸಲಾಗಿದೆ. ಕುಟುಂಬದ ಸಲುವಾಗಿ, ಜನರ ಕಷ್ಟಗಳಿಗೆ ಸ್ಪಂದಿಸುವ ನಾಯಕನ ಪಾತ್ರವೆಂದು ಸ್ವಲ್ಪ ವಿಷಯವನ್ನು ನಿರ್ದೇಶಕ ಹರ್ಷ ಬಿಚ್ಚಿಟ್ಟರು.

ಇದಕ್ಕೂ ಮುನ್ನ ನಾಯಕ ನಿಖಿಲ್‍ಕುಮಾರ್ ಮಾತನಾಡಿ ಹೊರಭಾಷೆಯ ಪೈಪೋಟಿಗಳ ಮಧ್ಯೆ ನಮ್ಮದು ಯಶಸ್ಸು ಆಗಬೇಕೆಂಬ ಸಣ್ಣದೊಂದು ಪ್ರಯತ್ನ ಮಾಡಲಾಗಿದೆ ಎಂದು ನಾಯಕ ನಿಖಿಲ್‍ಕುಮಾರ್ ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಅಣ್ಣಾವ್ರ ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಇರುವ ಅಂಶಗಳು ಇದ್ದವು. ಅದರ ಪ್ರೇರಣೆಯಿಂದ ಅಂತಹುದೇ ರೀತಿಯಲ್ಲಿ ಕತೆ ಮಾಡಲಾಗಿದೆ. ಅನೂಪ್‍ರೂಬಿನ್ಸ್ ಸಂಗೀತ ಪ್ಲಸ್ ಪಾಯಿಂಟ್. ‘ನಿನ್ನ ರಾಜ ನಾನು, ನನ್ನ ರಾಣಿ ನೀನು’ ಹಾಡು ಹಿಟ್ ಆಗಿರುವುದು ಸಂತಸ ತಂದಿದೆ ಎಂದರು. ಕಾರ್ಯಕಾರಿ ನಿರ್ಮಾಪಕ ಸುನಿಲ್ ಮಾತನಾಡಿ ನಮ್ಮ ಚಿತ್ರವು ಬಿಡುಗಡೆ ಮುಂಚೆ ಲಾಭದಲ್ಲಿದೆ. ಶುಕ್ರವಾರದಿಂದ ಜಯಣ್ಣ ಕಂಬನ್ಸ್ ಮುಖಾಂತರ 300 ಕೇಂದ್ರಗಳಲ್ಲಿ ತೆರೆಗೆ ಬರಲಿದೆ. ಹೈದರಾಬಾದ್, ಚೆನ್ನೈ, ಬಾಂಬೆ ಕಡೆಗಳಲ್ಲಿ ಕನ್ನಡಿಗರು ಇರುವ ಕಡೆ ಚಿತ್ರವನ್ನು ಪ್ರದರ್ಶಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತರುವಾಯ ವಿದೇಶಗಳಲ್ಲಿ ಬಿಡುಗಡೆ ಮಾಡಲಾಗುವುದು. ಮುಂದಿನ ಭೇಟಿಯಲ್ಲಿ ಅಂಕಿ ಅಂಶಗಳನ್ನು ನೀಡುವುದಾಗಿ ಹೇಳಿದರು.

ಶಾಸಕ, ನಿರ್ಮಾಪಕ ಮುನಿರತ್ನ ಕುರುಕ್ಷೇತ್ರದ ಬಗ್ಗೆ ಹೆಚ್ಚು ಮಾತನಾಡಿ ಬಿಡುಗಡೆ ದಿನಾಂಕವನ್ನು ಗುಟ್ಟಾಗಿಟ್ಟರು. ತಾವುಗಳು ಕುಟುಂಬದೊಂದಿಗೆ ಎರಡು ಸಲ ನೋಡಬಹುದಾದ ಸಿನಿಮಾವೆಂದು ನಾಯಕಿ ರಚಿತಾರಾಂ ಬಣ್ಣನೆ ಮಾಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
24/01/19

25ರಂದು ಸೀತಾರಾಮ ಕಲ್ಯಾಣ
ಶೀರ್ಷಿಕೆ ‘ಸೀತಾರಾಮ ಕಲ್ಯಾಣ’ ಹೆಸರು ಕೇಳಿದರೆ ಕುಟುಂಬ ಸಮೇತ ನೋಡಬಹುದಾದ ಸಿನಿಮಾದ ಚಿತ್ರೀಕರಣ ಮುಗಿದು ಈಗ ಬಿಡುಗಡೆ ಹಂತಕ್ಕೆ ಬಂದಿದೆ. ರಾಮನಗರದ ಕರಗ ಉತ್ಸವವನ್ನು ಚಿತ್ರದಲ್ಲಿ ಬಳಸಲಾಗಿದೆ. ನಾಯಕ ನಿಖಿಲ್‍ಕುಮಾರ್‍ಗೆ ಜೋಡಿಯಗಿ ಡಿಂಪಲ್ ಕ್ವೀನ್ ರಚಿತಾರಾಮ್ ಇದ್ದಾರೆ. ರವಿಶಂಕರ್-ಮಧುಬಾಲ ನಾಯಕಿ ಪೋಷಕರು, ಇವರೊಂದಿಗೆ ಶರತ್‍ಕುಮಾರ್, ಭಾಗ್ಯಶ್ರೀ, ಗಿರಿಜಾಲೋಕೇಶ್, ಶಿವರಾಜ್.ಕೆ.ಆರ್.ಪೇಟೆ, ಸೇರಿದಂತೆ ಒಟ್ಟಾರೆ 130 ಕಲಾವಿದರು ಕಾಣಿಸಿಕೊಂಡಿದ್ದಾರೆ. ಎರಡು ಕುಟುಂಬಗಳ ನಡುವೆ ಲವ್ ಸ್ಟೋರಿ ತೆರೆದುಕೊಳ್ಳುತ್ತದೆ. ಅನೂಪ್‍ರೂಬಿನ್ಸ್ ಒಳ್ಳೆ ಹಾಡುಗಳನ್ನು ಕೊಟ್ಟಿದ್ದಾರೆ. ಮೂರು ಟ್ರಾಕ್‍ಗಳಲ್ಲಿ ಗೆಳತನ, ಪ್ರೀತಿ ಮತ್ತೋಂದು ಕುತೂಹಲ ನೀಡುವ ತಿರುವುಗಳು ಇರಲಿದೆಯಂತೆ.

ನಾಲ್ಕು ಆಕ್ಷನ್‍ಗಳಿಗೆ ರಾಮ್-ಲಕ್ಷಣ್, ಛಾಯಗ್ರಹಣ ಸ್ವಾಮಿ.ಜೆ., ಸಂಭಾಷಣೆ ರಘುನಿಡುವಳ್ಳಿ, ಅವರದಾಗಿದೆ. ಕತೆ ಬರೆದು ನಿರ್ದೇಶನ ಮಾಡಿರುವುದು ಎ.ಹರ್ಷ. ಚನ್ನಾಂಬಿಕಾ ಫಿಲಿಂಸ್ ಮೂಲಕ ಅನಿತಾ ಕುಮಾರಸ್ವಾಮಿ ನಿರ್ಮಾಣ ಮಾಡಿರುವ ಚಿತ್ರವು ಗಣರಾಜೋತ್ಸವ ಮುನ್ನ ದಿನ ತೆರೆಗೆ ತರಲು ತಂಡವು ಯೋಜನೆ ಹಾಕಿಕೊಂಡಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
12/01/19


ಸೀತಾರಾಮ ಕಲ್ಯಾಣ ಮಾತುಕತೆ
ಸೋಮವಾರ ಪ್ಯಾಲೇಸ್ ಮೈದಾನದಲ್ಲಿ ಮದುವೆಗಳ ಹಬ್ಬ. ಅದರ ಮಧ್ಯೆ ರೀಲ್ ಮದುವೆ ಸುದ್ದಿಗೋಷ್ಟಿ ನಡೆಯಿತು. ಅದುವೇ ‘ಸೀತಾರಾಮ ಕಲ್ಯಾಣ’ ಚಿತ್ರ. ಬಹುತೇಕ ಕಲಾವಿದರ ಹಾಜರಾತಿ ಇದ್ದ ಕಾರಣ ಕೂಡು ಕುಟುಂಬದ ಕಲ್ಯಾಣ ಕಾರ್ಯಕ್ರಮವಿದ್ದಂತೆ ಭಾಸವಾಯಿತು. ಮೈಕ್ ತೆಗೆದುಕೊಂಡ ನಾಯಕ ನಿಖಿಲ್‍ಕುಮಾರ್ ಸಿನಿಮಾ ಶುರುವಾದ ರೀತಿ, ಮೇಕಿಂಗ್, ಸಂಗೀತ ನೀಡಿರುವ ಅನೂಪ್‍ರುಬಿನ್ಸ್, ಮುಖ್ಯ ಕಲಾವಿದರ ಹೆಸರುಗಳನ್ನು ಹೇಳುತ್ತಾ ಇವರ ಸಹಕಾರದಿಂದ ಕುಂಬಳಕಾಯಿ ಒಡೆಯಲಾಗಿದೆ ಅಂತ ಹೇಳುವಷ್ಟರಲ್ಲಿ ವಧು ಆಗಮನ ಅಂದರೆ ನಾಯಕಿ ರಚಿತಾರಾಮ್. ನಂತರ ಡಿಬೆಟ್‍ನಂತೆ ಇಬ್ಬರು ಚಿತ್ರೀಕರಣ ಅನುಭವಗಳನ್ನು ಹಂಚಿಕೊಂಡರು. ಅದರಲ್ಲಿ ಯಾವುದೆ ಅಂತ ಹೇಳದೆ ಒಂದು ದೃಶ್ಯಕ್ಕೆ 45 ಟೇಕ್ ತೆಗೆದುಕೊಂಡಿದ್ದರ ಬಗ್ಗೆ ಚರ್ಚೆ ಮಾಡಿ, ರವಿಶಂಕರ್ ಮಗಳಾಗಿ, ಗಿರಿಜಾಲೋಕೇಶ್ ಅಜ್ಜಿಯಾಗಿ ನಟಿಸಿದ್ದೇನೆಂದು ಮೈಕ್ ಕೆಳಗಿಟ್ಟರು.

ಮಾತುವರೆಸಿದ ನಾಯಕರು ಪ್ರತಿ ತಂತ್ರಜ್ಘರನ್ನು ಮುಂದೆ ಕರೆಸಿಕೊಂಡು ಅವರ ಕೆಲಸವನ್ನು ಕೊಂಡಾಡಿದರು. ನಿರ್ದೇಶಕರು ಮಗುವಿನಂತೆ ನೋಡಿಕೊಂಡಿದ್ದಾರೆ. ಮುಂದೆ ಅವರೊಂದಿಗೆ ಮತ್ತೋಂದು ಸಿನಿಮಾ ಮಾಡಲಾಗುವುದು. ನಿರ್ಮಾಪಕರು ಅದ್ಬುತ ಸಿನಿಮಾ ನೀಡಿದರೆ ಚಿತ್ರರಂಗ ಬೆಳೆಯುತ್ತದೆಂದು ಅಭಿಪ್ರಾಯಪಟ್ಟರು.

ಒಂದು ವರ್ಷ, 130 ಕಲಾವಿದರು ಮತ್ತು 130 ದಿವಸ ಚಿತ್ರೀಕರಣ ನಡೆಸಲಾಗಿದೆ. ಪುರೋಹಿತನಂತೆ ಕಲ್ಯಾಣ ಮಾಡಿಸಿದ್ದೇನೆ. ಟ್ರೈಲರ್ ಬಂದಾಗಿನಿಂದ ರಿಮೇಕ್ ಎಂದು ಸುದ್ದಿ ಹರಡಿದೆ. ಖಂಡಿತವಾಗಿಯೂ ಇದು ನೇರಕತೆಯಾಗಿದೆ. ಯಾವುದೇ ಭಾಷೆಯ ಕತೆಯಾಗಿರುವುದಿಲ್ಲ. ಅಭಿನಯಿಸಿದ ಕಲಾವಿದರು ಸನ್ನಿವೇಶಗಳನ್ನು ಕೇಳಿ ಅಪ್ಪಟ ಸ್ವಮೇಕ್ ಚಿತ್ರವೆಂದು ಪ್ರಮಾಣಪತ್ರ ನೀಡಿದ್ದಾರೆ. ಮೊದಲರ್ಧ ಹಾಸ್ಯ, ವಿರಾಮದ ತರುವಾಯ ಭಾವನೆಗಳು ತುಂಬಿಕೊಂಡಿರುವ ದೃಶ್ಯಗಳು ಬರುತ್ತದೆ. ರಾಮ್-ಲಕ್ಷಣ್ ಸಾಹಸ ಸಣ್ಣ ಮಟ್ಟದ ತೆಲುಗು ಚಿತ್ರ ಟಚ್ ಇರಬಹುದು. ಜನವರಿಯಲ್ಲಿ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಅಂತ ವ್ಯಾಖ್ಯಾನವನ್ನು ನಿರ್ದೇಶಕ ಎ.ಹರ್ಷ ಬಿಚ್ಚಿಟ್ಟರು.

ಬೆಂಗಳೂರಿನಲ್ಲಿ ಬದುಕು ಆರಂಭಿಸಿದ ನೆನಪು ಮಾಡಿಕೊಂಡ ಶರತ್‍ಕುಮಾರ್, ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶ ಮಾಡಿದ್ದರಿಂದ ಬಣ್ಣ ಹಚ್ಚಿಲ್ಲ. ಕನ್ನಡ, ಮಲೆಯಾಳಂ ಚಿತ್ರರಂಗದಿಂದ ಕರೆ ಬಂದರೆ ನಟಿಸಿ ಹೋಗುಲಾಗುವುದು. ‘ನಿನ್ನ ರಾಜ ನನ್ನ ರಾಣಿ’ ಹಾಡಿಗೆ ಕನಸಿನಲ್ಲಿ ನಾನು ಕಾಣಿಸಿಕೊಳ್ಳುತ್ತೇನೆಂದು ಹೇಳಿದರು. ಬಾಲಿವುಡ್ ತಾರೆಯರಾದ ಭಾಗ್ಯಶ್ರೀ, ಮಧುಬಾಲ ಇಬ್ಬರು ಕಾಲೇಜ್ ಸ್ನೇಹಿತೆಯರು ಎಂಬುದು ತಿಳಿದುಬಂತು. ಲಹರಿವೇಲು, ಕಾರ್ಯಕಾರಿ ನಿರ್ಮಾಪಕ ಸುನಿಲ್ ಚುಟುಕು ಮಾತಿಗೆ ವಿರಾಮ ಹಾಕಿದರು. ಸಮಯದ ಅಭಾವದಿಂದ ಉಳಿದ ಕಲಾವಿದರಿಗೆ ಮೈಕ್ ತಲುಪಲಿಲ್ಲ. ನಿರ್ಮಾಪಕ ಅನಿತಾಕುಮಾರಸ್ವಾಮಿ ಅನುಪಸ್ಥಿತಿಗೆ ಕಾರಣ ತಿಳಿಯಲಿಲ್ಲ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
21/11/18


ಕ್ಲೈಮಾಕ್ಸ್ ಹಂತದಲ್ಲಿ ಸೀತಾರಾಮಕಲ್ಯಾಣ
‘ಸೀತಾರಾಮ ಕಲ್ಯಾಣ’ ಕ್ಲೈಮಾಕ್ಸ್ ಭಾಗದ ಚಿತ್ರೀಕರಣವು ಪ್ಯಾಲೇಸ್ ಮೈದಾನದಲ್ಲಿ ನಡೆಯುತ್ತಿತ್ತು. ಪತ್ರಕರ್ತರು ಸೆಟ್‍ಗೆ ಭೇಟಿ ನೀಡಿದಾಗ ಮೇಲುಕೋಟೆ, ಹಂಪಿಗೆ ಭೇಟಿ ನೀಡಿದಂತೆ ಭಾಸವಾಗುತ್ತಿತ್ತು. ನಾಯಕಿ ರಚಿತಾರಾಮ್, ಗಿರಿಜಾಲೋಕೇಶ್, ಮಧುಬಾಲ ಸೇರಿದಂತೆ ಸಹಕಲಾವಿದರು ಸನ್ನಿವೇಶದಲ್ಲಿ ಭಾಗವಹಿಸಿದ್ದರು. ಎಲ್ಲರು ಗ್ಲಿಸರನ್ ಬಳಸಿಕೊಂಡು ಕ್ಯಾಮಾರ ಮುಂದೆ ಭಾವುಕರಾಗಿ ನಿಂತಾಗ ಶರತ್‍ಕುಮಾರ್ ಬರುವ ದೃಶ್ಯವು ಮೂರು ಟೇಕ್ ನಂತರ ನಿರ್ದೇಶಕರಿಂದ ಓಕೆ ಎಂಬ ಕೂಗು ಬಂತು. ಶಿಫ್ಟ್ ಮಾಡಿದರೆ ಪತ್ರಿಕಾಗೋಷ್ಟಿ. ಅಷ್ಟರಲ್ಲಿ ಮುಖ್ಯಮಂತ್ರಿಗಳು ತಂಡದ ಜೊತೆಗೆ ಸೇರಿಕೊಂಡರು.

ಸರದಿಯಂತೆ ಮೈಕ್ ತೆಗೆದುಕೊಂಡ ಹೆಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾ ಇಂದು ಸಿಎಂ ಆಗಿ ಬಂದಿಲ್ಲ. ಸಾಮಾನ್ಯ ನಿರ್ಮಾಪಕನಾಗಿ ಆಗಮಿಸಿರುವೆ. ಪ್ರತಿ ದೃಶ್ಯಗಳನ್ನು ನೋಡಿದ್ದೇನೆ. ಅದ್ಬುತವಾಗಿ ಮೂಡಿಬಂದಿದೆ. ಕೆಲವೊಂದು ಸೆಂಟಿಮೆಂಟ್ ಸನ್ನಿವೇಶಗಳನ್ನು ನೋಡುವಾಗ ನನ್ನ ಜೀವನದಲ್ಲಿ ನಡೆದ ಘಟನೆಗಳು ನೆನಪಿಗೆ ಬಂದವು. ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೀತಾರಾಮ ಕಲ್ಯಾಣ ಕುಟುಂಬದಂತೆ ಇರಲಿದ್ದು, ದಸರಾ ವೇಳಗೆ ಜನರಿಗೆ ತೋರಿಸುವ ಇರಾದೆ ಇದೆ ಎಂದರು.

ಚಿತ್ರದ ಬಗ್ಗೆ ಏನು ಹೇಳಿದರೂ ಕಡಿಮೆಯಾಗುತ್ತದೆ. ಟೀಸರ್‍ನ್ನು ಇಲ್ಲಿಯವರೆಗೆ ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಕೊನೆ ಭಾಗದಲ್ಲಿ ಸಾಧುಕೋಕಿಲ, ಚಿಕ್ಕಣ್ಣ,ಶಿವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ. ಇಂದಿಗೆ 99 ದಿನದ ಚಿತ್ರೀಕರಣ ನಡೆಯುತ್ತಿದೆ. ಹಾಡುಗಳು ಬಾಕಿ ಇರಲಿದ್ದು, ಸಂಪೂರ್ಣ ಕರ್ನಾಟಕದಲ್ಲಿ ನಡೆಸಲಾಗುವುದು. ಹುಡುಗರು ಇಷ್ಟಪಡುವಂತೆ ನಾಯಕಿ ಪಾತ್ರವು ಚೆನ್ನಾಗಿ ಬಂದಿದೆ. ನಿರ್ಮಾಪಕರಿಗೆ ನಿರಾಶೆ ಮಾಡದಂತೆ ಸಿನಿಮಾ ಮಾಡಿಕೊಡುತ್ತೆನೆಂದು ನಿರ್ದೇಶಕ ಹರ್ಷ ಭರವಸೆ ನೀಡಿದರು.

ತೇತ್ರಾಯುಗದಲ್ಲಿ ನೋವು, ನಲಿವು, ಪ್ರಾಮಾಣಿಕತೆ, ಕಪಟ, ವೈರತ್ವ ಇರುವಂತೆ ಆಧುನಿಕ ಯುಗದ ಸಿನಿಮಾದಲ್ಲಿ ಇದೆಲ್ಲವು ಇದೆ. ಕುಟುಂಬದ ರಾಣಿಯಾಗಿ ಎಲ್ಲರಿಗೂ ಒಡತಿಯಾಗಿರುತ್ತೇನೆ. ಗಂಡ ಎಲ್ಲಿ ಅಂತ ಕೇಳಬೇಡಿ. ಮಕ್ಕಳು, ಅಳಿಯ, ಮೊಮ್ಮಕ್ಕಳು ಇರುತ್ತಾರೆ. ಒಂದು ಸಿನಿಮಾ ಗೆದ್ದರೆ ನೂರಾರು ಕಲಾವಿದರು, ತಂತ್ರಜ್ಘರಿಗೆ ಕೆಲಸ ಸಿಗುತ್ತದೆ. ಇದನ್ನು ಗೆಲ್ಲಿಸುವ ಜವಬ್ದಾರಿ ನಿಮಗೆ ಸೇರಿದ್ದು ಎಂಬುದು ಗಿರಿಜಾಲೋಕೇಶ್ ಮಾತಾಗಿತ್ತು.

ಜಾಗ್ವಾರ್‍ದಲ್ಲಿ ನಟಿಸಲು ಆಗಲಿಲ್ಲ. ನಿರ್ಮಾಪಕರು ಇದರಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಮನಸ್ಸಿಗೆ ನಾಟುವಂತ ಸನ್ನಿವೇಶಗಳು ಇರಲಿದೆ. ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದೇನೆಂದು ಪಾತ್ರದ ಪರಿಚಯ ಮಾಡಿಕೊಂಡಿದ್ದು ಶರತ್‍ಕುಮಾರ್. ನಾಯಕಿಯ ಪೋಷಕರಾಗಿರುವ ರವಿಶಂಕರ್, ಮಧುಬಾಲ, ಚಿಕ್ಕಪ್ಪ ಆದಿತ್ಯಮೆನನ್, ನಾಯಕಿ ರಚಿತಾರಾಂ ಖುಷಿಯನ್ನು ಹಂಚಿಕೊಂಡರು.

ಅವಸಾನದಲ್ಲಿ ನಾಯಕ ನಿಖಿಲ್‍ಕುಮಾರ್ ಚಿತ್ರದ ಕುರಿತು ಹೇಳಿದ್ದಿಷ್ಟು: ಹಿರಿಯ ಕಲಾವಿದರೊಂದಿಗೆ ಅಭಿನಯಿಸುವಾಗ ಸಾಕಷ್ಟ್ಟು ಕಲಿತುಕೊಂಡಿದ್ದೇನೆ. ನಿರ್ದೇಶಕರು ಕಲಾವಿದರನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಸಂಡೂರ್ ಎಪಿಸೋಡ್‍ನಲ್ಲಿ ಭಾಗವಹಿಸಿರಲಲ್ಲ. ಚೆನ್ನಾಗಿ ಬಂದಿದೆ ಎಂದು ಹೇಳುತ್ತಿದ್ದಾರೆ. ಹಾಡುಗಳು ಬಾಕಿ ಇದೆ. ಮುಂದಿನವಾರದಿಂದ ಊಟಿ ಸುಂದರ ಪರಿಸರದಲ್ಲಿ ಸೆರೆಹಿಡಿಯಲು ಯೋಜನೆ ಹಾಕಲಾಗಿದೆ. ನಮ್ಮ ನೇಟವಿಟಿಗೆ ತಕ್ಕಂತೆ ಚಿತ್ರಕತೆ ಹಣೆಯಲಾಗಿದೆ. ಹಲವು ಚಿತ್ರಗಳ ಸ್ಪೂರ್ತಿಯಿಂದ ಕತೆ ಬರೆಯಲಾಗಿದೆ. ರಿಮೇಕ್ ಅಲ್ಲ. ಟೀಸರ್‍ನಲ್ಲಿ ಪೈಟ್ ದೃಶ್ಯಗಳು ನೋಡಿದಾಗ ತೆಲುಗು ಚಿತ್ರದಂತೆ ಇರುವುದು ಸಹಜ. ಅದಕ್ಕೆ ಸಾಹಸ ನಿರ್ದೇಶಕ ರಾವi-ಲಕ್ಷಣ್ ಕೆಲಸ ಮಾಡಿರುವುದು ಕಾರಣವಾಗಿದೆ. ಮುಂದಿನ ತಿಂಗಳು ಹುಬ್ಬಳಿಯಲ್ಲಿ ಧ್ವನಿಸಾಂದ್ರಿಕೆ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಎಲ್ಲವು ನಿರ್ಮಾಪಕರಿಗೆ ಬಿಟ್ಟಿದ್ದು ಎಂದು ಅಪ್ಪನ ಮುಖ ನೋಡಿಕೊಂಡು ನಿಖಿಲ್‍ಕುಮಾರ್ ಮಾತಿಗೆ ವಿರಾಮ ಹಾಕಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/08/18


ಸೀತಾರಾಮ ಕಲ್ಯಾಣ ಮೊದಲ ಮಾತುಗಳು
‘ಸೀತಾರಾಮ ಕಲ್ಯಾಣ’ ಚಿತ್ರದ ಮೊದಲ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಹರ್ಷ ಮಾತನಾಡುತ್ತಾ ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ. ಶೇಕಡ 75 ರಷ್ಟು ಚಿತ್ರೀಕರಣ ಮುಗಿದಿದೆ. ಹಾಡು ಮತ್ತು ಕೆಲವು ದೃಶ್ಯಗಳು ಬಾಕಿ ಇದೆ. ಟೈಟಲ್ ನನ್ನದಲ್ಲ., ಮೂವರು ಸೇರಿಕೊಂಡು ಇದನ್ನೆ ಇಡಲು ತಿಳಿಸಿದರು. ನಾಲ್ಕು ಆಕ್ಷನ್‍ಗಳು ಇದ್ದರೂ ಸುಂದರ ಪ್ರೇಮಕತೆ ಇರಲಿದೆ. ರವಿಶಂಕರ್-ಮಧುಬಾಲ ನಾಯಕಿ ಪೋಷಕರಾಗಿ ಕಾಣಿಸಿಕೊಂಡಿದ್ದಾರೆ. ಎರಡು ಕುಟುಂಬಗಳ ನಡುವೆ ಲವ್ ಸ್ಟೋರಿ ತೆರೆದುಕೊಳ್ಳುತ್ತದೆ. ಅನೂಪ್‍ರೂಬಿನ್ಸ್ ಒಳ್ಳೆ ಹಾಡುಗಳನ್ನು ಕೊಟ್ಟಿದ್ದಾರೆ. ಮೂರು ಟ್ರಾಕ್‍ಗಳಲ್ಲಿ ಗೆಳತನ, ಪ್ರೀತಿ ಕೊನೆಯದನ್ನು ಮುಂದಿನ ಬಾರಿ ಹೇಳುತ್ತೇನೆ. ನಿಖಿಲ್ ನಿರ್ದೇಶಕರ ನಟರಾಗಿದ್ದಾರೆ. ದಸರ ಹೊತ್ತಿಗೆ ತೆರೆಗೆ ಬರುವ ಸಾದ್ಯತೆ ಇದೆ ಒಂದಷ್ಟು ಮಾಹಿತಿಗಳನ್ನು ನೀಡಿದರು.

ಇದೊಂದು ಸ್ವಮೇಕ್ ಚಿತ್ರವೆಂದು ಸ್ಪಷ್ಟಪಡಿಸಿದ ನಾಯಕ ನಿಖಿಲ್‍ಕುಮಾರ್, ಇಲ್ಲಿಯವರೆಗೂ 86 ದಿವಸ ಚಿತ್ರೀಕರಣ ನಡೆಸಲಾಗಿದೆ. ಕ್ಲೈಮಾಕ್ಸ್‍ದಲ್ಲಿ ರವಿಶಂಕರ್ ಜೊತೆ ಅಭಿನಯಿಸಬೇಕಾಗಿದೆ. ರಾಮನಗರದಲ್ಲಿ ಇದೇ 31ರಂದು ಕರಗ ಉತ್ಸವ ನಡೆಯಲಿರುವುದರಿಂದ ಅಂದು ಸಿನಿಮಾದ ಮೊದಲ ಟೀಸರ್ ಬಿಡಲಾಗುವುದು. ನಿರ್ದೇಶಕರು ತಾಳ್ಮೆಯಿಂದ ಎಲ್ಲರಲ್ಲೂ ಕೆಲಸ ತೆಗೆದುಕೊಳ್ಳುತ್ತಾರೆ. ಮುಂದೆ ಅವರೊಂದಿಗೆ ಮತ್ತೋಂದು ಸಿನಿಮಾ ಮಾಡುತ್ತೇನೆ. ಟೀಸರ್‍ನಲ್ಲಿ ಆಕ್ಷನ್ ಇರುತ್ತದೆ. ಹಾಗಂತ ಮಾಸ್ ಸಿನಿಮಾ ಅಂದುಕೊಳ್ಳಬೇಡಿ. ಕುಟುಂಬದ ಭಾವನೆಗಳಿಗೆ ಹೆಚ್ಚು ಒತ್ತು ಕೊಡುವ ಸನ್ನಿವೇಶಗಳು ಹೇರಳವಾಗಿದೆ ಎಂದರು.

ಸಂಪ್ರದಾಯಸ್ಥ ಹುಡುಗಿಯಾಗಿ ಎಲ್ಲಾ ನವರಸಗಳು ಇರಲಿದೆ ಎಂದು ಪಾತ್ರದ ಪರಿಚಯ ಮಾಡಿಕೊಂಡರು ನಾಯಕಿ ರಚಿತಾರಾಮ್. ಶೀರ್ಷಿಕೆ ಕೇಳುವುದಕ್ಕೆ ಖುಷಿಯಾಗುತ್ತದೆ. ಚಿತ್ರಕತೆಯನ್ನು ಅದ್ಬುತವಾಗಿ ಸೃಷ್ಟಿಸಿದ್ದಾರೆ. ವಿರಾಮದ ನಂತರ ಬರುವ ಫ್ಲಾಶ್‍ಬ್ಯಾಕ್ ಎಪಿಸೋಡ್ ಜೀವಾಳವಾಗಿದೆ. ಫುಲ್ ಪ್ಯಾಕೇಜ್ ಇರುವ ಚಿತ್ರವಾಗುತ್ತದೆಂದು ಬಣ್ಣನೆ ನೀಡಿದರು ರವಿಶಂಕರ್.

ಮೈಕ್ ಕೊನೆಗೆ ಹೆಚ್.ಡಿ.ಕುಮಾರಸ್ವಾಮಿಗೆ ತಲುಪಿದಾಗ ಚಿತ್ರದ ಕುರಿತು ಈ ರೀತಿ ವ್ಯಾಖ್ಯಾನ ನೀಡಿದರು. ಇಂದು ಮುಖ್ಯಮಂತ್ರಿಯಾಗಿ ಬರದೆ, ಸಾಮಾನ್ಯ ನಿರ್ಮಾಪಕನಾಗಿ ನಿಮ್ಮನ್ನು ಭೇಟಿ ಮಾಡಲು ಆಗಮಿಸಿದ್ದೇನೆ. 18 ತಿಂಗಳ ನಂತರ ಮಗ ನಟಿಸಿದ್ದಾನೆ. ಇದರ ಮಧ್ಯೆ ಕುರುಕ್ಷೇತ್ರದಲ್ಲಿ ನಿರ್ಮಾಪಕರ ಒತ್ತಾಯಕ್ಕೆ ಅಭಿಮನ್ಯು ಪಾತ್ರ ಮಾಡಿದ. ಹಿಂದಿನ ಚಿತ್ರದಲ್ಲಿ ಕನ್ನಡೇತರ ಕಲಾವಿದರು ಇದ್ದಾರೆಂದು ದೂರುಗಳು ಕೇಳಿಬಂದಿದ್ದವು. ಈ ಬಾರಿ ಕನ್ನಡದ ಕಲಾವಿದರಿಗೆ ಮಣೆ ಹಾಕಲಾಗಿದೆ. ಲೋಕೇಶನ್ ಅವನೇ ನೋಡಿಕೊಂಡಿದ್ದಾನೆ. ಸಂಭಾಷಣೆಗಳು ರೋಮಾಂಚನಗೊಳಿಸುತ್ತದೆ. ಹಳ್ಳಿ-ನಗರ ದೃಶ್ಯಗಳು ಜನತೆಗೆ ಹಿಡಿಸುತ್ತದೆ ಎಂಬ ನಂಬಿಕೆ ಇದೆ. ರಿಮೇಕ್ ಅಲ್ಲ. ತೆಲುಗು ಭಾಷೆಗೆ ರಿಮೇಕ್ ಆಗಬಹುದು. ಕನ್ನಡ ಚಿತ್ರಗಳು ಬೇರೆ ಭಾಷೆಗೆ ಸಡ್ಡು ಹೊಡೆಯುವಂತ ಸಿನಿಮಾ ಆಗಲಿದೆ ಎಂಬ ಭರವಸೆ ಇದೆ ಎಂದು ಮಾದ್ಯಮದ ಕೆಲವು ಪ್ರಶ್ನಗಳಿಗೆ ಉತ್ತರವಾದರು .
ಸಿನಿ ಸರ್ಕಲ್.ಇನ್ ನ್ಯೂಸ್
17/06/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore