HOME
CINEMA NEWS
GALLERY
TV NEWS
REVIEWS
CONTACT US

ಮೊದಲ ಹಂತ ಮುಗಿಸಿದ ಸಾರ್ವಜನಿಕರಿಗೆ ಸುವರ್ಣವಕಾಶ
ಎಲ್ಲರು ಆಸೆ ಪಡುವ ವಸ್ತು ಕುರಿತಾದ ಕಾಮಿಡಿ ಡ್ರಾಮ ‘ಸಾರ್ವಜನಿಕರಿಗೆ ಸುವರ್ಣವಕಾಶ’ ಸಿನಿಮಾದ ಚಿತ್ರೀಕರಣವು ಹದಿನೈದು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ನಡೆಸಿದೆ. ಮೊದಲ ಹಂತದಲ್ಲಿ ನಾಯಕ ರಿಷಿ, ನವನಾಯಕಿ ಧನ್ಯಬಾಲಕೃಷ್ಣ ಮತ್ತು ಸಹ ಕಲಾವಿದರು ಭಾಗವಹಿಸಿದ್ದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ದ್ವಿತೀಯ ಹಂತದ ಚಿತ್ರೀಕರಣವು ಸದ್ಯದಲ್ಲೆ ಶುರುವಾಗಲಿದೆ. ನಿರ್ದೇಶನ ಅನೂಪ್‍ರಾಮಸ್ವಾಮಿಕಶ್ಯಪ್, ಕತೆ-ನಿರ್ಮಾಪಕ ಜನಾರ್ಧನ್‍ಚಿಕ್ಕಣ್ಣ, ಛಾಯಗ್ರಹಣ ವಿಘ್ನೇಶ್‍ರಾಜ್. ಜನಾರ್ಧನ್‍ಚಿಕ್ಕಣ್ಣ-ಹರಿಕೃಷ್ಣ.ಎನ್ ಸಂಭಾಷಣೆ, ಜಯಂತ್‍ಕಾಯ್ಕಿಣಿ ಸಾಹಿತ್ಯಕ್ಕೆ ಮಿಧುನ್‍ಮುಕುಂದನ್ ಸಂಗೀತವಿದೆ.

ತಾರಾಗಣದಲ್ಲಿ ದತ್ತಣ್ಣ, ರಂಗಾಯಣರಘು, ಸಿದ್ದುಮೂಲಿಮನೆ, ಸೀನುಮಿತ್ರ ಮುಂತಾದವರಿದ್ದಾರೆ. ಹಿಟ್ ಚಿತ್ರ ಗುಳ್ಟು ನಿರ್ಮಾಣ ಮಾಡಿದ್ದ ವಿವಿಡ್ ಫಿಲಂಸ್‍ನ ಪ್ರಶಾಂತರೆಡ್ಡಿ, ದೇವರಾಜ್, ಜನಾರ್ಧನ್, ಚಿಕ್ಕಣ್ಣ ನಿರ್ಮಿಸುತ್ತಿರುವ ಎರಡನೇ ಕಾಣಿಕೆ ಇದಾಗಿದೆ
ಸಿನಿ ಸರ್ಕಲ್.ಇನ್ ನ್ಯೂಸ್
3/12/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\