HOME
CINEMA NEWS
GALLERY
TV NEWS
REVIEWS
CONTACT US
ತೆರೆಗೆ ಸಿದ್ದ ಸಂಕಷ್ಟಕರ ಗಣಪತಿ
ಅಲಿಯನ್‍ಹ್ಯಾಂಡ್ ಸಿಂಡ್ರೋಮ್ ಖಾಯಿಲೆ ಇರುವ ರೋಗಿಯ ಎಡಕೈ ಅರಿವಿಲ್ಲದೆ ಕೆಲಸ ಮಾಡುತ್ತಿರುತ್ತದೆ. ಇದರಿಂದ ಇತರೆಯವರಿಗೆ ತೊಂದರೆ ಆಗುವುದುಂಟು. ಇದು ಕೆಲವೇ ಕಲವು ಜನರಿಗೆ ಬರುತ್ತದಂತೆ. ಇದನ್ನು ಹೇಳಲು ಪೀಠಿಕೆ ಇದೆ. ಹೊಸಬರ ‘’ಸಂಕಷ್ಟಕರ ಗಣಪತಿ’’ ಎನ್ನುವ ಚಿತ್ರದಲ್ಲಿ ಕಥಾನಾಯಕ ವ್ಯಂಗ ಚಿತ್ರಕಾರನಾಗಿದ್ದು, ಕಷ್ಟದಿಂದ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಒಂದು ಹಂತದಲ್ಲಿ ಖಾಯಿಲೆ ಆವರಿಸಿಕೊಂಡಾಗ ಆಗುವ ಪರಿಪಾಟಲುಗಳನ್ನು ಕಾಮಿಡಿ ಜೊತೆಗೆ ಸುಂದರ ಪ್ರೇಮ ಕತೆಯನ್ನು ಹಣೆಯಲಾಗಿದೆ. ಸಂಕಷ್ಟ ಅಂದರೆ ತೊಂದರೆಗಳು, ಕರಕ್ಕೆ ಅರ್ಥ ಕೈ, ಈತನ ಹೆಸರು ಗಣಪತಿ ಆಗಿರುವುದರಿಂದ ಶೀರ್ಷಿಕೆಯನ್ನು ಇದೇ ರೀತಿಯಲ್ಲಿ ಇಡಲಾಗಿದೆ. ದೃಶ್ಯಗಳು ಸಹಜವಾಗಿ ಬರಲೆಂದು ನಿರ್ದೇಶಕರು ರೋಗಿ ಮತ್ತು ಚಿತ್ರಕಾರರನ್ನು ಭೇಟಿ ಮಾಡಿ ಅವರ ಹಾವಭಾವಗಳನ್ನು ಗ್ರಹಿಸಿ ಅದರಂತೆ ಕ್ಯಾಮಾರ ಮುಂದೆ ನಿಲ್ಲಿಸಿದ್ದಾರೆ. ಕಿರುಚಿತ್ರ ಕೆಲಸ ನೋಡಿದ ನಿರ್ಮಾಪಕರುಗಳು ಎಸ್.ಅರ್ಜುನ್‍ಕುಮಾರ್‍ಗೆ ಹಿರಿತೆರೆಯಲ್ಲಿ ಕೆಲಸ ಮಾಡುವ ಅವಕಾಶ ನೀಡಿದ್ದರಿಂದ ಕತೆ, ಚಿತ್ರಕತೆ ರಚಿಸಿ ನಿರ್ದೇಶನದ ಪಾರುಪಥ್ಯವನ್ನು ವಹಿಸಿಕೊಂಡಿದ್ದಾರೆ.

ಒಗ್ಗರಣೆ ಡಬ್ಬಿ ಕಾರ್ಯಕ್ರಮದ ನಿರೂಪಕ ಹಾಗೂ ಎರಡು ತುಳು ಚಿತ್ರಗಳಲ್ಲಿ ನಟಿಸಿರುವ ಲಿಖಿತ್‍ಶೆಟ್ಟಿ ವ್ಯಂಗ್ಯ ಚಿತ್ರಕಾರನ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮಾರಾಟ ಪ್ರತಿನಿಧಿಯಾಗಿ ಶೃತಿಗೂರಾಡಿಯಾ ನಾಯಕಿ. ಐದು ಹಾಡುಗಳಿಗೆ ಲಿಖಿತ್‍ಮುರಳಿಧರ್ ಸಂಗೀತ ಸಂಯೋಜಿಸಿದ್ದಾರೆ. ರಘುನಿಡುವಳ್ಳಿ ನಗರದ ವಾಸಿಗಳು ಮಾತನಾಡುವಂತೆ ಸಂಭಾಷಣೆಗಳನ್ನು ಬರೆದಿದ್ದಾರೆ. ಪೈಜಲ್, ಭರತ್‍ರಾವ್.ಕೆ.ಎಸ್. ಇವರುಗಳು ಗೆಳಯರೊಂದಿಗೆ ಸೇರಿಕೊಂಡು ಸಿನಿಮಾ ಕೃಷಿಗೆ ಹಣ ಹೂಡುತ್ತಿರುವುದು ಪ್ರಥಮ ಅನುಭವ. ಸಂಪೂರ್ಣ ಚಿತ್ರೀಕರಣ ಬೆಂಗಳೂರು, ಒಂದು ಹಾಡನ್ನು ತೆಲಂಗಾಣದಲ್ಲಿರುವ ಗಾಂಧಿಕೋಟೆ, ಪೆನ್ನಾರ್‍ನದಿ ತೀರದಲ್ಲಿ ಸೆರೆ ಹಿಡಿಯಲಾಗಿದೆ. ಕೆ.ಆರ್.ಜಿ ಸ್ಟುಡಿಯೋಸ್ ಮುಖಾಂತರ ಇದೇ ಶುಕ್ರವಾರದಂದು ಗಣಪತಿಯ ಆಟಾಟೋಪಗಳನ್ನು ನೋಡಬಹುದು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
24/07/18

ಸಂಕಷ್ಟಕರ ಗಣಪತಿ ಹಾಡುಗಳ ಸಮಯ
ಹೇಳಿದ ಸಮಯಕ್ಕೆ ಅವಜ್ಘೆ ಮಾಡದೆ ಸರಿಯಾಗಿ ಬರುವುದು ಪುನೀತ್‍ರಾಜ್‍ಕುಮಾರ್ ರೂಡಿಸಿಕೊಂಡಿದ್ದಾರೆ. ಅದರಂತೆ ‘ಸಂಕಷ್ಟಕರ ಗಣಪತಿ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಚಿತ್ರತಂಡವು ಕಾಯುವಂತೆ ಮಾಡದೆ ನಿಗದಿತ ವೇಳೆಯಲ್ಲಿ ಅನಾವರಣಗೊಳಿಸಿದರು. ಅವರು ಮಾತನಾಡುತ್ತಾ ಹಾಡುಗಳ ಮೂಲಕ ಸಂಗೀತ ನಿರ್ದೇಶಕರು ಪರಿಚಯವಾಗುತ್ತಾರೆ. ಪ್ರಸಕ್ತ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ. ಗಣಪತಿ ಆಶಿರ್ವಾದದಿಂದ ತಂಡಕ್ಕೆ ಒಳ್ಳೆಯದಾಗಲಿ. ಹೊಸದಾಗಿ ಲಾಂಚ್ ಮಾಡುತ್ತಿರುವ ಚಿತ್ರಕ್ಕೆ ದೇವರು ಆರ್ಥಾತ್ ಅಭಿಮಾನಿಗಳ ದೇವರುಗಳ ಹಾರೈಕೆ ಇರಲೆಂದು ನಿರೂಪಕಿಯ ಪ್ರಶ್ನೆಗೆ ಉತ್ತರವಾದರು ಪವರ್‍ಸ್ಟಾರ್.

ಇತ್ತೀಚಿನ ಹೊಸ ತಂಡದಲ್ಲಿ ಉರುಪು ತುಂಬಿರುತ್ತದೆ. ಬುದ್ದಿವಂತಿಕೆಯಿಂದ ಶೀರ್ಷಿಕೆ ಇಟ್ಟಿದ್ದಾರೆ. ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಖಾಯಿಲೆಯನ್ನು ತೆಗೆದುಕೊಂಡು ಕತೆ ಸಿದ್ದಪಡಿಸಿದ್ದಾರೆ. ಹೊಸಬರಿಂದ ಹೊಸತನ ಇರುತ್ತೆ. ಸಂಕಷ್ಟಕರ ಹೋಗಿ ಸಂಕಷ್ಟಹರ ಆಗಲಿ ಎಂದು ಗುರುಕಿರಣ್ ಹೇಳಿದರು.

ನಿಶ್ವಲ್‍ದಂಬೆಕೋಡಿ, ಮದನ್ ಬೆಳ್ಳಿಸಾಲು ಮತ್ತು ನಿತಿನ್‍ಜಯ್ ರಚಿಸಿರುವ ಐದು ಹಾಡುಗಳಿಗೆ ರಘುದೀಕ್ಷಿತ್, ಸಂಜಿತ್‍ಹೆಗಡೆ, ರಕ್ಷಿತಾರಾವ್, ದೀಪಕ್‍ದೊಡೆದ, ಇಶಾಸುಬಿ, ಮೆಹಬೂಬ್‍ಸಾಬ್, ಅನನ್ಯಭಟ್ ಜೊತೆಗೆ ಗುರುಕಿರಣ್ ಗೀತೆಗೆ ಧ್ವನಿಯಾಗಿದ್ದಾರೆ ಪಿಆರ್‍ಕೆ ಸಂಸ್ಥ್ಥೆಯ ಮೂಲಕ ಸಿಡಿ ಹೊರಬರುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ನೂತನ ನಿರ್ದೇಶಕ ಎಸ್.ಅರ್ಜುನ್‍ಕುಮಾರ್.

ನಾಯಕ ಲಿಖಿತ್‍ಶೆಟ್ಟಿ ನನಗೆ ಮದುವೆ ಮಾಡಿಸಿದ್ದು ಗುರುಕಿರಣ್ ಸರ್ ಅಂತ ಹೇಳಿಕೊಂಡರು. ನಾಯಕಿ ಶೃತಿಗೊರಾಡಿಯಾ ಪುನೀತ್ ಸರ್ ಬಂದಿದ್ದು ನಮಗೆ ಪವರ್ ಬಂದಂತೆ ಆಗಿದೆ ಎಂದರು. ನಿರ್ಮಾಪಕರುಗಳಾದ ರಾಜೇಶ್‍ಬಾಬು, ಫೈಜಾನ್‍ಖಾನ್, ಬಿ.ಎಸ್.ಹೇಮಂತ್‍ಕುಮಾರ್, ಪ್ರಮೋದ್‍ನಿಂಬ್ಳಾಕರ್, ಮತ್ತು ಎ. ಚೆಲುವರಾಜ್‍ನಾಯ್ಡು ಮಾತನಾಡದೆ ಸಿಡಿಯೊಂದಿಗೆ ಫೋಟೋಗೆ ಪೋಸ್ ಕೊಟ್ಟರು. ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/06/18
ಗಣಪತಿ ಕೈ ಖಾಯಿಲೆ
ಅಲಿಯನ್‍ಹ್ಯಾಂಡ್ ಸಿಂಡ್ರೋಮ್ ಖಾಯಿಲೆ ಇರುವ ರೋಗಿಯ ಎಡಕೈ ಅರಿವಿಲ್ಲದೆ ಕೆಲಸ ಮಾಡುತ್ತಿರುತ್ತದೆ. ಇದರಿಂದ ಇತರೆಯವರಿಗೆ ತೊಂದರೆ ಆಗುವುದುಂಟು. ಇದು ಕೆಲವೇ ಕಲವು ಜನರಿಗೆ ಬರುತ್ತದಂತೆ. ಇದನ್ನು ಹೇಳಲು ಪೀಠಿಕೆ ಇದೆ. ಹೊಸಬರ ‘’ಸಂಕಷ್ಟಕರ ಗಣಪತಿ’’ ಎನ್ನುವ ಚಿತ್ರದಲ್ಲಿ ಕಥಾನಾಯಕ ವ್ಯಂಗ ಚಿತ್ರಕಾರನಾಗಿದ್ದು, ಕಷ್ಟದಿಂದ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಒಂದು ಹಂತದಲ್ಲಿ ಖಾಯಿಲೆ ಆವರಿಸಿಕೊಂಡಾಗ ಆಗುವ ಪರಿಪಾಟಲುಗಳನ್ನು ಕಾಮಿಡಿ ಜೊತೆಗೆ ಸುಂದರ ಪ್ರೇಮ ಕತೆಯನ್ನು ಹಣೆಯಲಾಗಿದೆ. ಸಂಕಷ್ಟ ಅಂದರೆ ತೊಂದರೆಗಳು, ಕರಕ್ಕೆ ಅರ್ಥ ಕೈ, ಈತನ ಹೆಸರು ಗಣಪತಿ ಆಗಿರುವುದರಿಂದ ಶೀರ್ಷಿಕೆಯನ್ನು ಇದೇ ರೀತಿಯಲ್ಲಿ ಇಡಲಾಗಿದೆ. ದೃಶ್ಯಗಳು ಸಹಜವಾಗಿ ಬರಲೆಂದು ನಿರ್ದೇಶಕರು ರೋಗಿ ಮತ್ತು ಚಿತ್ರಕಾರರನ್ನು ಭೇಟಿ ಮಾಡಿ ಅವರ ಹಾವಭಾವಗಳನ್ನು ಗ್ರಹಿಸಿ ಅದರಂತೆ ಕ್ಯಾಮಾರ ಮುಂದೆ ನಿಲ್ಲಿಸಿದ್ದಾರೆ. ಕಿರುಚಿತ್ರ ಕೆಲಸ ನೋಡಿದ ನಿರ್ಮಾಪಕರುಗಳು ಎಸ್.ಅರ್ಜುನ್‍ಕುಮಾರ್‍ಗೆ ಹಿರಿತೆರೆಯಲ್ಲಿ ಕೆಲಸ ಮಾಡುವ ಅವಕಾಶ ನೀಡಿದ್ದರಿಂದ ಕತೆ, ಚಿತ್ರಕತೆ ರಚಿಸಿ ನಿರ್ದೇಶನದ ಪಾರುಪಥ್ಯವನ್ನು ವಹಿಸಿಕೊಂಡಿದ್ದಾರೆ.

ಒಗ್ಗರಣೆ ಡಬ್ಬಿ ಕಾರ್ಯಕ್ರಮದ ನಿರೂಪಕ ಹಾಗೂ ಎರಡು ತುಳು ಚಿತ್ರಗಳಲ್ಲಿ ನಟಿಸಿರುವ ಲಿಖಿತ್‍ಶೆಟ್ಟಿ ವ್ಯಂಗ್ಯ ಚಿತ್ರಕಾರನ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮಾರಾಟ ಪ್ರತಿನಿಧಿಯಾಗಿ ಶೃತಿಗೂರಾಡಿಯಾ ನಾಯಕಿ. ಉಳಿದಂತೆ ಅಚ್ಯುತಕುಮಾರ್, ಮಂಜುನಾಥ್‍ಹೆಗ್ಗಡೆ,ಶ್ರೀನಿವಾಸಪ್ರಭು, ರೇಖಾಸಾಗರ್, ನಾಗಭೂಷಣ್ ಮುಂತಾದವರ ನಟನೆ ಇದೆ. ಐದು ಹಾಡುಗಳಿಗೆ ಲಿಖಿತ್‍ಮುರಳಿಧರ್ ಸಂಗೀತ ಸಂಯೋಜಿಸಿದ್ದಾರೆ. ವಿಜೇತ್ ಸಂಕಲನ, ಉದಯಲೀಲಾ ಛಾಯಗ್ರಹಣ, ರಘುನಿಡುವಳ್ಳಿ ಅವರು ನಗರದ ವಾಸಿಗಳು ಮಾತನಾಡುವಂತೆ ಸಂಭಾಷಣೆಗಳನ್ನು ಬರೆದಿದ್ದಾರೆ. ಪೈಜಲ್, ಭರತ್‍ರಾವ್.ಕೆ.ಎಸ್. ಇವರುಗಳು ಗೆಳಯರೊಂದಿಗೆ ಸೇರಿಕೊಂಡು ಸಿನಿಮಾ ಕೃಷಿಗೆ ಹಣ ಹೂಡುತ್ತಿರುವುದು ಪ್ರಥಮ ಅನುಭವ. ಸಂಪೂರ್ಣ ಚಿತ್ರೀಕರಣ ಬೆಂಗಳೂರು, ಒಂದು ಹಾಡನ್ನು ತೆಲಂಗಾಣದಲ್ಲಿರುವ ಗಾಂಧಿಕೋಟೆ, ಪೆನ್ನಾರ್‍ನದಿ ತೀರದಲ್ಲಿ ಸೆರೆ ಹಿಡಿಯಲಾಗಿದೆ. ಹಿನ್ನಲೆ ಸಂಗೀತ, ಡಿಐ ಕೆಲಸಗಳು ಮುಗಿದ ನಂತರ ಸೆನ್ಸಾರ್‍ಗೆ ಹೋಗಲು ತಂಡವು ಯೋಜನೆ ಹಾಕಿಕೊಂಡಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
31/05/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore