HOME
CINEMA NEWS
GALLERY
TV NEWS
REVIEWS
CONTACT US
ಹೊಸಬರ ಸಂಯುಕ್ತ
೨೫ ವರ್ಷಗಳ ಹಿಂದೆ ಶಿವರಾಜ್‌ಕುಮಾರ್ ಅಭಿನಯದ ಸಂಯುಕ್ತ ಚಿತ್ರವು ತೆರೆಕಂಡಿತ್ತು. ಈಗ 'ಸಂಯುಕ್ತ-೨' ಎನ್ನುವ ಚಿತ್ರವೊಂದು ಸೆಟ್ಟೇರಿದೆ. ಹಿಂದಿನ ಚಿತ್ರದಂತೆ ಇರದೆ ವಿಜ್ಘಾನ ಕಲ್ಲಿತ ಕತೆಗೆ ಹಾರರ್,ಥ್ರಿಲ್ಲರ್ ಮಾದರಿಯಲ್ಲಿ ಸನ್ನಿವೇಶಗಳು ಬರುತ್ತವೆ. ಮೆಡಿಕಲ್ ಕಾಲೇಜಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಒಂದು ವಿಧವಾದ ಲಕ್ವಿಡ್‌ನ್ನು ಭೇದಿಸಿದಾಗ ಅನಾಹುತ ಆಗುತ್ತದೆ. ಅದು ಯಾವ ತರಹದ ಲಿಕ್ವಡ್ ಎಂದು ಹೇಳಿದರೆ ಕತೆ ಹೂರಣ ಗೊತ್ತಾಗುತ್ತದೆ. ಅದಕ್ಕಾಗಿ ಸಿನಿಮಾ ನೋಡಿ ಅಂತಾರೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಅಭಿರಾಮ್. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ರಚಿಸಿರುವ ಎರಡು ಹಾಡುಗಳಿಗೆ ಕೆ.ವಿ.ರವಿಚಂದ್ರ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಿನ್ಸಿಪಾಲ್ ಪಾತ್ರಕ್ಕೆ ದೇವರಾಜ್ ಬಣ್ಣ ಹಚ್ಚುತ್ತಿದ್ದಾರೆ.

ಚೇತನ್‌ಚಂದ್ರ ನಾಯಕ, ನೇಹಾಪಾಟೀಲ್ ನಾಯಕಿ. ಉಳಿದಂತೆ ಪ್ರಿಯಾಂಕಮಲ್ನಾಡ್, ಪ್ರಭುಸೂರ್ಯ, ತಬಲನಾಣಿ, ಸಾಧುಕೋಕಿಲ ನಟನೆ ಇದೆ. ಚಿಕ್ಕೋಡಿ ಮೂಲದ ಎಂ.ಇ ಪದವೀಧರ ಸಂಜಯ್.ಕೆ. ಪ್ರಥಮ ಬಾರಿ ನಿರ್ಮಾಣ ಮಾಡುವುದರ ಜೊತೆಗೆ ನಾಯಕನಿಗೆ ಸರಿಸಮನಾದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಹ ನಿರ್ಮಾಪಕರು ನಾರಾಯಣ್‌ಸ್ವಾಮಿ. ಛಾಯಗ್ರಹಣ ರಾಜಶೇಖರ್, ಸಂಕಲನ ಹರಿಕೃಷ್ಣ ಅವರದಾಗಿದೆ. ಮಹೂರ್ತ ಸಮಾರಂಭಕ್ಕೆ ದರ್ಶನ್ ಆಗಮಿಸಿ ತಂಡಕ್ಕೆ ಶುಭಹಾರೈಸಿದರು.
-28/02/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\