HOME
CINEMA NEWS
GALLERY
TV NEWS
REVIEWS
CONTACT US
ಒಂದು ಕೊಲೆಯ ಸುತ್ತ
ರಂಗಭೂಮಿ ಕಲಾವಿದರು ಸೇರಿಕೊಂಡು ಸಿದ್ದಪಡಿಸಿರುವ ‘ಸಮಯದ ಹಿಂದೆ ಸವಾರಿ’ ಚಿತ್ರದ ಸುದ್ದಿಗೋಷ್ಟಿಯನ್ನು ನಾಟಕ ರೂಪದಲ್ಲಿ ತಂಡವು ಮಾಹಿತಿ ನೀಡಿತು. ಹಿರಿಯ ಪತ್ರಕರ್ತ ಜೋಗಿ ಬರೆದಿರುವ ‘ನದಿಯ ನೆನಪಿನ ಹಂಗು’’ ಕಾದಂಬರಿಯು ನಾಟಕವಾಗಿ ಯಶಸ್ಸನ್ನು ಕಂಡಿದೆ. ಕುಂದಾಪುರ, ಮಂಗಳೂರು ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣವನ್ನು ಮುಗಿಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಇದಕ್ಕೂ ಮುನ್ನ ನಿರ್ಮಾಪಕರನ್ನು ಹುಡುಕಿದ್ದು, ಅವರು ಕೈಕೊಟ್ಟಿದ್ದು, ಕೊನೆಗೆ ತಂಡದ ಮೂವರು ಸೇರಿ ಸಾಧನೆ ಮಾಡಿದಂತೆ ಶೂಟಿಂಗ್ ಶುರುವಾಗಿದೆ. ಸೆಟ್‍ನಲ್ಲಿ ಪ್ರಾಪರ್ಟಿ ಕಳೆದುಹೋಗುವುದು, ಕಲಾವಿದ ಸಂಭಾವನೆ ನೀಡಿದರೆ ನಟಿಸುವುದಾಗಿ ಹೇಳುವುದು. ನಿರ್ದೇಶಕ ಪತ್ನಿಗೆ ಅಪಘಾತವಾಗುವುದು. ಆಕೆಯ ನೀಡಿದ ಧೈರ್ಯದ ಮಾತುಗಳು ತಂಡಕ್ಕೆ ಹುಮ್ಮಸ್ಸು ಬಂದಿದೆ.

ಚಿತ್ರದ ಕುರಿತು ಹೇಳುವುದಾದರೆ ಊರಿನಲ್ಲಿ ಕೊಲೆಯಾಗುತ್ತದೆ. ಅದರ ಜಾಡು ಹಿಡಿದು ಹೋಗುವಾಗ ಹಲವು ದಾರಿಗಳು ಕಾಣಿಸಿಕೊಳ್ಳುತ್ತವೆ. ಅದು ಹೇಗೆ, ಎಲ್ಲಿ ಎಂಬುದನ್ನು ಕುತೂಹಲ ರೀತಿಯಲ್ಲಿ ತೋರಿಸಲಾಗಿದೆ. ಇದಕ್ಕೆ ಅನುಗುಣವಾಗಿ ಬಲ್ಲ ಮೂಲಗಳ ಪ್ರಕಾರವೆಂದು ಅಡಿಬರಹದಲ್ಲಿ ಹೇಳಲಾಗಿದೆ. ಜನಪದ ಗಾಯಕ, ನಟ ಗುರುರಾಜಹೊಸಕೋಟೆ ಪುತ್ರ ರಾಜ್‍ಗುರುಹೊಸಕೋಟೆ ಹಲವು ವರ್ಷಗಳ ಕಾಲ ಕಲಾಕ್ಷೇತ್ರದಲ್ಲಿ ಎಲ್ಲಾ ವಿಭಾಗಗಳಲ್ಲಿ ಅನುಭವ ಪಡೆದುಕೊಂಡಿದ್ದಾರೆ. ಅದರ ಫಲವೇ ಚಿತ್ರಕ್ಕೆ ಸಾಹಿತ್ಯ, ಸಂಗೀತ,ಸಂಭಾಷಣೆ ಬರೆಯುವದರ ಜೊತೆಗೆ ನಿರ್ದೇಶನ ಮಾಡಿ ಮುಗಿಸಿದ್ದಾರೆ. ನಿರ್ದೇಶಕನ ಪಾತ್ರದಲ್ಲಿ ಕೊಲೆಯನ್ನು ಭೇದಿಸುವ ರಾಹುಲ್‍ಹೆಗ್ದೆ ನಾಯಕ ಮತ್ತು ನಿರ್ಮಾಪಕ. ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಪ್ರಕೃತಿ ನಾಯಕಿ. ಉಳಿದಂತೆ ಕಿರಣ್‍ವಟಿ, ರಂಜತ್‍ಶೆಟ್ಟಿ, ಶಿವಶಂಕರ್, ಪ್ರವೀಣ್‍ಹೆಗ್ಡೆ, ಪಶುಪತಿ ಮುಂತಾದವರು ನಟಿಸಿದ್ದಾರೆ. ಶಿಷ್ಯ ಆಕ್ಷನ್ ಕಟ್ ಹೇಳುತ್ತಿರುವುದರಿಂದ ಒಂದು ಗೀತೆಯನ್ನು ಡಾ.ನಾಗೇಂದ್ರಪ್ರಸಾದ್ ಬರೆದುಕೊಟ್ಟಿದ್ದಾರೆ. ರಂಜಿತ್‍ಹೆಗ್ದೆ, ಪ್ರವೀಣ್‍ಹೆಗ್ಡೆ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಚಿತ್ರವು 28ರಂದು ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/06/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore