HOME
CINEMA NEWS
GALLERY
TV NEWS
REVIEWS
CONTACT US
ಸಿಂಗಲ್ ಶಾಟ್ ಚಿತ್ರ ಸಹಿಷ್ಣು
ಚಿತ್ರನಗರಿಯಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿರುವುದು ಆರೋಗ್ಯಕರವಾದ ಬೆಳವಣ ಗೆಯಾಗಿದೆ. ಇದರ ಸಾಲಿಗೆ ‘ಸಹಿಷ್ಣು’ ಸೇರಿಕೊಂಡಿದೆ. ಸಂಪೂರ್ಣ ಚಿತ್ರವನ್ನು ಐ-ಫೋನ್‍ನಲ್ಲಿ ಸೆರೆಹಿಡಿಯಲಾಗಿದೆ, ಅಲ್ಲದೆ ಸಿಂಗಲ್ ಶಾಟ್‍ನಲ್ಲಿ ಎರಡು ಘಂಟೆ, ಒಂದು ನಿಮಿಷ, ಹದಿನೆಂಟು ಸೆಕೆಂಡ್‍ಗಳಲ್ಲಿ ಸಿದ್ದಗೊಂಡಿರುವುದರಿಂದ ಇದು ವಿಶ್ವ ದಾಖಲೆ ಮಾಡಿದ ಸಿನಿಮಾ ಎನ್ನಬಹುದಾಗಿದೆ ಅಂತ ತಂಡವು ಹೇಳಿಕೊಂಡಿದೆ. ಮೂಲತ: ಬರಹಗಾರನಾಗಿ, ಹಲವು ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿರುವ ಸಂಪತ್ ಕತೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಮೂರು ಪಾತ್ರಗಳ ಸುತ್ತ ಕತೆಯು ಸಾಗಲಿದೆ. ಮಡಕೇರಿ ಬಳಿ ಇರುವ ದೇವಸ್ರೂರ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸಿನಿಮಾ ಕುರಿತು ಹೇಳುವುದಾದರೆ ವಿಚಾರವಾದಿಯೊಬ್ಬನ ಹತ್ಯೆಗೆ ಸುಪಾರಿ ನೀಡುವ ಕಾಣದ ವ್ಯಕ್ತಿ, ಮುಂದೆ ಆತ ಅಪಹರಣವಾಗುತ್ತಾನೆ. ಅಪಹರಣಕಾರರು ಈತನ ನಿರ್ಲಿಪ್ತತೆ, ನಡವಳಿಗೆ ಮತ್ತು ಜನರನ್ನು ಪ್ರೀತಿಸಬೇಕು, ಜಾತ ಧರ್ಮದ ಹೊರತಾಗಿಯೂ ಎಲ್ಲರೂ ಪರಸ್ಪರ ಪ್ರೀತಿಸಬೇಕು. ಬಡವ ಬಲ್ಲಿದರತ್ತ ಕರುಣೆ ಹೊಂದಬೇಕು. ಮನುಜಪಥ ವಿಶ್ವಪಥದ ಘೋಷಣೆಯೊಂದಿಗೆ ವಿಶ್ವಮಾನವನಾಗಬೇಕು ಎಂದ ಕುವೆಂಪು ಸಂದೇಶ ಹೇಳುತ್ತಾ ಕೊಲೆಗಡುಕರ ಮನಪರಿವರ್ತಿಸುವುದೇ ಸಾರಾಂಶವಾಗಿದೆ. ಉಳಿದ ಎರಡು ಪಾತ್ರಗಳಲ್ಲಿ ಹಿರಿಯ ನಟ ವಿಶ್ವನಾಥ್, ಅಶೋಕ್ ನಟಿಸಿದ್ದಾರೆ. ಛಾಯಗ್ರಹಣ ಅನಂತಕುಮಾರ್ ಅವರದಾಗಿದೆ. ಸದ್ಯ ಚಿತ್ರೀಕರಣೋತ್ತರ ಕೆಲಸದಲ್ಲಿ ತೊಡಗಿಕೊಂಡಿದ್ದು, ಸದ್ಯದಲ್ಲೆ ಜನರಿಗೆ ತೋರಿಸಲು ಯೋಜನೆ ಹಾಕಲಾಗಿದೆ. ಇತ್ತೀಚೆಗಷ್ಟೆ ಚಿತ್ರದ ಮೇಕಿಂಗ್‍ನ್ನು ಮಾದ್ಯಮದವರಿಗೆ ತೋರಿಸಲಾಯಿತು.

-5/12/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore