HOME
CINEMA NEWS
GALLERY
TV NEWS
REVIEWS
CONTACT US
ಹೊಸಬರಿಗೊಂದು ಸುವರ್ಣಾವಕಾಶ
ನಿರ್ದೇಶಕ, ನಾಯಕಿ, ಛಾಯಗ್ರಾಹಕ ಇವರೆಲ್ಲರಿಗೂ ಕನ್ನಡ ಚಿತ್ರದಲ್ಲಿ ಕೆಲಸ ಮಾಡಲು ಸುವರ್ಣಾವಕಾಶ ಸಿಕ್ಕಿದೆಯೆಂದು ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ ಮಹೂರ್ತ ಮುಗಿಸಿಕೊಂಡು ಮಾದ್ಯಮದ ಮುಂದೆ ಹಾಜರಾದ ತಂಡವು ಈ ರೀತಿ ಹೇಳಿಕೊಂಡಿತು. ಸಿಂಪಲ್‍ಸುನಿ, ತೆಲುಗು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿರುವ ಅನೂಪ್‍ರಾಮಸ್ವಾಮಿಕಶ್ಯಪ್ ಮಾತನಾಡಿ ಪ್ರಚಲಿತ ಯುಗದಲ್ಲಿ ಎಲ್ಲರೂ ಆಸೆ ಪಡುವ ವಸ್ತುವಿನ ಆಧಾರದ ಮೇಲೆ ಕಾಮಿಡಿ ಡ್ರಾಮ ಚಿತ್ರವು ಸಾಗುತ್ತದೆ. ಕತೆಯಲ್ಲಿ ನಾಯಕ ಆಕೆಯ ಸಲುವಾಗಿ ಏನು ಬೇಕಾದರೂ ಮಾಡಬಲ್ಲವನು. ಒಂದು ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಂಡಾಗ ಅವಘಡಗಳು ಬರುತ್ತದೆ. ಅದರಿಂದ ತಪ್ಪಿಸಿಕೊಂಡು ಹೊರಗೆ ಬರ್ತರಾ ಇಲ್ಲವಾ? ಎಂಬುದು ಸಾರಾಂಶವಾಗಿದೆ. ಬೆಂಗಳೂರು, ವೈನಾಡು,ಚಿಕ್ಕಮಗಳೂರು ಹೀಗೆ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ರಂಗಾಯಣರಘು ಇಲ್ಲಿಯವರೆಗೂ ಕಾಣದ, ನಟಿಸದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ಕುತೂಹಲದ ದೀಪಕ್ಕೆ ಮತ್ತಷ್ಟು ತುಪ್ಪ ಸುರಿದರು.

ಕನ್ನಡಿಗಳಾದರೂ ತೆಲುಗು-12, ತಮಿಳು-2 ಚಿತ್ರಗಳಲ್ಲಿ ನಟಿಸಲಾಗಿದೆ. ತವರು ಮನೆಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ. ಸಂಪ್ರದಾಯಸ್ಥ ಬ್ರಾಹ್ಮಣ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆಂದು ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮೊಮ್ಮಗಳು ನಾಯಕಿ ಧನ್ಯಬಾಲಕೃಷ್ಣ ಮಾತಾಗಿತ್ತು.

ನಾಲ್ಕನೇ ಚಿತ್ರದಲ್ಲಿ ಎಂಬಿಎ ವಿದ್ಯಾರ್ಥಿಯಾಗಿದ್ದೇನೆ. ಪೋಸ್ಟರ್‍ನಲ್ಲಿ ಸ್ಪೀಕರ್ ಹಿಡಿದುಕೊಂಡಿರುವುದು ಸಿನಿಮಾಕ್ಕೆ ಪೂರಕವಾಗಿದೆ. ಅದು ಏನು ಅಂತ ಚಿತ್ರ ನೋಡಿದರೆ ತಿಳಿಯುತ್ತದೆ. ಘಟನೆಯಲ್ಲಿ ಸಿಲುಕಿದಾಗ ಅದು ಎಲ್ಲಲ್ಲಿ ತೆಗೆದುಕೊಂಡು ಹೋಗುತ್ತದೆ. ಮುಂದಾಗುವ ಅನಾಹುತದಿಂದ ಹೇಗೆ ಹೊರಗೆ ಬರುತ್ತೇನೆ. ಮೂರು ಆಕ್ಷನ್ ಇದೆ ಎಂದು ಪಾತ್ರದ ಪರಿಚಯ ಮಾಡಿಕೊಂಡಿದ್ದು ನಾಯಕ ರಿಷಿ.

ಮೂರು ಶೇಡ್‍ಗಳಲ್ಲಿ ನಾಯಕನ ಅಪ್ಪನಾಗಿ ನಟಿಸಲು ಹೇಳಿದ್ದಾರೆ. ಕತೆ ಏನು ಅಂತ ಹೇಳಿಲ್ಲ. ಚಿತ್ರಕತೆ ವಿವರ ನೀಡಿದ್ದಾರೆಂದು ಪುಸ್ತಕ ತೋರಿಸಿದರು ದತ್ತಣ್ಣ.

ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಛಾಯಗ್ರಾಹಕ ವಿಜ್ಘೇಶ್‍ರಾಜ್, ಐದು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿರುವ ಮಿಧುನ್‍ಮುಕುಂದನ್, ಕತೆಗಾರ ಮತ್ತು ನಿರ್ಮಾಪಕ ಜನಾರ್ಧನ್‍ಚಿಕ್ಕಣ್ಣ, ನಿರ್ಮಾಪಕರುಗಳಾದ ಪ್ರಶಾಂತ್‍ರೆಡ್ಡಿ.ಎಸ್, ಮತ್ತು ದೇವರಾಜ್.ಆರ್ ಎಲ್ಲರೂ ಚುಟುಕು ಮಾತಿಗೆ ವಿರಾಮ ಹಾಕಿದರು.
ಸಿನಿ ಸರ್ಕಲ್.ಇನ್ ನ್ಯೂಸ್
6/11/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore