HOME
CINEMA NEWS
GALLERY
TV NEWS
REVIEWS
CONTACT US

ಎಸ್. ನಾರಾಯಣ್ ರವರ `ಲಕ್ಷ್ಮಿ ಸಂಸಾರ'
ಕನ್ನಡ ಸಿನೆಮಾ ಕಂಡ ಸಾಹಸಿ, ಶಿಶ್ತಿನ ಸಿಪಾಯಿ, ಬಹುಮುಖಿ ಎಂದೆಲ್ಲಾ ಕರೆಯಲ್ಪಡುವ ಎಸ್ ನಾರಾಯಣ್ ಅವರು ಕಿರುತೆರೆಯಲ್ಲೂ `ಪಾರ್ವತಿ' ಮೆಗಾ ಧಾರಾವಾಹಿ ಮುಖಾಂತರ ಕ್ರಾಂತಿ ಮಾಡಿದವರು. ಇತ್ತೀಚೆಗೆ ಸಿನೆಮಾ ಸಹವಾಸ ಸಾಕು ಎಂದು ಘೋಸಿದ ಎಸ್ ನಾರಾಯಣ್ ಶ್ರೀ ಅಂಬರೀಶ್ ಹಾಗೂ ಅನೇಕರ ಒತ್ತಾಯದ ಮೇರೆಗೆ ವೃತ್ತಿಯಲ್ಲಿ ಮುದುವರೆಯಲು ನಿರ್ಧರಿಸಿದರು. ಇದೀಗ ಮೆಗಾ ಧಾರಾವಾಹಿ `ಲಕ್ಷ್ಮಿ ಸಂಸಾರ' ಇಂದ ವೃತ್ತಿಗೆ ಮರುಚಾಲನೆ ನೀಡಲಿದ್ದಾರೆ.

೪೦ಕ್ಕೂ ಹೆಚ್ಚು ಸಿನೆಮಾ ನಿರ್ದೇಶನ ಮಾಡಿ ಏಳೆಂಟು ಧಾರವಾಹಿಗಳನ್ನು ನಿರ್ದೇಶನ ಮಾಡಿರುವ ಎಸ್ ನಾರಾಯಣ್ ಅವರು ಈ ತಿಂಗಳ ವಿಜಯದಶಮಿ ಹಬ್ಬದಂದು `ಲಕ್ಷ್ಮಿ ಸಂಸಾರ' ಎಂಬ ಸಾಂಸಾರಿಕ ಹಾಗೂ ಹೃದಯಂಗಮ ಮೆಗಾ ಧಾರವಾಹಿಗೆ ಚಾಲನೆ ನೀಡುತ್ತಿದ್ದಾರೆ. ಇದು ಹೊಸ ಪ್ರತಿಭೆಗಳ ಸಂಗಮ. `ಲಕ್ಷ್ಮಿ' ಪಾತ್ರದಾರಿಗೆ ಅಲ್ಲದೆ ಅನೇಕ ಹೊಸ ಪ್ರತಿಬೆಗಳನ್ನು ಎಸ್ ನಾರಾಯಣ್ ಅವರು ಈ ಮೆಗಾ ಧಾರವಾಹಿಗೆ ತಲಾಷ್ ಮಾಡುತಿದ್ದಾರೆ. ಈ `ಲಕ್ಷ್ಮಿ ಸಂಸಾರ' ಧಾರಾವಾಹಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ಮಾಣ, ನಿರ್ದೇಶನ ಎಸ್ ನಾರಾಯಣ್ ಅವರದು. ಭಾಗ್ಯವತಿ ಕಂಬೈನ್ಸ್ ಅಡಿಯಲ್ಲಿ `ಲಕ್ಷ್ಮಿ ಸಂಸಾರ'ನಿರ್ಮಾಣ ಆಗಲಿದೆ.

೧೯೯೦ ರಿಂದ ಕನ್ನಡ ಸಿನೆಮಾದಲ್ಲಿ ಸ್ವತಂತ್ರ ನಿರ್ದೇಶಕರಾಗಿ `ಚೈತ್ರದ ಪ್ರೇಮಾಂಜಲಿ' ಇಂದ `ಅಪ್ಪಯ್ಯ' ವರೆವಿಗೂ ಎಸ್ ನಾರಾಯಣ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ಮಾಣ, ನಿರ್ದೇಶನ, ಸಂಗೀತ, ನಟನೆ, ಪ್ರದರ್ಶಕ ವಲಯಗಳಲ್ಲಿ ಕೀರ್ತಿ ಪಡೆದವರು. ಅವರ ಹೆಸರುವಾಸಿ ಚಿತ್ರಗಳಲ್ಲಿ ತವರಿನ ತೊಟ್ಟಿಲು, ತಾಯಿ ಕೊಟ್ಟ ಸೀರೆ, ವೀರಪ್ಪನಾಯಕ, ಭಾಮಾ ಸತ್ಯಭಾಮ, ಸೂರ್ಯವಂಶ, ಶಬ್ದವೇದಿ, ಗಲಾಟೆ ಅಳಿಯಂದ್ರು, ವರ್ಷ, ಸಿರಿವಂತ, ಸೇವಂತಿ ಸೇವಂತಿ, ಚಂದ್ರ ಚಕೋರಿ, ಚೆಲುವಿನ ಚಿತ್ತಾರ, ವೀರ ಪರಂಪರೆ ಹೇಗೆ ಜನಪ್ರಿಯತೆ ಗಳಿಸಿದವೊ ಹಾಗೆಯೇ ಪುಟ್ಟ ಪರೆದೆಯ ಮೇಲೂ ಎಸ್ ನಾರಾಯಣ್ ಸೂಪರ್ ಆದ ಧಾರಾವಾಹಿಗಳು `ಪಾರ್ವತಿ, ಅಂಬಿಕ, ದುರ್ಗ, ಭಾಗೀರಥಿ, ಸುಮತಿ, ಈಶ್ವರಿ, ಸೂರ್ಯವಂಶ ? ಎಲ್ಲ ಧಾರಾವಾಹಿಗಳು ಮನೆಮಂದಿಯನ್ನು ಆಕರ್ಶಿಸಿದರೆ ಹಾಸ್ಯ ಭರಿತ `ಡುಂ ಡುಂ ಡುಂ' ಸಹ ನಕ್ಕು ನಲಿಸಿ ಪ್ರೇಕ್ಷಕರಿಗೆ ಸಂತೋಷ ನೀಡಿತ್ತು.

`ಲಕ್ಷ್ಮಿ ಸಂಸಾರ' ಯಾವ ಸ್ಯಾಟಿಲೈಟ್ ಚಾನಲ್ ಅಲ್ಲಿ ಪ್ರಸಾರದ ಭಾಗ್ಯ ಪಡೆಯಲಿದೆ ಎಂದು ಭಾಗ್ಯವತಿ ಕಂಬೈನ್ಸ್ ಅವರಿಗೆ ಸಧ್ಯಕ್ಕೆ ತಿಳಿದಿಲ್ಲ.

-11/10/12

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore