HOME
CINEMA NEWS
GALLERY
TV NEWS
REVIEWS
CONTACT US
ಸುವರ್ಣ ಸುಂದರಿ ಟ್ರೈಲರ್ ಬಿಡುಗಡೆ
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಟಾಲಿವುಡ್ ತಂಡದಿಂದ ಸಿದ್ದಗೊಂಡಿರುವ ‘ಸುವರ್ಣ ಸುಂದರಿ’ ಕ್ರಿ.ಶ 1508 ರಿಂದ ಪ್ರಸಕ್ತ 2018ರ ವರೆಗಿನ ನಾಲ್ಕು ತಲೆಮಾರಿನ ಕತೆಯಾಗಿದೆ. ಕೃಷ್ಣದೇವರಾಯ ಅವಧಿಯಲ್ಲಿ ರಾಜಾ ಮಹಾದೇವಿರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ. ಸಾಮಾನ್ಯ ಸಿನಿಮಾವಾಗಿರದೆ ವಿಶೇಷ ಚಿತ್ರವಾಗಿದೆ. ಫೈಟ್ಸ್ ಇರೋಲ್ಲ. ಸ್ಟಂಟ್ಸ್ ಇರುತ್ತದೆ. ಕೇರಳ, ಹೈದರಾಬಾದ್, ಬೀದರ್, ವಿಧಾನಸೌಧ ರಸ್ತೆ, ನೈಸ್ ರೋಡ್‍ಗಳಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕತೆಗೆ ಪೂರಕವಾಗಿ 50 ನಿಮಿಷ ಗ್ರಾಫಿಕ್ಸ್ ಇರಲಿದೆ. ನಾಯಕಿಯಾಗಿ ಡೆಹರಡನ್ ಮೂಲದ ಸಾಕ್ಷಿ ಎರಡು ತಲೆಮಾರುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾರಂಭದ ಅವಧಿಯಲ್ಲಿ ಸಾಯಿಕುಮಾರ್, 1960ರ ಕಲೆಕ್ಟರ್ ಪಾತ್ರದಲ್ಲಿ ತಿಲಕ್, ಮತ್ತೊಬ್ಬ ನಾಯಕಿ ಪೂರ್ಣ ಮತ್ತು ಜಯಪ್ರದ ಪಾತ್ರದ ವಿವರವನ್ನು ತಂಡವು ಹೇಳಿಕೊಂಡಿಲ್ಲ. ಎರಡು ಹಾಡುಗಳಿಗೆ ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿದ್ದು, ಹಿನ್ನಲೆ ಸಂಗೀತ ಒದಗಿಸಿರುವುದು ಛಾಲೆಂಜಿಂಗ್ ಆಗಿದೆಯಂತೆ.

ಬಾಹುಬಲಿ-2 ಚಿತ್ರಕ್ಕೆ ಸೆಕೆಂಡ್ ಕ್ಯಾಮಾರಮನ್ ಆಗಿದ್ದ ಯಲ್ಲಮಹಂತಿಈಶ್ವರ್ ಸುಂದರ ತಾಣಗಳನ್ನು ಸೆರೆಹಿಡಿದಿದ್ದಾರೆ. ಎಂ.ಎಸ್.ಎನ್.ಸೂರ್ಯ ಕತೆ ಬರೆದು ನಿರ್ದೇಶನ ಮಾಡಿರುವುದು ಮೊದಲ ಅನುಭವ. ಸೂಪರ್ ಆಕ್ಷನ್‍ಗಳಿಗೆ ರಾಮ್‍ಸುಂಕರ ಕೆಲಸ ಮಾಡಿದ್ದಾರೆ. ಆರುಂಧತಿ ಮಾಡುವ ಸಂದರ್ಭದಲ್ಲಿ ತಂತ್ರಜ್ಘಾನ ಅಷ್ಟೋಂದು ಮುಂದುವರೆದಿರಲಿಲ್ಲ. ಈ ಸಿನಿಮಾಗೆ ಇಂದಿನ ಟೆಕ್ನಾಲಜಿಯನ್ನು ಬಳಸಿಕೊಂಡಿದ್ದರಿಂದ ದೃಶ್ಯಗಳು ನೋಡುಗರಿಗೆ ಇಷ್ಟವಾಗುತ್ತರದೆಂದು ನಿರ್ದೇಶಕರು ನಂಬಿಕೊಂಡಿದ್ದಾರೆ. ಆರು ಕೋಟಿಯಲ್ಲಿ ಮುಗಿಸಬೇಕಾಗಿದ್ದ ಚಿತ್ರವು ಪ್ರಚಾರದ ಹಂತಕ್ಕೆ ಬರುವ ಹೊತ್ತಿಗೆ ಹತ್ತು ಕೋಟಿಗೆ ಬಂದು ನಿಂತಿದೆ. ತಮ್ಮ ನಿರ್ದೇಶನ ಮಾಡುತ್ತಿರುವುದರಿಂದ ಚಿಂತೆ ಮಾಡದೆ ಎಂ.ಎನ್.ಲಕ್ಷೀ ನೀರಿನಂತೆ ಹಣ ಸುರಿದಿದ್ದಾರೆ. ಶನಿವಾರ ಸಿನಿಮಾದ ಟ್ರೈಲರ್ ಲೋಕಾರ್ಪಣೆಗೊಂಡಿದ್ದು, ಮುಂದಿನ ತಿಂಗಳು ತೆರೆಕಾಣುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
20/01/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore