HOME
CINEMA NEWS
GALLERY
TV NEWS
REVIEWS
CONTACT US

ಸ್ನೇಹವೇ ಬೇರೆ ಪ್ರೀತಿಯೇ ಬೇರೆ
ಮದುವೆಯ ಮಮತೆಯ ಕರೆಯೋಲೆ ಚಿತ್ರದಲ್ಲಿ ನಟಿಸಿದ್ದ ಸೂರಜ್‍ಗೌಡ ಮೂರನೆ ಚಿತ್ರ ‘ಸ್ಮೇಹವೇ ಪ್ರೀತಿ’ ಕತೆಯಲ್ಲಿ ಸ್ನೇಹ, ಪ್ರೀತಿ ಎರಡನ್ನು ಒಂದೇ ರೀತಿ ಅಳೆಯುವುದು ಬೇಡವೆಂದು ಹೇಳುವ ಪ್ರಯತ್ನ ಮಾಡಲಾಗಿದೆ. ಸ್ನೇಹದಿಂದ ಹುಡುಗ-ಹುಡುಗಿ ಮಾತನಾಡಿದರೆ ಅದು ಪ್ರೀತಿ ಅಂತ ತಪ್ಪಾಗಿ ಭಾವಿಸುತ್ತಾರೆ. ನಾವುಗಳು ಗೆಳಯರು, ಪ್ರೀತಿ ಎಂಬುದು ನಮ್ಮಲ್ಲಿ ಇಲ್ಲವೆಂದು ಹೇಳಲಾಗಿದೆ. ಕಾಲೇಜಿನಲ್ಲಿ ಇಬ್ಬರು ಪ್ರೀತಿಸದೆ ಗೆಳಯರಾಗಿ ಇರುತ್ತಾರೆ. ಮುಂದೆ ಆತ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಗೆಳತಿ ಅವರಿಬ್ಬರನ್ನು ಒಂದು ಗೂಡಿಸುವಲ್ಲಿ ಹೇಗೆ ಸಪಲರಾಗುತ್ತರೆಂದು ಚಿತ್ರ ನೋಡಿದಾಗ ತಿಳಿಯುತ್ತದೆ. ಬಾಂಬೆ ಮೂಲದ ಸೋನಿಯಾ, ಫರ ನಾಯಕಿಯರಾಗಿ ಮೈಚಳಿ ಬಿಟ್ಟು ಅಭಿನಯಿಸಿದ್ದಾರೆ. ಉಳಿದಂತೆ ರಮೇಶ್‍ಭಟ್, ಸಾಯಿಪ್ರಕಾಶ್, ಸುಮತಿ ಕೊಟ್ಟ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ.

ಜಿ.ಎಲ್.ಬಿ.ಶ್ರೀನಿವಾಸ್ ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದು, ಕೆಲವು ಕಡೆಗಳಲ್ಲಿ ತೆಲುಗು ಸಿನಿಮಾದ ಛಾಯೆ ಎದ್ದು ಕಾಣಿಸುತ್ತದೆ. ಶ್ರೀಚಂದ್ರು ಸಾಹಿತ್ಯದ ಐದು ಹಾಡುಗಳಿಗೆ ಕತೆ ಬರೆದು ಸಂಗೀತ ಸಂಯೋಜಸಿರುವುದು ಘಟಿಕಾಚಲಂ ಕೆಲಸ ಪರವಾಗಿಲ್ಲ. ಸಂಕಲನ ಮಾರ್ತಾಂಡ್ .ಕೆ.ವೆಂಕಟೇಶ್, ಸಂಭಾಷಣೆ ಶಶಿಕಿರಣ, ಸಾಹಸ ಥ್ರಿಲ್ಲರ್‍ಮಂಜು, ನೃತ್ಯ ಮದನ್‍ಹರಿಣಿ-ಸ್ವರ್ಣಬಾಬು ಸನ್ನಿವೇಶಕ್ಕೆ ಪೂರಕವಾಗಿದೆ. ಸ್ನೇಹ, ಪ್ರೀತಿ ಎರಡರ ಅರ್ಥ ತಿಳಿದುಕೊಳ್ಳುವವರಿಗೆ ಸಿನಿಮಾವು ಮೋಸ ಮಾಡುವುದಿಲ್ಲ.
ನಿರ್ಮಾಣ; ಮುಳ್ಳಗುರುರಾಮುಡು, ಮುಳ್ಳಗುರು ರಮೇಶ್‍ನಾಯುಡು
ಸಿನಿ ಸರ್ಕಲ್.ಇನ್ ವಿಮರ್ಶೆ
***
8/10/18

ತೆರೆಗೆ ಸಿದ್ದ ಸ್ನೇಹವೇ ಪ್ರೀತಿ
ಹೊಸ ಚಿತ್ರ ‘ಸ್ಮೇಹವೇ ಪ್ರೀತಿ’ ನಾಯಕ ಸೂರಜ್‍ಗೌಡ, ಪೋಷಕ ಕಲಾವಿದರು ಹೂರತುಪಡಿಸಿದರೆ ಬಾಂಬೆ ಮೂಲದ ಸೋನಿಯಾ, ಫರ ನಾಯಕಿಯರು, ಉಳಿದಂತೆ ಎಲ್ಲರೂ ತೆಲುಗುನವರೆ ಆಗಿರುವುದು ವಿಶೇಷ. ಕತೆಯ ಕುರಿತು ಹೇಳುವುದಾದರೆ ಹುಡುಗ-ಹುಡುಗಿ ಮಾತನಾಡಿದರೆ ಅವರನ್ನು ಪ್ರೇಮಿಗಳು ಎಂದು ಬಿಂಬಿಸುವ ಹಲವು ಚಿತ್ರಗಳು ತೆರೆಕಂಡಿವೆ. ಈ ಸಿನಿಮಾದಲ್ಲಿ ಸ್ನೇಹ, ಪ್ರೀತಿ ಎರಡನ್ನು ಒಂದೇ ರೀತಿ ಅಳೆಯುವುದು ಬೇಡವೆಂದು ಹೇಳುವ ಪ್ರಯತ್ನ ಮಾಡಲಾಗಿದೆ. ಕಾಲೇಜಿನಲ್ಲಿ ಇಬ್ಬರು ಪ್ರೀತಿಸದೆ ಗೆಳಯರಾಗಿ ಇರುತ್ತಾರೆ. ಮುಂದೆ ಆತ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಗೆಳತಿ ಅವರಿಬ್ಬರನ್ನು ಒಂದು ಗೂಡಿಸುವಲ್ಲಿ ಸಪಲಳಾಗುವುದು ಒಂದು ಏಳೆಯ ಸಾರಾಂಶವಾಗಿದೆ. ಹೈದರಾಬಾದ್, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.
ಜಿ.ಎಲ್.ಬಿ.ಶ್ರೀನಿವಾಸ್ ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಶ್ರೀಚಂದ್ರು ಸಾಹಿತ್ಯದ ಐದು ಹಾಡುಗಳಿಗೆ ಕತೆ ಬರೆದು ಸಂಗೀತ ಸಂಯೋಜಸಿರುವುದು ಘಟಿಕಾಚಲಂ. ಸಂಕಲನ ಮಾರ್ತಾಂಡ್ .ಕೆ.ವೆಂಕಟೇಶ್, ಸಂಭಾಷಣೆ ಶಶಿಕಿರಣ, ಸಾಹಸ ಥ್ರಿಲ್ಲರ್‍ಮಂಜು, ನೃತ್ಯ ಮದನ್‍ಹರಿಣಿ-ಸ್ವರ್ಣಬಾಬು ಅವರದಾಗಿದೆ. ತಂಡಕ್ಕೆ ಶುಭಹಾರೈಸಲು ಲೋಕಸಭಾ ಸದಸ್ಯ ರಾಮಮೂರ್ತಿ, ನಟ ರಾಮ್‍ಕುಮಾರ್ ಆಗಮಿಸಿದ್ದರು. ಕೃಷಿಕ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಅನಂತಪುರದ ಎಂ.ಅನಂತ್‍ರಾಮುಡು ಅವರು ಎಂ.ರಮೇಶ್‍ನಾಯುಡು ಅವರೊಂದಿಗೆ ಸೇರಿಕೊಂಡು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣ ಮಾಡಿರುವ ಚಿತ್ರವು ಶುಕ್ರವಾರದಂದು ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/10/18

ಟಾಲಿವುಡ್ ತಂಡದ ಸ್ನೇಹವೇ ಪ್ರೀತಿ
ಹೊಸ ಚಿತ್ರ ‘ಸ್ಮೇಹವೇ ಪ್ರೀತಿ’ ನಾಯಕ ಸೂರಜ್‍ಗೌಡ, ಪೋಷಕ ಕಲಾವಿದರು ಹೂರತುಪಡಿಸಿದರೆ ಬಾಂಬೆ ಮೂಲದ ಸೋನಿಯಾ, ಫರ ನಾಯಕಿಯರು, ಉಳಿದಂತೆ ಎಲ್ಲರೂ ತೆಲುಗುನವರೆ ಆಗಿರುವುದು ವಿಶೇಷ. ಕತೆಯ ಕುರಿತು ಹೇಳುವುದಾದರೆ ಹುಡುಗ-ಹುಡುಗಿ ಮಾತನಾಡಿದರೆ ಅವರನ್ನು ಪ್ರೇಮಿಗಳು ಎಂದು ಬಿಂಬಿಸುವ ಹಲವು ಚಿತ್ರಗಳು ತೆರೆಕಂಡಿವೆ. ಈ ಸಿನಿಮಾದಲ್ಲಿ ಸ್ನೇಹ, ಪ್ರೀತಿ ಎರಡನ್ನು ಒಂದೇ ರೀತಿ ಅಳೆಯುವುದು ಬೇಡವೆಂದು ಹೇಳುವ ಪ್ರಯತ್ನ ಮಾಡಲಾಗಿದೆ. ಕಾಲೇಜಿನಲ್ಲಿ ಇಬ್ಬರು ಪ್ರೀತಿಸದೆ ಗೆಳಯರಾಗಿ ಇರುತ್ತಾರೆ. ಮುಂದೆ ಆತ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಗೆಳತಿ ಅವರಿಬ್ಬರನ್ನು ಒಂದು ಗೂಡಿಸುವಲ್ಲಿ ಸಪಲಳಾಗುವುದು ಒಂದು ಏಳೆಯ ಸಾರಾಂಶವಾಗಿದೆ. ಹೈದರಾಬಾದ್, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.

ಜಿ.ಎಲ್.ಬಿ.ಶ್ರೀನಿವಾಸ್ ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಶ್ರೀಚಂದ್ರು ಸಾಹಿತ್ಯದ ಐದು ಹಾಡುಗಳಿಗೆ ಕತೆ ಬರೆದು ಸಂಗೀತ ಸಂಯೋಜಸಿರುವುದು ಘಟಿಕಾಚಲಂ. ಸಂಕಲನ ಮಾರ್ತಾಂಡ್ .ಕೆ.ವೆಂಕಟೇಶ್, ಸಂಭಾಷಣೆ ಶಶಿಕಿರಣ, ಸಾಹಸ ಥ್ರಿಲ್ಲರ್‍ಮಂಜು, ನೃತ್ಯ ಮದನ್‍ಹರಿಣಿ-ಸ್ವರ್ಣಬಾಬು ಅವರದಾಗಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ, ಪದಾದಿಕಾರಿಗಳು, ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಂಡಕ್ಕೆ ಶುಭ ಹಾರೈಸಿದರು. ಕೃಷಿಕ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಅನಂತಪುರದ ಎಂ.ಅನಂತ್‍ರಾಮುಡು ಅವರು ಎಂ.ರಮೇಶ್‍ನಾಯುಡು ಅವರೊಂದಿಗೆ ಸೇರಿಕೊಂಡು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣ ಮಾಡಿರುವ ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
25/09/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore