HOME
CINEMA NEWS
GALLERY
TV NEWS
REVIEWS
CONTACT US
ಈ ವಾರ 28-7-2017 `ಸ್ನೇಹ ಚಕ್ರ'ಬಿಡುಗಡೆ
ಸ್ನೇಹ ಚಕ್ರ ಸಂಸ್ಥೆ ಇಂದ `ಸ್ನೇಹ ಚಕ್ರ' ಈ ವಾರ ಬಿಡುಗಡೆ ಆಗುತ್ತಿದೆ. ನಾಯಕನಾಗಿ ಕನ್ನಡ ರಜತ ಪರದೆಯ ಮೇಲೆ ವಿಜಯ್ ವೆಂಕಟ್ ಪರಿಚಯ ಈ ಚಿತ್ರದಿಂದ ಆಗುತ್ತಿದ್ದಾರೆ. `ಸ್ನೇಹ ಚಕ್ರ' ಚಿತ್ರದಲ್ಲಿ ವಿಜಯ್ ವೆಂಕಟ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಕ್ಕ ಅಭಿಮಾನಿ. ಸ್ನೇಹ, ಪ್ರೀತಿಯ ಜೊತೆಗೆ ಚಿತ್ರದ ಎರಡನೇ ಭಾಗ ಒಂದು ಕುತೂಹಲವನ್ನು ಬಿಚ್ಚಿಕೊಳ್ಳುತ್ತದೆ.

ನಾಯಕಿ ಆಗಿ ಅನ್ವಿತ ಸಹ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇದು ಮಂಜು ವಿಷ್ಣುವರ್ಧನ ಅವರ ಪ್ರಥಮ ನಿರ್ದೇಶನ, ಸುರೇಶ್ ಕುಮಾರ್ ಅವರ ನಿರ್ಮಾಣ, ರಾಜ್ ಭಾಸ್ಕರ್ ಅವರ ಸಂಗೀತ, ರವಿ ಅವರ ಛಾಯಾಗ್ರಹಣ ಒಳಗೊಂಡಿರುವ ಚಿತ್ರ. ಶಿಲ್ಪಾ, ಕೆಂಪೆಗೌಡ, ಕಿಶೋರ್ ಕುಮಾರ್ ಸಹ ಪೆÇೀಷಕ ಪಾತ್ರಗಳಲ್ಲಿ ಇದ್ದಾರೆ.
ಹೆಸರಾಂತ ವಿತರಣಾ ಸಂಸ್ಥೆ ಗೋಕುಲ್ ರಾಜ್ ಫಿಲ್ಮ್ಸ್ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.
-Cine Circle News
-26/07/17

SNEHA CHAKRA’ TO RELEASE ON JULY 21
‘Sneha Chakra’, a Kannada film that revolves around friendship will release on July 21 all over Karnataka. The film is being distributed by Gokul Films. The film is produced by Suresh Kumar and directed by Manju Vishnuvardhan. The film marks the debut of Vijaya Venkat in a lead role and Anvitha. Raj Bhaskar has scored the music.

Producer Suresh Kumar told reporters that the film is a result of hard work and the initiative taken up by the hero. Distributor Gokul Raj said he was impressed with the hero’s down-to-earth attitude. He said he took up the distribution of a small film without bothering about the movie or the story but for the team’s attitude and behaviour.

Vijay Venkat said the story revolves friends and friendship. The first half is a jolly ride with friends, college life and the like. But, in the second half the story takes a twist and become a suspense thriller. He said he isn’t sure if he will do another film but he said he wanted to express his admiration for Puneeth Rajkumar of whom he is a big fan even in the movie. The first half goes in establishing this fact and the fact that he wanted to prove himself as a fan. He said there’s also a song in praise of Puneeth Rajkumar. He said the role that he plays is that of a person who stands up for his friends. He said the team had to reshoot some portion based on the feedback that they got from the people who were shown the movie.

Anvitha said the film is based on friendship and it has feelings and emotions. She said it is the second team that she has worked with so far in the four films that she has worked in. She said she also managed learn a bit of Kannada because of the film. She said the film is about six friends and there is a twist to the story and that she plays the heroine to the hero.

Avinash Bharadwaj said he gave away the title that he had registered to the new team. Krishnamurthy has penned the lyrics.

The film’s trailer was shown along with a few songs.
-10/07/17
ಗೆಳೆತನದ ಮೌಲ್ಯಗಳನ್ನು ಸಾರುವ ಕಥನ
ಬಂಧುಗಳು ಇರುವ ತನಕ, ಸ್ನೇಹಿತರು ಕೊನೆ ತನಕ ಎಂದು ಬುದ್ದಿ ಜೀವಿಗಳು ಹೇಳಿದಂತೆ, ಇಲ್ಲೊಂದು ‘ಸ್ನೇಹ ಚಕ್ರ’ ಅಡಿಬರಹದಲ್ಲಿ ಫ್ರೆಂಡ್‍ಶಿಪ್ ಸರ್ಕಲ್ ಎನ್ನುವ ಸಿನಿಮಾ ಸಿದ್ದಗೊಂಡಿದೆ. ವಿಜಯ್‍ವೆಂಕಟ್ ಮೊದಲಬಾರಿ ನಾಯಕನಾಗಿ ಕಾಣ ಸಿಕೊಂಡಿದ್ದಾರೆ. ಪಾತ್ರದಲ್ಲಿ ಪುನೀತ್ ಅಭಿಮಾನಿಯಾಗಿ ಕಾಲೇಜು ಜೀವನ, ಪ್ರೀತಿ ಇವುಗಳು ವಿರಾಮದವರೆವಿಗೂ ಸನ್ನಿವೇಶಗಳು ಬರುತ್ತವೆ. ನಂತರ ಕತೆಯಲ್ಲಿ ತಿರುವು ಪಡೆದುಕೊಂಡು ಕುತೂಹಲದೊಂದಿಗೆ ಕೊನೆಗೊಳ್ಳುತ್ತದೆ. ಒಬ್ಬ ಅಭಿಮಾನಿಯಾಗಿ ಯಾವ ರೀತಿ ಇರುತ್ತಾನೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಮತ್ತು ಪುನೀತ್‍ರಾಜ್‍ಕುಮಾರ್ ಕುರಿತ ಸಾಹಿತ್ಯದೊಂದಿಗೆ ನಾಯಕನನ್ನು ಪರಿಚಯಿಸಿರುವುದು ವಿಶೇಷ. ಸ್ನೇಹಿತರಿಗೆ ಯಾವುದೇ ಕಷ್ಟ ಬಂದರೂ ಛಾತಿಯಿಂದ ಬಗೆಹರಿಸುತ್ತಾನೆ. ಕತೆ ಬರೆದು ನಿರ್ದೇಶನ ಮಾಡಿರುವ ಮಂಜುವಿಷ್ಣುವರ್ಧನರಿಗೆ ಪ್ರಥಮ ಅನುಭವ. ಕಾಲೇಜು ವಿದ್ಯಾರ್ಥಿಯಾಗಿ ಕೇರಳ ಮೂಲದ ಅನ್ವಿತಾ ನಾಯಕಿಯಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕೃಷ್ಣಮೂರ್ತಿ ರಚಿಸಿರುವ 5 ಹಾಡುಗಳಿಗೆ ರಾಜ್‍ಭಾಸ್ಕರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ರವಿ, ಸಂಕಲನ ಕವಿತಾ, ನೃತ್ಯ ರಾಜ್‍ದೇವ್-ಅರುಣ್‍ರಾಯ್, ಸಾಹಸ ಸ್ಟಂಟ್ ಶಿವು ಅವರದಾಗಿದೆ. ಸಿನಿಮಾ ಕೃಷಿಯಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಹಣ ಹೂಡಿರುವುದು ಸುರೇಶ್‍ಕುಮಾರ್.ಎಸ್. ಇವರೊಂದಿಗೆ ಜಯಮ್ಮ ಸಹಕಾರಿಯಾಗಿದ್ದಾರೆ. ಬಿಗ್ ಬಜೆಟ್ ಚಿತ್ರಗಳನ್ನು ವಿತರಣೆ ಮಾಡಿರುವ ಗೋಕುಲ್ ಫಿಲ್ಮ್ಸ್ ಸಂಸ್ಥೆಯು ಬಿಡುಗಡೆಯ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಜುಲೈ 21 ಚಿತ್ರವು ರಾಜ್ಯಾದಂತ ತೆರೆಕಾಣಲಿದೆ.
-10/17/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore