HOME
CINEMA NEWS
GALLERY
TV NEWS
REVIEWS
CONTACT US
ಇಬ್ಬರು ಅಣ್ಣಂದಿರ ಮುದ್ದಿನ ತಂಗಿ
ಅಣ್ಣ ತಂಗಿ, ತವರಿಗೆ ಬಾ ತಂಗಿ ಚಿತ್ರದಲ್ಲಿ ಒಬ್ಬರು ಅಣ್ಣ. ‘ಸಿತಾರ’ ಸಿನಿಮಾದಲ್ಲಿ ಇಬ್ಬರು ಅಣ್ಣಂದಿರು ಇರುವುದು ವಿಶೇಷ. ಹೆತ್ತವರನ್ನು ಕಳೆದುಕೊಂಡು ಚಿಕ್ಕವಯಸ್ಸಿನಲ್ಲೆ ಜೀವನದ ಪಾಠವನ್ನು ಕಲಿತಿರುತ್ತಾರೆ. ಬುದುಕಿಗೋಸ್ಕರ ಊಟದ ಎಲೆ ಮಾರುವ ಕಾಯಕವನ್ನು ಹೊಂದಿರುತ್ತಾರೆ. ತಂಗಿ ಓದಿಗಾಗಿ ಹೆಂಡತಿಯ ಒಡವೆಗಳನ್ನು ಮಾರುವ ಅಣ್ಣ. ಮುಂದೆ ಅತ್ತಿಗೆ ಸಂಸಾರ ಒಡೆಯುವ ಯೋಜನೆ ಹಾಕಿಕೊಂಡು ಅಣ್ಣಂದಿರ ಸಂಸಾರವನ್ನು ಬೇರೆ ಮಾಡುವಲ್ಲಿ ಸಪಲಳಾಗುತ್ತಾಳೆ ಇದರಿಂದ ಅಲ್ಲಿನ ಜನರು ಹಾಲಿ ನಂತಿದ್ದ ಸಂಸಾರ ಚೂರಾಯಿತು ಅಂತ ಮಾತನಾಡಿಕೊಳ್ಳುತ್ತಾರೆ. ತಂಗಿಗೆ ಗಂಡನ್ನು ಹುಡುಗಿ ಮದುವೆ ಮಾಡಲು ಹೋದಾಗ ಅಲ್ಲೋಂದು ಟ್ವಿಸ್ಟ್ ಬಂದು ಮದುವೆ ರದ್ದಾಗುತ್ತದೆ. ಅದನ್ನು ನಿಲ್ಲಿಸಲು ಕಾರಣರಾದವರು ಮುಂದೆ ಹೊಸ ಜೀವನ ನೀಡುವ ಹೊತ್ತಿಗೆ ಶುಭಂ ಬೋರ್ಡ್ ಕಾಣ ಸುತ್ತದೆ. ಇವಿಷ್ಟನ್ನು ಸುಂದರವಾಗಿ ತೋರಿಸಿರುವುದು ಡಿಸೈನರ್ ಆಗಿ, ಚಿತ್ರ ನಿರ್ದೇಶನ ಮಾಡಿರುವ ಮಸ್ತಾನ್. ಅಲ್ಲದೆ ಕತೆ,ಸಂಭಾಷಣೆಯ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವುದರಿಂದ ಅಲ್ಲಲ್ಲಿ ತಪ್ಪುಗಳು ಕಾಣ ಸುತ್ತವೆ. ಹಾಗಂತ ಪೂರ್ತಿ ಸಿನಿಮಾ ನೋಡಲು ಬರುವುದಿಲ್ಲವೆಂದು ಹೇಳಲು ಕಷ್ಟವಾಗುತ್ತದೆ. ಹೈವೋಲ್ಟೇಜ್ ಸಿನಿಮಾ ಅಂದುಕೊಂಡು ಹೋಗದೆ, ಕೌಟಂಬಿಕ ಎಂದು ತಿಳಿದುಕೊಂಡರೆ ನೋಡುಗನಿಗೆ ಚೆಂದದ ಸಿನಿಮಾ ಎನಿಸುತ್ತದೆ. ಎಸ್.ಪಿ.ಚಂದ್ರಕಾಂತ್ ಸಂಗೀತದಲ್ಲಿ ಸಂಕ್ರಾಂತಿ ಹಾಡು ಕೇಳಬಲ್. ದಿಲೀಪ್‍ರಾಜ್, ವಿಜಯ್‍ರಾಜ್ ಅಣ್ಣಂದಿರಾಗಿ ನಟನೆ ಮಾಡಿದ್ದಾರೆ. ತಂಗಿ ನೇಹಾಪಾಟೀಲ್‍ಗೆ ಮೊದಲ ಸಿನಿಮಾವಾಗಿದ್ದರಿಂದ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮ ಪಟ್ಟಿರುವುದು ಕಾಣುತ್ತದೆ. ಹರೀಶ್‍ರಾಜ್, ನೀತೂ ಒಂದು ಹಾಡಿಗೆ ಬಂದು ಹೋಗುತ್ತಾರೆ. ಸಿತಾರ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಒಮ್ಮೆ ನೋಡಿ ಬರುವುದಾದರೆ ಯಾವ ಅಡ್ಡಿಯು ಬರುವುದಿಲ್ಲ. ಡಾ.ವಿಜಯ್ ನಿರ್ಮಾಪಕರಾಗಿ ಒಂದು ಹಾಡಿಗೆ ಧ್ವನಿಯಾಗಿದ್ದಾರೆ.
-14/10/17
ಬಿಡುಗಡೆ ಭಾಗ್ಯ ಕಂಡ ಸಿತಾರ
ಸುಂದರ ಸಾಂಸರಿಕ ಚಿತ್ರವೆಂದು ಬಿಂಬಿತವಾಗಿದ್ದ ‘ಸಿತಾರ’ ಐದು ವರ್ಷಗಳ ಕೆಳಗೆ ಸೆಟ್ಟೇರಿದ್ದು, ನಿರ್ಮಾಪಕರ ಹಠಾತ್ ನಿಧನದಿಂದ ಸಿನಿಮಾವು ಸ್ಥಗಿತಗೊಂಡಿತ್ತು. ಕಾಲಕ್ರಮೇಣ ಕತೆ ಕೇಳಿದ ಡಾ.ವಿಜಯ್‍ರವರು ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಹೋಗಿದ್ದು ಅಲ್ಲದೆ ಒಂದಯ ಪ್ಯಾಥೋ ಹಾಡಿಗೆ ಕಂಠದಾನ ಮಾಡಿರುವುದು ವಿಶೇಷ. ಇಬ್ಬರು ಅಣ್ಣನ ಮುದ್ದಿನ ತಂಗಿ ಹಳ್ಳಿಯಿಂದ ಗಂಡನ ಮನೆ ಪಟ್ಟಣಕ್ಕೆ ಹೋದಾಗ ಅಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲಾಗದೆ ಮತ್ತೆ ಅಣ್ಣನ ಮನೆಗೆ ಸೇರಿಕೊಳ್ಳುತ್ತಾಳೆ. ಅತ್ತಿಗೆಯರ ಪ್ರೀತಿ ಕಡಿಮೆಯಾದಾಗ ತಿರುವುಗಳು ಬರಲಿದ್ದು, ಕ್ಲೈಮಾಕ್ಸ್‍ನಲ್ಲಿ ಎಲ್ಲವು ಸರಿಹೋಗುವುದನ್ನು 2.10 ನಿಮಿಷದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ರಚನೆ, ಚಿತ್ರಕತೆ ಬರೆದು ನಿರ್ದೇಶನದ ಸಾರಥ್ಯವಹಿಸಿರುವ ಎ.ಆರ್.ಮಸ್ತಾನ್. ವೃತ್ತಿಯಲ್ಲಿ ಡಿಸೈನರ್ ಆಗಿರುವ ನಿರ್ದೇಶಕರಿಗೆ ಇದು ಮೂರನೆ ಸಿನಿಮಾವಾಗಿದೆ. ಜಗನ್ನಾಥ್ ಸಾಹಿತ್ಯದ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ಎಸ್.ಪಿ.ಚಂದ್ರಕಾಂತ್. ಇದರಲ್ಲಿ ಸಂಕ್ರಾಂತಿ ಹಬ್ಬದ ಹಾಡು ಇರುವುದು ಪ್ಲಸ್‍ಪಾಯಿಂಟ್ ಆಗಿದೆ.

ರವಿಚಂದ್ರನ್ ನಂತರ ಸಂಕ್ರಾಂತಿ ಕುರಿತ ಗೀತೆ ಇರುವುದು ಈ ಸಿನಿಮಾ ಎರಡನೆದಾಗಿದೆಯಂತೆ. ದಿಲೀಪ್‍ರಾಜ್, ವಿಜಯ್‍ರಾಜ್ ಅಣ್ಣಂದಿರಾಗಿ ನಟಿಸಿದ್ದಾರೆ. ನೇಹಾಪಾಟೀಲ್‍ಗೆ ಅಂದು ಮೊದಲ ಚಿತ್ರವಾಗಿದ್ದು, ತಂಗಿಯಾಗಿ ಮುಗ್ಗ ಹುಡುಗಿ ಪಾತ್ರದಲ್ಲಿ ಕಾಣ ಸಿಕೊಂಡು ಬಿಡುಗಡೆಯಾಗುತ್ತಿರುವುದಕ್ಕೆ ಸಂತಸ ತಂದಿದೆ. ಹರೀಶ್‍ರಾಜ್‍ಗೆ ಜೋಡಿಯಾಗಿ ಅನಿವಾಸಿ ಭಾರತೀಯಳಾಗಿರುವ ನೀತೂ ನಟನೆ ಇದೆ. ಉಳಿದಂತೆ ರಮೇಶ್‍ಭಟ್, ದತ್ತಣ್ಣ, ಹೊನ್ನವಳ್ಳಿಕೃಷ್ಣ, ಚಿದಾನಂದ್, ಮನ್‍ದೀಪ್‍ರಾಯ್ ಮುಂತಾದವರ ತಾರಬಳUವಿದೆ. ನಂದಿನಿ, ಅನುರಾಧಭಟ್, ರಾಜೇಶ್‍ಕೃಷ್ಣನ್ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಚಿತ್ರವು ಇದೇ ಶುಕ್ರವಾರದಂದು ರಾಜ್ಯಾದ್ಯಂತ ತೆರೆಕಾಣಲಿದೆ.
-10/10/17


AUDIO OF ‘SITHARA’ RELEASED
T
he audio of ‘Sithara’, a film that has been in the making for three years, was released by Dr Maharshi Anand Guruji at a function in Bengaluru on Thursday. The film is produced by Nagamalleshwari Chandu and Dr Vijay. A R Mastan has directed the movie. The film has music by S P Chandrakanth and it stars Harish Raj, Dilip Raj, Neha Patil and Neethu among others. B L Babu is the cinematographer.

Dr Vijay said he became a producer by chance after the producer passed away. He said he came at a stage into the production when the film was almost complete and when it needed to go into post-production. He said Sithara is a family oriented subject and expressed confidence that the film will do well with the blessings of Anand Guruji.

Director Mastan who is one of the poster designers in Kannada cinema said he started working on the script from the central point and finished the second half before working on the first half.

Music composer Chandrakanth said he was happy to provided with all the facilities for recording and re-recording by the producers.

Neha Patil said she was happy to be part of the film. She said Sithara was her first film through which she debuted and is a typical village girl role that is a loveable character. She said she loved the Sankranti song.

Neethu said she plays a guest role in the film which is a positive one. The film has commercial elements and is slightly off-beat as well. She praised Neha Patil for bringing an innocent look to her role. She said Sithara is a soft and a cute love story.

Nagalakshmi, owner of Chamundeswari Studio commended Dr Vijay for coming forward to help other producer to finish the film. Basha of Bahar Films said Sithara will be a family drama with a lot of sentiment and wished the team all success.

Lyricist Jagannath said Sithara is his fourth film and added that the film has a message to society.

Maharshi Anand Guruji said he was happy that a producer came forward and helped the team complete the team. He said Sithara enjoys the blessings of Guruji.

Harish Raj and Dilip Raj were not present at the audio launch function.

Songs and the trailer of the movie were also shown on the occasion.
-4/09/15

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore