HOME
CINEMA NEWS
GALLERY
TV NEWS
REVIEWS
CONTACT US

ಮುಗ್ಧ ಕುಟುಂಬ ಹುಡುಗನ ಕರಾಳ ಮುಖ!
ಒಂದು ಕ್ರೈಮ್ ಹಿನ್ನೆಲೆಯ ಕಥೆ ಆಪ್ತವಾಗುವುದಕ್ಕೆ ಏನೆಲ್ಲಾ ಬೇಕು? ಅಲ್ಲಿ ರೌಡಿಸಂ ಇದ್ದರೂ, ಆರ್ಭಟ ಬೇಕಿಲ್ಲ. ಲಾಂಗು-ಮಚ್ಚುಗಳು ಝಳಪಿಸಬೇಕಿಲ್ಲ. ಗನ್‍ಗಳು ಸದ್ದು ಮಾಡಬೇಕಿಲ್ಲ. ಹೌದು, ಇದು ಇಲ್ಲದೆಯೂ, ಒಂದು ಸರಗಳ್ಳತನ ಮೂಲಕ ಒಂದು ಕುಟುಂಬದ ಹುಡುಗನೊಬ್ಬನ ಬದುಕು ಹೇಗೆ ಅಂತ್ಯ ಕಾಣುತ್ತೆ ಅನ್ನೋದನ್ನು ನಿರ್ದೇಶಕ ಮುರಳಿ ಗುರಪ್ಪ ಅವರು ತುಂಬಾ ಸೂಕ್ಷ್ಮವಾಗಿ `ಸಿಲಿಕಾನ್ ಸಿಟಿ' ಸಿನಿಮಾದಲ್ಲಿ ಹೇಳಿದ್ದಾರೆ. ಬಹುಶಃ, ಒಂದು ಕ್ರೈಂ ಸ್ಟೋರಿ ಇಷ್ಟವಾಗುವುದಕ್ಕೆ ಮುಖ್ಯವಾಗಿ ಏನು ಬೇಕು ಎಂಬುದನ್ನು ನಿರ್ದೇಶಕರು ಅರಿತಿರುವುದರಿಂದಲೇ ಈ ಚಿತ್ರ ನೋಡುಗರನ್ನು ಅಪ್ಪಿಕೊಳ್ಳುತ್ತದೆ. ಇಲ್ಲಿ ಅಪ್ಪ ಅಮ್ಮನ ಪ್ರೀತಿ ಇದೆ. ಅಣ್ಣತಮ್ಮಂದಿರ ಸಂಬಂಧವಿದೆ. ಬೆಂಗಳೂರಿನ ಕರಾಳ ಮುಖವೂ ಇದೆ. ಇದೆಲ್ಲವನ್ನೂ ಒಂದೇ ಏಟಿಗೆ ತೋರಿಸುವುದರ ಜತೆಯಲ್ಲಿ ಒಂದು ಮೌಲ್ಯ ಸಂದೇಶವನ್ನೂ ನಿರ್ದೇಶಕರು ಇಲ್ಲಿಟ್ಟಿದ್ದಾರೆ.

ಒಂದು ಮಧ್ಯಮ ಕುಟುಂಬದಲ್ಲಿ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಬಹುಶಃ ಸಾಧ್ಯವಿಲ್ಲದ ಮಾತು. ಅಂತಹ ಮಧ್ಯ ಕುಟುಂಬದಲ್ಲಿರುವ ಹುಡುಗನೊಬ್ಬ, ತಾನೂ ಇತರೆ ಗೆಳೆಯರಂತೆ, ಕಾಲೇಜಿಗೆ ಬೈಕ್ ಓಡಿಸಿಕೊಂಡು ಹೋಗಬೇಕು, ಪ್ರಿಯತಮೆಯ ಆಸೆಗಳನ್ನೆಲ್ಲಾ ಈಡೇರಿಸಬೇಕು ಅಂತ ಯೋಚಿಸುತ್ತಿರುವಾಗಲೇ, ಅವನಿಗೊಂದು ಚೈನ್‍ಸ್ನಾಕರ್ ಗ್ಯಾಂಗ್‍ನ ಪರಿಚಯವಾಗುತ್ತೆ. ಅಲ್ಲಿಗೆ ಎಂಟ್ರಿಕೊಡುವ ಆ ಹುಡುಗ, ಹೇಗೆ ತನ್ನೆಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳುತ್ತಾನೆ ಅನ್ನುವುದನ್ನು ತುಂಬಾ ಸೂಕ್ಷ್ಮವಾಗಿ ಮತ್ತು ರೋಚಕವಾಗಿಯೇ ಕಟ್ಟುಕೊಟ್ಟಿದ್ದಾರೆ ನಿರ್ದೇಶಕರು.

ಇಲ್ಲಿ ಪ್ರೀತಿಗಿಂತ ಹೆಚ್ಚು ಆಸೆಗಳನ್ನು ತೋರಿಸಿದ್ದಾರೆ. ಆಸೆಗಳ ಹಿಂದೆ ಬಿದ್ದರೆ, ಒಂದು ಕುಟುಂಬ ಹೇಗೆ ತನಗೇ ಗೊತ್ತಿಲ್ಲದಂತೆ ಸರ್ವನಾಶ ಆಗುತ್ತೆ ಎಂಬುದನ್ನೂ ಹೇಳಿದ್ದಾರೆ. ಇಲ್ಲಿ ಒಂದೊಳ್ಳೆಯ ಸಂದೇಶವಿದೆ. ಅದನ್ನು ಹೇಳುವುದಕ್ಕಿಂತ ನೋಡುವುದೇ ಒಳಿತು.

ಇದು ತಮಿಳಿನ `ಮೆಟ್ರೋ' ಸಿನಿಮಾದ ರಿಮೇಕ್ ಚಿತ್ರ. ಆದರೆ, ಅದನ್ನು ಇಲ್ಲಿ ಯಥಾವತ್ ಆಗಿ ಮಾಡಿದ್ದರೂ, ಕನ್ನಡತನಕ್ಕೆ ಏನೆಲ್ಲಾ ಇರಬೇಕೋ ಅದನ್ನು ಇಟ್ಟುಕೊಂಡೇ ನಿದೇಶಕರು ಜಾಣತನದಿಂದ ತಮ್ಮ ನಿರ್ದೇಶನದ ಕೆಲಸ ಮಾಡಿದ್ದಾರೆ. ಮೊದಲ ಚಿತ್ರವಾಗಿದ್ದರೂ, ಅವರಿಲ್ಲಿ ತುಂಬಾ ಜಾಣ್ಮೆ ಮೆರೆದು, ನೋಡುಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಯಾಕೆಂದರೆ,ಒಂದು ಸರಗಳ್ಳತನದ ಕಥೆ ಇಟ್ಟುಕೊಂಡು ಅದನ್ನು ತಂಬಾ ರೋಚಕ ಎನಿಸುವಂತೆ ಮಾಡಿರುವುದರಿಂದಲೇ ಸಿನಿಮಾ ಎಲ್ಲೂ ಕೂಡ ನೋಡುಗರಿಗೆ ಬೋರ್ ಎನಿಸುವುದೇ ಇಲ್ಲ. ಇಲ್ಲಿ, ಹಾಡುಗಳಿರಲಿ, ಸಂಭಾಷಣೆ ಇರಲಿ, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಎಲ್ಲವೂ ಕಥೆಗೆ ಪೂರಕವಾಗಿದ್ದರಿಂದಲೇ ಚಿತ್ರ ನೋಡುಗರಲ್ಲಿ ಇಷ್ಟವಾಗುತ್ತದೆ.

ಕಥೆಗೆ ಪೂರಕವಾಗಿಯೇ ಪಾತ್ರಗಳಿವೆ. ಆ ಪಾತ್ರಗಳನ್ನೂ ಸಹ ನಿರ್ದೇಶಕರು ತುಂಬಾ ಚೆನ್ನಾಗಿಯೇ ಕಟ್ಟುಕೊಟ್ಟಿದ್ದಾರೆ. ಮೊದಲು ನಿರ್ದೇಶಕರು ಏನು ಹೇಳಬೇಕು, ಎಷ್ಟು ಹೇಳಬೇಕು ಮತ್ತು ಅದನ್ನು ನೋಡುಗರಿಗೆ ಹೇಗೆ ತೋರಿಸಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಹಾಗಾಗಿಯೇ ಸಿಲಿಕಾನ್ ಸಿಟಿ ಸಿನಿಮಾ ನೋಡುಗರಿಗೆ ಎಲ್ಲೂ ಟೈಮ್ ಪಾಸ್ ಸಿನಿಮಾ ಎನಿಸುವುದೇ ಇಲ್ಲ. ಇಲ್ಲಿ ಹಾಡುಗಳಿಗೆ ಮಹತ್ವ ಇದೆ. ಯಾವ ಸಂದರ್ಭಕ್ಕೆ ಹಾಡು ಬೇಕೋ ಅದು ಬಂದಹೋಗುತ್ತೆ. ಚಿಕ್ಕಣ್ಣ ರಂತಹ ನಟರಿದ್ರೂ ಇಲ್ಲಿ ಹಾಸ್ಯವಿಲ್ಲ. ಅದೇ ಇಲ್ಲಿನ ವಿಶೇಷ. ಯಾಕೆಂದರೆ, ಇದು ಹಾಸ್ಯ ಇರದ, ಒಂದು ಗಂಭೀರ ವಿಷಯ ಇರುವಂತಹ ಸಿನಿಮಾ. ಇಲ್ಲಿ ಅಪ್ಪ, ಅಮ್ಮ ತುಂಬಾ ಚೆನ್ನಾಗಿ ಮುದ್ದಿಸುವ ಮಗ, ಅಷ್ಟೇ ಚೆನ್ನಾಗಿಯೇ ಅಣ್ಣ ಕೂಡ ತಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಅಂತಹ ಸಂದರ್ಭದಲ್ಲೂ ತಮ್ಮನಿಗೆ ಅಗತ್ಯಗಳು ಜಾಸ್ತಿಯಾದಾಗ, ಒಂದು ಕೆಟ್ಟ ದಾರಿಗೆ ಇಳಿಯುತ್ತಾನೆ. ಅಲ್ಲಿಂದ ಅವನ ರೂಟು ಕೂಡ ಬದಲಾಗುತ್ತೆ. ಅಡ್ಡದಾರಿಯಲ್ಲೇ ಬದುಕು ರೂಪಿಸಿಕೊಳ್ಳಬೇಕು ಎಂಬ ಹಠ ಹಿಡಿಯುತ್ತಾನೆ. ಅತ್ತ, ತನ್ನ ಕುಟುಂಬದ ಜತೆಗೆ ಚೆನ್ನಾಗಿದ್ದುಕೊಂಡೇ, ಒಂದು ಅನಾಹುತ ಮಾಡುತ್ತಾನೆ. ಅದು ಏನು ಎಂಬುದನ್ನು ತಿಳಿಯಬೇಕಾದರೆ, ಚಿತ್ರ ನೋಡಿ.

ಇಲ್ಲಿ ಶ್ರೀನಗರ ಕಿಟ್ಟಿ ಹಿಂದಿಗಿಂತಲೂ ಚೆನ್ನಾಗಿ ಕಾಣುತ್ತಾರೆ. ಅಷ್ಟೇ ಒಳ್ಳೇಯ ಪಾತ್ರವನ್ನು ನಿರ್ವಹಿಸಿದ್ದಾರೆ. ಎಲ್ಲೂ ಕೂಡ ಅದು ನೋಡುಗರನ್ನು ಬೇಸರಪಡಿಸುವುದಿಲ್ಲ. ಅಷ್ಟು ಚೆನ್ನಾಗಿ ಸಿಕ್ಕ ಪಾತ್ರವನ್ನು ಮಾಡಿದ್ದಾರೆ. ಇನ್ನೊಬ್ಬ ನಟ ಸೂರಜ್‍ಗೌಡ ಕೂಡ ಇಲ್ಲಿ ಎರಡು ಶೇಡ್ ಇರುವ ಪಾತ್ರಮಾಡಿದ್ದಾರೆ. ಮೊದಲರ್ಧ ಒಂದು ರೀತಿಯ ಪಾತ್ರದಲ್ಲಿ ಗಮನಸೆಳೆದರೆ, ದ್ವಿತಿಯಾರ್ಧದಲ್ಲಿ ಬರುವ ಮತ್ತೊಂದು ಪಾತ್ರದಲ್ಲಿ ಇಷ್ಟವಾಗುತ್ತಾರೆ. ಎರಡು ಶೇಡ್‍ನಲ್ಲೂ ತಾನೊಬ್ಬ ನಟ ಎಂಬುದನ್ನು ಇಲ್ಲಿ ನಿರೂಪಿಸುತ್ತಾರೆ. ಕಾವ್ಯಾಶೆಟ್ಟಿ ಕೂಡ ಚೆನ್ನಾಗಿ ನಟಿಸಿದ್ದಾರೆ. ಇಲ್ಲಿ ಅಮ್ಮನಾಗಿ ತುಳಸಿ ಶಿವಮಣಿ ಹಾಗೂ ಅಪ್ಪನಾಗಿ ಅಶೋಕ್ ಅವರು ನೋಡುಗರನ್ನು ಕಣ್ತುಂಬಿಸುತ್ತಾರೆ. ಅನೂಪ್ ಸೀಳಿನ್ ಅವರ ಹಾಡುಗಳು ಚೆನ್ನಾಗಿವೆ. ಶ್ರೀನಿವಾಸ್ ಅವರ ಛಾಯಗ್ರಹಣವೂ ಕೂಡ ಚಿತ್ರ ಕಥೆಗೆ ಪೂರಕವಾಗಿದೆ. ಪೆÇೀಷಕರು ತಮ್ಮ ಮಕ್ಕಳಿಗೆ ಏನೇ ಪ್ರೀತಿ ಮಾಡಿದ್ದರೂ, ಅವರ ಚಲನವಲನಗಳ ಬಗ್ಗೆ ಒಮ್ಮೆ ಗಮನ ಇಡಬೇಕು ಎಂಬ ಮೂಲ ತಾತ್ಪರ್ಯ ಈ ಚಿತ್ರದಲ್ಲಿದೆ. ಒಂದು ಸಂದೇಶ ಇರುವಂತಹ ಈ ಚಿತ್ರದಲ್ಲಿ ಸಾಕಷ್ಟು ಒಳ್ಳೆಯ ಅಂಶಗಳೂ ಇವೆ. ಈಗಿನ ಜನರೇಷನ್ ಎಂತಹ ಹಾದಿ ತುಳಿಯಲಿದೆ ಎಂಬ ಎಚ್ಚರಿಕೆಯನ್ನೂ ಇಲ್ಲಿ ಕೊಡಲಾಗಿದೆ.
-16/06/17

ಬೇರೆ ರಾಜ್ಯಗಳಲ್ಲಿ ಕನ್ನಡ ಸಿನಿಮಾ
‘ಸಿಲಿಕಾನ್ ಸಿಟಿ’ ತೆರೆಗೆ ಬರಲು ಸನ್ನಿಹಿತವಾಗಿರುವುದರಿಂದ ಕೊನೆ ಬಾರಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ಮೈಕ್ ತೆಗೆದುಕೊಂಡ ನಿರ್ದೇಶಕ ಮುರಳಿಗುರಪ್ಪ ಮೊದಲ ಪ್ರತಿ ನೋಡಿದಾಗ ಖುಷಿ ನೀಡಿತು. ಸುಂದರವಾಗಿ ಮೂಡಿಬಂದಿದೆ. ಚಿತ್ರವು ಜನರಿಗೆ ತಲುಪಲಿದೆ ಎಂಬ ನಂಬಿಕೆ ಇದೆ. ತಮಿಳಿನ ಮೆಟ್ರೋ ಚಿತ್ರದ ಒಂದು ಏಳೆಯನ್ನು ತೆಗೆದುಕೊಂಡು ಕುಟುಂಬದ ಬಾಂದವ್ಯ, ರೋಮಾನ್ಸ್ ಸೇರಿಸಲಾಗಿದೆ. ರಾ ಫೀಲಿಂಗ್‍ನಲ್ಲಿದ್ದು, ಮಧ್ಯಮ ವರ್ಗದ ಕುಟುಂಬಕ್ಕೆ ಹೇಳಿಮಾಡಿಸಿದಂತಿದೆ ಎಂದರು. ಎರಡನೆ ಸಿನಿಮಾದಲ್ಲಿ ಅದ್ಬುತ ಪಾತ್ರ ಸಿಕ್ಕಿದ್ದು ಸುಕೃತ್ ಎನ್ನಬಹುದು ಎಂಬ ನುಡಿ ಉಪನಾಯಕ ಸೂರಜ್‍ಗೌಡ ಅವರದು. ಇವರಿಗೆ ಜೋಡಿಯಾಗಿ ಕಾಣ ಸಿಕೊಂಡಿರುವ ಎಕ್ತಾರಾಥೋಡ್ ಸಣ್ಣ ಪಾತ್ರವಾದರೂ ಮುಖ್ಯವಾಗಿದೆ ಎಂದರು. ಸಾಮಾನ್ಯ ಸರಳ ಹುಡುಗಿಯಾಗಿ ಜವಬ್ದಾರಿಗಳನ್ನು ಹೊತ್ತುಕೊಂಡು, ಬಿಡುವಿನ ವೇಳೆಯಲ್ಲಿ ಗೆಳಯನನ್ನು ಪ್ರೀತಿಸುವ ಪಾತ್ರವೆಂದು ಪರಿಚಯಿಸಿಕೊಂಡರು ನಾಯಕಿ ಕಾವ್ಯಶೆಟ್ಟಿ.

ಸಿನಿಮಾ ಇನ್ನು ನೋಡಿಲ್ಲ. ಶೇಕಡ 40ರಷ್ಟು ರಾತ್ರಿ ಹೊತ್ತು ಚಿತ್ರೀಕರಣ ನಡೆಸಲಾಗಿದೆ. ನಾವುಗಳು ಒಳಗಡೆ ಬದುಕುತ್ತಿದ್ದೇವೆ ಎಂಬ ಭಾವನೆ ಬರುತ್ತದೆ. ಅಶೋಕ್, ತುಳಸಿ, ಚಿಕ್ಕಣ್ಣ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಜನರಿಗೆ ಅದ್ದೂರಿ ಆಹ್ವಾನಪತ್ರಿಕೆ ಕೊಡಲು ಸಾದ್ಯವಾಗಿರುವುದು ಮಾದ್ಯಮಗಳಿಂದ. ಅದಕ್ಕಾಗಿ ತಮ್ಮ ಪ್ರೋತ್ಸಾಹ ಅತ್ಯಗತ್ಯ ಅಂತ ಪಾಲುದಾರಿಕೆ ಬಗ್ಗೆ ಕೇಳಿದಾಗ ಅವರ ನಗು ಉತ್ತರ ನೀಡಿತು. ಕೊಚ್ಚಿನ್, ಕಾಸರಗೂಡು, ಚೆನ್ನೈ, ಬಾಂಬೆಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಈಗಾಗಲೆ ಮುದ್ರಣ ಮಾದ್ಯಮ, ಆನ್‍ಲೈನ್, ಟಿವಿ. ಎಫ್‍ಎಂ ಮುಖಾಂತರ ಪ್ರಚಾರವನ್ನು ಕೈಗೊಳ್ಳಲಾಗಿದೆ ಎಂಬುದರ ಮಾಹಿತಿ ಹರಿಬಿಟ್ಟರು ನಿರ್ಮಾಪಕ ರವಿ. ವಿಜಯ್ ಸಿನಿಮಾಸ್ ಮುಖಾಂತರ ಚಿತ್ರವು ಜೂನ್ 16ರಂದು ತೆರೆಕಾಣಲಿದೆ.
-6/05/17

SILICONN CITY’ GETS ‘A’ CERTIFICATE, FILM RELEASING ON JUNE 16
K
annada crime thriller ’Siliconn City’ has got an ‘A’ certificate from the censors and will release in 180 theatres all over Karnataka on June 16. The film is being distributed by Vijay Cinema. The film is produced by Manjula Somashekar and Ravi M and co-produced by Srinagara Kitty and C R Suresh. The film is directed by Murali Gurappa. The film stars Srinagara Kitty, Suraj Gowda, Kavya Shetty, Chikkanna, Ashok, Ekta Rathod, Tulasi and Giri among others. Srinivas Ramaiah is the cameraman. Anoop Seelin and Johan have scored the music while Chinna has scored the background music.

The film which is a remake of Tamil film Metro has been shot entirely in Bengaluru. According to producer Ravi, the original film has been tweaked to suit nativity and local style while retaining the story line.

The film’s trailer and audio has got good response and the film team is now ready to launch theatrical trailer ahead of its release as part of the promo. 
-4/06/17

SILICONN CITY’ AUDIO, TRAILER LAUNCHED
T
he audio and trailer of the film Siliconn City was released in Bengaluru on Friday night. The film is directed by Murali Gurappa. The film is produced by Manjula Somashekar and Ravi M. It is co-produced by Srinagara Kitty and C R Suresh. Anoop Seelin and Johan have scored the music. While Johan’s tracks from the Tamil original ‘Metro’ have been used in the Kannada film as well, Anoop Seelin has scored two fresh songs for Siliconn City. The film stars Srinagara Kitty, Kavya Shetty, Suraj Gowda, Ekta Rathod, Chikkanna, Ashok, Tulasi, Giri, Vishwa and Sidhu among others. Srinivas Ramaiah is the cameraman.  

Director Murali Gurappa said the film is about what happens in Bengaluru and has tried to show the change that the city has undergone. The film has some real incidents, he said.

Cameraman Srinivas Ramaiah said he got an opportunity to experiment with the camera in his fourth film. He said an Alexa mini camera has been used to picturise the movie over a 35-day schedule.  

Srinagara Kitty said the film is about what happens in the family when there is one negative character in it. He said the technicians had put in a lot of hard work.  

Releasing the trailer, Kichcha Sudeep said the trailer looks good and added trailers these days looked good but he hadn’t seen any of them fully. He said the trailer of Hebbuli was not released. He said he didn’t know that Siliconn City is a remake. However, he said the film hinges on the editor, cameraman and the director. If all the three work together even an average actor will look good and will be able to deliver his lines well, he said adding that Siliconn City looked liked a technically sound film. He said it is gratifying that Kannada cinema is doing well. Sudeep said everyone should give good films pointing to himself because newcomers are doing well.  

Bhaskar Rao, additional DG of Police said film-makers should highlight the crime portion in movies and not glorify the criminals or their portions. He said cinema and police force have enjoyed a good relationship for a long time.  

Two songs of the movie were later exhibited.
-12/03/17

SILICONN CITY’ TEASER RELEASED
T
he teaser of upcoming Kannada film ‘Siliconn City’, a remake of Tamil film ‘Metro’ was released last week in Bengaluru. The romantic thriller is produced by Manjula Somashekar and Ravi M. The film is co-produced by Srinagara Kitty and C R Suresh. The film is directed by Murali Gurappa. The film stars Srinagara Kitty, Kavya Shetty, Suraj Gowda, Ekta Rathod, Chikkanna, Ashok Tulasi, Giri, Vishwa and Sidhu among others. Srinivas Ramaiah is the cameraman while Anoop Seelin and Johan have scored the music.  

Director Murali Gurappa told reporters that the film will have its audio release soon and will release by the end of the month. He said amidst nervousness he has completed his dream of making a film. He said the film is about what happens in Bengaluru and has tried to show the change the city had undergone. He said the film has real incidents. He said the film’s shoot and editing work is over and post-production work is on. He said the film is about how a family gets affected if someone in it commits a mistake. He said the film has two songs by Anoop Seelin and two others have been retained from the Tamil version which has been given by Johan.  

Producer Ravi said a special camera had been used to shoot movements and a major portion of the shoot was done in source light and natural light.  

Srinagara Kitty said he plays the role of an ad film-maker. He said he liked the story and it shows the criminal activities in Bengaluru. The geography of the movie has shifted from Chennai in the Tamil original to Bengaluru. He said the film talks about how human values change and the behaviour of youth in society.      

Suraj Gowda said his character undergoes two transitions which he found it difficult. He said he hadn’t got so much freedom earlier and added that the film was challenging and satisfying. He said he was confident and excited about the film’s prospects. Vishwa Kaddi plays the villain.  

Kavya Shetty said she plays a middle-class girl in a rather deglamourous avatar which has offered her scope to perform. She said she plays the love interest of Kitty.  

Gita Gurappa has worked as the sound designer and Varadaraj Kamath as the art director. Suman Jadugar has penned the dialogues and worked as co-director. Arasu Anthare and Mamatha Jaganmohan have penned the lyrics. Srikanth is the editor.
-5/03/17SILICONN CITY’ SHOOT TO BEGIN FROM OCT 19
‘Siliconn City’, a romantic thriller and a remake of Tamil hit Metro will be launched on Wednesday, October 19 at the Kanteerava Studio. The film is being directed by Murali Gurappa and produced by Manjula Somashekar, Ravi M and C R Suresh. The film stars Srinagara Kitty, Kavya Shetty, Suraj Gowda, Ekta Rathod, Chikkanna, Tulasi and Sadhu Kokila among others.

Murali Gurappa told reporters on Monday ahead of the cinema launch that the film is a middle-class story which will connect with Bengaluru city. He said the city will play an important character in the movie. Gurappa who has himself as an editor in an ad agency has tweaked the original to suit local tastes. He said Kitty and Kavya plays ad professionals in the movie. Suraj Gowda, a college-going guy in the movie plays the brother of Kitty with Ekta Rathod who plays another college going girl.

Producer Ravi M said the film will have more night scenes shot outdoor on a budget of Rs 5 crore. He said they have produced Kannada films Kalavu and Kaudi in the past and now Siliconn City will be made under the banner of Sai Kannada Circle.

Cinematographer Srinivas Ramaiah said the producer has provided him with a special digital camera that will be used for outdoor shoots and night scenes. He said the film will be technically challenging for him.

Srinagara Kitty said the whole film happens in Bengaluru which is in a different geography from the Tamil version. He said the team has planned to finish the shoot by December 10 in a single schedule and release it by March end. The film has family content with sibling love which he had never done before.

Kavya Shetty said she plays a simple girl working in an ad agency. Ekta Rathod who had acted in Masterpiece said she is playing a college-going girl in the movie.

Suraj Gowda said there are a few changes being made from the original and it is his fourth film. He said he is lucky to get an opportunity to work with Kitty. Siddu said he is playing a villain in the film.

Anoop Seelin is scoring the music and Srikanth is the editor. Sadagara Raghavendra and Suman Jadugar are the dialogue writers.
-18/10/16   For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore