HOME
CINEMA NEWS
GALLERY
TV NEWS
REVIEWS
CONTACT US
ನೂರು ದಿನಗಳ ಸಂಭ್ರಮದಲ್ಲಿ ಶುದ್ದಿ
ಈ ವರ್ಷದಲ್ಲಿ ಲೆಕ್ಕಹಾಕಿದರೆ ಬೆರಳಣ ಯಷ್ಟು ಚಿತ್ರಗಳು ಶತದಿನವನ್ನು ಪೂರೈಸಿದೆ. ಈ ಸರಪಣ ಗೆ ಹೊಸಕೊಂಡಿ ‘ಶುದ್ದಿ’ ಸಿನಿಮಾ ಸೇರಿಕೊಂಡಿದೆ. ಸಂತಸವನ್ನು ಹಂಚಿಕೊಳ್ಳಲು ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಕತೆ, ನಿರ್ದೇಶನ ಮಾಡಿರುವ ಆದರ್ಶ.ಹೆಚ್.ಈಶ್ವರಪ್ಪ ಅವರು ಹೇಳುವಂತೆ ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆ ಬಂದಿರುವುದರಿಂದ ಪಿವಿಆರ್‍ನಲ್ಲಿ ಸತತ ನೂರು ದಿನಗಳ ಪ್ರದರ್ಶನ ಕಂಡಿದೆ. ದೊಡ್ಡ ಸಿನಿಮಾಗಳ ಮಧ್ಯೆ ನಮ್ಮಂತಹ ಚಿತ್ರವನ್ನು ಜನರು ಇಷ್ಟಪಟ್ಟರುವುದು ಸಂತೋಷ ತಂದಿದೆ ಎಂದರು. ಆರ್ಟ್, ಕಮರ್ಷಿಯಲ್ ಎನ್ನುವ ಪದವನ್ನು ತೆಗೆದುಹಾಕಬೇಕು. ಒಳ್ಳೆ ಚಿತ್ರ, ಕೆಟ್ಟದ್ದು ಅಂತ ಹೇಳುತ್ತಾ ಹೋದರೆ ನಿರ್ದೇಶಕರಿಗೆ ಪೀಕಲಾಟ ಶುರುವಾಗುತ್ತೆ. ಇಲ್ಲಿಯವರೆಗೂ ಬಂದಿರುವ ಪಾತ್ರಗಳು ಕಲಾತ್ಮಕ ಸಿನಿಮಾವಾಗಿರಬಹುದು. ಬಹುಶ: ಕಮರ್ಷಿಯಲ್ ನಿರ್ದೇಶಕರು ಅವಕಾಶ ನೀಡಲು ನಿರಾಕರಿಸಿದ್ದರೆ ಏನು ಹೇಳಲು ಆಗುವುದಿಲ್ಲ. ಚಿತ್ರಗಳನ್ನು ವಿವಿದ ರೀತಿಯಲ್ಲಿ ನೋಡುವುದು ಸರಿಯಲ್ಲ ಎಂಬುದು ನನ್ನ ಭಾವನೆ. ಆದರೂ ವಿಭಾಗದ ಮೇಲೆ ಚಿತ್ರಗಳನ್ನು ನೋಡುತ್ತಿರುವುದು ಸದ್ಯದ ಸಂಗತಿಯಾಗಿದೆ ಎಂದು ಮುಖ್ಯ ಪಾತ್ರದಲ್ಲಿ ನಟಿಸಿರುವ ನಿವೇದಿತಾ ಮಾದ್ಯಮದ ಪ್ರಶ್ನೆಗೆ ಉತ್ತರವಾದರು.

ಕತೆಗಳು ಒಳ್ಳೆ ಅಂಶಗಳು ಇದ್ದಲ್ಲಿ ಎಲ್ಲಾ ಸಿನಿಮಾವು ಗೆಲ್ಲುತ್ತವೆ. ಎರಡರ ಪಂಗಡ ಗೊತ್ತಿಲ್ಲ. ಗಳಿಕೆಯಲ್ಲಿ ಲಾಭ ಬಾರದೆ ಇದ್ದರೂ ಜನರು ಇಷ್ಟಪಡುವ ಸಿನಿಮಾ ನೀಡಿದ್ದೇನೆ ಎನ್ನುವ ಖುಷಿ ಇದೆ. ಮೊದಲ 60 ದಿನ ನಾಲ್ಕು ಷೋ, ನಂತರ ಎರಡು, ಕೊನೆಯಲ್ಲಿ ಒಂದು ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವ ಪಿವಿಆರ್ ಮಾಲೀಕರಿಗೆ ನಮ್ಮ ಕಡೆಯಿಂದ ಥ್ಯಾಂಕ್ಸ್. ಅಮೇರಿಕಾ, ಯುಕೆ, ಆಸ್ಟ್ರೇಲಿಯಾ, ಲಂಡನ್, ಸಿಂಗಪೂರ್‍ಗಳಲ್ಲಿ ಶುದ್ದಿ ಓಡಾಡಿದೆ. ಹಿಂದಿ ಡಬ್ಬಿಂಗ್‍ಗೆ ಜಾಸ್ತಿ ಬೆಲೆಗೆ ಬೇಡಿಕೆ ಬಂದಿದೆ. ಅದೇ ರೀತಿ ತೆಲುಗು,ತಮಿಳು ಭಾಷೆಯಲ್ಲಿ ರಿಮೇಕ್ ಮಾಡಲು ಕೆಲವರು ಉತ್ಸುಕತೆ ತೋರಿಸಿದ್ದಾರೆ ಎಂಬುದರ ವಿವರ ನೀಡಿದರು ನಿರ್ಮಾಪಕ ಮಾದೇಶ್.ಟಿ.ಭಾಸ್ಕರ್. ಕಲಾವಿದರಾದ ಶಶಾಂಕ್‍ಪುರಷೋತ್ತಮ್, ಅಜಯ್‍ರಾಜ್, ನಾಗಾರ್ಜುನ ಖುಷಿಯ ಮಾತುಗಳನ್ನು ಹೇಳಿದರು. ಅವಸಾನದಲ್ಲಿ ಚಿತ್ರತಂಡವು ಕೇಕ್ ಕತ್ತರಿಸುವುದರೊಂದಿಗೆ ಸಂತಸದ ವಾತವರಣಕ್ಕೆ ತೆರೆ ಏಳೆಯಲಾಯಿತು.
-26/06/17

SHUDDHI’ TRAILER LAUNCHED
P
riyanka Upendra launched the trailer of upcoming Kannada film Shuddhi at a function in Bengaluru on Saturday.  The film is produced by Nandini Madhesh and directed by Adarsha H Eshwarappa. The film stars Niveditha, Amrutha Karagada, Lauren Spartano, Shashank Purushottan, Ajay Raj, Nagarjuna, Siddhartha and Veena Sundar among others.

Director Eshwarappa told journalists that the film is about a woman who comes to India from the US seeking revenge. The director said the film runs on three tracks with two others being about street play artistes. He said in the climax all the three tracks merge and how it happens forms the suspense of the story. The film has been shot in Goa and Karkala.

Niveditha who is playing one of the leads said if a woman is blessed with beauty and looks she is not courageous enough while a man has the strength but has no control over himself. She said the film runs roughly on this premise.

Lauren Spartano is a foreign national and has acted in the Kannada film.
-6/02/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore