HOME
CINEMA NEWS
GALLERY
TV NEWS
REVIEWS
CONTACT US
ಸೀಜರ್‍ನಲ್ಲೊಂದು ಸೇಡಿನ ಕತೆ
ಅದ್ದೂರಿ ಚಿತ್ರವಂದು ಹೇಳಿಕೊಂಡು ಬಂದಿದ್ದ ‘ಸೀಜರ್’ ಅಂದುಕೊಂಡಂತೆ ತೆರೆ ಮೇಲೆ ಭರ್ಜರಿಯಾಗಿ ಕಾಣಿಸುತ್ತದೆ.. ಟೈಟಲ್ ನೋಡಿದಾಗ ಕಾರುಗಳನ್ನು ಸೀಜು ಮಾಡುವ ಕಥನ ಎಂದು ಕೊಂಡರೆ ಅದು ಇರದೆ, ಸಾಕಷ್ಟು ತಿರುವುಗಳು ಬರುವುದು ಪ್ಲಸ್ ಪಾಯಿಂಟ್ ಆಗಿದೆ. ಪ್ರಾಮಾಣಿಕ ಫೈನಾಷಿಯರ್ ಬಳಿ ನಿಯತ್ತಾಗಿ ಕೆಲಸ ಮಾಡುವ ಆತನ ಹೆಸರು ಸೀಜರ್. ಇವನ ಕಾಯಕ ಸೀಜ್ ಮಾಡುವುದು, ಇದರ ಮಧ್ಯೆ ಎರಡು ಕೊಲೆ ಮಾಡುತ್ತಾನೆ. ಅದನ್ನು ಏತಕ್ಕಾಗಿ ಮಾಡಿದ ಎಂಬುದು ಒಂದು ಏಳೆಯ ತಿರುಳಾಗಿದೆ. ಸರಳ ಕತೆಗೆ ಒಂದಷ್ಟು ಮಸಾಲೆ ಅಂಶಗಳನ್ನು ಸೇರಿಸಿದ್ದರೂ ಪ್ರೇಕ್ಷಕರಿಗೆ ಬೋರ್ ಆಗದಂತೆ ಸನ್ನಿವೇಶಗಳನ್ನು ಸೃಷ್ಟಿಸಿರುವುದು ನಿರ್ದೇಶಕ ಜಾಣ್ಮೆ ಕಂಡು ಬರುತ್ತದೆ. ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಹಾಡು, ಫೈಟ್., ಲವ್, ಹಾಸ್ಯ ಎಲ್ಲವು ತಕ್ಕಮಟ್ಟಿಗೆ ಇರುವುದರಿಂದ ಎಲ್ಲವು ಸೇರಿಕೊಂಡು ವಿರಾಮದ ವರೆಗೂ ವೇಗವಾಗಿ ದೃಶ್ಯಗಳು ಬಂದು ಹೋಗುತ್ತವೆ. ನಂತರ ಯಾವ ಕಾರಣಕ್ಕಾಗಿ ಕೊಲೆ ಮಾಡಿದನೆಂಬುದು ಒಂದೊಂದೇ ಏಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದರ ಮಧ್ಯೆ ತುರ್ತುವಾಹನವನ್ನು ಸೀಜ್ ಮಾಡುವ ಸಂದರ್ಭದಲ್ಲಿ ನಾಯಕಿಯನ್ನು ನೋಡುವುದು, ಆಕೆಯ ಮೋಹಕ್ಕೆ ಒಳಗಾಗುವುದು. ಇವೆಲ್ಲವು ಬಂದು ಹೋಗುತ್ತದೆ. ಎಲ್ಲಾ ಪ್ರಶ್ನಗಳಿಗೂ ಉತ್ತರವನ್ನು ಚಿತ್ರಮಂದಿರದಲ್ಲಿ ಕಂಡುಕೊಳ್ಳಬಹುದು.

ಇಡೀ ಚಿತ್ರದಲ್ಲಿ ಮೂರು ಪಾತ್ರಗಳು ಕತೆಯನ್ನು ತೆಗೆದುಕೊಂಡು ಹೋಗುತ್ತದೆ. ಓನ್ಲಿ ವಿಮಲ್ ಎನ್ನುವ ಹಾಗೆ ರವಿಚಂದ್ರನ್ ಫೈನಾಷಿಯರ್ ಆಗಿ ನಟನೆ, ಡೈಲಾಗ್ ಮೂಲಕ ತಮ್ಮ ಛಾಪನ್ನು ಉಳಿಸಿಕೊಳ್ಳುವಲ್ಲಿ ಸಪಲರಾಗಿದ್ಧಾರೆ. ಸುಸ್ತಿದಾರರ ವಾಹನಗಳನ್ನು ಸೀಜ್ ಮಾಡುವ ಪಾತ್ರದಲ್ಲಿ ಚಿರಂಜೀವಿಸರ್ಜಾ ನಟನೆಗಿಂತಲೂ, ಸಾಹಸ ದೃಶ್ಯಗಳಲ್ಲಿ ಮಿಂಚಿದ್ದಾರೆ. ಖಳನಾಯಕನಾಗಿ ಖದರ್ ತೋರಿಸಿರುವ ಪ್ರಕಾಶ್‍ರೈ ಅಭಿನಯ ವಿಶೇಷ ಎನ್ನುವ ಹಾಗಿಲ್ಲ. ಹಾಗೆ ಸುಮ್ಮನೆ ಎನ್ನುವಂತೆ ನಾಯಕಿ ಪಾರುಲ್‍ಯಾದವ್ ಹಾಡಿನಲ್ಲಿ ಚೆಂದ ಕಾಣಿಸುತ್ತಾರೆ ಅಷ್ಟೆ.. ಸಾಧುಕೋಕಿಲ ಹಾಸ್ಯವನ್ನು ತುರುಕಿದಂತಿದೆ. ಉಳಿದಂತೆ ಸುಚೇಂದ್ರಪ್ರಸಾದ್, ರಮೇಶ್‍ಭಟ್, ಶೋಭರಾಜ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಂದನ್‍ಶೆಟ್ಟಿ ಸಂಗೀತದಲ್ಲಿ ಮೊದಲ ಬಾರಿ ಹಾಡು ನೆನಪಿನಲ್ಲಿ ಉಳಿಯುತ್ತದೆ. ಮೊದಲ ಚಿತ್ರದಲ್ಲಿ ಜನರು ಇಷ್ಟಪಡುವ ಕತೆ ಬರೆದು ನಿರ್ದೇಶನ ಮಾಡಿರುವ ವಿನಯ್‍ಕೃಷ್ಣ ಅವರಿಗೆ ಭವಿಷ್ಯ ಚೆನ್ನಾಗಿದೆ. ತೆರೆ ಮೇಲೆ ಅದ್ಬುತವಾಗಿ ಕಾಣಿಸುವ ದೃಶ್ಯಗಳಿಗೆ ನೀರಿನಂತೆ ಖರ್ಚು ಮಾಡಿರುವ ತ್ರಿವಿಕ್ರಮ್‍ಸಪಲ್ಯ ಅವರನ್ನು ನಿಜಕ್ಕೂ ಮೆಚ್ಚಲೇಬೇಕಾಗಿದೆ.

ಸಿನಿ ಸರ್ಕಲ್.ಇನ್ ನ್ಯೂಸ್
14/04/18

ರವಿಚಂದ್ರನ್ ಡೈಲಾಗ್ ಕತ್ತರಿ
‘ಸೀಜರ್’ ಚಿತ್ರದ ಸನ್ನಿವೇಶದಲ್ಲಿ ಬರುವ ‘ಹಸು ಕತ್ತನ್ನು ಕತ್ತರಿಸುವುದು, ಹೆತ್ತ ತಾಯಿ ಕತ್ತನ್ನು ಕತ್ತರಿಸಿದಂತೆ’ ‘ ಎಂದು ರವಿಚಂದ್ರನ್ ಹೇಳುವ ಡೈಲಾಗ್ ವಿವಾದವಾಗಿತ್ತು. ಇದರ ಕುರಿತು ತೂರಿ ಪ್ರಶ್ನೆಗೆ ನಿರ್ದೇಶಕ ವಿನಯ್‍ಕೃಷ್ಣ ಮತ್ತು ನಿರ್ಮಾಪಕ ತ್ರಿವಿಕ್ರಮ್‍ಸಪಲ್ಯ ಡೈಲಾಗ್ ಯಾವುದೇ ಜಾತಿಯನ್ನು ನಿಂದಿಸುವಂತೆ ಇರುವುದಿಲ್ಲ,. ಪ್ರಕಾಶ್‍ರೈ ವಿರೋಧ ವ್ಯಕ್ತಪಡಿಸಿದ್ದು ತಿಳಿದುಬಂದಿದೆ. ಸಂಭಾಷಣೆಗೂ ಅವರಿಗೂ ಯಾವುದೇ ಸಂಬಂದವಿಲ್ಲ. ವಿನಾಕಾರಣ ಏತಕ್ಕೆ ಹೇಳಿದ್ದಾರೆಂದು ತಿಳಿದಿಲ್ಲ. ಆದಕಾರಣ ಸಂಭಾಷಣೆಯನ್ನು ಮ್ಯೂಟ್ ಮಾಡುವುದಿಲ್ಲವೆಂದು ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದರು. ಕೊನೆಗೋ ಬಾಲ್ ರವಿಚಂದ್ರನ್ ಅಂಗಳಕ್ಕೆ ಹೋಗಿದೆ. ಅವರು ಯಾರೊಂದಿಗೆ ಚರ್ಚಿಸಿದ್ದಾರೋ ತಿಳಿಯದು. ಅಂತಿಮವಾಗಿ ತಂಡಕ್ಕೆ ಸಂಭಾಷಣೆಯನ್ನು ಕಿತ್ತು ಹಾಕುವಂತೆ ಸೂಚಿಸಿದ್ದಾರೆ. ಅದಕ್ಕೆ ಮಣಿದ ನಿರ್ದೇಶಕರು ಡೈಲಾಗ್‍ನ್ನು ತೆಗೆದು ಹಾಕಿದ್ದಾರೆ. ಅಂತೂ ಪ್ರಕಾಶ್‍ರೈ ಹೇಳಿದಂತೆ ಆಗಿದೆ ಅಂತ ಸಿನಿಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ. ಚಿತ್ರವು ಶುಕ್ರವಾರರಂದು ರಾಜ್ಯದ್ಯಂತ ತೆರೆ ಕಾಣಲಿದೆ.

ಸಿನಿ ಸರ್ಕಲ್.ಇನ್ ನ್ಯೂಸ್
12/04/18

ಸೀಜರ್ ಬಿಡುಗಡೆಗೆ ವಿಘ್ನಗಳು
ಅದ್ದೂರಿ ಚಿತ್ರ ‘ಸೀಜರ್’ ಬಿಡುಗಡೆಗೆ ಸಿದ್ದವಾಗುತ್ತಿರುವ ಸಂದರ್ಭದಲ್ಲಿ ನಾನಾ ರೀತಿಯ ಅವಘಢಗಳು ಬರುತ್ತಲೆ ಇದೆ. ಹಸು ಕತ್ತು ಕತ್ತಿರುಸುವುದು, ಹೆತ್ತ ತಾಯಿ ಕತ್ತರಿಸಿದಂತೆ ಎಂದು ರವಿಚಂದ್ರನ್ ಹೇಳುವ ಡೈಲಾಗ್ ವೈರಲ್ ಆಗಿ ಚಿತ್ರಕ್ಕೆ ಪ್ಲಸ್ ಪಾಯಿಂಟು ಆಗಿದ್ದರೂ, ಮತ್ತೋಂದು ಕಡೆ ಒಂದು ಕೋಮಿನವರು ಇದನ್ನು ತೆಗೆದುಹಾಕಿ ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ವಿಲನ್ ಪಾತ್ರ ಮಾಡಿರುವ ಪ್ರಕಾಶ್‍ರೈ ಡೈಲಾಗ್ ಕುರಿತಂತೆ ವಿರೋಧ ವ್ಯಕ್ತಿಸಿದ್ದಾರೆ. ಇನ್ನು ನಾಯಕಿ ಪಾರುಲ್‍ಯಾದವ್ ಸಂಭಾವನೆ ಪೂರ್ಣ ಚುಕ್ತವಾಗಿಲ್ಲವೆಂದು ಪ್ರಚಾರಕ್ಕೆ ಬಂದಿಲ್ಲ. ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರಿಂದ ಕೇಳಿ ಬಂದ ಪ್ರಶ್ನೆಗಳಿಗೆ ನಿರ್ದೇಶಕ ವಿನಯ್‍ಕೃಷ್ಣ ಉತ್ತರಿಸಿದ್ದು ಈ ರೀತಿ ಇತ್ತು.

ಕೇವಲ ಒಂದು ಏಳೆ ದೃಶ್ಯ ನೋಡಿ ಸಂಭಾಷಣೆ ತೆಗೆದುಹಾಕಿ ಎನ್ನುವುದು ಸರಿ ಅನಿಸುವುದಿಲ್ಲ. ಪೂರ್ಣ ಸನ್ನಿವೇಶವನ್ನು ನೋಡಿದಾಗ ಮಾತ್ರ ಸರ್ ಏತಕ್ಕಾಗಿ ಹೇಳಿದ್ದಾರೆ ಅಂತ ತಿಳಿಯಲಿದೆ. ಇದನ್ನು ಹೇಳುವಾಗ ಪ್ರಕಾಶ್‍ರೈ ಇರುವುದಿಲ್ಲ. ಅವರು ಏಕಾಏಕಿ ಸಂಭಾಷಣೆ ವಿರುದ್ದ ಮಾತನಾಡಿದ್ದಾರೆಂದು ತಿಳಿಯದು. ಅವರು ಕೇವಲ ಸಿನಿಮಾದಲ್ಲಿ ವಿಲನ್ ಅಷ್ಟೇ. ಯಾವುದೇ ಜಾತಿಗೆ ಅವಮಾನ ಮಾಡುವ ದೃಷ್ಟಿ ನಮಗೆ ಇಲ್ಲ. ಸಾರ್ವಜನಿಕರು ಎರಡು ಕಡೆ ಇದ್ದಾರೆ. ಅಷ್ಟಕ್ಕೂ ಡೈಲಾಗ್ ವಿವಾದವಾಗುವಂತೆ ಇಲ್ಲ. ನಾವು ಜನವರಿಯಲ್ಲಿ ಯುಟ್ಯೂಬ್‍ನಲ್ಲಿ ಬಿಡಲಾಗಿದ್ದು, ಈಗ ಅದಕ್ಕೆ ಕೆಲವು ಕುಹಕಿಗಳು ಖ್ಯಾತೆ ತೆಗೆಯುತ್ತಿದ್ದಾರೆ.

ನಾಲ್ಕು ಭಾಷೆಗಳಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಹದಿನೈದು ಕೋಟಿ ಖರ್ಚು ಮಾಡಿರುವ ನಿರ್ಮಾಪಕರು ನಾಯಕಿ ಸಂಭಾವನೆ ಉಳಿಸಿಕೊಳ್ಳುವ ಪ್ರಶ್ನೆಯ ಬರುವುದಿಲ್ಲ. ಬಾಕಿ ಸಂಭಾವನೆಯನ್ನು ನೀಡಲು ಆಕೆ ತಂಗಿರುವ ಹೋಟೆಲ್‍ಗೆ ಹೋದಾಗ ತಿರಸ್ಕರಿಸಿದ್ದಾರೆ. ಇದರಿಂದ ಪ್ರಚಾರಕ್ಕೆ ಬಂದಿಲ್ಲವೆಂದು ತಿಳದುಬಂದಿದೆ. ಎಲ್ಲಾ ಕಡೆ ಓಡಾಡಬೇಕಾಗಿರುವುದರಿಂದ ವಾಣ ಜ್ಯ ಮಂಡಳಿಗೆ ದೂರು ನೀಡುವಷ್ಟು ಸಮಯ ನಮಗಿಲ್ಲ.

2014ರಲ್ಲಿ ನಾನೊಬ್ಬ ಸಾಮಾನ್ಯ ಮನುಷ್ಯನಾಗಿ ಗಿಟಾರ್‍ನೊಂದಿಗೆ ರಾಗಗಳನ್ನು ಹೊಸೆಯುತ್ತಿದ್ದು, ಅವಕಾಶಕ್ಕಾಗಿ ಅಲೆದಾಡುತ್ತಿದ್ದೆ. ಅಂತಹ ಸಂದರ್ಭದಲ್ಲಿ ನಿರ್ದೇಶಕರು ಕರೆದು ಕೆಲಸ ಕೊಟ್ಟರು. ಮೊದಲ ಚಿತ್ರದಲ್ಲೆ ದೊಡ್ಡ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಎನ್ನುತ್ತಾರೆ ಸಂಗೀತ ನಿರ್ದೇಶಕ ಚಂದನ್‍ಶೆಟ್ಟಿ.

ಪರಿ ನಂತರ ಒಳ್ಳೆ ಸಿನಿಮಾ ಮಾಢಬೇಕೆಂಬ ಬಯಕೆ ಇತ್ತು. ಕಾರ್ ಮಾಫಿಯಾ ಕುರಿತಂತೆ ನಿರ್ದೇಶಕರು ಹೇಳಿದ ಒಂದು ಲೈನ್ ಇಷ್ಟವಾಗಿ ನಿರ್ಮಾಣ ಮಾಡಲಾಗಿದೆ. ಮೊದಲಬಾರಿ ಪ್ಯಾಂಟಮ್ ಕ್ಯಾಮರ ಬಳಸಿಕೊಂಡು ಫೈಟ್, ಡ್ಯಾನ್ಸ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂದರು ತ್ರಿವಿಕ್ರಂಸಾಪಲ್ಯ.

ದೃಶ್ಯಗಳು ಚೆನ್ನಾಗಿ ಬರಲೆಂದು ನಿರ್ಮಾಪಕರು ಎಲ್ಲೂ ರಾಜಿಯಾಗದೆ ಹಣವನ್ನು ಹೇರಳವಾಗಿ ಖರ್ಚು ಮಾಡಿದ್ದಾರೆ. ರವಿಚಂದ್ರನ್, ಪ್ರಕಾಶ್‍ರೈ ಅವರ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ. ಸೇಡಿನ ಕತೆಯಾಗಿದ್ದು, ರವಿ ಸರ್ ಹೇಗೆ ಸಹಾಯ ಮಾಡುತ್ತಾರೆ. ಪ್ರಕಾಶ್‍ರೈ ಹೇಗೆ ಲಿಂಕ್ ಆಗ್ತಾರೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದೆ ಅಂತಾರೆ ನಾಯಕ ಚಿರಂಜೀವಿಸರ್ಜಾ.

ಜನರನ್ನು ಸೀಜ್ ಮಾಡಲು ಇದೇ ಶುಕ್ರವಾರಂದು ರಾಜ್ಯದ್ಯಂತ ಬಿಡುಗಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗೆ ತರಲು ತಂಡವು ಯೋಜನೆ ಹಾಕಿಕೊಂಡಿದೆ.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/04/18
ಏಪ್ರಿಲ್ 13ರಂದು ಸೀಜರ್
ಮೂರು ವರುಷದ ನಿರಂತರ ಶ್ರಮದಿಂದ ‘ಸೀಜರ್’ ಚಿತ್ರವು ಜನರಿಗೆ ತೋರಿಸಲು ಸಜ್ಜಾಗಿದೆ. ಚೂಚ್ಚಲಬಾರಿ ರವಿಚಂದ್ರನ್-ಚಿರಂಜೀವಿಸರ್ಜಾ ಅಭಿನಯಿಸಿರುವುದು ವಿಶೇಷವಾಗಿದೆ. ಕಾರಿನ ಕತೆಯಾಗಿದ್ದು, ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ತೆಗೆದುಕೊಳ್ಳಲಾಗಿದೆ. ದಿನಕ್ಕೆ ಸುಸ್ತಿದಾರರ 500 ವಾಹನಗಳು ಸೀಜ್ ಆಗುತ್ತದೆ. ಸೀಜ್ ಮಾಡಿದಾಗ ಏನೇನು ಅವಾಂತರಗಳು ನಡೆಯುತ್ತವೆ ಎಂಬುದನ್ನು ಹೇಳಲಾಗಿದೆ. ಬೆಂಗಳೂರು ಮತ್ತು ಕ್ಲೈಮಾಕ್ಸ್‍ನ್ನು ಶಬರಿಮಲೈದಲ್ಲ ಚಿತ್ರೀಕರಿಸಲಾಗಿದೆ. ಚಂದನ್‍ಶೆಟ್ಟಿ ನಾಲ್ಕು ಗೀತೆಗಳಿಗೆ ಸಂಗೀತ ನೀಡುವುದರ ಜೊತೆಗೆ ಗೀತೆಗಳಿಗೆ ಧ್ವನಿಯಾಗಿದ್ದೇನೆ. ಫೈನಾಷಿಯರ್ ಆಗಿ ರವಿಚಂದ್ರನ್, ಖಳನಟನಾಗಿ ಪ್ರಕಾಶ್‍ರೈ ನಟನೆ ಇದೆ. ಚಿರಂಜೀವಿಸರ್ಜಾಗೆ ಜೋಡಿ ಪಾರುಲ್‍ಯಾದವ್ ಅಭಿನಯಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತಡವಾದ ಕಾರಣ ಬಿಡುಗಡೆ ಮಾಡುವುದು ವಿಳಂಬವಾಗಿದೆ.

ಕತೆಯು ಎಲ್ಲಾ ಭಾಷೆಗೂ ಅನ್ವಯಿಸಲಿರುವುದರಿಂದ ಕನ್ನಡ, ತಮಿಳು, ತಲುಗು, ಮಳೆಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ. . ರಚನೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಪ್ರತಿಭೆ ವಿನಯ್‍ಕೃಷ್ಣ. ಛಾಯಗ್ರಹಣ ಅಂಜಿ-ರಾಜೇಶ್‍ಕಾಟ, ಸಂಕಲನ ಶ್ರೀಕಾಂತ್, ಸಾಹಸ ಗಣೇಶ್-ಜಾಲಿಬಾಸ್ಟಿನ್, ನೃತ್ಯ ಗಣೇಶ್-ಭಾನು-ತ್ರಿಭುವನ್ ನಿರ್ವಹಿಸಿದ್ದಾರೆ. ಎರಡನೆ ಬಾರಿ ನಿರ್ಮಾಪಕರಾಗಿರುವ ಕೈಗಾರಿಕೋದ್ಯಮಿ ತ್ರಿವಿಕ್ರಮ್‍ಸಪಲ್ಯ ಅವರು ಚಂದನ್ ಫಿಲ್ಮ್ಸ ಮುಖಾಂತರ 220 ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
04/04/18


ತಂತ್ರಜ್ಘರ ಮಾತುಕತೆಗಳು
ಚಿತ್ರದ ಪತ್ರಿಕಾಗೋಷ್ಟಿ ಎಂದರೆ ನಾಯಕ, ನಾಯಕಿ, ಸಹಕಲಾವಿದರು, ತಂತ್ರಜ್ಘರು ಇರುವುದು ವಾಡಿಕೆಯಾಗಿದೆ. ಇದೇ ಮೊದಲ ಬಾರಿ ಎನ್ನುವಂತೆ ತೆರೆ ಹಿಂದೆ ಕೆಲಸ ಮಾಡಿದವರನ್ನು ಪರಿಚಯಿಸುವ ಸಲುವಾಗಿ ‘ಸೀಜರ್’ ಸಿನಿಮಾ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಹಿರಿಯ ಪ್ರಚಾರಕರ್ತ ನಾಗೇಂದ್ರ ಇಂದು ತಂತ್ರಜ್ಘರ ದಿನವೆನ್ನಬಹುದೆಂದು ಎಲ್ಲರನ್ನು ವೇದಿಕೆಗೆ ಆಹ್ವಾನಿಸಿದರು. ಮೊದಲ ಸರದಿ ಚಂದನ್‍ಶೆಟ್ಟಿ ಅವರದಾಗಿತ್ತು. ಬಿಗ್ ಬಾಸ್ ನಂತರ ತಮ್ಮನ್ನು ಭೇಟಿ ಮಾಡುತ್ತಿರುವುದು ಖುಷಿ ತಂದಿದೆ. ನಾಲ್ಕು ವರ್ಷದ ಕೆಳೆಗೆ ಏನು ಇಲ್ಲದ ಸಂದರ್ಭದಲ್ಲಿ ಸಂಗೀತ ಒದಗಿಸಲು ನಿರ್ದೇಶಕರು ಅವಕಾಶ ಮಾಡಿಕೊಟ್ಟರು. ಮೂರು ಹಾಡುಗಳಿಗೆ ಸಾಹಿತ್ಯ ಬರೆಯಲಾಗಿದೆ. ಒಂದನ್ನು ಚೇತನ್‍ಕುಮಾರ್ ಬರೆದಿದ್ದಾರೆ. ಎಲ್ಲಾ ಗೀತೆಗಳಿಗೆ ಧ್ವನಿಯಾಗಿದ್ದೇನೆ. ಅಂದು ಟ್ಯೂನ್ ಮಾಡಲಾಗಿದ್ದು ಇಂದಿನ ಟ್ರೆಂಡ್‍ಗೆ ಸೂಟ್ ಆಗುವ ಹಾಗೆ ಸಂಯೋಜನೆ ಮಾಡಲಾಗಿದೆ. ರ್ಯಾಪ್‍ಗೆ ಸೀಮಿತವಾಗಿದ್ದ ನಾನು ಮೆಲೋಡಿ ಹಾಡು ನೀಡಬಲ್ಲೆ ಎಂಬುದನ್ನು ಇದರಲ್ಲಿ ಸಾಬೀತು ಪಡಿಸಿದ್ದೇನೆ. ಮಾಸ್ ಸಿನಿಮಾ, ರವಿಸರ್, ಚಿರಂಜೀವಿಸರ್ಜಾ ಇರುವುದರಿಂದ ಹಿನ್ನಲೆ ಸಂಗೀತಕ್ಕೆ ಹೆಚ್ಚು ಸ್ಕೋಪ್ ನೀಡಿಲಾಗಿದೆ ಎಂದರು.

ಚಿತ್ರಕ್ಕೆ ಪ್ರಾರಂಭದಲ್ಲಿ ಚಂದನ್‍ಶೆಟ್ಟಿ ಅವರನ್ನು ಆಯ್ಕೆ ಮಾಡಿದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಧೈರ್ಯ ಮಾಡಿ ಅವರಿಂದಲೇ ಕೆಲಸ ಮಾಡಿದ್ದಕ್ಕೆ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಹಣಕಾಸು . ಇವರು ಭವಿಷ್ಯದ ಎ.ಆರ್.ರೆಹಮಾನ್ ಆಗುವ ಸಾದ್ಯತೆಗಳು ಇವೆ. ವ್ಯವಹಾರ, ಕಾರು ಕುರಿತ ಕತೆಯಾಗಿದೆ. ನಿರ್ಮಾಪಕರುಗಳಿಗೆ ಚಿತ್ರ ತೋರಿಸಿದಾಗ ಕೆತೆಯು ಎಲ್ಲಾ ಭಾಗಕ್ಕೂ ಅನ್ವಯವಾಗುವುದರಿಂದ ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲು ಸಲಹೆ ನೀಡಿದ್ದಾರೆ. ಅದರಂತೆ ಕನ್ನಡದಲ್ಲಿ ಬಿಡುಗಡೆಯಾದ ನಂತರದ ದಿನಗಳಲ್ಲಿ ಅಲ್ಲಿನ ಜನರಿಗೆ ತೋರಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆ ಎಂದು ನಿರ್ದೇಶಕ ವಿನಯ್‍ಕೃಷ್ಣ ಹೇಳಿದರು. ಕೈಗಾರಿಕೋದ್ಯಮಿಯಾದ ನನಗೆ ಸಿನಿಮಾ ಮಾಡುವ ಬಯಕೆ ಇತ್ತು. ಈ ಹಿಂದೆ ಪರಿ ನಿರ್ಮಾಣ ಮಾಡಲಾಗಿ, ಒಳ್ಳೆ ಚಿತ್ರ ಕೊಡಬೇಕನ್ನುವ ಧ್ಯೇಯದಿಂದ ಕಾರು ಕತೆ ಚೆನ್ನಾಗಿರುವ ಕಾರಣ ಇದಕ್ಕೆ ಹಣ ಹೂಡಿದ್ದೇನೆ ಎನ್ನುತ್ತಾರೆ ನಿರ್ಮಾಪಕ ತ್ರಿವಿಕ್ರಂಸಾಪಲ್ಯ. ಪ್ರಾರಂಭದಲ್ಲಿ ಚಿಕ್ಕ ಚಿತ್ರವೆಂದು ಕೊಂಡಿದ್ದ ನಮಗೆ ಕಾಲ ಕಳೆದಂತೆ ಎಲ್ಲವು ದೊಡ್ಡದಾಗುತ್ತಾ ಹೋಗಿದೆ. ಇದರಲ್ಲಿ ನನ್ನದು ಅಳಿಲು ಸೇವೆ ಅಂತ ಬಣ ್ಣಸಿಕೊಂಡರು ಸಂಭಾಷಣೆಗಾರ ಶ್ರೀಕಾಂತ್. ಸಂಕಲನಕಾರ ಶ್ರೀಕಾಂತ್, ಛಾಯಗ್ರಾಹಕ ರಾಜೇಶ್‍ಕಟ್ಟ ಉಪಸ್ತಿತರಿದ್ದು ಚುಟುಕು ಮಾತನಾಡಿದರು. ಮಾರ್ಚ್ 29ರಂದು ಸೀಜರ್ ತೆರೆಗೆ ಬರಲಿದೆ.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ಸಂದರ್ಶನ
3/03/18


ಸೀಜ್ ಆದ ಹಾಡುಗಳು
ಭಾನುವಾರ ಅಶೋಕ ಹೋಟೆಲ್ ರಸ್ತೆಯಲ್ಲಿ ಚಿತ್ರಸಂತೆ ಇರುವ ಕಾರಣ ಭಯಂಕರ ಜನರು ಜಮಾಯಿಸಿದ್ದರು. ಮಾದ್ಯಮದವರು ಅವೆಲ್ಲಾವನ್ನು ಭೇದಿಸಿಕೊಂಡು ‘ಸೀಜರ್’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮಕ್ಕೆ ಹೋಟೆಲ್ ಸೇರುವುದು ತ್ರಾಸವಾಯಿತು. ನಂತರ ತಂಡವು ಮಾತಿಗೆ ಕುಳಿತುಕೊಂಡಿತು. ಮೊದಲ ಬಾರಿ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ವಿನಯ್‍ಕೃಷ್ಣ ಮಾತನಾಡಿ ಇದೊಂದು ಸ್ವಮೇಕ್ ಚಿತ್ರವಾಗಿದೆ. ಅದ್ಬುತ ತಂತ್ರಜ್ಘರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಮರ್ಷಿಯಲ್, ಆಕ್ಷನ್, ಫ್ಯಾಮಲಿ ಕುರಿತ ಕತೆಯಾಗಿದೆ. ರವಿಚಂದ್ರನ್, ಚಿರಂಜೀವಿಸರ್ಜಾ, ಪಾರುಲ್‍ಯಾದವ್, ಪ್ರಕಾಶ್‍ರೈ ನಗಿಸಲು ಸಾಧುಕೋಕಿಲ ಇದ್ದಾರೆಂದು ಹೇಳಿದರು. ಎಲ್ಲಾ ಓಕೆ ಸಿನಿಮಾ ಬಗ್ಗೆ ಹೇಳಿ ಎಂಬ ಪ್ರಶ್ನೆ ಪತ್ರಕರ್ತರಿಂದ ಕೇಳಿಬಂತು. ಎಂದಿನಂತೆ ನಗುತ್ತಾ ಮೇಲಿನದನ್ನು ಹೇಳುವಾಗ, ಸುಮ್ಮನಾಗದೆ ಒಂದು ಏಳೆ ತಿರುಳನ್ನಾದರೂ ತಿಳಿಸಿ ಎನ್ನಲಾಯಿತು. ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ತೆಗೆದುಕೊಳ್ಳಲಾಗಿದೆ. ದಿನಕ್ಕೆ ಸುಸ್ತಿದಾರರ 500 ವಾಹನಗಳು ಸೀಜ್ ಆಗುತ್ತದೆ . ಸೀಜ್ ಮಾಡಿದಾಗ ಏನೇನು ಅವಾಂತರಗಳು ನಡೆಯುತ್ತವೆ ಎಂಬುದನ್ನು ಹೇಳಲಾಗಿದೆ. ಫೈನಾನಿಷಿಯರ್ ಪಾತ್ರದಲ್ಲಿ ರವಿಚಂದ್ರನ್, ಖಳನಟನಾಗಿ ಪ್ರಕಾಶ್‍ರೈ, ನಟಿಸಿದ್ದಾರೆ. ಬೆಂಗಳೂರು ಮತ್ತು ಕ್ಲೈಮಾಕ್ಸ್‍ನ್ನು ಶಬರಿಮಲೈದಲ್ಲ ಚಿತ್ರೀಕರಿಸಲಾಗಿದೆ. ಪೋಸ್ಟ್ ಪ್ರೊಡಕ್ಷನ್‍ಗೆ ಅಂತಲೇ 18 ತಿಂಗಳು ಸಮಯ ತೆಗೆದುಕೊಂಡಿದೆ ಅಂತ ಮತ್ತೆ ನಗು ಚೆಲ್ಲಿದರು.

ನಾಯಕ ಚಿರಂಜೀವಿಸರ್ಜಾ ಹೇಳುವಂತೆ ಇದೊಂದು ಸೇಡಿನ ಕಥನ ಎನ್ನಬಹುದು. ರವಿ ಸರ್ ಸಹಾಯಕನಾಗಿ ಅಭಿನಯಿಸಿದ್ದು ಖುಷಿ ತಂದಿದೆ. ಸೆಟ್‍ನಲ್ಲಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಸೀಜ್ ಮಾಡುವ ವಾಹನಗಳ ಹಿಂದೆ ಕುಟುಂಬದ ಘಟನೆಯೊಂದು ಇರುತ್ತದೆ. ದೃಶ್ಯಗಳು ಚೆನ್ನಾಗಿ ಬರಲೆಂದು ನಿರ್ಮಾಪಕರು ಎಲ್ಲೂ ರಾಜಿಯಾಗಿಲ್ಲ ಎಂದರು. ತೆಲುಗು ಚಿತ್ರ ಮರ್ಯಾದೆ ರಾಮಣ್ಣದ ವಿಲನ್ ನಾಗಿನೀಡು ಪ್ರಕಾಶ್‍ರೈ ತಂಡದಲ್ಲಿ ಇರುತ್ತೇನೆ. ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಅಂತ ಕನ್ನಡದಲ್ಲಿ ಮಾತನಾಡಿದ್ದು ಆಶ್ಚರ್ಯ ತಂದುಕೊಟ್ಟಿತ್ತು. ಕೈಗಾರಿಕೋದ್ಯಮಿ ತ್ರಿವಿಕ್ರಮ್‍ಸಾಪಲ್ಯ ನಿರ್ಮಾಪಕರಾಗಿ ಎರಡನೆ ಪ್ರಯತ್ನ. ನಿರ್ದೇಶಕರು ಕತೆ ಹೇಳಿದ ರೀತಿ ಇಷ್ಟವಾಗಿದ ಕಾರಣ ಹಣ ಹೂಡಿದ್ದೇನೆ ಎಂದರು.
ಮುಂದೆ ಅದ್ದೂರಿ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಹಾಡುಗಳು ಅನಾವರಣಗೊಂಡವು. ಸದ್ಯ ಬಿಗ್‍ಬಾಸ್ ಮನೆಯಲ್ಲಿ ಅತಿಥಿಯಾಗಿರುವ ಚಂದನ್‍ಶೆಟ್ಟಿ ಪ್ರಥಮಬಾರಿ ಸಂಗೀತ ಸಂಯೋಜಿಸಿರುವ ಕಾರಣ ತಂಡದವರು ಅವರ ಕೆಲಸವನ್ನು ಶ್ಲಾಘನೆ ಮಾಡಿದರು. ಚಂದನ್‍ಶೆಟ್ಟಿ ಪೋಷಕರು, ವಿಜಯ್‍ಚೆಂಡೂರು, ಡ್ಯಾನಿಕುಟ್ಟಪ್ಪ, ಸಂಭಾಷಣೆ ಶ್ರೀಕಾಂತ್, ಛಾಯಗ್ರಾಹಕ ರಾಜೇಶ್‍ಕಟ ಹಾಜರಿದ್ದರು. ರವಿಚಂದ್ರನ್, ನಾಯಕಿ ಪಾರುಲ್‍ಯಾದವ್ ಅನುಪಸ್ಥಿತಿಗೆ ಕಾರಣ ತಿಳಿಯಲಿಲ್ಲ.
-8/01/18
IT WAS REAL SEIZER
W
hat best you can expect from a producer and director Vinaya Krishna when he is car financer and wall design businessman. A seizer of car and its aftermath is the turn of events in the film. ‘Seizer’ is the title and the producer and director Vinay Krishna made arrangements for such ‘Seizer’ of a car live to the eyes of general public and media at Vijay Playground in Hanumanthnagar, Bangalore.

So you got the point. The hero is on a ‘Seizer’ for those who have not committed to the dotted lines. What happens when the hero goes on seizing cars, the revenge saga, rowdy activities are captured in Bangalore, Kadari, Shabari Malai and other surroundings.

Chiranjeevi Sarja is in the lead role with ‘Pyar Ge Agbutaithe….girl Parul Yadav. Parul is daughter of don in the traditional costumes in this film. Chandan Shetty is scoring music for four songs. Actions are different in Thriller Manju compositions.

Avinash, Rasivhanker, Telugu actor Naginiduvallanki are in the cast. 
-9/11/14

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore