HOME
CINEMA NEWS
GALLERY
TV NEWS
REVIEWS
CONTACT US
ಟಾಲಿವುಡ್‍ಗೆ ಶಶಿಕುಮಾರ್ ಸುಪುತ್ರ್ರ
90ರ ದಶಕದಲ್ಲಿ ಸ್ಟಾರ್‍ಆಗಿದ್ದ ಶಶಿಕುಮಾರ್, ನಂತರ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಲು ಶುರು ಮಾಡಿದರು.ಇವರ ಸುಪುತ್ರ ಆದಿತ್ಯಶಶಿಕುಮಾರ್ ‘ಮೊಡವೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಮಹೂರ್ತ ಸಮಾರಂಭಕ್ಕೆ ಶಿವರಾಜ್‍ಕುಮಾರ್, ದರ್ಶನ್ ಆಗಮಿಸಿ ಶುಭ ಹಾರೈಸಿದ್ದರು. ಆದರೆ ನಿರ್ಮಾಪಕರ ವೈಯಕ್ತಿಕ ಸಮಸ್ಯೆಯಿಂದಸಿನಿಮಾವುಸದ್ಯಕ್ಕೆ ನಿಂತಿದೆ.ಈಗ ಇವರುಟಾಲಿವುಡ್‍ಗೆಎಂಟ್ರಿಕೊಟ್ಟಿದ್ದುಅಲ್ಲದೆ, ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ.ಆ ಸಿನಿಮಾವೇ ‘ಸೀತಾಯಣಂ’. ಹೊಸ ರೀತಿಯ ಪ್ರೇಮಕತೆಗೆ ಪ್ರಭಾಕರ್‍ಆರಿಪ್ಕಾರಚನೆ, ನಿರ್ದೇಶನದ ಪಾರುಪಥ್ಯ ವಹಿಸಿಕೊಂಡಿದ್ದಾರೆ. ಲಲಿತಾರಾಜಲಕ್ಷೀ ನಿರ್ಮಾಪಕಿ.ಶೀರ್ಷಿಕೆ ನೋಡಿದರೆಇದುರಾಮಾಯಣಕ್ಕೂ ಸೀತಾಯಣಂಗೂ ಸಂಬಂಧಇದೆಯಾಎನ್ನುವುದರ ಬಗ್ಗೆ ಗುಮಾನಿ ಬರುತ್ತದೆ.ರೋಮ್ಯಾಂಟಿಕ್ ಕಂ ಕ್ರೈಂ ಸ್ಟೋರಿ ಏಳೆಯನ್ನು ಹೊಂದಿದೆ.

ಮುಂಬೈ ನೀರೆಅನಹಿತಭೂಷಣ್ ನಾಯಕಿ.ಪದ್ಮನಾಭ್‍ಭಾರದ್ವಾಜ್ ಸಂಗೀತ ಸಂಯೋಜಿಸಿದ್ದು, ಪುನೀತ್‍ರಾಜ್‍ಕುಮಾರ್‍ಒಂದು ಹಾಡಿಗೆಧ್ವನಿಯಾಗಿದ್ದಾರೆ.ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಕ್, ಹೈದರಾಬಾದ್, ಬ್ಯಾಂಕಾಕ್ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.ರೋಹನ್‍ಭಾರದ್ವಾಜ್‍ಅರ್ಪಿಸುತ್ತಿದ್ದು, ಕಲರ್‍ಕ್ಲಾಡ್ಸ್‍ಎಂಟರ್‍ಟೈನ್‍ಮೆಂಟ್ಸ್‍ಅಂಡ್ ವೈಸಾಕಿ ಮೀಡಿಯಾ ಮೂಲಕ ಸಿದ್ದಗೊಂಡಿರುವ ಚಿತ್ರವುಕನ್ನqದಲ್ಲೂಅದೇ ಹೆಸರಿನಲ್ಲಿಡಬ್ ಆಗಿ ಮೇ ತಿಂಗಳಲ್ಲಿ ತೆರೆಕಾಣಲಿದ್ದು, ನಂತರತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
20/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore