HOME
CINEMA NEWS
GALLERY
TV NEWS
REVIEWS
CONTACT US

ಪರದೆ ಮೇಲೆ ಚಂದನ್‍ಶೆಟ್ಟಿ ಹಾಡು
ಚಂದನ್ ಶೆಟ್ಟಿ ಸಾಹಿತ್ಯ,ನಟನೆ, ಸಂಗೀತ ಸಂಯೋಜಿಸಿದ 3 ಪೆಗ್ ಹಾಡು ಯುಟ್ಯೂಬ್‍ನಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದನ್ನು ಕ್ಯಾಚ್ ಮಾಡಿಕೊಂಡ ‘ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರದ ನಿರ್ಮಾಪಕರಾದ ಅಶ್ವಿನಿರಾಮಪ್ರಸಾದ್ ದಗಲಬಾಜಿ ಗೀತೆಗೆ ಇವರನ್ನು ಬಳಸಿಕೊಂಡಿದ್ದಾರೆ.. ಡಾ.ನಾಗೇಂದ್ರಪ್ರಸಾದ್ ಹೇಳುವಂತೆ ಸರ್ಕಾರದ ವ್ಯವಸ್ಥೆ, ಅಧಿಕಾರ, ವಿಡಂಭನೆಯ ಮೂಲಕ ಹಾಡಿನ ಸಿನಿಮಾದ ಸಾರಾಂಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ವಿಧಾನಸೌಧಕ್ಕೆ ಗತಕಾಲದಲ್ಲೆ ಶೀರ್ಷಿಕೆಯ ಅಡಿಬರಹವನ್ನು ಇಡಲಾಗಿದೆ. ನಿರ್ಮಾಪಕರಿಗೆ 30 ವರ್ಷದ ಅನುಭವ ಇರುವ ಕಾರಣ ಜನರ ಮಿಡಿತ ತಿಳಿದು ಅದರಂತೆ 5 ಹಾಡುಗಳನ್ನು ಮಾಡಿಸಿದ್ದಾರೆ. 1990ರಲ್ಲಿ ಹಿಟ್ ಆಗಿದ್ದ ‘ಬೊಳ್ಳೆಳ್ಳವ್ವ ಬೊಳ್ಳೊಳ್ಳಿ’ ಹಾಡಿನ ಸಾಹಿತ್ಯವನ್ನು ಉಳಿಸಿಕೊಂಡು ವಿಜಯಪ್ರಕಾಶ್ ಗಾಯನದಲ್ಲಿ ಮೂಡಿಬಂದಿರುವುದು ಪ್ಲಸ್‍ಪಾಯಿಂಟ್ ಆಗಿದೆ ಎಂದರು. ಮೊದಲಬಾರಿ ಹಿರಿತೆರೆಯಲ್ಲಿ ಕಾಣ ಸಿಕೊಂಡಿದ್ದರಿಂದ ಖುಷಿಯಾಗಿರುವ ಚಂದನ್‍ಶೆಟ್ಟಿ ಸಾಮಾಜಿಕ ಕಳಕಳಿ ಹಾಡು ಇರುವುದರಿಂದ ಮಾಡ್ರನ್‍ಸ್ವಾಮೀಜಿ ಉಡುಪಿನೊಂದಿಗೆ ರಾಕ್ ಮಾದರಿಯಲ್ಲಿ ಹೆಜ್ಜೆ ಹಾಕಿದ್ದೇನೆ ಅಂತಾರೆ.

ಬಿಜಾಪುರದಲ್ಲಿ 15000 ಜನರ ಎದುರು ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಲಾಗಿತ್ತು. ಇಂದು ವಿಶೇಷವಾಗಿ ಮಾದ್ಯಮದವರಿಗೋಸ್ಕರ ಹಾಡುಗಳ ಸಿಡಿಯನ್ನು ಬಿಡುಗಡೆ ಮಾಡಲಾಗಿದೆ. ಸೆಟ್ ಹಾಕದೆ ನೈಜ ಸ್ಥಳಗಳಾದ ತಹಸ್ದೀಲರ್ ಕಚೇರಿ, ಗೋಕಾಕ್, ಜಮಖಂಡಿ, ಬೆಳಗಾಂ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ಗೆದ್ದರೆ ಚಿತ್ರ ಹಿಟ್ ಆದಂತೆ ಎಂದು ನಂಬಿದವನು. ಆಧಾರದೊಂದಿಗೆ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಒಟ್ಟಾರೆ 2.5 ಕೋಟಿ ವೆಚ್ಚವಾಗಿದ್ದು, ಕಲಾವಿದರ ಸಂಭಾವನೆ 1 ಕೋಟಿ, ದಗಲ್‍ಬಾಜಿ ಹಾಡಿಗೆ 20 ಲಕ್ಷ ಖರ್ಚು ಮಾಡಲಾಗಿದೆ. ಸದ್ಯ ಸೆನ್ಸಾರ್ ಅಂಗಳದಲ್ಲಿ ಇರಲಿದ್ದು, ಬಿಡುಗಡೆ ದಿನಾಂಕ ನಿಗದಿಯಾದಲ್ಲಿ ಮತ್ತೋಮ್ಮೆ ಕಲಾವಿದರೊಂದಿಗೆ ಭೇಟಿ ಮಾಡುವುದಾಗಿ ಭರವಸೆ ನೀಡಿದರು ಅಶ್ವನಿರಾಮಪ್ರಸಾದ್. ಇದನ್ನು ಪಬ್ಲಿಕ್ ಸಿನಿಮಾ ಎನ್ನಬಹುದು. ವೀಕ್ಷಕರ ಯೋಚನೆಗೆ, ಅವರ ಭಕುತಿಗೆ ಯಾವ ರೀತಿಯಲ್ಲಿ ಬೇಕಾದರೂ ತಿಳದುಕೊಳ್ಳಬಹುದು ಎನ್ನುತ್ತಾರೆ ನಿರ್ದೇಶಕ ಆರ್.ರವೀಂದ್ರ. ಉಳದ ನಾಲ್ಕು ಹಾಡುಗಳಿಗೆ ಅರ್ಜುನ್‍ಜನ್ಯಾ ಕೆಲಸ ಮಾಡಿದ್ದಾರೆ.
-17/05/17


SARKAARI KELASA DEVARA KELASA’ TEASERS LAUNCHED
P
roducer Ashwini Ramprasad who went into oblivion after the failure of Ee Preethi Yeke Bhoomimele Ide is now preparing himself for a comeback with the film Sarkari Kelasa Devara Kelasa. The film is directed by H P Ravindra. Sa Ra Govindu opened the video songs teaser and the team also released an audio teaser of the film’s songs of the film. Arjun Janya will be composing four songs and bits of the song were shown to the audiences. The film’s poster was also unveiled by M N Kumar.

Ashwini Ramprasad said it is a comeback film for him where the story is the hero. But, he did not disclose other details about the film. Director Guruprasad has penned the screenplay and dialogues for the film.

Arjun Janya said Ramprasad’s homework and knowledge of music helped him get things right for the film. However, he said he will talk about the songs in the movie later.

L N Sastry is scoring the background music. He said Ravishankar Gowda had acted well and added that the climax is engaging and absorbing.

Director Ravindra said the producer provided him all that was required for the film. He said the film will cater to all sections of society. The film stars Rangayana Raghu, Samyukta Hornad, Ashish Vidyarthi and Raju Talikote among others. 
-5/05/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore