HOME
CINEMA NEWS
GALLERY
TV NEWS
REVIEWS
CONTACT US
ಥ್ರಿಲ್ಲರ್ ಕಥೆಯಲ್ಲಿ ಹೊಸ ಟ್ವಿಸ್ಟ್
ಮೆಡಿಕಲ್ ಕಾಲೇಜೊಂದರಲ್ಲಿ ನಡೆಯುವ ಕಣ್ಮರೆ ಪ್ರಕರಣಗಳಿಗೆ ಕಾರಣವೇನು, ನ.27ರಂದೇ ಅಂಥಾ ಪ್ರಕರಣಗಳು ನಡೆಯುವುದಕ್ಕೆ ಕಾರಣಗಳೇನು, ಇದರ ಹಿಂದಿರುವ ರೂವಾರಿ ಯಾರು, ಆತನ ಉz್ದÉೀಶವೇನು ಎಂದು ಹೇಳುವುದೇ ಸಂಯುಕ್ತ-2 ಚಿತ್ರದ ಕಥಾಹಂದರ ಈ ಚಿತ್ರದಲ್ಲಿ ಪ್ರೇಕ್ಷಕರನ್ನು ಹೆದರಿಸಲು ಏನು ಮಾಡಬೇಕೋ ಅದನ್ನೆಲ್ಲ ನಿರ್ದೇಶಕ ಅಭಿರಾಮ್ ಅವರು ಮಾಡಿದ್ದಾರೆ.
ತೇಜಸ್ ಹಾಗೂ ಆತನ 4 ಜನ ಗೆಳೆಯರು ಸಂಯುಕ್ತ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ವಾಣ ಹಾಗೂ 3 ಜನ ಗೆಳತಿಯರು ಕೂಡ ಅದೇ ಕಾಲೇಜಿನಲ್ಲಿ ಮೆಡಿಕಲ್ ಓದುತ್ತಿರುತ್ತಾರೆ. ತಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ಕಣ್ಮರೆ ಪ್ರಕರಣಗಳ ಹಿಂದೆ ಬಿದ್ದ ಈ ಹುಡುಗರಿಗೆ ಅದರ ಹಿಂದಿರುವ ಮತ್ತೊಂದು ಸತ್ಯ ಗೋಚರಿಸುತ್ತದೆ. ನವೆಂಬರ್ 27ರಂದು ವಾಣ ಎಂಬ ವಿದ್ಯಾರ್ಥಿನಿಯ ಹುಟ್ಟುಹಬ್ಬದ ದಿನವೇ ಆಕೆ ಕಾಣೆಯಾಗುತ್ತಾಳೆ. ಆಕೆಯಿಂದ ಆರಂಭವಾದ ಕಣ್ಮರೆ ಪ್ರಕರಣವನ್ನು ಬೇಧಿಸಲು ಪೆÇೀಲೀಸ್ ಅಧಿಕಾರಿಯೊಬ್ಬ ಈ ವಿದ್ಯಾರ್ಥಿಗಳ ಜೊತೆಗೇ ಸ್ಟೂಡೆಂಟ್ ಆಗಿ ಬಂದು ಸೇರಿಕೊಳ್ಳುತ್ತಾನೆ. ಆರಂಭದಲ್ಲಿ ಕಾಲೇಜಿನ ಉಪನ್ಯಾಸಕರೊಬ್ಬರ ಮೇಲೆ ಅನುಮಾನ ಮೂಡುತ್ತದೆ, ಯಾರು ಆ ಕೆಲಸಗಳನ್ನೆಲ್ಲಾ ಮಾಡುತ್ತಿರುವವರು ಎಂದು ಕೆದಕುತ್ತಾ ಹೋದಂತೆ ಅಲ್ಲಿ ಒಬ್ಬ ದೇಶಪ್ರೇಮಿ ಕಾಣ ಸುತ್ತಾನೆ. ನಮ್ಮ ನಾಡಿನ ಗಡಿಯಲಿ ಪ್ರಾಣದ ಹಂಗು ತೊರೆದು ನಮ್ಮನ್ನು, ನಮ್ಮ ದೇಶವನ್ನು ಕಾಯುತ್ತಿರುವ ಯೋಧರ ರಕ್ಷಣೆ ಮಾಡಲು ಪಣತೊಟ್ಟ ಅಪ್ರತಿಮ ಶಕ್ತಿಶಾಲಿ ವ್ಯಕ್ತಿಯೊಬ್ಬ(ಡಾ.ಮಂಜುನಾಥ್) ಎಲ್ಲ ಪ್ರಕರಣಗಳ ಹಿಂದಿರುವ ರೂವಾರಿಯಾಗಿರುತ್ತಾನೆ. ಮುಂದೆ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ಕುತೂಹಲವಾಗಿ ನಿರ್ದೇಶಕ ಅಭಿರಾಮ್ ಅವರು ನಿರೂಪಿಸಿದ್ದಾರೆ.

ಗೊಂದಲಗಳಿಂದಲೇ ಆರಂಭವಾಗುವ ಈ ಚಿತ್ರ ಅಂತ್ಯದ ವೇಳೆಗೆ ಹೊಸರೂಪ ಪಡೆದುಕೊಳ್ಳುತ್ತದೆ. ಚಿತ್ರದ ನಿರ್ಮಾಪಕರೂ ಆಗಿರುವ ಡಾ. ಮಂಜುನಾಥ್ ಅವರು ತಮ್ಮ ಮೊದಲ ಚಿತ್ರದ ಮೂಲಕವೇ ಸಿಕ್ಸ್ ಪ್ಯಾಕ್ ಹೀರೋ ಹೊರಹೊಮ್ಮಿದ್ದಾರೆ. ಇನ್ನು ಚೇತನ್ ಚಂದ್ರ, ನೇಹಾ ಪಾಟೀಲ್, ಐಶ್ವರ್ಯ ಸಿಂದೋಗಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕೆ.ವಿ ರವಿಚಂದ್ರ ಅವರ ಹಿನ್ನೆಲೆ ಸಂಗೀತ ಈ ಚಿತ್ರದ ಮತ್ತೊಂದು ಹೈಲೈಟ್. ರೀರೆಕಾರ್ಡಿಂಗ್ ಹಾಗೂ ರಾಜಶೇಖರ್ ಅವರ ಕ್ಯಾಮೆರಾ ವರ್ಕ್ ಈ ಚಿತ್ರದ 2 ಕಣ್ಣುಗಳು.
-11/11/17

ಒಳ್ಳೆ ಚಿತ್ರ ಮಾಡಿದಾಗ ಕನ್ನಡಿಗರು ಕೈ ಬಿಡೋಲ್ಲ – ಯಶ್
ಒಂದು ಚಿತ್ರಕ್ಕೆ ನನ್ನಿಂದ ಒಳ್ಳೆಯದು ಆಗುತ್ತದೆ ಆಗುವುದಾದರೆ ನಾನು ಖಂಡಿತ ಬರುತ್ತೇನೆ ಎಂದು ಅಂಬರೀಷ್ ಹೇಳುತ್ತಿದ್ದರು. ಅವರಂತೆ ಪಾಲನೆ ಮಾಡುತ್ತಿದ್ದೇನೆಂದು ಯಶ್ ‘ಸಂಯುಕ್ತ-2’ ಧ್ವನಿಸಾಂದ್ರಿಕೆ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಮಾತು ಮುಂದುವರೆಸಿದ ಯಶ್ ಹೃದಯ ಶ್ರೀಮಂತಿಕೆ ಇರುವ ನಿರ್ಮಾಪಕರು ಮೊದಲ ಬಾರಿ ನಿರ್ಮಾಣ ಮಾಡಿದ್ದಾರೆ. ನಾವು ಏನು ಕೊಡ್ತಿವೋ ಅದು ನಮ್ಮನ್ನು ಕಾಪಾಡುತ್ತೆ. ಕೆಟ್ಟದ್ದನ್ನು ಮಾಡಿದಾಗ ವಾಪಸ್ಸು ನಮಗೆ ಬರುತ್ತೆ. ಸಿನಿಮಾಗಳನ್ನು ಜನ ನೋಡ್ತಾ ಇಲ್ಲ ಎನ್ನುವುದು ಸುಳ್ಳು. ಒಂದು ಕಾಲದಲ್ಲಿ ನಾನು ಈ ರೀತಿ ಮಾಡಿನಾಡಿದ್ದನ್ನು ಪುನ: ನೋಡಿದಾಗ ನಾಚಿಕೆಯಾಯಿತು. ಒಳ್ಳೆ ಚಿತ್ರ ಮಾಡಿದಾಗ ನಮ್ಮವರು ಎಂದಿಗೂ ಕೈ ಬಿಡೋಲ್ಲ. ನಮ್ಮ ಕೆಲಸದ ಮೇಲೆ ಶ್ರದ್ದೆ ಇದ್ದರೆ ಕನ್ನಡಿಗರು ಗೌರವ ಕೊಡುತ್ತಾರೆ ಎಂದಾಗ ಜೈಕಾರ ಮುಗಿಲು ಮುಟ್ಟಿತ್ತು. ಇದಕ್ಕೂ ಮುನ್ನ ಮಾತನಾಡಿದ ವಿಶ್ವೇಶ್ವರಭಟ್ ನಿರ್ಮಾಪಕರ ಗೆಳತನವನ್ನು ನೆನಪುಮಾಡಿಕೊಂಡು ಬಂಡೆ ವ್ಯಾಪಾರ ಮಾಡುತ್ತಿದ್ದವರು ದೊಡ್ಡ ಉದ್ಯಮಕ್ಕೆ ಕೈ ಹಾಕಿದ್ದಾರೆ. ಇಷ್ಟ ದಿವಸ ಇದರ ಬಗ್ಗೆ ಹೇಳಿರಲಿಲ್ಲ. ನಿರ್ಮಾಣ ಮಾಡಿರುವುದು ಕೇಳಿ ಸೋಜಿಗ ಅನಿಸಿತು. ನಿರ್ಮಾಪಕ ಅಲ್ಲದೆ ನಟನಾಗಿ ಸಾಬೀತು ಮಾಡಿದ್ದಾರೆ. ಒಳ್ಳೆಯದಾಗಲಿ ಎಂದರು.

ಜೀವನವನ್ನು ರೂಪಿಸಿದ್ದು ತಾಯಿ, ಅಣ್ಣ, ಸಮಾಜದಲ್ಲಿ ಗುರುತು ಸಿಗುವಂತೆ ಪ್ರಾರಂಭದಿಂದಲೂ ಸಲಹೆ, ಪ್ರೋತ್ಸಾಹ ನೀಡಿದ್ದು ಶಾಸಕ ಎಸ್.ಟಿ.ಸೋಮಶೇಖರ್. ಹತ್ತು ಜನರ ಮುಂದೆ ಬೆನ್ನು ತಟ್ಟಿ ಧೈರ್ಯ ತುಂಬುತ್ತಿದ್ದರು. ಶಿವರಾಜ್‍ಕುಮಾರ್ ಯಾವ ಚಿತ್ರ, ನಿರ್ಮಾಪಕರ ಹೆಸರನ್ನು ಕೇಳದೆ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಅದಕ್ಕೆ ಅವರನ್ನು ದೊಡ್ಮನೆ ಮಗನೆಂದು ಕರೆಯುವುದು ಅಂತ ಹೇಳುತ್ತಾ ಹೋದರು ನಿರ್ಮಾಪಕರಾದ ಡಾ.ಮಂಜುನಾಥ್.ಡಿ.ಎಸ್. ಶಾಸಕರು, ನಿರ್ಮಾಪಕರ ತಾಯಿ ಮಹದೇವಮ್ಮ, ಗಣ್ಯರುಗಳು ಬಿಡುಗಡೆ ಮಾಡಿದ ನಾಲ್ಕು ಹಾಡಿನ ತುಣುಕುಗಳಲ್ಲಿ ಛಾಯಗ್ರಾಹಕ ರಾಜಶೇಖರ್ ಸೆರೆಹಿಡಿರುವ ಸುಂದರ ತಾಣಗಳು ಕಣ ್ಣಗೆ ತಂಪು ನೀಡಿತು. ಮೇಕಪ್‍ಮ್ಯಾನ್ ಆಗಿದ್ದ ತನಗೆ ಅವಕಾಶ ನೀಡಿದ ಮಂಜುನಾಥ್ ಸರ್‍ಗೆ ಥ್ಯಾಂಕ್ಸ್ ಎಂಬ ಮಾತು ನಿರ್ದೇಶಕ ಅಭಿರಾಮ್ ಅವರಿಂದ ಕೇಳಿಬಂತು. ಸಂಗೀತ ನಿರ್ದೇಶಕ ಕೆ.ವಿ.ರವಿಚಂದ್ರ ಒಂದು ಗೀತೆ ಹಾಡಿ ರಂಜಿಸಿದರು. ನಾಯಕರಾದ ಚೇತನ್‍ಚಂದ್ರ, ಪ್ರಭುಸೂರ್ಯ, ಅಭಯ್ ನಾಯಕಿಯರಾದ ನೇಹಾಪಾಟೀಲ್, ಐಶ್ವರ್ಯಸಿಂಧೊಗಿ ಇವರುಗಳಿಗೆ ಮೈಕ್ ತಲುಪಲಿಲ್ಲ. ಚಿತ್ರವು ನವೆಂಬರ್ ಎರಡನೆ ವಾರದಂದು ತೆರೆಕಾಣಲಿದೆ.
-8/11/17

ಮೆಡಿಕಲ್ ಕಾಲೇಜ್ ಕಥನ
1988ರಲ್ಲಿ ಶಿವರಾಜ್‍ಕುಮಾರ್ ಸೇರಿದಂತೆ ಇಬ್ಬರು ನಾಯಕರು ಅಭಿನಯಿಸಿದ ಸಂಯುಕ್ತ ಬಿಡಗಡೆಗೊಂಡು ಯಶಸ್ಸು ಗಳಿಸಿತ್ತು. ಈಗ ಅದೇ ಹೆಸರಿನೊಂದಿಗೆ ‘ಸಂಯುಕ್ತ-2’ ನಿನ್ನ ಹಿಂದೆ ಏನೋ ಇದೆ ಅಂತ ಆಂಗ್ಲ ಭಾಷೆಯ ಅಡಿಬರಹದಲ್ಲಿ ಹೇಳಿಕೊಂಡಿದೆ. ಮಡೆಕಲ್ ಕಾಲೇಜ್‍ನಲ್ಲಿ ನಡೆಯುವ ಮಿಸ್ಸಿಂಗ್ ಮಿಸ್ಟರಿ, ಸೈನ್ ಫಿಕ್ಷನ್‍ನಲ್ಲಿ ಸೆಸ್ಪನ್ಸ್, ಥ್ರಿಲ್ಲರ್ ಕತೆಯಾಗಿದೆ. ಹೊಸ ಸಿನಿಮಾದಲ್ಲಿ ಚೇತನ್, ಸಂಜಯ್, ಪ್ರಭುಸೂರ್ಯ ಮೂವರು ನಾಯಕರು. ಅದರಲ್ಲೂ ಚೇತನ್ ಕ್ಲೈಮಾಕ್ಸ್ ಭಾಗದ ಪಾತ್ರದ ಸಲುವಾಗಿ ಮೂವತ್ತು ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಮಡಿಕಲ್ ವಿದ್ಯಾರ್ಥಿಗಳಾಗಿ ನೇಹಾಪಾಟೀಲ್, ಐಶ್ವರ್ಯಸಿಂಧೂಗಿ ನಾಯಕಿಯರು. ವಿಶೇಷ ಪಾತ್ರದಲ್ಲಿ ದೇವರಾಜ್ ಇವರೊಂದಿಗೆ ಸ್ವರ್ಶರೇಖಾ, ಬಿಂದು, ಸಾಮ್ಯಕಾಂಚನ್ ತಾರಬಳಗವಿದೆ. ಕತೆ,ಚಿತ್ರಕತೆ ನಿರ್ದೇಶನ ಮಾಡಿರುವ ಅಭಿರಾಂಗೆ ಹೊಸ ಅನುಭವ. ಸಾಹಿತ್ಯ ಮತ್ತು ಸಂಗೀತ ಸಂಯೋಜಿಸಿರುವುದು ಕೆ.ವಿ.ರವಿಚಂದ್ರ.

ಬೆಂಗಳೂರು ಸುತ್ತಮುತ್ತ, ಅಲ್ಲದೆ ಹೆಚ್ಚಾಗಿ ರಾತ್ರಿ ಹೊತ್ತು ಚಿತ್ರೀಕರಣ ನಡೆಸಲಾಗಿದೆ. 35 ನಿಮಿಷದ ಸಿಜಿ ಕೆಲಸವನ್ನು ಮಹೇಶ್ ನಿರ್ವಹಿಸಿದ್ದಾರೆ. ಪ್ರಾರಂಭದಲ್ಲಿ ಸಂಜಯ್-ಕೆ.ಟಿ.ನಾರಾಯಣಸ್ವಾಮಿ ನಿರ್ಮಾಣ ಮಾಡುತ್ತಿದ್ದು, ನಾರಾಯಣಸ್ವಾಮಿ ಅಕಾಲಿಕ ನಿಧನದಿಂದ ಸಿನಿಮಾವನ್ನು ಡಾ.ಮಂಜುನಾಥ್ ತೆಗೆದುಕೊಂಡು ಬಿಡುಗಡೆ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ರಥಾವರ ಖ್ಯಾತಿಯ ಶ್ರೀಮುರಳಿ ಟೀಸರನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ. ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
-25/10/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore