HOME
CINEMA NEWS
GALLERY
TV NEWS
REVIEWS
CONTACT US
ಸಮ್-ಆಹಾರದಲ್ಲಿ ಕುತೂಹಲಗಳು
ಆತ ಚಿಕ್ಕವಯಸ್ಸಿಗೆ ಅಪಘಾತದಲ್ಲಿ ದೃಷ್ಟಿಯನ್ನು ಕಳೆದುಕೊಂಡವನು. ಕಣ್ಣು ಇಲ್ಲದಿದ್ದರೂ ರುಚಿಯಾದ ಅಡುಗೆ ಮಾಡುವ ಬಾಣಸಿಕನಾಗಿ ರೆಸ್ಟೆರೋಂಟ್ ನಡೆಸುತ್ತಾ ಶ್ರೀಮಂತ ಜೀವನ ಸಾಗಿಸುತ್ತಿರುತ್ತಾನೆ. ಅಲ್ಲಿಗೆ ಅನ್ನ ಕೇಳುವ ನೆಪದಲ್ಲಿ ನಂದಿನಿ ಎನ್ನುವ ಹುಡುಗಿ ಪರಿಚಯ ಪ್ರೇಮವಾಗಿ ಮಾರ್ಪಡುತ್ತದೆ. ಮತ್ತೆ ಅಪಘಾತವಾಗಿ ಕಳೆದುಕೊಂಡಿದ್ದ ದೃಷ್ಟಿ ವಾಪಸ್ಸು ಬಂದಾಗ ಆಕೆ ಕಣ್ಮರೆಯಾಗಿರುತ್ತಾಳೆ ಆಗ ಅವನಿಗೆ ನಾನು ಬಕ್ರಾ ಆದೆ ಎಂದೆನಿಸುತ್ತದೆ. ತನ್ನಿಂದ ಆಕೆಗೆ ತೊಂದರೆಯಾಗಿದೆ ಅಂದುಕೊಂಡು ಹಿನ್ನಲೆಯನ್ನು ಹುಡುಕಲು ಹೋದಾಗ ಸತ್ಯಗಳು ಬಯಲಾಗುತ್ತದೆ. ಮುಂದೆ ತಾನು ಚಕ್ರವ್ಯೂಹದಲ್ಲಿ ಸಿಲುಕಿದ್ದೇನೆಂದು ತಿಳಿದು , ಇಂತಹ ಜಾಲದಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಲು ಮುಂದಾಗುತ್ತಾನೆ. ಇವಿಷ್ಟು ‘ಸಂಹಾರ’ ಚಿತ್ರದ ಸೆಸ್ಪೆನ್ಸ್ ,ಥ್ರಿಲ್ಲರ್ ಕತೆಯಾಗಿದ್ದರಿಂದ ಮುಂದಿನದನ್ನು ಹೇಳುವ ಆಗಿಲ್ಲ. ಸನ್ನಿವೇಶಗಳನ್ನು ನೋಡುತ್ತಿದ್ದರೆ ಹಿಂದಿ, ತಮಿಳು ಚಿತ್ರಗಳ ಛಾಯೆ ಇದೆ ಅಂತ ಭಾಸವಾಗುವುದುಂಟು. ಪ್ರತಿ ಹತ್ತು ನಿಮಷಕ್ಕೊಮ್ಮೆ ತಿರುವುಗಳು ಬರುವುದು ನೋಡುಗನಿಗೆ ಸೀಟಿನಲ್ಲಿ ಕೂರುವಂತೆ ಮಾಡುತ್ತದೆ. ನಿರ್ದೇಶಕರು ಸ್ವಮೇಕ್ ಚಿತ್ರವೆಂದು ಹೇಳಿಕೊಂಡರು ಬೇರೆ ಭಾಷೆಗಳ ದೃಶ್ಯಗಳನ್ನು ಬಳಸಿಕೊಂಡಿರುವುದು ತಿಳಿಯುತ್ತದೆ.

ಕುರುಡ, ಕಣ್ಣ ಬಂದ ನಂತರ ಹುಡುಕಾಟದಲ್ಲಿ ಅಲೆಯುವ ಚಿರಂಜೀವಿಸರ್ಜಾ ನಟನೆ, ಫೈಟ್ ಓಕೆ ಎನ್ನಬಹುದು. ನಾಯಕನಿಗೆ ಪತ್ತೆಗಾಗಿ ಸಹಕರಿಸುವ ಟಿವಿ ನಿರೂಪಕಿ ಕಾವ್ಯಶೆಟ್ಟಿ ನಾಯಕಿಯಾಗಿ ಎಂದಿನಂತೆ ಮಾಮೂಲು ಅಭಿನಯ. ಮೊದಲಬಾರಿ ನೆಗಟೀವ್ ಶೇಡ್‍ನಲ್ಲಿ ಕಾಣ ಸಿಕೊಂಡಿರುವ ಹರಿಪ್ರಿಯಾ ಗಮನ ಸೆಳೆದಿದ್ದಾರೆ. ಇನ್ಸೆಪೆಕ್ಟರ್ ಪಾತ್ರದಲ್ಲಿ ಚಿಕ್ಕಣ್ಣ ಡೈಲಾಗ್ ಕಡಿಮೆ ಇದ್ದರೂ ಅವರ ಹಾವಭಾವ ನಗುತರಿಸುತ್ತದೆ. ಖಳನಟನಾಗಿ ಯಶ್‍ಶೆಟ್ಟಿ, ಅರುಣಬಾಲರಾಜ್, ತಬಲನಾಣ ,ಧರ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರವಿಬಸ್ರೂರು ಸಂಗೀತದಲ್ಲಿ ಪುನೀತ್‍ರಾಜ್‍ಕುಮಾರ್ ಗೀತೆ ಕೇಳಲು ಇಷ್ಟವಾಗುತ್ತದೆ. ನಿರ್ದೇಶಕ ಗುರುದೇಶಪಾಂಡೆ ಚಿತ್ರಕತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಂತೆ, ಸುಂದರ ತಾಣಗಳನ್ನು ಸೆರೆಹಿಡಿದಿರುವುದು ಜೆ.ಎಸ್.ವಾಲಿ.
ನಿರ್ಮಾಪಕರುಗಳು: ವೆಂಕಟೇಶ್ ಮತ್ತು ಸುಂದರ್‍ಕಾಮರಾಜ್
ಸಿನಿ ಸರ್ಕಲ್. ಇನ್ ನ್ಯೂಸ್
-10/02/18
ಎರಡು ನೂರು ಕೇಂದ್ರಗಳಲ್ಲಿ ಸಂಹಾರ 2
ಥ್ರಿಲ್ಲರ್ ಆಧಾರಿತ ಕತೆಯನ್ನು ವಿಭಿನ್ನ ರೀತಿಯಲ್ಲಿ ತೋರಿಸಿರುವ ‘ಸಂಹಾರ’ ಚಿತ್ರವು ಹೊಸತನದಿಂದ ಕೂಡಿದೆ. ಸಿನಿಮಾದಲ್ಲಿ ಹಲವು ವಿಶೇಷತೆಗಳು ಇದೆ. ನಾಯಕ ಚಿರಂಜೀವಿಸರ್ಜಾ ಎರಡು ಶೇಡ್‍ಗಳ ಪೈಕಿ ಒಂದರಲ್ಲಿ ಅಂದನಾಗಿ ನಟನೆ ಮಾಡಿದ್ದಾರೆ. ಕಾವ್ಯಶೆಟ್ಟಿ, ಹರಿಪ್ರಿಯಾ ನಾಯಕಿಯರಲ್ಲಿ ಹರಿಪ್ರಿಯಾ ಮೊದಲಬಾರಿ ನಕರಾತ್ಮಕ ಪಾತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ಹಾಸ್ಯ ನಟನೆಂದು ಬಿಂಬಿತರಾಗಿದ್ದ ಚಿಕ್ಕಣ್ಣ ಪ್ರಥಮಬಾರಿ ಪೋಲೀಸ್ ಇನ್ಸೆಪೆಕ್ಟರ್ ಆಗಿ ಗಂಭೀರವಾಗಿದ್ದರೂ ಅವರ ಹಾವಭಾವಗಳು ನಗು ತರಿಸುತ್ತದೆ. ನಾಯಕರೊಂದಿಗೆ ಇವರು ಶೇಕಡ 70ರಷ್ಟು ತೆರೆ ಹಂಚಿಕೊಂಡಿದ್ದಾರೆ. ಪ್ರತಿ 10-15 ನಿಮಿಷಕ್ಕೂ ತಿರುವುಗಳು ಬರಲಿದ್ದು ಪ್ರೇಕ್ಷಕನಿಗೆ ಕುತೂಹಲ ಮೂಡಿಸುತ್ತದೆ. ಏನ್ ಅಚ್ಚರಿ ಕಾದಿದೆ ಗೀತೆಗೆ ಪುನೀತ್‍ರಾಜ್‍ಕುಮಾರ್ ಧ್ವನಿ ನೀಡಿದ್ದಾರೆ. ಜಯಂತ್‍ಕಾಯ್ಕಣ , ನಾಗೇಂದ್ರಪ್ರಸಾದ್ ಮತ್ತು ಚೇತನ್‍ಕುಮಾರ್ ಸಾಹಿತ್ಯ ಹಾಡುಗಳಿಗೆ ರವಿಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

ಸಾಹಸ ರವಿವರ್ಮ, ನೃತ್ಯ ಮದನ್-ಹರಿಣ , ಹೈಟ್‍ಮಂಜು, ಸಂಕಲನ ಕೆ.ಎಂ.ಪ್ರಕಾಶ್, ಸಂಭಾಷಣೆಗೆ ಪ್ರಶಾಂತ್‍ರಾಜಪ್ಪ ಪೆನ್ನು ಕೆಲಸ ಮಾಡಿದೆ. ರಾಜಾಹುಲಿ ಖ್ಯಾತಿ ಗುರುದೇಶಪಾಂಡೆ ನಿರ್ದೇಶನವಿದೆ. ಸಿನಿಮಾಗಳನ್ನು ವಿತರಣೆ ಮಾಡಿದ ಅನುಭವ ಇರುವ ಸಿ.ನಿರಂಜನ್ ಗೆಳಯ ಸಿ.ಮಂಜೇಶ್, ವೆಂಕಟೇಶ್ ಮತ್ತು ಆರ್.ಸುಂದರಕಾಮರಾಜ್ ಅವರೊಂದಿಗೆ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ಇದೇ ಶುಕ್ರವಾರದಂದು ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್. ಇನ್ ನ್ಯೂಸ್
-4/02/18

ಬಿಡುಗಡೆಗೊಂಡ ಸಂಹಾರ ಹಾಡುಗಳು
ಚಿರಂಜೀವಿಸರ್ಜಾ ಅಂದನಾಗಿ ಅಭಿನಯಿಸಿರುವ ‘ಸಂಹಾರ’ ಚಿತ್ರದಲ್ಲಿ ನಾಯಕಿಯರಾಗಿ ಕಾವ್ಯಶೆಟ್ಟಿ, ಹರಿಪ್ರಿಯಾ ನಟನೆ ಇದೆ. ಇಲ್ಲಿಯವರೆಗೂ ಹಾಸ್ಯದ ಮೂಲಕ ಎಲ್ಲರನ್ನು ನಗಿಸಿದ್ದ ಚಿಕ್ಕಣ್ಣ ಚೊಚ್ಚಲಬಾರಿ ಗಂಭೀರ ಪೋಲೀಸ್ ಇನ್ಸೆಪೆಕ್ಟರ್ ಪಾತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ಜಯಂತ್ ಕಾಯ್ಕಣ ರಚಿಸಿರುವ ಏನ್ ಅಚ್ಚರಿಯಾಗಿದೆಯೋ ಗೀತೆಗೆ ಪುನೀತ್‍ರಾಜ್‍ಕುಮಾರ್ ಕಂಠದಾನ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ನಿರ್ದೇಶಕ ಗುರುದೇಶ್‍ಪಾಂಡ್ ಪ್ರಕಾರ ರವಿಬಸ್ರೂರು ಹಾಲಿವುಡ್ ರೇಂಜ್‍ನಲ್ಲಿ ಹಿನ್ನಲೆ ಸಂಗೀತವನ್ನು ಒದಗಿಸಿರುವುದು. ಇದಕ್ಕಾಗಿ ಸತತ 10 ದಿನಗಳ ಕಾಲ ಸಮಯವನ್ನು ಮೀಸಲಿರಿಸಿದ್ದು ಮರೆಯಲಾಗದು ಎನ್ನುತ್ತಾರೆ. ಬೆಂಗಳೂರು, ಮಂಗಳೂರು, ಸಕಲೇಶಪುರ ತಟಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರಶಾಂತ್‍ರಾಜಪ್ಪ ಸಂಭಾಷಣೆ, ರವಿವರ್ಮಾ ಸಾಹಸ ನಿರ್ವಹಿಸಿದ್ದಾರೆ. ಎ.ವೆಂಕಟೇಶ್, ಆರ್.ಸುಂದರಕಾಮರಾಜು ನಿರ್ಮಾಪಕರಾಗಿ ಮೊದಲ ಅನುಭವ. ಶುಕ್ರವಾರ ಆಡಿಯೋ ಸಿಡಿಯನ್ನು ಧ್ರುವಸರ್ಜಾ ಅನಾವರಣಗೊಳಿಸಿ ಸಹೋದರನ ಚಿತ್ರಕ್ಕೆ ಶುಭ ಹಾರೈಸಿದರೆ, ಸಿನಿಪಂಡಿತರಾದ ಜಾಕ್ ಮಂಜು, ಯೋಗಿದ್ವಾರಕೀಶ್, ಕೆ.ಮಂಜು ಮುಂತಾದವರು ಆಗಮಿಸಿದ್ದರು. ಜೇಂಕಾರ್ ಮ್ಯೂಸಿಕ್ ಸಂಸ್ಥೆಯು ಹಾಡುಗಳನ್ನು ಹೊರತಂದಿದೆ.
-20/11/17

ಸಂಹಾರ ಟ್ರೈಲರ್ ಬಿಡುಗಡೆ
‘ಸಂಹಾರ’ ಚಿತ್ರದ ಮೊದಲ ಟ್ರೈಲರ್‍ನ್ನು ಚಿಕ್ಕಣ್ಣ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಈಗ ನಾಯಕ ಚಿರಂಜೀವಿ ಸರ್ಜಾ ವರ್ದಂತಿ ಇರುವುದರಿಂದ ಎರಡನೆ ಟ್ರೈಲರ್ ಮಂಗಳವಾರ ಅನಾವರಣಗೊಂಡಿತು. ನಿರ್ದೇಶಕನಾದವನಿಗೆ ಒಂದು ಸಿನಿಮಾ ಮುಗಿಸಿದಾಗ ಅದರ ಫಲಿತಾಂಶ ಹೇಗಿದೆ ಅಂತ ಇದರ ಮೂಲಕ ತಿಳಿದುಕೊಳ್ಳಬಹುದು. ಕತೆಯು ಮೈಸೂರು, ಮಂಗಳೂರು ಕಡೆಗಳಲ್ಲಿ ನಡೆಯಲಿರುವುದರಿಂದ ಹೆಚ್ಚಿನ ಭಾಗದ ಚಿತ್ರೀಕರಣ 48 ದಿನಗಳ ಕಾಲ ಅಲ್ಲಿಯೇ ನಡೆಸಲಾಗಿದೆ. ಒಂದು ಹಾಡು ಬಾಕಿ ಇದೆ. ನಾಯಕ ಅಂದನಾಗಿದ್ದು, ಹೋಟೆಲ್ ನಡೆಸುತ್ತಿರುತ್ತಾನೆ. ಅವನು ಅಡುಗೆ ಮಾಡುವುದನ್ನು ನೋಡಲು ಜನರು ಬರುತ್ತಿರುತ್ತಾರೆ. ಕುರುಡನಾಗಿ 10 ಜನರೊಂದಿಗೆ ಹೊಡೆದಾಡುವುದನ್ನು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೇ ತಿಂಗಳು ಧ್ವನಿಸಾಂದ್ರಿಕೆ ಅನಾವರಣಗೊಳ್ಳುತ್ತಿದ್ದು ನವೆಂಬರ್‍ನಲ್ಲಿ ತೆರೆಗೆ ತರಲು ಯೋಜನೆ ಹಾಕಲಾಗಿದೆ ಎಂಬುದರ ವಿವರ ನೀಡಿದರು ಗುರುದೇಶಪಾಂಡೆ.

ಪ್ರತಿ ಹುಟ್ಟಹಬ್ಬದಂದು ತುಣುಕುಗಳನ್ನು ತೋರಿಸುತ್ತಾರೆ. ಈ ಬಾರಿ ಸುದ್ದಿಗೋಷ್ಟಿ ನಡೆಸಿದ್ದು ವಿಶೇಷ ಎನ್ನಬಹುದು. ಇದಕ್ಕಿಂತ ಖುಷಿ ಬೇರೊಂದು ಇಲ್ಲ ಎನ್ನುತ್ತಾರೆ ಬರ್ತ್‍ಡೇ ಬಾಯ್ ಚಿರಂಜೀವಿಸರ್ಜಾ. ವಿಶ್ ಮಾಡಲು ಕಾವ್ಯಶೆಟ್ಟಿ ಆಗಮಿಸಿದ್ದರೆ, ಮತ್ತೋಬ್ಬ ನಾಯಕಿ ಹರಿಪ್ರಿಯಾ ಹಾಜರಿರಲಿಲ್ಲ. ಇಲ್ಲಿಯವರೆಗೂ ಎಲ್ಲರನ್ನು ನಗಿಸುತ್ತಿದ್ದ ಚಿಕ್ಕಣ್ಣ ಚಿತ್ರದಲ್ಲಿ ನಿಷ್ಟಾವಂತ ಪೋಲೀಸ್ ಅಧಿಕಾರಿಯಾಗಿ ಕಾಣ ಸಿಕೊಂಡಿದ್ದಾರಂತೆ. ಖಳನಾಯಕನಾಗಿ ಯಶ್‍ವಂತಶೆಟ್ಟಿ, ತಬಲನಾಣ , ಅರುಣಾಬಾಲರಾಜ್ ತಾರಬಳಗವಿದೆ. ಹಾಡುಗಳಿಗೆ ರವಿಬಸ್ರೂರು ಸಂಗೀತ ಸಂಯೋಜನೆ ಇದೆ. ಸಂಕಲನ ಕೆ.ಎಂ.ಪ್ರಕಾಶ್, ಛಾಯಗ್ರಹಣ ಜಗದೀಶ್‍ವಾಲಿ, ನೃತ್ಯ ಮದನ್‍ಹರಣ , ಹೈಟ್‍ಮಂಜು ಅವರದಾಗಿದೆ. ಎ.ವೆಂಕಟೇಶ್, ಆರ್.ಸುಂದರಕಾಮರಾಜ್ ಸಿನಿಮಾ ಕೃಷಿಗೆ ಹಣ ಹೂಡಿರುವುದು ಮೊದಲ ಅನುಭವವಾಗಿದೆಯಂತೆ.
-19/10/17SAMHAARA IS 70% COMPLETE, CHIKKANNA TURNS 30
S
amhaara has completed 70 percent of the shoot including a 25-day shoot schedule in Mangaluru amidst the heat. The film is directed by Guru Deshpande and is produced by Venkatesh and Kamaraj. The film stars Chiranjeevi Sarja, Kavya Shetty, Haripriya and Chikkanna among others.  

Producer Venkatesh thanked Haripriya for providing great support. He said she had acted from morning 7 am till 3 am the next morning without complaining. He said although there was a minor tiff with the director it was for the film and there is no compromise on quality. Director Deshpande thanked Chikkanna for the support by accepting this offer despite having 15 films in his kitty to juggle dates. He thanked Chiranjeevi Sarja for accommodating Chikkanna and giving the space.  

Chiranjeevi Sarja said the film is about a battle between the visually impaired and the one who has vision adding that it is a total commercial film. He also said that he learnt the comedy timing from Chikkanna. He said he was acting in combination with Kavya Shetty who drives two-wheelers and four-wheelers with ease.  

Kavya Shetty who was sporting a new look with a nose ring said she enjoyed working with Chikkanna who is funny even off the screen. Tabala Nani said he plays a father in the film and even appreciated Chikkanna in carrying off the right attitude. Bhaskar plays the villain.

Meanwhile, Chikkanna who has acted in 90 films celebrated his 30th birthday a day prior to the big day with the Samhaara team. Director Deshpande made the occasion special by releasing a special teaser for Chikkanna. Interestingly, Chikkanna sported a clean shaven guy in his khaki colours in the teaser. Chikkanna appears as Inspector Raja Huli and it is his role in this film that catapulted him to success. The teaser also has a few shots of Chiranjeevi Sarja. 

The director said the teaser is his gift to Chikkanna on his birthday. He said Chikkanna does not laugh but the situation that he is in evokes laughter akin to Charlie Chaplin. A  cake was cut for Chikkanna with the team

Chikkanna said he is celebrating his birthday for the first time and added that he will never forget this occasion even after he turns 90. Chikkanna said he comes from a village and it has been his practice of visiting Goddess Chamundeshwari on his birthday. Cake cutting celebration was never done, he said. He added that he was happy that a special teaser was made on him. He said  he had faced off his moustache and worn colourful costumes for the first time. He said the film will be a laugh riot with his activity being serious but at the same time evoking laughter.
-24/06/17


SAMHAARA’ LAUNCHED
D
irector Guru Deshpande and Chiranjeevi Sarja have teamed up again and started work on their new film Samhaara which mounted the sets last week. The two had earlier worked on Rudratandava. Chikkanna is playing an important role in this film too. Haripriya and Kavya Shetty have been roped in to play the female leads in the film.  

Guru Deshpande told reporters that the film is a romantic thriller. He said the film will surely cause jitters among the classes and the masses. He said the film will have a strong storyline along with a social message about love. Chiranjeevi plays an angry young man in the film. However, the director did not specify if it is a love triangle. He expressed confidence that the film will be as successful as Raja Huli.  

The director had earlier announced that he would be making Raja Manikya with Prajwal Devaraj  in the lead along with V Ravichandran. But, now Deshpande has begun work on Samhaara. Ravi Basrur will be scoring the music and Jagadish Wali is the cameraman.  

Yathiraj, Srinivasa Murthy and Sadhu Kokila are also in the cast. The film is produced by A Venkatesh and R Sundar Kamaraj.
-5/05/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore