HOME
CINEMA NEWS
GALLERY
TV NEWS
REVIEWS
CONTACT US
ಹಿರಿಯ ನಿರ್ಮಾಪಕ ಎಸ್.ನಾಗರಾಜಶೆಟ್ಟಿ ನಿಧನ
ನವೆಂಬರ್ ತಿಂಗಳು ಅಂಬರೀಷ್ ನಿಧನದ ಸುದ್ದಿ ಚಿತ್ರರಂಗಕ್ಕೆ ನಷ್ಟ ಉಂಟಾಗಿದೆ. ಅದರ ಬೆನ್ನಲ್ಲೆ ಹಿರಿಯ ನಿರ್ಮಾಪಕ, ವಿತರಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಅನುಭವಿ ಪ್ರದರ್ಶಕ ಎಸ್.ನಾಗರಾಜಶೆಟ್ಟಿ ವಯೋಸಹಜ ಖಾಯಿಲೆಯಿಂದ ಅಸು ನೀಗಿದ್ದಾರೆ. ಸಿದ್ದಲಿಂಗಯ್ಯ ನಿರ್ದೇಶನದ ‘ಪರಾಜಿತ’ ಚಿತ್ರದಲ್ಲಿ ದೊಡ್ಡಣ್ಣ ಪರಿಚಯವಾಗಿದ್ದರು. ಇಲ್ಲೆ ಸ್ವರ್ಗ ಇಲ್ಲೆ ನರಕ ಹಾಡಿನ ‘ನಾಗರಹೊಳೆ’ ಸಿನಿಮಾದ ಮೂಲಕ ರಾಜೇಂದ್ರಸಿಂಗ್‍ಬಾಬು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಹಾಗೆಯೇ ನೂರುಜನ್ಮ, ಕೂಡಿಬಾಳಿದರೆ ಸರ್ಗಸುಖ ಮತ್ತು ಶ್ರಾವಣಸಂಜೆ ಚಿತ್ರಗಳ ನಿರ್ಮಾಪಕರಾಗಿದ್ದರು. ಮೂಲತ: ಚಿಕ್ಕಮಗಳೂರಿನ ನಾಗರಾಜಶೆಟ್ಟಿ ಏಳು ಮಕ್ಕಳನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ‘ಸಿನಿ ಸರ್ಕಲ್.ಇನ್ ನ್ಯೂಸ್’ ದೇವರಲ್ಲಿ ಪ್ರಾರ್ಥಿಸುತ್ತದೆ.
ಸಿನಿ ಸರ್ಕಲ್.ಇನ್ ನ್ಯೂಸ್
2/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore