HOME
CINEMA NEWS
GALLERY
TV NEWS
REVIEWS
CONTACT US
ಹೊಸ ರೋಮಿಯೋ ಜೂಲಿಯಟ್
ಹತ್ತು ವರ್ಷಗಳ ಕೆಳಗೆ ಸಾಯಿಪ್ರಕಾಶ್ ನಿರ್ದೇಶನದಲ್ಲಿ ‘ರೋಮಿಯೋ ಜೂಲಿಯಟ್‘ ಚಿತ್ರವೊಂದು ತೆರೆಕಂಡಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿದೆ. 35 ತೆಲುಗು ಚಿತ್ರಗಳನ್ನು ನಿರ್ದೇಶಿಸಿರುವ ಭರತ್ ಮೊದಲಬಾರಿ ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಆಕ್ಷನ್ ಕಟ್ ಹೇಳುವದರ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಪುತ್ರ ಧನುಷ್‍ಶರಣ್ ಅವರನ್ನು ನಾಯಕರಾಗಿ ಪರಿಚಯಿಸುತ್ತಿದ್ದಾರೆ. ಇಂಜಿನಿಯರಿಂಗ್ ಮುಗಿಸಿ, ಅಪ್ಪನ ಚಿತ್ರಕ್ಕೆ ಬಣ್ಣ ಹಚ್ಚುತ್ತಿರುವುದು ಖುಷಿ ತಂದಿದೆಯಂತೆ. ವೆಸ್ಟ್‍ಬೆಂಗಾಲ್‍ನ ಸ್ವಾತಿಮಂಡಲ್ ನಾಯಕಿ. ಖಳನಾಯಕನಾಗಿ ದೀಪಕ್‍ಶೆಟ್ಟಿ ಆಯ್ಕೆ ಮಾಡಲು ಚಿಂತನೆ ನಡೆಸಲಾಗಿದೆ. ಉಳಿದಂತೆ ಆಂದ್ರಭಾಗದವರಾದ ಡಾ.ಸ್ಯಾಮಲಉಪೇಂದ್ರ, ಅನ್ವರ್‍ಮುನ್ನ, ಬಿ.ಎನ್.ರೆಡ್ಡಿ ನಟನೆ ಇದೆ. ಶೀರ್ಷಿಕೆ ಕೇಳಿದರೆ ಇದೊಂದು ಲವ್‍ಸ್ಟೋರಿ ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಕತೆಯನ್ನು ಹೊಸ ರೀತಿಯಲ್ಲಿ ವಿನೂತನವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಪ್ರೀತಿ ಅಂದ ತಕ್ಷಣ ಲೈಲಾಮಜ್ನು ಮುಂತಾದವರು ನೆನಪಿಗೆ ಬರುತ್ತಾರೆ. ಕಮಲ್‍ಹಾಸನ್-ಸರಿತಾ ಅಭಿನಯದ ಮರೋಚರಿತ್ರದಂತೆ ಕ್ಲೈಮಾಕ್ಸ್ ದುರಂತವಾಗುತ್ತದೆ. ನ್ಯೂ ಸೌಂಡ್ ಆಫ್ ಲವ್ ಎಂದು ಹೇಳಿಕೊಂಡಿರುವಂತೆ ಆರು ಹಾಡುಗಳಿಗೆ ಲಲಿತ್‍ಸುರೇಶ್ ಸಂಗೀತವಿದೆ. ಸಕಲೇಶಪುರ, ಚಿಕ್ಕಮಗಳೂರು, ಬೆಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಸಂಭಾಷಣೆ ಬೊಪ್ಪಪ್ರಸಾದ್, ಛಾಯಗ್ರಹಣ ಬಾಲಾಜಿ, ಸಂಕಲನ ಮೇನಗಶ್ರೀನು, ಕಲೆ ಸನ್ನಿದಿ, ಸಾಹಸ ವಿಜಯ್, ನೃತ್ಯ ದಿಲೀಪ್ ಅವರದಾಗಿದೆ. ಎರಡು ಕೋಟಿ ವೆಚ್ಚದಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾದ ಶೂಟಿಂಗ್ ಆಗಸ್ಟ್ ತಿಂಗಳಿಂದ ಶುರುವಾಗಲಿದೆ. ಸೋಮವಾರ ಶುಭದಿನವಾಗಿದ್ದರಿಂದ ಮಹೂರ್ತ ಆಚರಿಸಿಕೊಳ್ಳಲಾಗಿದೆ. ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾದಿಕಾರಿಗಳು, ಸಿನಿಪಂಡಿತರು ಆಗಮಿಸಿ ತಂಡಕ್ಕೆ ಶುಭಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/07/18








For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore