HOME
CINEMA NEWS
GALLERY
TV NEWS
REVIEWS
CONTACT US

ದಕ್ಷಿಣ ಭಾರತಕ್ಕೆ ಮರಾಠಿಯ `ಸಾಯ್ರತ್'
ನಾಲ್ಕು ಭಾಷೆಗಳಲ್ಲಿ ಜೀ ಸ್ಟೂಡಿಯೋಸ್ ಜೊತೆಗೆ ರಾಕ್‍ಲೈನ್ ವೆಂಕಟೇಶ್ ಜಂಟಿ ನಿರ್ಮಾಣ ಇತ್ತೀಚಿನ ದಿನಗಳಲ್ಲಿ ತಮಿಳಿನಲ್ಲಿ `ಲಿಂಗ' ಮತ್ತು ಹಿಂದಿಯಲ್ಲಿ `ಭಜರಂಗಿ ಭಾಯಿಜಾನ್'ನಂತಹ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿದ್ದ ರಾಕ್‍ಲೈನ್ ವೆಂಕಟೇಶ್, ಈಗ ಮರಾಠಿಯ ಬ್ಲಾಕ್‍ಬಸ್ಟರ್ `ಸಾಯ್ರತ್' ಚಿತ್ರವನ್ನು ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಈ ಕುರಿತು, ಶನಿವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ, ಬಿಡುಗಡೆಯಾದ 40 ದಿನಗಳ ಹೊತ್ತಿಗೆ 100ಕ್ಕೂ ಹೆಚ್ಚು ಕೋಟಿ ರೂಪಾಯಿ ಗಳಿಸಿರುವ `ಸಾಯ್ರತ್' ಚಿತ್ರದ ಸಂತೋಷವನ್ನು ಹಂಚಿಕೊಳ್ಳಲು ಚಿತ್ರತಂಡವು, ಮುಂಬೈನ ಟ್ರೈಡೆಂಟ್ ಹೋಟೆಲ್‍ನಲ್ಲಿ ಸಂತೋಷ ಕೂಟವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಆ ಚಿತ್ರ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಿಗೆ ರೀಮೇಕ್ ಆಗುತ್ತಿರುವ ಮತ್ತು ಜೀ ಸ್ಟುಡಿಯೋ ಜೊತೆಗೆ ರಾಕ್‍ಲೈನ್ ವೆಂಕಟೇಶ್ ಸಹ ನಿರ್ಮಾಣ ಮಾಡುತ್ತಿರುವ ವಿಷಯವನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ನಟ-ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಹ ಹಾಜರಿದ್ದು, ಚಿತ್ರವನ್ನು ನಿರ್ಮಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು.

`ಇತ್ತೀಚೆಗೆ `ಸಾಯ್ರತ್' ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ಚಿತ್ರ ನನ್ನ ಮನಸ್ಸು ಮುಟ್ಟಿತು. ಆಗಲೇ ಈ ಚಿತ್ರವನ್ನು ರೀಮೇಕ್ ಮಾಡುವ ನಿರ್ಧಾರ ತೆಗೆದುಕೊಂಡೆ. ಮರಾಠಿ ಚಿತ್ರವನ್ನು ನಿರ್ಮಿಸಿರುವ ಜೀ ಸ್ಟುಡಿಯೋದವರನ್ನು ಈ ಸಂಬಂಧ ಭೇಟಿ ಮಾಡಿ, ಚಿತ್ರದ ರೀಮೇಕ್ ಹಕ್ಕುಗಳನ್ನು ಕೊಡುವುದಕ್ಕೆ ಕೇಳಿದಾಗ, ಅವರು ತಾವೇ ಈ ಚಿತ್ರವನ್ನು ದಕ್ಷಿಣದ ಭಾಷೆಗಳಲ್ಲಿ ನಿರ್ಮಿಸುವುದಾಗಿ ಹೇಳಿದರು. ಬೇಕಾದರೆ ಅವರ ಜೊತೆಗೆ ಜಂಟಿ ನಿರ್ಮಾಣ ಮಾಡಬಹುದೆಂದರು. ನಾನು ಇದುವರೆಗೂ ಜಂಟಿ ನಿರ್ಮಾಣದಲ್ಲಿ ಹೆಚ್ಚು ತೊಡಗಿಸಿಕೊಂಡಿರಲಿಲ್ಲ. ಹಾಗೆಯೇ ಈ ಚಿತ್ರವನ್ನು ಬಿಡುವ ಮನಸ್ಸಿರಲಿಲ್ಲ. ಹಾಗಾಗಿ ಜೀ ಸ್ಟುಡಿಯೋಸ್‍ನವರ ಜೊತೆಗೆ ಸೇರಿಕೊಂಡು, ಈ ಚಿತ್ರವನ್ನು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಿರ್ಮಿಸುತ್ತಿz್ದÉೀನೆ. ಈ ಪೈಕಿ ತೆಲುಗು ಚಿತ್ರ ಮೊದಲು ಶುರುವಾಗಲಿದೆ. ಮರಾಠಿ ಚಿತ್ರವನ್ನು ನಿರ್ದೇಶಿಸಿದ್ದ ನಾಗರಾಜ್ ಮಂಜುಳೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಂತರದ ದಿನಗಳಲ್ಲಿ ಬೇರೆ ಭಾಷೆಗಳ ಇದೇ ಚಿತ್ರವನ್ನು ಮಾಡಲಿz್ದÉೀವೆ' ಎಂದು ಹೇಳಿದರು.

`ಸಾಯ್ರತ್' ಚಿತ್ರದಲ್ಲಿ ರಿಂಕು ರಾಜಗುರು, ಆಕಾಶ್ ತೋಸರ್, ತಾನಾಜಿ, ಅರ್ಬಾಜ್ ಶೇಖ್, ಛಾಯಾ ಕದಂ ಮುಂತಾದವರು ಅಭಿನಯಿಸಿದ್ದು, ನಾಗರಾಜ್ ಮಂಜುಳೆ ಅವರು ಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ನಿತಿನ್ ಖೇಣಿ, ನಿಖಿಲ್ ಸಾಣೆ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್-ಅತುಲ್ ಅವರ ಸಂಗೀತವಿದೆ.
-14/06/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\