HOME
CINEMA NEWS
GALLERY
TV NEWS
REVIEWS
CONTACT US
ರಜನಿ ತ್ರಿಭಾಷ ಚಿತ್ರಕ್ಕೆ ಆರು ನೂರು ಕೋಟಿ
ಭಾರತೀಯ ಚಿತ್ರರಂಗವು ಎದುರು ನೋಡುತ್ತಿರುವ ಅದ್ದೂರಿ ಚಿತ್ರ ‘2.0’ ಕೊನೆಗೂ ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ 2ಡಿ,3ಡಿ ಮತ್ತು 4ಡಿ ವರ್ಷನ್‍ದಲ್ಲಿ ಸಿದ್ದಗೊಂಡಿದೆ. ಎರಡು ನಿಮಿಷದ ಟ್ರೈಲರ್ ಚೆನ್ನೈನ ಸತ್ಯಂ ಟಾಕೀಸಿನಲ್ಲಿ ಅನಾವರಣಗೊಂಡಿತ್ತು. ಈ ಸಮಯದಲ್ಲಿ ಚಿತ್ರತಂಡ ಹಾಗೂ ಕಾಲಿವುಡ್, ಬಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್‍ವುಡ್‍ನ ಮಾದ್ಯಮದವರು ಸಾಕ್ಷಿಯಾಗಿದ್ದರು. ನಿರ್ದೇಶಕ ಶಂಕರ್ ಹೇಳುವಂತೆ ಇಲ್ಲಿಯವರೆಗೂ 3ಡಿ ಎಲ್ಲರಿಗೂ ತಿಳಿದಿದೆ. ಚಿತ್ರಮಂದಿರದಲ್ಲಿ ಎಲ್ಲಾ ಕಡೆಗಳಲ್ಲಿ ಸೌಂಡ್ ಸಿಸ್ಟಮ್ ಇರುತ್ತದೆ. ಆದರೆ ಈ ಚಿತ್ರದ ಸೌಂಡ್ ನೋಡುಗರ ಕಾಲುಗಳಿಗೆ ಶಬ್ದ ಬಂದಂತೆ ಭಾಸವಾಗುತ್ತದೆ. ಇದನ್ನೆ 4ಡಿ ಅಂತ ಕರೆಯಲಾಗುತ್ತದೆ. ಇಡೀ ವಿಶ್ವದ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲ ಪ್ರಯತ್ನವೆನ್ನಬಹುದಾಗಿದೆ. ರಜನಿ ಸರ್ ಸರಳ, ವಿನಯತೆ ಇರುವುದರಿಂದಲೇ ಇಂದಿಗೂ ಸೂಪರ್‍ಸ್ಟಾರ್ ಆಗಿರುವುದು. ಚಿತ್ರದಲ್ಲಿ ಸೆಸ್ಪನ್ಸ್, ಗ್ರಾಫಿಕ್ಸ್ ಹಾಗೂ ರಜನಿ ಸರ್ ಹಲವು ಗೆಟಪ್‍ಗಳಲ್ಲಿ ರಂಜಿಸಿದ್ದಾರೆ. ಮೊಬೈಲ್ ಫೋನ್ ಬಳಕೆ ಅಪಾಯಕಾರಿ ಎಂಬುದಾಗಿ ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನಂತರ ಪರದೆ ಮೇಲೆ ಶಿವರಾಜ್‍ಕುಮಾರ್, ಉಪೇಂದ್ರ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪರಿ ಹೀಗಿತ್ತು:

ಯೋಚನೆ ಹೇಗೆ ಹುಟ್ಟುತ್ತೆ ಎಂಬುದು ಗೊತ್ತಿಲ್ಲ. ಕತೆ ಬರೆಯುವಾಗಲೇ ಇಂತಹ ಶೀರ್ಷಿಕೆ ಇಡಬಹುದು ಅಂತ ಚಿಂತನೆ ಮಾಡಲಾಗುವುದು. ಉಪೇಂದ್ರ ಅವರ ಎ ಸಿನಿಮಾವು ಪ್ರಾರಂಭದಲ್ಲಿ ಕ್ಲೈಮಾಕ್ಸ್ ತೋರಿಸಿ, ನಂತರ ಕತೆ ಹೇಳುವ ಅವರ ಬುದ್ದಿಶಕ್ತಿ ಚೆನ್ನಾಗಿದೆ. ನಿರ್ಮಾಪಕರು ಸಿಕ್ಕಿದ್ದಾರೆ ಅಂತ ಸಿನಿಮಾ ಮಾಡಬೇಡಿ. ಒಳ್ಳೆ ಕತೆ, ಅದಕ್ಕೆ ಸರಿಯಾದ ಕಲಾವಿದ, ನಿರ್ದೇಶಕ, ತಂತ್ರಜ್ಘರನ್ನು ಆಯ್ಕೆ ಮಾಡಿಕೊಂಡಲ್ಲಿ ಖಂಡಿತ ಗೆಲುವು ಶತಸಿದ್ದ. ಭಾರತೀಯ ಮಾದ್ಯಮದವರು ಪ್ರೋತ್ಸಾಹ ಮಾಡಿದಲ್ಲಿ ಇಡೀ ವಿಶ್ವಕ್ಕೆ ನಾವು ಇಂತಹ ಸಿನಿಮಾ ಮಾಡಬಹುದು ಅಂತ ತೋರಿಸಬಹುದು ಎಂದರು.

ಅಪ್ಪ ಸೇನೆಯಲ್ಲಿದ್ದರಿಂದ ಅವರಿಂದ ಶಿಸ್ತನ್ನು ಕಲಿತಿದ್ದನೆ. ತಪ್ಪದೆ ಸೂರ್ಯಾಸ್ತಮಾನವನ್ನು ನೋಡುತ್ತೇನೆ. ಇಪ್ಪತ್ತೆಂಟು ವರ್ಷಗಳಲ್ಲಿ ಖಳನಾಯಕನಾಗಿ ಅಭಿನಯಿಸಿದ್ದು ಮರೆಯಲಾಗದ ಅನುಭವ. ಮೇಕಪ್ ಹಾಕಲು ನಾಲ್ಕೂವರೆ ಗಂಟೆ, ಅದನ್ನು ತೆಗೆಯಲು ಒಂದೂವರೆ ಗಂಟೆ ಬೇಕಾಗಿತ್ತು. ನನ್ನ ದೇಹ ದೇವಸ್ಥಾನ ಇದ್ದಂತೆ. ಅದನ್ನು ಪ್ರತಿ ದಿನ ಪೂಜಿಸುತ್ತೇನೆ ಎಂದು ಅಕ್ಷಯ್‍ಕುಮಾರ್ ಹೇಳಿದರು.

ಚಿತ್ರಕ್ಕೆ ಅಂದಾಜು ಆರು ನೂರು ಕೋಟಿ ಖರ್ಚಾಗಿದೆ. ಇಂತಹ ಸಾಹಸ ನಿರ್ಮಾಪಕರು ಯೋಚನೆ ಮಾಡುವುದು ಬೇಡ. ಈಗಾಗಲೆ ಸಿನಿಮಾ ಗೆದ್ಧಾಗಿದೆ. ಶಿವಾಜಿ, ರೋಬೋ ಹಿಟ್ ಆಗಿತ್ತು. ಅದಕ್ಕಿಂದಲೂ ಎರಡುಪಟ್ಟು ಗಳಿಕೆ ಬರುತ್ತದೆಂದು ಹೇಳುತ್ತೇನ. ಆರೋಗ್ಯ ಹದಗೆಟ್ಟಾಗ ನಿರ್ಮಾಪಕರನ್ನು ಕರೆದು ಮಾಡಲು ಆಗುವುದಿಲ್ಲೆವಂದು ಸಂಭಾವನೆ ವಾಪಸ್ಸು ಕೊಡುವುದಾಗಿ ತಿಳಿಸಿದ್ದೆ. ಅವರು ನೀವು ಬಿಟ್ಟು ಬೇರೆ ಯಾರು ಮಾಡಲಿಕ್ಕೆ ಆಗುವುದಿಲ್ಲವೆಂದು ಧೈರ್ಯ ತುಂಬಿದರು. ತಡವಾದರೂ ಸರಿಯಾದ ಸಮಯದಲ್ಲಿ ಬರುತ್ತಿದ್ದೇವೆ. ಚಿತ್ರ ಬಿಡುಗಡೆ ನಂತರ ಶಂಕರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಾರೆಂದು ಅವರನ್ನು ಹೊಗಳಿ ಮಾತಿಗೆ ವಿರಾಮ ಹಾಕಿದರು ರಜನಿಕಾಂತ್.

ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ನಾಯಕಿ ಆ್ಯಮಿಜಾಕ್ಸನ್, ಛಾಯಗ್ರಾಹಕ ನಿರವ್‍ಶಾ, ಸಂಕಲನಕಾರ ಆಂಥೋನಿ, ಸೌಂಡ್ ಇಂಜಿನಿಯರ್ ರಸೂಲ್‍ಪೂಕಟ್ಟಿ ಆಸೀನರಾಗಿ ಚುಟುಕು ಮಾತನಾಡಿದರು. ಸುಭಾಸ್‍ಕಿರಣ್ ನಿರ್ಮಾಣ ಮಾಡಿರುವ ಚಿತ್ರವು ಇದೇ 29ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/11/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore