HOME
CINEMA NEWS
GALLERY
TV NEWS
REVIEWS
CONTACT US

ಅಕ್ಷಯ ತೃತೀಯದ ಮುನ್ನ ದಿನ `ರೀವೈಂಡ್` ಮಹೂರ್ತ
ಎರಡು ಭಾಷೆಯಲ್ಲಿ ಸಿದ್ದಗೊರ್ಳಳುತ್ತಿರುವ `ರೀವೈಂಡ್` ಚಿತ್ರದÀ ಮುಹೂರ್ತವು ಅಕ್ಷಯ ತೃತೀಯ ಮುನ್ನ ದಿನ ಎಲೆಕ್ಟ್ರಾನಿಕ್ ಸಿಟಿಯ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ದೇವರ ಮೇಲೆ ಸೆರೆಹಿಡಿಯಲಾದ ಪ್ರಥಮ ಸನ್ನಿವೇಶಕ್ಕೆ ಸರು ಅವರು ಆರಂಭ ಫಲಕ ತೋರಿದರು. ಆಕಾಶ್ ಕ್ಯಾಮೆರಾ ಚಾಲನೆ ಮಾಡಿದರು.

ತಮಿಳು ಚಿತ್ರ ಕೊಂಜಂ ವೆಯಿಲ್ ಕೊಂಜಂ ಮಾಜೈ, ಕಾದಲಿಕ್ಕಿ ಮರಣಂ ಇಲೈ ಚಿತ್ರಗಳಲ್ಲಿ ನಟಿಸಿ ಜನಮನ ಸೆಳೆದಿದ್ದ ತೇಜ್ ಈ ಚಿತ್ರದ ಮೂಲಕ ನಿರ್ದೇಶನ ಹಾಗೂ ನಟಿಸುವುದರೊಂದಿಗೆ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. `ಸಿಂಧೂರ` ಧಾರಾವಹಿಯ ಚಂದನರಾಘವೇಂದ್ರ ನಾಯಕಿ. ಕೆಜಿಎಫ್, ಕವಲುದಾರಿ ಖ್ಯಾತಿಯ ಸಂಪತ್‍ಕುಮಾರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಸುಂದರರಾಜ್, ಮಂಡ್ಯರವಿ, ಆನಂದ್, ಸಂದೀಪ್‍ಮಲಾನಿ, ವಿಕಾಸ್‍ಗೌಡ ಮತ್ತು ಚೈನಾದ ಖ್ಯಾತ ಖಳನಟನೊಂದಿಗೆ ಪ್ರಮುಖ ಖಳನಾಯಕನ ಪಾತ್ರಕ್ಕೆ ಮಾತುಕಥೆ ನಡೆಯುತ್ತಿದೆ.

ವಿಭಿನ್ನ ಶೀರ್ಷಿಕೆಯಿರುವ ಈ ಸಿನಿಮಾ ಮನೆಮಂದಿ ಕೂತು ನೋಡುವಂತಹ ಒಂದು ಸೈಂಟಿಫಿûಕ್ ಫಿûಕ್‍ಷನ್ ಆಗಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸಬೀಶ್‍ಸೊಲೋಮನ್ ಸಂಗೀತ, ಪ್ರೇಮ್ ಛಾಯಾಗ್ರಹಣ ಹಾಗೂ ವಿನೋದ್‍ಬಸವರಾಜ್ ಸಂಕಲನವಿದೆ. ಅನನ್ಯಭಟ್ ಹಾಡು ಇರಲಿದೆ.

ಪ್ರತಿ ಹತ್ತು ನಿಮಿಷಕ್ಕೊಮ್ಮೆ ಕಥೆಯನ್ನು ಭೂತಕಾಲ ಹಾಗೂ ವರ್ತಮಾನ ಕಾಲದ ನಡುವೆ ಹೆನೆಯಲಾಗಿದೆ. ದ್ವಿಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಲೂಥೇನಿಯಾ, ಜರ್ಮನ್, ಸಿಂಗಾಪುರ್ ಹಾಗೂ ಬೆಂಗಳೂರಿನಲ್ಲಿ ಚಿತ್ರಿಸಲಾಗುವುದು. ಡಾ.ಶಿವರಾಜ್‍ಕುಮಾರ್ ಆರ್ಶಿವಾದದೊಂದಿಗೆ ವಿನೋದ್ ಅವರು ನಿರ್ಮಿಸುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
11/05/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore