HOME
CINEMA NEWS
GALLERY
TV NEWS
REVIEWS
CONTACT US

ಮಗಳ ಮದುವೆಗೆ ಹಾಡು ಬರೆದ ಕ್ರೇಜಿಸ್ಟಾರ್
ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಕಳೆದ ತಿಂಗಳಿದ ಸಂಭ್ರಮದ ವಾತಾವರಣ ಆಗುತ್ತಿದೆ. ಮಗಳು ಗೀತಾಂಜಲಿ, ಉದ್ಯಮಿ ಅಜಯ್ ಜೊತೆ ಖಾಸಗಿ ಹೋಟೆಲ್‍ನಲ್ಲಿ ನಿಶ್ಚಿತಾರ್ಥವು ನಡೆದಿತ್ತು. ರವಿಚಂದ್ರನ್ ಶೂಟಿಂಗ್, ರಿಯಾಲಿಟಿ ಷೋದಲ್ಲಿ ಬ್ಯುಸಿ ಇದ್ದರೂ ಸಮಯ ಹೊಂದಿಸಿಕೊಂಡು ಮಗಳ ಮದುವೆಗಾಗಿ ಒಂದು ಹಾಡನ್ನು ಬರೆದು ಮುದ್ದಿನ ಪುತ್ರಿಗೆ ಅರ್ಪಿಸಿದ್ದಾರೆ. ‘ಯಾಕೋ ಏನೋ ತಿಳಿದೇನೆ ಚಡಪಡಿಸಿದೆ ಮನಸು ನೋವು ನಲಿವು ಜೊತೆಗೆ....ಸಂಭ್ರಮ ಅಡಗಿದೆ. ಓ ನನ್ನ ಮಗಳೇ ಬೆಳೆದ ಮೇಲೆ ನೀನು ನಾನು ಮಗುವಾದೆ, ಅಪ್ಪ ಡ್ಯಾಡಿ ಅಂತ ಕರೆಯೋದ್ ಯಾರಮ್ಮಾ’ ಎಂಬಂತಹ ಸಾಲುಗಳು ಇರಲಿದೆ. ಇಂತಹ ಪದಗಳಿಗೆ ರಾಗ ಸಂಯೋಜಿಸಿ ಧ್ವನಿಯಾಗಿರುವುದು ಗೌತಂಶ್ರೀವತ್ಸ. ಹಾಡಿನ ಜೊತೆಗೆ ಮದುವೆ ವಿಶೇಷತೆಗಳ ಬಗ್ಗೆ ಮೂರು ಕಂತಿನಲ್ಲಿ ಕಲರ್ಸ್ ಕನ್ನಡದ ‘ತಕದಿಮಿತ’ ರಿಯಾಲಿಟಿ ಷೋದಲ್ಲಿ ಡ್ಯಾನ್ಸ್ ಕಾರ್ಯುಕ್ರಮ ನಡುವೆ ಪ್ರಸಾರವಾಗಲಿದೆ. ಮೇ 29ರಂದು ರವಿಚಂದ್ರನ್ ಹುಟ್ಟುಹಬ್ಬ, ಅಂದೇ ಮಹೂರ್ತ ನಡೆಯಲಿದ್ದು, 28ರಂದು ಆರತಕ್ಷತೆ ಜರುಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
15/04/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore