HOME
CINEMA NEWS
GALLERY
TV NEWS
REVIEWS
CONTACT US
ಇಲ್ಲಿ ಅವಮಾನ ಅಲ್ಲಿ ಅಭಿಮಾನ
ಕನ್ನಡ ಚಿತ್ರಗಳಿಗೆ ಸೆನ್ಸಾರ್‍ನವರು ಕಿರುಕುಳ ನೀಡುತ್ತಿರುವುದು ತಿಳಿದಿರುವ ವಿಷಯವಾಗಿದೆ. ಅದಕ್ಕೂ ಮೀರಿದಂತೆ ‘ರವಿ ಹಿಸ್ಟರಿ’ ಚಿತ್ರಕ್ಕೆ ಮರೆಯಲಾಗದಂತ ಅವಮಾನ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಅದನ್ನು ನಾವು ಹೇಳುವುದಕ್ಕಿಂತ ಅನುಭವಿಸಿದವರಿಂದ ಕೇಳುವುದು ಸೂಕ್ತ. ಅವರ ಮಾತುಗಳು ನಿಮಗಾಗಿ:

‘ರವಿ ಹಿಸ್ಟರಿ’ ಚಿತ್ರಕ್ಕೆ ನಾಯಕ, ನಿರ್ಮಾಪಕನಾಗಿದ್ದು, ಸೆನ್ಸಾರ್ ಮಾಡಿಸುವ ಸಲುವಾಗಿ ಚಿತ್ರವನ್ನು ಮಂಡಳಿಗೆ ನೀಡಲಾಯಿತು. ಸಿನಿಮಾ ವೀಕ್ಷಿಸಿದ ನಂತರ ಅಲ್ಲಿನ ಆರ್‍ಓ (ಶ್ರೀನಿವಾಸಪ್ಪ) ನಿರ್ದೇಶಕರನ್ನು ಕರೆಯದೆ, ಕೆಲವು ಕಟ್‍ಗಳನ್ನು ಮಾಡಬೇಕಾಗುತ್ತದೆ. ಒಂದೊಂದು ಕಟ್‍ಗೆ ನೀವು ಸಮ್ಮತಿಸಿದರೆ ಯುಎ ನೀಡಲಾಗುವುದು. ಇಲ್ಲದಿದ್ದಲ್ಲಿ ಎ ಸರ್ಟಿಫೀಕೇಟ್ ಕೊಡುತ್ತೇವೆ. ಮೊದಲ ಹಾಡಿನ ಒಂದು ಪ್ಯಾರವನ್ನು ತೆಗೆದುಹಾಕಬೇಕು. ಅವರಂತೆ ಒಪ್ಪಿಕೊಳ್ಳಲಾಯಿತು. ಎರಡನೆ ಕಟ್ ಕುರಿತಂತೆ ಚರ್ಚಿಸಲು ಹೋದಾಗ ಸೂಕ್ತ ಗೌರವ ಕೊಡದೆ ನಿಂದಿಸಿ ಒಂದು ಮೂಲೆಯಲ್ಲಿ ನಿಂತುಕೊಳ್ಳಲು ಸೂಚಿಸಿದರು. ಮುಂದೆ ಕ್ಷಮಾಪಣಾ ಪತ್ರ ತಂದಲ್ಲಿ ಚರ್ಚಿಸಲಾಗುವುದಾಗಿ ಕಡ್ಡಿ ತುಂಡು ಮಾಡಿದಂತೆ ಖಾರವಾಗಿ ಹೇಳಿದರು. ನಿರ್ದೇಶಕರ ಸಲಹೆಯಂತೆ ಪತ್ರವನ್ನು ಬರೆದುಕೊಡಲಾಯಿತು. ಕಟ್ ವಿಷಯ ಬಂದಾಗಲೂ ಇದೇ ರೀತಿ ನಡೆದುಕೊಂಡು ಹೊರಗೆಹೋಗಿರೆಂದು ಇಂಗ್ಲೀಷ್ ಭಾಷೆಯಲ್ಲಿ ನಿಂದಿಸಿದರು. ನಾವುಗಳು ರಿವೈಸಿಂಗ್ ಕಮಿಟಿಗೆ ಹೋಗುವುದಾಗಿ ಹೇಳಿದಾಗ, ಅಲ್ಲಿಯೂ ನಾನೇ ಇರುತ್ತೇನೆಂದು ಉದಾಸೀನ ಮಾಡಿರುತ್ತಾರೆ.

ಗೆಳಯರ ಸಹಕಾರದಿಂದ ದೆಹಲಿಯ ಈಅಂಖಿ (ಈiಟm ಅeಡಿಣiಜಿiಛಿಚಿಣe ಂಠಿಠಿeಟಟಚಿಣe ಖಿಡಿibuಟಿಚಿಟ) ಕಚೇರಿಯನ್ನು ಸಂಪರ್ಕಿಸಲಾಯಿತು. ಮೂರು ವರ್ಷದಿಂದ ಯಾವುದೇ ಕನ್ನಡ ಚಿತ್ರಗಳು ಸದರಿ ಕಚೇರಿಗೆ ಅರ್ಜಿಯನ್ನು ಹಾಕಿಲ್ಲ. ವಿಷಯ ತಿಳಿದ ಆರ್‍ಓ ದೂರವಾಣಿ ಮೂಲಕ ಸಂಪರ್ಕಿಸಿ ರಿವೈಸಿಂಗ್ ಕಮಿಟಿ ಇದೆ. ನೀವು ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲವೆಂದು ಸಮಜಾಯಿಷಿ ನೀಡಿದರು. ಇವರ ಮಾತನ್ನು ನಂಬದೆ ಕೇಂದ್ರ ಕಚೇರಿಗೆ ಚಿತ್ರವನ್ನು ನೀಡಲಾಯಿತು. ಅವರು 50 ದಿನಗಳ ಒಳಗೆ ವೀಕ್ಷಿಸಿ ಯಾವುದೇ ದೃಶ್ಯ ಕಟ್ ಮಾಡಲು ಸೂಚಿಸದೆ ಯುಎ ನೀಡಿ ಗೌರವಿಸಿದರು. ನಮ್ಮಂತೆ ಹೊಸ ನಿರ್ಮಾಪಕರು ಇದೇ ವೇದನೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಏನಾದರೂ ದಾರಿ ಹುಡುಕಲು ಮಾದ್ಯಮದವರು ಪ್ರೋತ್ಸಾಹ ನೀಡಬೇಕು ಎಂದರು.

ನಿರ್ದೇಶಕ ಮಧುಚಂದ್ರ ಹೇಳುವಂತೆ ಸೆನ್ಸಾರ್‍ನವರು ವಿನಕಾರಣ ಚಿತ್ರದ ಮೇಲೆ ಗುರುತರ ಆರೋಪ ಮಾಡಿ ಒಳ್ಳಯ ಚಿತ್ರಗಳಿಗೆ ಎ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಇದು ನಿಲ್ಲಬೇಕು ಎಂಬುದು ಅವರ ಬೇಡಿಕೆ. ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ನಾಯಕಿ ಪಲ್ಲವಿರಾಜು ಪರದೆ ಹಿಂದೆ ಈ ರೀತಿ ನಡೆಯುತ್ತಾ ಎಂಬುದು ತಿಳಿದಿಲ್ಲ ಅಂತಾರೆ. ಸೆನ್ಸಾರ್‍ನವರು ಹಾಡು ತೆಗೆಯಬೇಕೆಂದು ಹೇಳಿದ್ದ ಗೀತೆಯನ್ನು ತೋರಿಸಲಾಗಿ ಯಾವುದೇ ಅಹಿತಕತ ದೃಶ್ಯಗಳು ಕಾಣಿಸಲಿಲ್ಲ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/07/18


ರವಿ ಪುರಾಣ
ಪ್ರಚಲಿತ ಜಗತ್ತಿನಲ್ಲಿ ಡಿ.ಕೆ.ರವಿ, ರವಿಪೂಜಾರಿ, ರವಿಬೆಳಗೆರೆ, ರವಿಚಂದ್ರನ್ , ಹೊಸಬೆಳಕು ಚಿತ್ರದಲ್ಲಿ ರವಿಯಾಗಿ ಡಾ.ರಾಜ್‍ಕುಮಾರ್ ನಟಿಸಿದ್ದರು. ಹೀಗೆ ಅನೇಕರು ಇದೇ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದಾರೆ. ಇಷ್ಟಲ್ಲಾ ಪುರಾಣ ಹೇಳುವುದಕ್ಕೆ ಒಂದು ಪೀಠಿಕೆ ಇದೆ. ಸೈಬರ್‍ಯುಗದೊಳ್ ಪ್ರೇಮಕಾವ್ಯಂ, ವಾಸ್ಕೋಡಿಗಾಮ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಮಧುಚಂದ್ರ ಮೂರನೆ ಸಿನಿಮಾ ‘ರವಿ ಊisಣoಡಿಥಿ’ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ಮೈಕ್ ತೆಗೆದುಕೊಂಡ ನಿರ್ದೇಶಕರು ಒಂದೂವರೆ ವರ್ಷದ ಶ್ರಮ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ರವಿ ನಾಮಧೇಯದಲ್ಲಿ ಹಲವರು ಇದ್ದಾರೆ. ಈ ಹೆಸರಿನಲ್ಲಿ ಪ್ರಸಿದ್ದರಾದವರು ಚಿತ್ರಕ್ಕೆ ಸಂಬಂದಿಸಿಲ್ಲ. ನಾಯಕನ ಹೆಸರು ರವಿಯಾಗಿರುವ ಕಾರಣ ಇದನ್ನೆ ಇಡಲಾಗಿದೆ. ಯೌವ್ವನದಲ್ಲಿರುವಾಗ ಆತ ಸಾಕಷ್ಟು ಕನಸುಗಳನ್ನು ಕಂಡು ಅದನ್ನು ಸಾದಿಸುವ ಪಯಣದಲ್ಲಿ ಅನೇಕ ಏರುಪೇರುಗಳು ಬಂದು ಏನೇನೋ ಆಗುತ್ತದೆ. ಅದನ್ನು ಸರಿಪಡಿಸಿಕೊಂಡು ತನ್ನ ವಾಂಚೆಯನ್ನು ಹೇಗೆ ನಿಭಾಯಿಸುತ್ತೇನೆ ಅಂತ ಒಂದು ಏಳೆಯ ಸಾರಾಂಶ ಬಿಚ್ಚಿಟ್ಟರು.

ಪಿ.ಯು.ಸಿ, ಇಂಜನಿಯರಿಂಗ್ ವ್ಯಾಸಾಂಗ, ಪದವಿ ಪಡೆದಿರುವುದು ಕೊನೆಯಲ್ಲಿ ಗ್ಯಾಂಗ್‍ಸ್ಟರ್ ಹೀಗೆ ನಾಲ್ಕು ಆಯಾಮಗಳಲ್ಲಿ ಕಾಣ ಸಿಕೊಳ್ಳುತ್ತಿರುವುದು ಹೊಸ ಅನುಭವವೆಂದು ಹೇಳಿಕೊಂಡರು ನಾಯಕ,ನಿರ್ಮಾಪಕ ಕಾರ್ತಿಕ್‍ಚಂದ್ರ. ಹಿಂದಿನ ಎರಡು ಚಿತ್ರಗಳಿಗಿಂತ ಇದರಲ್ಲಿ ವಿಭಿನ್ನ ಅವಕಾಶ ಸಿಕ್ಕಿದೆ ಎಂದು ಖುಷಿಗೊಂಡರು ಇನ್ಸೆಪೆಕ್ಟರ್ ಪಾತ್ರ ಮಾಡಿರುವ ನಾಯಕಿ ಪಲ್ಲವಿರಾಜು. ಮೈಸೂರು ಮೂಲದ ಯೋಗ ಶಿಕ್ಷಕಿ ಐಶ್ವರ್ಯರಾವ್ ಉಪನಾಯಕಿಯಂತೆ. ಹಾಫ್‍ಬಾಯಲ್ಡ್, ಮೂರು ಪೆಗ್ ವಿಡಿಯೋ ಆಲ್ಬಂ ಹಾಡಿಗೆ ಸಂಗೀತ ಸಂಯೋಜಿಸಿರುವ ವಿಜೇತ್‍ಕೃಷ್ಣ ಸಂಬಂದಿ ಸೂರಜ್‍ಸರ್ಜಾ ಜಂಟಿಯಾಗಿ ಮೂರು ಹಾಡುಗಳಿಗೆ ಸಂಗೀತ ನೀಡಿರುವುದರಿಂದ ಇವರ ಮೇಲಿನ ನಂಬಿಕೆ ಮೇಲೆ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಲಾಗಿದೆ. ಅದರಲ್ಲೂ ವಿಜೇತ್‍ಕೃಷ್ಣ 3ಪೆಗ್ ಎಲ್ಲಾ ಕಡೆ ಪ್ರಸಿದ್ದಿಯಾಗಿದೆ. ಚಿತ್ರರಂಗಕ್ಕೆ ಪ್ರತಿಭೆ ಇರುವವರು ಬಂದಲ್ಲಿ ಉತ್ತಮ ಹಾಡುಗಳು ಬರುತ್ತವೆ ಅಂತ ಅಭಿಪ್ರಾಯಪಟ್ಟರು ಡಿ ಬೀಟ್ಸ್ ಒಡತಿ ಶೈಲಜಾನಾಗ್ . ಚಿಕ್ಕಣ್ಣ, ಸಾಧುಕೋಕಿಲ ಇವರೊಂದಿಗೆ ನೀನಾಸಂ, ರಂಗಾಯಣ ಕಲಾವಿದರು ಹಿರಿತೆರೆಗೆ ಬಣ್ಣ ಹಚ್ಚಿದ್ದಾರೆ. ನೃತ್ಯ ಗೋಕುಲ್, ಛಾಯಗ್ರಹಣ ಅನಂತ್‍ಅರಸ್,. ಸಂಕಲನ ಅಬ್ದುಲ್‍ಖರೀಂ, ಸಾಹಸ ವಿಕ್ರಂಮೋರ್, ಸಾಹಿತ್ಯ ಮಧುಚಂದ್ರ,ಸ್ಪೂರ್ತಿಗಿರೀಶ್ ಅವರದಾಗಿದೆ. ಇದಕ್ಕೂ ಮುನ್ನ ಎರಡು ಹಾಡುಗಳನ್ನು ಕೇಳಿಸಲಾಗಿ, ಒಂದು ಗೀತೆಯನ್ನು ತೋರಿಸಲಾಯಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-16/02/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore