HOME
CINEMA NEWS
GALLERY
TV NEWS
REVIEWS
CONTACT US
ಕ್ರೇಜಿಸ್ಟಾರ್ ಚಿತ್ರಕ್ಕೆ ಸುದೀಪ್ ಅತಿಥಿ ಪಾತ್ರ
ಸುದೀಪ್ ನಿರ್ದೇಶನದ ‘ಮಾಣಿಕ್ಯ’ ಆ ನಂತರ ಹೆಬ್ಬುಲಿಯಲ್ಲಿ ರವಿಚಂದ್ರನ್ ನಟಿಸಿದ್ದರು. ಈಗ ಕ್ರೇಜಿಸ್ಟಾರ್ ನಟನೆ, ನಿರ್ದೇಶನದ ‘ರವಿ ಬೋಪಣ್ಣ’ ಸಿನಿಮಾದಲ್ಲಿ ಸುದೀಪ್ ಗೆಸ್ಟ್ ಆಗಿ ಕಾಣಿಸಲಿದ್ದಾರೆ. ಈ ಹಿಂದೆ ‘ರವಿ’ ಹೆಸರಿನಲ್ಲಿ ಒಂದು ವಾರದ ಚಿತ್ರೀಕರಣ ನಡೆದಿತ್ತು. ಒಮ್ಮೆ ನಿರ್ಮಾಪಕರು ಇವರ ಗಡ್ಡ ನೋಡಿ ಚೆನ್ನಾಗಿದೆ. ಇದರಲ್ಲೇ ಒಂದು ಸಿನಿಮಾ ಮಾಡಿಕೊಡಿ ಎಂದು ಕೋರಿಕೊಂಡಿದ್ದಾರೆ. ಇವರ ಕೋರಿಕೆಗೆ ಸ್ಪಂದಿಸಿ ವಾರ ಕೆಲಸ ಮಾಡಿದ್ದನ್ನು ಪಕ್ಕಕ್ಕೆ ಇಟ್ಟು ತಮ್ಮದೆ ಸಾರಥ್ಯದಲ್ಲಿ ಈ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಸೈಬರ್ ಕ್ರೈಂ ಪೋಲೀಸ್ ಅಧಿಕಾರಿಯಾಗಿ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಒಂದರಲ್ಲಿ ದಾಡಿರಹಿತ ಲುಕ್ ಬರುತ್ತದೆ. ಚಿತ್ರದ ಏಳೆಯನ್ನು ಬಿಟ್ಟಕೊಡದೆ, ಸೈಬರ್ ಕ್ರೈಂ ಸುತ್ತ ನಡೆಯುವ ಕತೆಯಾಗಿದ್ದು, ದೃಶ್ಯ-2 ತರಹ ಫೀಲ್ ಕೊಡಲಿದೆ. ಕಾವ್ಯಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದು, ಮತ್ತೋಂದು ನಾಯಕಿ ಪಾತ್ರಕ್ಕೆ ತಲಾಷ್ ನಡೆಯುತ್ತಿದೆ. ರವಿಚಂದ್ರನ್ ಕತೆ,ಚಿತ್ರಕತೆ, ಸಾಹಿತ್ಯ, ಸಂಗೀತದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಮೋಹನ್ ಗೆಳಯನ ಪಾತ್ರಕ್ಕೆ ಬಣ್ಣ ಹಚ್ಚುವ ಜೊತೆಗೆ ಸಂಭಾಷಣೆ ಬರೆಯುತ್ತಿದ್ದಾರೆ. ತಾರಬಳಗದಲ್ಲಿ ರಾಮಕೃಷ್ಣ, ಲಕ್ಷಣ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಛಾಯಾಗ್ರಹಣ ಜಿ.ವಿ.ಸೀತಾರಾಂ, ಕಾರ್ಯಕಾರಿ ನಿರ್ಮಾಪಕ ಜಗದೀಶ್ ಅವರದಾಗಿದೆ. ಕತೆಯು ಮಡಕೇರಿಯಲ್ಲಿ ನಡೆಯಲಿರುವುದರಿಂದ ಆ ಭಾಗದ ಸುಂಟಿಕೊಪ್ಪದಲ್ಲಿ ಸಂಪೂರ್ಣ ಚಿತ್ರೀಕರಣ ನಡೆಸಲಾಗುವುದು. ಶೇಕಡ 50ರಷ್ಟು ಮಳೆಯ ಸನ್ನಿವೇಶ ಬರುವ ಕಾರಣ ಮಳೆ ಕಡಿಮೆಯಾದ ನಂತರ ಅಲ್ಲಿಗೆ ಹೋಗಲು ಯೋಜನೆ ಹಾಕಲಾಗಿದೆ. ಈಗಾಗಲೇ ಗೆಳೆತನ ಕುರಿತಾದ ಮತ್ತು ಡುಯ್ಯೆಟ್ ಹಾಡು ಸಿದ್ದಗೊಂಡಿದೆ. ಬಿಲ್ಡರ್ ಅಜಿತ್ ಬಂಡವಾಳ ಹೂಡುತ್ತಿದ್ದಾರೆ. ಮಳೆ ಹಾನಿಯಿಂದ ನೊಂದವರಿಗೆ ನಿರ್ಮಾಪಕರು ಸಹಾಯ ಮಾಡಲು ಮುಂದಾಗಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/08/19




For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore