HOME
CINEMA NEWS
GALLERY
TV NEWS
REVIEWS
CONTACT US

ಅಮೇರಿಕಾದಲ್ಲಿ ನಡೆದ ನೈಜ ಘಟನೆ
ಸತ್ಯ ಕತೆಗಳನ್ನು ಜನರು ಇಷ್ಟಪಡುತ್ತಿರುವ ಕಾರಣ ಅಂತಹುದೆ ಚಿತ್ರಗಳು ಬರುತ್ತಿದೆ. ಆ ಸಾಲಿಗೆ ಪ್ರಥಮ ಎನ್ನುವಂತೆ ‘ರತ್ನಮಂಜರಿ’ ಅಮೇರಿಕಾದಲ್ಲಿ ನಡೆದ ನೈಜ ಘಟನೆಯಾಗಿದೆ. ಅದಕ್ಕಾಗಿ ಕೆಲವೊಂದು ಭಾಗಗಳು ಆ ಭಾಗದಲ್ಲಿ ಚಿತ್ರೀಕರಣವಾಗಿರುವುದು ಖುಷಿ ನೀಡುತ್ತದೆ. ನವ ದಂಪತಿಗಳು ಹೊಸದೊಂದು ಮನೆಗೆ ಹೋದಾಗ ಅಲ್ಲಿ ಅವನಿಗೆ ಭಯಾನಕ ಕನಸೊಂದು ಬರುತ್ತಿರುತ್ತದೆ. ವಿಷಯವನ್ನು ಅಮ್ಮನ ಬಳಿ ಹೇಳಿದಾಗ ಮನೆ ದೇವರ ಪೂಜೆ ಮಾಡಿಸು ಎಲ್ಲವು ಸರಿ ಹೋಗುತ್ತದೆಂದು ಹೇಳುತ್ತಾರೆ. ಅದರಂತೆ ಮಡಕೇರಿಗೆ ಬಂದು ದೇವರಿಗೆ ಹರಕೆ ಸಲ್ಲಿಸಿ, ಹಿಂದಿರುಗಿದಾಗ ಪಕ್ಕದ ಮನೆಯ ದಂಪತಿಗಳ ಕೊಲೆಯಾಗಿರುತ್ತದೆ. ಇದನ್ನು ಭೇದಿಸಲು ಪುನ: ಕರ್ನಾಟಕಕ್ಕೆ ಬರುತ್ತಾನೆ. ಮುಂದೆ ಕಂಡು ಹಿಡಿಯುವಾಗ ಕಷ್ಟದಲ್ಲಿ ಸಿಲುಕುತ್ತಾನೆ. ಇದೆಲ್ಲಾವನ್ನು ಎದುರಿಸಿ ಹೇಗೆ ಅಪರಾದಿಯನ್ನು ಯಾವ ರೀತಿ ಹುಡುಕುತ್ತಾನೆ ಎಂಬುದನ್ನು ಮರ್ಡರ್ ಮಿಸ್ಟರಿಯಲ್ಲಿ ಅದ್ಬುತವಾಗಿ ತೋರಿಸಲಾಗಿದೆ. ನಾವು ಹೇಳುವುದಕ್ಕಿಂತ ಚಿತ್ರಮಂದಿರದಲ್ಲಿ ನೋಡಿದರೆ ಅದರ ಪರಿಯೇ ಬೇರೆಯಾಗಿರುತ್ತದೆ.

ನಾಯಕ ರಾಜ್‍ಚರಣ್, ನಾಯಕಿ ಅಖಿಲಾಪ್ರಕಾಶ್ ಇಬ್ಬರಿಗೂ ಹೊಸ ಅನುಭವವಾಗಿದೆ. ಆದರೂ ಎಲ್ಲಿಯೂ ಸೈಕಲ್ ಹೊಡೆಯದೆ ನಟಿಸಿದ್ದಾರೆ. ಸಾಹಸ ದೃಶ್ಯದಲ್ಲಿ ನಾಯಕ ಮಿಂಚಿದರೆ, ಹಾಡಿನಲ್ಲಿ ನಾಯಕಿ ಚೆಂದ ಕಾಣಿಸುತ್ತಾರೆ. ಉಪನಾಯಕಿಯರಾಗಿ ಪಲ್ಲವಿರಾಜು, ಶ್ರದ್ದಾಸಾಲಿಯನ್‍ಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ನಿರ್ಮಾಪಕರಲ್ಲಿ ಒಬ್ಬರಾದ ನಟರಾಜಹಳೇಬೀಡು ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರಕತೆ,ನಿರ್ದೇಶನ ಮಾಡಿರುವ ಪ್ರಸಿದ್ದ್ ಮೊದಲ ಪ್ರಯತ್ನದಲ್ಲಿ ಸಪಲರಾಗಿರುವುದು ಪರದೆ ಮೇಲೆ ಕಾಣಿಸುತ್ತದೆ. ಹರ್ಷವರ್ಧನ್‍ರಾಜ್ ಸಂಗೀತ ಎರಡು ಹಾಡುಗಳು ಮೆಲುಕು ಹಾಕುವಂತಿದೆ. ಪ್ರೀತಂತಗ್ಗಿನಮನೆ ಕ್ಯಾಮರದಲ್ಲಿ ವಿದೇಶ, ಮಡಕೇರಿಯ ಸುಂದರ ತಾಣಗಳು ಕಣ್ಣಿಗೆ ತಂಪು ಕೊಡುತ್ತದೆ. ಸಂಕಲನ ಪವನ್‍ರಾಮಿಶೆಟ್ಟಿ, ಸಾಹಸ ವಿಕ್ರಂಮೋರ್, ನೃತ್ಯ ಭೂಷಣ್-ಮೋಹನ್ ಇದಕ್ಕೆ ಪೂರಕವಾಗಿದೆ. ಎನ್‍ಆರ್‍ಐ ಕನ್ನಡಿಗರು ನಿರ್ಮಾಣ ಮಾಡಿರುವ ಚಿತ್ರವು ರತ್ನದಂತೆ ಇದೆ ಎನ್ನಬಹುದಾಗಿದೆ.
ನಿರ್ಮಾಣ: ಸಂದೀಪ್‍ಕುಮಾರ್, ನಟರಾಜಹಳೇಬೀಡು, ಡಾ.ನವೀನ್‍ಕೃಷ್ಣ
ಸಿನಿ ಸರ್ಕಲ್.ಇನ್ ವಿಮರ್ಶೆ
***
17/05/19

ಚಿತ್ರಮಂದಿರದಲ್ಲಿ ರತ್ನಮಂಜರಿ
‘ರತ್ನ ಮಂಜರಿ’ ಹಾರರ್, ಥ್ರಿಲ್ಲರ್ ಸಿನಿಮಾದ ಚಿತ್ರೀಕರಣವು ಕೊಡಗು ಸಮೀಪ ಇರುವ ಇಗ್ಗುತಪ್ಪು ದೇವಿ ಸನ್ನಿದಿಯಲ್ಲಿ ಪ್ರಾರಂಭವಾಗಿದೆ. ನಂತರ ಅಮೇರಿಕಾ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಕೊನೆಗೆ ಶುರು ಮಾಡಿದ ಜಾಗದಲ್ಲೆ ಕುಂಬಳಕಾಯಿ ಒಡೆಯಲಾಗಿದ್ದು ವಿಶೇಷವಾಗಿದೆ. ಅದರಿಂದಲೇ ಮಳೆಗಾಲದಲ್ಲೂ ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ಕೆಲಸ ಮಾಡಲಾಗಿದೆ ಎಂದು ತಂಡವು ಹೇಳಿಕೊಂಡಿದೆ. ಮೊದಲಬಾರಿ ನಿರ್ದೇಶನ ಮಾಡಿರುವ ಪ್ರಸಿದ್ದ್ ಹೇಳುವಂತೆ ಕತೆಯು ಅಮೇರಿಕಾದಿಂದ ಶುರುವಾಗಿ ಕೊಡಗುದಲ್ಲಿ ಕ್ಲೈಮಾಕ್ಸ್ ಬರುತ್ತದೆ. 90ರಲ್ಲಿ ನಡೆದ ನೈಜ ಘಟನೆಗೆ ಸಿನಿಮಾ ಸ್ಪರ್ಶ ನೀಡಲಾಗಿದೆ. ಮೂರು ನಾಯಕಿಯರು ಇರಲಿದ್ದು, ಯಾರು ರತ್ನಮಂಜರಿ ಎಂದು ಚಿತ್ರ ನೋಡಿದಾಗ ತಿಳಿಯುತ್ತದೆ. ಚಿತ್ರದ ತುಣುಕುಗಳನ್ನು ನೋಡಿದ ಇನ್ನಾಕ್ಸ್ ನವರು ಚಿತ್ರ ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಇದೊಂದು ಪ್ಲಸ್ ಪಾಯಿಂಟ್.

ನಗುವ ರಾಣಿಯಂತೆ ಅಖಿಲಾಪ್ರಕಾಶ್, ಕಣ್ಣುಗಳಲ್ಲೆ ಭಾವನೆಗಳನ್ನು ತೋರಿಸುವುದು. ಮಡಕೇರಿಯಲ್ಲಿ ಬರುವ ದೇಸಿ ಹಾಡಿಗೆ ಹೆಜ್ಜೆ ಹಾಕಿರುವ ಮನೆಕೆಲಸದ ಪಾತ್ರದಲ್ಲಿ ಪಲ್ಲವಿರಾಜು ಮತ್ತು ಸಿಲ್ಕ್‍ಸ್ಮಿತರಂತೆ ಕಾಣುವ ಶ್ರದ್ದಾಸಾಲಿಯನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರಂತೆ. ಯುಎಸ್‍ದಿಂದ ಕರ್ನಾಟಕಕ್ಕೆ ಯಾವ ಕಾರಣಕ್ಕೆ ಬರುತ್ತೇನೆ. ಫೋಟೋ ನೋಡಿ ನೆನಪುಗಳನ್ನು ಕಣ್ಣ ಮುಂದೆ ತರಿಸಿಕೊಳ್ಳುವ ನಾಯಕ ರಾಜ್‍ಚರಣ್ ಅನಿವಾಸಿ ಭಾರತೀಯ ಕನ್ನಡಿಗನಾಗಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣ ಪ್ರೀತಂತಗ್ಗಿನಮನೆ-ಕಿಟ್ಟಿಕೌಶಿಕ್, ನಾಲ್ಕು ಹಾಡುಗಳಿಗೆ ಹರ್ಷವರ್ಧನ್‍ರಾಜ್ ಸಂಗೀತ ಸಂಯೋಜಿಸಿದ್ದು, ಒಂದು ಗೀತೆಗೆ ಪುನೀತ್‍ರಾಜ್‍ಕುಮಾರ್ ಧ್ವನಿಯಾಗಿದ್ದಾರೆ. ಅನಿವಾಸಿ ಭಾರತೀಯರಾದ ನಟರಾಜುಹಳೇಬೀಡು, ಎಸ್.ಸಂದೀಪ್‍ಕುಮಾರ್ ಹಣ ಹೂಡಿದ್ದಾರೆ. ಇದೇ ಹದಿನೇಳರಂದು ಚಿತ್ರವು ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
11/05/19\
ರತ್ನಮಂಜರಿಯಲ್ಲಿ ಹಾಡುಗಳು ಖದರ್ ಆಗಿದೆ
ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯ ‘ರತ್ನಮಂಜರಿ’ ಚಿತ್ರದ ಆಡಿಯೋ ಸಿಡಿ ಬಿಡುಗಡೆಯಲ್ಲಿ ತಂಡಕ್ಕೆ ಶುಭ ಹಾರೈಸಿ ಗಣ್ಯರುಗಳು ಮಾತನಾಡಿದರು. ಅಂದು ಹಂಸಲೇಖಾ ಸರ್ ಹೆಗಲಮೇಲೆ ಕೈ ಹಾಕಿದ್ದು ಇಲ್ಲಿಯತನಕ ಬಂದಿದೆ. ಇಂದು ದೀಪ ಹಚ್ಚುವ ಮೂಲಕ ಶುಭಹಾರೈಸಿದ್ದಾರೆಂದರೆ ಹಿಟ್ ಆಗುವುದು ಖಚಿತ. ಇಲ್ಲಿರುವವರು ಸಾಕಷ್ಟು ಪ್ರತಿಭೆಗಳು ಅವರ ಗರಡಿಯಲ್ಲಿ ಬಂದವರಾಗಿದ್ದಾರೆ. ಜೀವನದಲ್ಲಿ ಮೂರು ಆಸೆಗಳು ಇತ್ತು. ಅಗಲಿದ ಅಶ್ವತ್ ಅವರಿಗೆ ಆಕ್ಷನ್ ಹೇಳಬೇಕು, ಎಸ್.ಬಿ.ಬಾಲಸುಬ್ರಮಣ್ಯಂ ಅವರಿಂದ ಹಾಡಿಸಬೇಕು, ಸರ್ ಅವರಿಂದ ಸಂಗೀತ ಮಾಡಿಸಬೇಕು. ಮೂರರಲ್ಲಿ ಎರಡಾದರೂ ಮುಂದೆ ಆಗಬಹುದು ಎಂದು ನಿರ್ದೇಶಕ ಪ್ರಸಿದ್ದ್ ಹೇಳಿದರು. ರಾಜ್‍ಚರಣ್ ಶಾಲೆಯಲ್ಲಿ ವಿನಯವಂತ, ಬುದ್ದಿವಂತ,ಶ್ರದ್ದಾವಂತನಾಗಿದ್ದ. ಅಪರೂಪದ ಗುಣವುಳ್ಳವನಾಗಿದ್ದು, ಅಣ್ಣಾವ್ರ ಹೆಸರು ಇರುವುದರಿಂದ ಇದು ಒಲಿದಿರಬಹುದು. ವಿನಯ, ಪ್ರತಿಭೇ ಇದ್ದರೆ ಬೆಳವಣಿಗೆ ಕಾಣ್ತಾರೆ. ಈತನ ಮೇಲೆ ಹಣಹೂಡುವವರು ಮೇಳೈಸಿದ್ದಾರೆ. ಪ್ರಚಲಿತ ಚಿತ್ರರಂಗವನ್ನು ಹೊಸಬರು ನಡೆಸಿಕೊಂಡು ಹೋಗುತ್ತಿದ್ದಾರೆಂದು ನಾಗತ್ತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಪ್ರಾರಂಭದಿಂದಲೂ ಚಿತ್ರವು ಜನರಿಗೆ ತಲುಪುತ್ತಿದೆ. ಎನ್‍ಆರ್‍ಐ ಕನ್ನಡಿಗನಾಗಿ ಕಾಣಿಸಿಕೊಂಡಿದ್ದು, ಒಂದು ಕಾರಣದ ಮೇಲೆ ಭಾರತಕ್ಕೆ ಬರುತ್ತೇನೆ. ಅದು ಏನೆಂದು ಸಿನಿಮಾ ನೋಡಬೇಕು ಅಂತ ನಾಯಕ ರಾಜ್‍ಚರಣ್ ಅವಲತ್ತು

ಫ್ಯಾಶನ್ ಡಿಸೈನರ್ ಆಗಿ ರತ್ನಮಂಜರಿ ಯಾರು ಎಂಬುದು ನನಗೂ ಗೊತ್ತ್ತಿಲ್ಲ ಅಂತಾರೆ ನಾಯಕಿ ಅಖಿಲಾಪ್ರಕಾಶ್. ಚಿತ್ರ ಮುಗಿದಿದ್ದು ಬೇಸರ ತರಿಸಿದೆ. 80 ಜನರ ತಂಡದೊಂದಿಗೆ ಕೂರ್ಗ್, ಅಮೇರಿಕಾದಲ್ಲಿ ಕುಟುಂಬದಂತೆ ಇದ್ದೇವು. ಮುಂದಿನ ತಿಂಗಳು ಎರಡನೆ ವಾರದಂದು ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಸಂದೀಪ್‍ಕುಮಾರ್ ಮಾಹಿತಿ ನೀಡಿದರು. ಸಮಾನ ಮನಸ್ಕರು ಸೇರಿಕೊಂಡು ಕುದರೆಮುಖ ಟಾಕೀಸ್ ಮುಖಾಂತರ ನಿರ್ಮಾಣ ಮಾಡಿರುವ ಚಿತ್ರವು ಸದ್ಯದಲ್ಲೆ ತೆರೆಕಾಣಲಿದೆ.

ಸಿನಿಮಾ ಮುಗಿದಿದೆ. ಇನ್ನೆನಿದ್ದರೂ ನೀವುಗಳು ಚಪ್ಪಾಳೆ ತಟ್ಟಿ ನಿರ್ಮಾಕರಿಗೆ ದುಡ್ಡು ವಾಪಸ್ಸು ಬರುವಂತೆ ಮಾಡಬೇಕು. ಒಂದು ಕಾಲದದಲ್ಲಿ ರತ್ನಮಂಜರಿ ಸಿನಿಮಾವು ಸೂಪರ್ ಹಿಟ್ ಆಗಿತ್ತು. ಅದೇ ಹೆಸರಿನ ಮೇಲೆ ಬರುತ್ತಿರುವ ಚಿತ್ರವು ಅದರಂತೆ ಆಗಲಿ. ನಾಯಕಿ ಬ್ಯೂಟಿಫೂಲ್ ಐಸ್, ವಂಡರ್‍ಫೈಲ್ ಥೈಸ್. ಮಂಜರಿಯಲ್ಲಿ ಜರಿಜರಿಯಾಗಿ ಮಿಂಚಿದ್ದಾರೆ. ಇಷ್ಟು ದಿವಸ ಚುನಾವಣೆ ಕಾವು ಇತ್ತು. ಅದನ್ನು ದಣಿವಾರಿಸಿಕೊಳ್ಳಲು ಇದನ್ನು ನೋಡಬೇಕು. ಮೂವತ್ತೈದು ವರ್ಷದಿಂದ ಎಲ್ಲರಿಗೂ ಬೆನ್ನು ತಟ್ಟುತ್ತಾ ಬಂದಿದ್ದೇನೆ. ಗತಕಾಲದಿಂದಲೂ ಕನ್ನಡ ಚಿತ್ರರಂಗ ಎಲ್ಲಾ ಕಡೆ ಪಸರಿಸಬೇಕೆಂದು ಸಾಕಷ್ಟು ಮಹನಿಯರು ದುಡಿದಿದ್ದು, ಕೆಜಿಎಫ್ ಮೂಲಕ ಫಲ ಕೊಟ್ಟಿದೆ. ಒಳ್ಳೆ ಸಿನಿಮಾ ಮಾಡಿದರೆ ನಿರ್ಮಾಪಕ, ನಿರ್ದೇಶಕ ಸೆಟ್ಲ್ ಆದಾಗ ವ್ಯಾಪರ ಅಭಿವೃದ್ದಿ ಹೊಂದುತ್ತದೆ. ಇಲ್ಲಿಂದ ಹೋದವರು ಕನ್ನಡದಲ್ಲೇ ಉಸಿರಾಡುತ್ತಿದ್ದಾರೆ. ಈಗಿನ ಪರಿಸ್ಥತಿಯಲ್ಲಿ 25 ದಿವಸ ಪ್ರದರ್ಶನ ಕಾಣಲಿ ಎಂದು ಹಂಸಲೇಖಾ ಮಾತಿಗೆ ವಿರಾಮ ಹಾಕಿದರು. ನಟಿ ಪಲ್ಲವಿರಾಜು, ಕ್ಲೈಮಾಕ್ಸ್ ಗೀತೆ ಹಾಡಿರುವ ವಸಿಷ್ಟಸಿಂಹ, ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮ.ಹರೀಶ್, ಸಂಗೀತ ನಿರ್ದೇಶಕರು, ರಾಕೇಶ್‍ಅಡಿಗ ಮುಂತಾದವರು ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
21/04/19


ಮೇ ತಿಂಗಳಲ್ಲಿ ರತ್ನಮಂಜರಿ
ಹಾರರ್. ಥ್ರಿಲ್ಲರ್ ಮಾದರಿಯ ‘ರತ್ನ ಮಂಜರಿ’ ಸಿನಿಮಾದ ಚಿತ್ರೀಕರಣವು ಕೊಡಗು ಸಮೀಪ ಇರುವ ಇಗ್ಗುತಪ್ಪು ದೇವಿ ಸನ್ನಿದಿಯಲ್ಲಿ ಪ್ರಾರಂಭವಾಗಿದೆ. ನಂತರ ಅಮೇರಿಕಾ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಕೊನೆಗೆ ಶುರು ಮಾಡಿದ ಜಾಗದಲ್ಲೆ ಕುಂಬಳಕಾಯಿ ಒಡೆಯಲಾಗಿದ್ದು ವಿಶೇಷವಾಗಿದೆ. ಅದರಿಂದಲೇ ಮಳೆಗಾಲದಲ್ಲೂ ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ಕೆಲಸ ಮಾಡಲಾಗಿದೆ ಎಂದು ತಂಡವು ಹೇಳಿಕೊಂಡಿದೆ. ಮೊದಲಬಾರಿ ನಿರ್ದೇಶನ ಮಾಡಿರುವ ಪ್ರಸಿದ್ದ್ ಹೇಳುವಂತೆ ಕತೆಯು ಅಮೇರಿಕಾದಿಂದ ಶುರುವಾಗಿ ಕೊಡಗುದಲ್ಲಿ ಕ್ಲೈಮಾಕ್ಸ್ ಬರುತ್ತದೆ. 90ರಲ್ಲಿ ನಡೆದ ನೈಜ ಘಟನೆಗೆ ಸಿನಿಮಾ ಸ್ಪರ್ಶ ನೀಡಲಾಗಿದೆ. ಮೂರು ನಾಯಕಿಯರು ಇರಲಿದ್ದು, ಯಾರು ರತ್ನಮಂಜರಿ ಎಂದು ಚಿತ್ರ ನೋಡಿದಾಗ ತಿಳಿಯುತ್ತದೆ.

ನಾಯಕಿಯರಾಗಿ ಅಖಿಲಾಪ್ರಕಾಶ್, ಪಲ್ಲವಿರಾಜು ಮತ್ತು ಶ್ರದ್ದಾಸಾಲಿಯಾನ್ ನಟಿಸಿದ್ದಾರೆ ಯುಎಸ್‍ದಿಂದ ಕರ್ನಾಟಕಕ್ಕೆ ಯಾವ ಕಾರಣಕ್ಕೆ ಬರುತ್ತೇನೆ. ಫೋಟೋ ನೋಡಿ ನೆನಪುಗಳನ್ನು ಕಣ್ಣ ಮುಂದೆ ತರಿಸಿಕೊಳ್ಳುವ ನಾಯಕ ರಾಜ್‍ಚರಣ್ ಅನಿವಾಸಿ ಭಾರತೀಯ ಕನ್ನಡಿಗನಾಗಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣ ಪ್ರೀತಂತಗ್ಗಿನಮನೆ-ಕಿಟ್ಟಿಕೌಶಿಕ್, ನಾಲ್ಕು ಹಾಡುಗಳಿಗೆ ಹರ್ಷವರ್ಧನ್‍ರಾಜ್ ಸಂಗೀತ ಸಂಯೋಜಿಸಿದ್ದು, ಒಂದು ಗೀತೆಗೆ ಪುನೀತ್‍ರಾಜ್‍ಕುಮಾರ್ ಧ್ವನಿಯಾಗಿದ್ದಾರೆ. ಅನಿವಾಸಿ ಭಾರತೀಯರಾದ ನಟರಾಜುಹಳೇಬೀಡು, ಎಸ್.ಸಂದೀಪ್‍ಕುಮಾರ್ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಚಿತ್ರದ ಆಡಿಯೋ ಸಿಡಿಯು ಅಕ್ಕಾ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. ಇದೇ ಕಾರ್ಯಕ್ರಮವು ಏಪ್ರಿಲ್ 13ರಂದು ಬೆಂಗಳೂರಿನಲ್ಲಿ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
26/03/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore