HOME
CINEMA NEWS
GALLERY
TV NEWS
REVIEWS
CONTACT US
ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(2019)ದ ಇಂಡಿಯನ್ ಪನೋರಮ ವಿಭಾಗದಲ್ಲಿ ಪ್ರದರ್ಶನಗೊಂಡ `ರಂಗನಾಯಕಿ voಟ 1’.
ಎಸ್.ವಿ.ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ಎಸ್.ವಿ.ನಾರಾಯಣ್ ಅವರು ನಿರ್ಮಿಸಿರುವ `ಹಾಗೂ ದಯಾಳ್ ಪದ್ಮನಾಭನ್ ನಿರ್ದೇಶನದ `ರಂಗನಾಯಕಿ voಟ 1` ಚಿತ್ರ ಗೋವಾ ಅಂತರರಾಷ್ತ್ರೀಯ ಚಲನಚಿತ್ರೋತ್ಸವ(2019)ದ ಇಂಡಿಯನ್ ಪನೋರಮ ವಿಭಾಗದಲ್ಲಿ ಇಂದು(ನವಂಬರ್ 24)ರಂದು ಪ್ರದರ್ಶನಗೊಂಡಿದೆ. ನಿಮಾಪಕ ಎಸ್.ವಿ.ನಾರಾಯಣ್, ನಿರ್ದೇಶಕ ದಯಾಳ್ ಪದ್ಮನಾಭನ್, ನಟ ಎಂ.ಜಿ.ಶ್ರೀನಿವಾಸ್(ಶ್ರೀನಿ), ನಟಿ ಅದಿತಿ ಪ್ರಭುದೇವ, ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ಅವಿನಾಶ್ ಯು ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ಈ ವರ್ಷ `ಗೋಲ್ಡನ್ ಜ್ಯೂಬಿಲಿ ಎಡಿಷನ್ ಆ¥sóï ದಿ ¥sóÉಸ್ಟಿವಲ್` ಆಗಿದ್ದು ಈ ಸಮಯದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಚಿತ್ರ `ರಂಗನಾಯಕಿ voಟ 1` ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.

ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನವಿರುವ ಈ ಚಿತ್ರಕ್ಕೆ ನವೀನ್‍ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಅದಿತಿ ಪ್ರಭುದೇವ, ಎಂ.ಜಿ.ಶ್ರೀನಿವಾಸ್(ಶ್ರೀನಿ), ತ್ರಿವಿಕ್ರಮ್, ಶಿವಾರಾಂ, ಸುಚೇಂದ್ರಪ್ರಸಾದ್, ಸುಂದರ್, ವೀಣಾ ಸುಂದರ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
25/11/19

ಪ್ರಚಲಿತ ಹೆಣ್ಣುಮಕ್ಕಳ ಪ್ರತಿನಿಧಿ ರಂಗನಾಯಕಿ
‘ರಂಗನಾಯಕಿ’ ಚಿತ್ರದಲ್ಲಿ ಆಕೆಗೆ ನಂಬಿದವರಿಂದಅತ್ಯಾಚಾರವಾಗುತ್ತದೆ. ಇದನ್ನು ಎದುರಿಸಿ ಹೇಗೆ ಅಪರಾಧಿಗಳಿಗೆ ಶಿಕ್ಷೆ ವಿಧಿಸುತ್ತಾಳೆಂಬುದು ಒಂದು ಏಳೆಯ ಕತೆಯಾಗಿದೆ. ದೃಶ್ಯಗಳನ್ನು ಅತಿಯಾಗಿ ಬಿಂಬಿಸದೆ ನೋಡುಗರಿಗೆ ಮುಜುಗರತರದೆ ಚಿತ್ರೀಕರಿಸಿರುವುದು ನಿರ್ದೇಶಕ ದಯಾಳ್‍ಪದ್ಮನಾಬನ್ ಚಾಣಾಕ್ಷತೆತೆರೆ ಮೇಲೆ ಕಂಡು ಬರುತ್ತದೆ. ನಿರ್ಭಯ ಪ್ರಕರಣದಅಂಶವನ್ನುತೆಗೆದುಕೊಂಡು, ಅದಕ್ಕೆತನ್ನದೆ ಪರಿಕಲ್ಪನೆಯಲ್ಲಿ ದುರಳರನ್ನು ಕಾನೂನು ಅಡಿಯಲ್ಲಿ ಹೇಗೆ ದಂಡಿಸಬಹುದೆಂದು ಪರೋಕ್ಷವಾಗಿ ಹೇಳಲಾಗಿದೆ.ಇದರಲ್ಲಿಆಕೆಯುಧೈರ್ಯಗೊಂಡುಅತ್ಯಾಚಾರಿಗೆ ಶಿಕ್ಷೆಗೆ ಒಳಪಡಿಸಲು, ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗದರ್ಶನದಂತೆಠಾಣೆ, ನ್ಯಾಯಾಲಯದಲ್ಲಿಜಯ ಸಾಧಿಸುತ್ತಾಳೆ. ಮತ್ತೋಂದುಕಡೆಗೆಳತಿಯು ಮನೆಯಲ್ಲಿ ನಡೆಯುವ ಕಿರುಕುಳದಿಂದ ಬೇಸತ್ತುಆತ್ಮಹತ್ಯಗೆ ಶರಣಾಗುತ್ತಾಳೆ ಎಂಬುದನ್ನುಎರಡು ಹುಡುಗಿಯರ ದಿಕ್ಕಿನಲ್ಲಿತೋರಿಸಲಾಗಿದೆ.

ಕಥಾನಾಯಕಿಅದಿತಿಪ್ರಭುದೇವಅಭಿನಯ ಸೂಪರ್, ಸಂಗೀತದ ಶಿಕ್ಷಕಿ, ನಂತರ ಶೋಷಿತ ಮಹಿಳೆಯಾಗಿ ಕಣ್ಣುಗಳಲ್ಲೆ ನೋವುಗಳನ್ನು ತೋರ್ಪಡಿಸಿರುವ ಅವರನಟನೆಅದ್ಬುತವಾಗಿದೆ. ಶ್ರೀನಿ, ತ್ರಿವಿಕ್ರಮಇಬ್ಬರ ಮುಗ್ದ ಅಭಿನಯಪರವಾಗಿಲ್ಲ. ಗೆಳತಿಯಾಗಿ ಲಾಸ್ಯ, ಸುಂದರರಾಜ್, ಪದ್ಮಶಿವಮೊಗ್ಗ, ಯತಿರಾಜ್, ಚಕ್ರವರ್ತಿಚಂದ್ರಚೂಡ್‍ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ನ್ಯಾಯಮೂರ್ತಿಯಾಗಿ ಕಾಣಿಸಿಕೊಂಡಿರುವ ಸುಚೇಂದ್ರಪ್ರಸಾದ್‍ಅವರಿಂದಇಂಗ್ಲೀಷ್ ಪದಗಳನ್ನು ಹೇಳಿಸಿರುವುದು ಸೋಜಿಗ ಅನಿಸಿದೆ. ನವೀನ್‍ಕೃಷ್ಣ ಸಂಭಾಷಣೆ, ರಾಕೇಶ್‍ಛಾಯಾಗ್ರಹಣ, ಮಣಿಕಾಂತ್‍ಕದ್ರಿ ಹಿನ್ನಲೆ ಸಂಗೀತಇವೆಲ್ಲವುಚಿತ್ರದಓಟಕ್ಕೆ ಮೆರುಗುತಂದಿದೆ.
ನಿರ್ಮಾಣ: ಎಸ್.ವಿ.ನಾರಾಯಣ್
ಸಿನಿ ಸರ್ಕಲ್.ಇನ್ ವಿಮರ್ಶೆ
****
30/10/19ಇಂಡಿಯನ್ ಪನೋರಮಗೆಆಯ್ಕೆಗೊಂಡ ಮೊದಲ ಚಿತ್ರ
ದಯಾಳ್ ಪದ್ಮನಾಬನ್ ರಚನೆ, ನಿರ್ದೇಶನದ ‘ರಂಗನಾಯಕಿ’ ಚಿತ್ರವುಇಂಡಿಯನ್ ಪನೋರಮಾಅಂತರಾಷ್ಟ್ರೀಯ ಫಿಲಿಂ ಸ್ಫರ್ಧೆ 2019ರಲ್ಲಿ ಪ್ರದರ್ಶನಕ್ಕೆಅರ್ಹವಾಗಿದೆ. ಅಲ್ಲದೆಡಿಜಿಟಲ್ ವೇದಿಕೆಯಲ್ಲಿ ಗುರುತಿಸಿಕೊಳ್ಳುವುದರಿಂದ ನಿರ್ಮಾಪಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ದೆಹಲಿಯಲ್ಲಿ ನಡೆದ ನಿರ್ಭಯಕೇಸ್‍ನಲ್ಲಿ ನ್ಯಾಯಲಯ ದುರಳರಿಗೆ ಶಿಕ್ಷಿ ವಿಧಿಸಿದ್ದರೂ, ಆಕೆಯಸಾವು ಭಾರಿ ಸುದ್ದಿಯಾಗಿತ್ತು. ಊಹಿಸುವಂತೆಆಕೆಯು ಬದುಕಿದ್ದರೆಯಾವರೀತಿ ನ್ಯಾಯಲಯದಲ್ಲಿ ಹೋರಾಟ ಮಾಡುತ್ತಿದ್ದಳು.ಇದನ್ನು ಸಕರಾತ್ಮಕ, ನಕರಾತ್ಮಕವಾಗಿತೋರಿಸಲಾಗಿದೆ.ಕನ್ಯತ್ವಅಂದರೆ ಏನು.ಅದನ್ನುದಾಟಿಇನ್ನೋಂದುವಿಷಯವನ್ನು ಹೇಳಲಾಗಿದೆ. ಮಹಿಳಾ ಪ್ರಧಾನಚಿತ್ರವಾಗಿದ್ದರಿಂದ ಮಹಿಳೆಯರಿಗೆ ವಿಶೇಷ ಷೋ ಏರ್ಪಡಿಸಲುಯೋಜನೆರೂಪಿಸಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪಾತ್ರವಾಗಿ ಅಭಿನಯಿಸಿರುವ ಅದಿತಿಪ್ರಭುದೇವ ಇಂದಿನ ಮಹಿಳೆಯರ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರಂತೆ.

ಮಾಮೂಲಿ ಹಾಡುಗಳಂತೆ ಇರದೆ ಕೃಷ್ಣ ನೀ ಬೇಗನೇ ಬಾರೋ, ಸೀತಾ ಕಲ್ಯಾಣ ವೈಭವ ಸಾಹಿತ್ಯವನ್ನು ಬಳಸಲಾಗಿ, ಮಧ್ಯೆಬರುವ ಪದಗಳಿಗೆ ಪಲ್ಲವಚಾರ್ಯ ಸಾಹಿತ್ಯವನ್ನು ಬರೆದು, ಕದ್ರಿಮಣಿಕಾಂತ್ ಸಂಗೀತ ಸಂಯೋಜಸಿದ್ದಾರೆ.ಪ್ರತಿಯೊಬ್ಬ ಹೆಂಗಸರ ಮನಸ್ಸಿನಲ್ಲಿ ಗೆಲುವು, ಸೋಲು ಇರಲಿದ್ದು, ಅವರಿಗೆಧೈರ್ಯತುಂಬಲು ರಂಗನಾಯಕಿ ಬರುತ್ತಿದ್ದಾಳೆಂದು ನಿರ್ಮಾಪಕಎಸ್.ವಿ.ನಾರಾಯಣ್ ಬಣ್ಣನೆ ಮಾಡಿದರು.

ನಾಯಕರುಗಳಾದ ಶ್ರೀನಿ ಮತ್ತುತ್ರಿವಿಕ್ರಮ್ ಉಪಸ್ತಿತರಿದ್ದು ಸಂತಸ ಹಂಚಿಕೊಂಡರು. ನವೆಂಬರ್ 24ರಂದು ಗೋವಾದಲ್ಲಿ ಪ್ರದರ್ಶನಗೊಳ್ಳಲಿದ್ದು ಅಂದುತಂಡದ ನಾಲ್ಕು ಸದಸ್ಯರಿಗೆರೆಡ್‍ಕಾರ್ಪೆಟ್‍ನಲ್ಲಿ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಮುಂದಿನ ಗುರಿರಾಷ್ಟ್ರೀಯ ಪ್ರಶಸ್ತಿ.ಆಸ್ಕರ್ ಸಲುವಾಗಿಯೇಕತೆಯನ್ನು ಶೇಕಡ 50ರಷ್ಟು ಸಿದ್ದಪಡಿಸುತ್ತಿದ್ದು, ಪೂರ್ಣಗೊಂಡ ನಂತರಅದನ್ನು ಡಿ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಲಾಗುವುದೆಂದು ಹೇಳಿಕೊಂಡರು. ಚಿತ್ರವು ನವೆಂಬರ್ 1ರಂದು ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
14/10/19
ಅಕ್ಟೋಬರ್‍ಗೆರಂಗನಾಯಕಿದರ್ಶನ
ಮಹಿಳಾ ಪ್ರಧಾನಚಿತ್ರ ‘ರಂಗನಾಯಕಿ’ ಟ್ರೈಲರ್‍ನ್ನುಗಣ್ಯರು ಅನಾವರಣಗೊಳಿಸಿದರು.ಹಿಂದಿನಿಂದಲೂ ಹೆಣ್ಣು ಮಕ್ಕಳಿಗೆ ದೈಹಿಕವಾಗಿಅಲ್ಲದೆ ಮಾನಸಿಕವಾಗಿ ಅತ್ಯಾಚಾರವಾಗುತ್ತಿದೆ.ಈ ಪದವೇ ಹೆಣ್ಣಿಗೆ ಶಿಕ್ಷೆಯಾಗಿದೆ.ಒಂಬತ್ತುತಿಂಗಳು ಗರ್ಭದಲ್ಲಿ ಭಾರವನ್ನು ಹೊತ್ತುಕೊಂಡು, ನಂತರವುಅದರ ನೊಗವನ್ನು ಹೊರುತ್ತಲೆ ಇರುತ್ತಾಳೆ. ಎಲ್ಲಿಯವರೆಗೂಇಂತಹದೌರ್ಜನ್ಯ ನಿಲ್ಲವುದಿಲ್ಲವೋಅಲ್ಲಿಯವರೆಗೂ ಸ್ರೀಯರ ಕಷ್ಟಗಳು ಕಡಿಮೆಯಾಗುವುದಿಲ್ಲ್ಲವೆಂದುತಾರ ಬೇಸರ ವ್ಯಕ್ತಪಡಿಸಿದರು.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪಾತ್ರವಾಗಿ ಅಭಿನಯಿಸಿದ್ದು ಛಾಲೆಂಜಿಂಗ್‍ಆಗಿತ್ತು. ಪ್ರಾರಂಭದಲ್ಲಿ ಶೇಕಡ 10ರಷ್ಟು ಭಯವಿತ್ತು.ಕೊನೆಯಲ್ಲಿ ಮಹಿಳೆ ಪರ ನಿಲ್ಲುವಧೈರ್ಯ ಬಂತು. ಚಿತ್ರವು ಈಗಿನ ಟ್ರೆಂಡ್‍ಗೆ ಪೂರಕವಾಗಿದೆ. ಪಾತ್ರ ಮಾಡಲು ಸುಲಭವಾಗುವಂತೆ ನಿರ್ದೇಶಕರುಇದಕ್ಕೆ ಸಂಬಂದಪಟ್ಟ ಪುಸ್ತಕಗಳನ್ನು ನೀಡಿದ್ದರು.1000 ಹೆಣ್ಣು ಮಕ್ಕಳ ಗೋಳಿನ ಕತೆಯ ಪ್ರತಿನಿಧಿಯಾಗಿರಂಗನಾಯಕಿ ಇರ್ತಾಳೆ. ಏನೇ ಆದರೂ ನಮ್ಮಜೀವನ, ಜೀವಕ್ಕೆ ನಾವೇ ಹೊಣೆಯಾಗಿರುತ್ರವೆಂದು ನಾಯಕಿಅದಿತಿಪ್ರಭುದೇವಅನುಭವ ಹಂಚಿಕೊಂಡರು.

ದೆಹಲಿಯಲ್ಲಿ ನಡೆದ ನಿರ್ಭಯಕೇಸ್‍ನಲ್ಲಿ ನ್ಯಾಯಲಯ ದುರಳರಿಗೆ ಶಿಕ್ಷಿ ವಿಧಿಸಿದ್ದರೂ, ಆಕೆಯಸಾವು ಭಾರಿ ಸುದ್ದಿಯಾಗಿತ್ತು. ಊಹಿಸುವಂತೆಆಕೆಯು ಬದುಕಿದ್ದರೆಯಾವರೀತಿ ನ್ಯಾಯಲಯದಲ್ಲಿ ಹೋರಾಟ ಮಾಡುತ್ತಿದ್ದಳು.ಇದನ್ನು ಸಕರಾತ್ಮಕ, ನಕರಾತ್ಮಕವಾಗಿತೋರಿಸಲಾಗಿದೆ.ಕನ್ಯತ್ವಅಂದರೆ ಏನು.ಅದನ್ನುದಾಟಿಇನ್ನೋಂದುವಿಷಯವನ್ನು ಹೇಳಲಾಗಿದೆ. ಕದ್ರಿಮಣಿಕಾಂತ್ ಸಂಗೀತವಿದೆ.ಸಂಪುಟ-2 ಕತೆ ಕೇಳಿದ ನಿರ್ಮಾಪಕರುಚಿತ್ರ ಮಾಡಲು ಆಸಕ್ತಿ ತೋರಿಸಿದ್ದಾರೆ.ಇದರಲ್ಲಿತಾರಾ ನಟಿಸಿದರೆ ಸೂಕ್ತ.ಅದಕ್ಕಾಗಿಎಲ್ಲರ ಸಮ್ಮುಖದಲ್ಲಿಕಾಲ್‍ಶೇಟ್ ಕೇಳುತ್ತಿರುವೆ.ನಿರ್ಮಾಪಕರಿಗೆ ಮಾತುಕೊಟ್ಟಂತೆ ನಿಗದಿತ ಸಮಯದಲ್ಲಿ ಸಿನಿಮಾ ನೀಡಲಾಗಿದೆ.ನನ್ನ ಕೆಲಸ ಮುಗಿದಿದೆಅಂತನಿರ್ದೇಶಕ ದಯಾಳ್‍ಪದ್ಮನಾಭನ್ ಮಾತು ಮುಗಿಸಿದರು.

ಪ್ರತಿಯೊಬ್ಬ ಹೆಂಗಸರ ಮನಸ್ಸಿನಲ್ಲಿ ಗೆಲುವು, ಸೋಲು ಇರಲಿದ್ದು, ಅವರಿಗೆಧೈರ್ಯತುಂಬಲು ರಂಗನಾಯಕಿ ಬರುತ್ತಿದ್ದಾಳೆಂದು ನಿರ್ಮಾಪಕಎಸ್.ವಿ.ನಾರಾಯಣ್ ಬಣ್ಣನೆ ಮಾಡಿದರು. ಶೀರ್ಷಿಕೆ ಮೊದಲ ಸಂಪುಟವಾಗಿದೆ. ಇನ್ನು ಅನೇಕ ಸಂಪುಟಗಳು ಗರ್ಭದಿಂದ ಹೊರಬರಲಿ.ನಿರ್ದೇಶಕರ ಹೆಸರಲ್ಲಿದಯೆತುಂಬಿದೆಯಾದರೂಅವರ ಚಿತ್ರಗಳು ಕ್ರೂರ, ಅತ್ಯಾಚಾರದ ಕತೆಗಳಾಗಿದೆ.ರಂಗನಾಯಕಿ ಈ ಶತಮಾನದಜಗತ್ತನ್ನುಕಾಡುವ ಸಮಸ್ಯೆಗೆ ಒಳ್ಳೆಯ ಸಮಕಾಲೀನಳಾಗಿ ಇರುತ್ತಾರೆ. ಇಂದಿನ ಕಲಾವಿದೆಯರುಕನ್ನಡ ಮಾತನಾಡಿದ್ದು ನೋಡಿದಾಗ, ಕನ್ನಡಕ್ಕೆಇನ್ನು ಭವಿಷ್ಯವಿದೆಎಂದು ನಾಗತ್ತಿಹಳ್ಳಿಚಂದ್ರಶೇಖರ್ ಆಹ್ವಾನಿತರನ್ನು ನಗಿಸಿದರು.

ನಾಯಕರುಗಳಾದ ಶ್ರೀನಿ, ತ್ರಿವಿಕ್ರಮ್, ಉಳಿದಂತೆ ಕಲಾವಿದರುಗಳಾದ ಸುಂದರ್, ಚಂದ್ರಚೂಡ್, ಛಾಯಾಗ್ರಾಹಕರಾಕೇಶ್, ಕಾರ್ಯಕಾರಿ ನಿರ್ಮಾಪಕ ಅವಿನಾಶ್, ಅತಿಥಿಗಳ ಪೈಕಿ ಅರ್ಚನಾಜೋಯಿಸ್, ಒರಟ ಪ್ರಶಾಂತ್, ಬಾಮಾ.ಹರೀಶ್‍ಹೆಚ್ಚೇನು ಮಾತನಾಡಲಿಲ್ಲ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/09/19
ನಿರ್ಭಯ ಘಟನೆಯ ರಂಗನಾಯಕಿ
ನಿರ್ಭಯ ಘಟನೆ ಕುರಿತ ‘ರಂಗನಾಯಕಿ’ ಚಿತ್ರವು ಸೆಟ್ಟೇರಿದೆ. ಡಿಐಜಿ ಡಿ.ರೂಪಮೌದ್ಗಿಲ್ ಚಿತ್ರದ ಕಾದಂಬರಿಯನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಇಂದು ಮಹಿಳೆ ಸಾಧನೆ ಮಾಡಬೇಕಾದರೆ ಬರೀ ಒಳ್ಳೆ ಹುಡುಗಿ ಅನಿಸಿಕೊಂಡರೆ ಸಾಲದು, ಸಮಾಜದ ಕಣ್ಣಲ್ಲಿ ಕೆಟ್ಟ ಹುಡುಗಿಯಾದರೂ ಪರವಾಗಿಲ್ಲ. ಅಂದುಕೊಂಡ ಗುರಿಯನ್ನು ತಲುಪಿ, ಸಮಾಜದಲ್ಲಿ ಒಳ್ಳೆತನದಿಂದ ಮುಂದೆ ಬನ್ನಿ ಎಂದು ಕರೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಮೂವತ್ತೆಂಟು ವರ್ಷಗಳ ಹಿಂದೆ ತೆರೆಕಂಡ ಇದೇ ಹೆಸರಿನ ಚಿತ್ರವು ಮಾಸ್ಟರ್ ಪೀಸ್ ಆಗಿದೆ. ರಂಗನಾಯಕಿ ಮುಂದಿನ ಕನಸು. ಪವರ್‍ಫುಲ್ ಟೈಟಲ್‍ಗೆ ನ್ಯಾಯ ಒದಗಿಸುತ್ತೇನೆಂಬ ನಂಬಿಕೆ ಇದೆ. ನಿರ್ಭಯ ಘಟನೆ ಬಳಿಕ ಮನಸ್ಸಿನಲ್ಲಿ ಇದರ ಬಗ್ಗೆ ಕಾಡುತ್ತಲೆ ಇತ್ತು. ಅದಕ್ಕೆ ಅಕ್ಷರರೂಪ ಕೊಡಲು ಸಹಾಯಕ ಕಿರಣ್.ಆರ್.ಹೆಮ್ಮಿಗೆ ಬರಹರೂಪ ನೀಡಿದ್ದಾರೆ. ಅದುವೇ ಈ ಕಾದಂಬರಿಯಾಗಿದೆ. ಸೋಮವಾರದಿಂದ ಚಿತ್ರೀಕರಣ ಶುರುವಾಗಿ ಸಂಪೂರ್ಣ ಬೆಂಗಳೂರಿನಲ್ಲಿ ನಡೆಯಲಿದೆ ಸೆಪ್ಟಂಬರ್‍ದಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ ಎಂದು ನಿರ್ದೇಶಕ ದಯಾಳ್‍ಪದ್ಮನಾಬನ್ ಮಾಹಿತಿ ನೀಡಿದರು.

ಒಂದು ಹುಡುಗಿ ಅತ್ಯಾಚಾರ ಆದರೆ, ಆಕೆ ಸಮಾಜವನ್ನು ಯಾವ ರೀತಿ ಎದುರಿಸುತ್ತಾಳೆ. ಕನ್ನಡಿಯಲ್ಲಿ ಮುಂದೆ ನಿಂತು ಹೇಗೆ ಧೈರ್ಯ ತಂದುಕೊಳ್ಳುತ್ತಾಳೆಂದು ಸಂಗೀತ ಶಿಕ್ಷಕಿ ಪಾತ್ರದಲ್ಲಿ ನಟನೆ ಮಾಡುತ್ತಿರುವ ನಾಯಕಿ ಅದಿತಿಪ್ರಭುದೇವ ಪರಿಚಯಿಸಿಕೊಂಡರು. ಶೀರ್ಷಿಕೆಯಲ್ಲಿ ಸಕರಾತ್ಮಕ ಅಂಶಗಳು ಇರಲಿದೆ. ಅದರಿಂದಲೇ ಎರಡನೆ ಬಾರಿ ನಿರ್ಮಾಣ ಮಾಡುತ್ತಿರುವುದಾಗಿ ಎಸ್.ವಿ.ನಾರಾಯಣ್ ತಿಳಿಸಿದರು. ಬ್ರಾಹ್ಮಿಣ್ ಹುಡುಗ, ಶಿಕ್ಷಕನಾಗಿ ತ್ರಿವಿಕ್ರಮ್, ಮತ್ತು ಪಾತ್ರದ ಗುಟ್ಟನ್ನು ಕಾಯ್ದುಕೊಂಡಿರುವ ಶ್ರೀನಿ ನಾಯಕರುಗಳು. ಕೂರ್ಗಿ ಹುಡುಗಿಯಾಗಿ ಲಾಸ್ಯ, ಉಳಿದಂತೆ ಶಿವಮಣಿ, ವಿಕ್ಟರಿವಾಸು ಮುಂತಾದವರು ಚುಟುಕು ಮಾತನಾಡಿದರು.

ಹಾಡುಗಳಿಗೆ ಕದ್ರಿಮಣಿಕಾಂತ್ ರಾಗಗಳನ್ನು ಹೊಸೆಯುತ್ತಿದ್ದರೆ, ಸಂಭಾಷಣೆಗೆ ನವೀನ್‍ಕೃಷ್ಣ ಮಾತುಗಳನ್ನು ಪೋಣಿಸುತ್ತಿದ್ದಾರೆ. ಛಾಯಾಗ್ರಹಣ ಬಿ.ರಾಕೇಶ್, ಸಂಕಲನ ಸುನಿಲ್‍ಕಶ್ಯಪ್.ಹೆಚ್.ಎನ್, ಕಾರ್ಯಕಾರಿ ನಿರ್ಮಾಪಕ ಅವಿನಾಶ್.ಯು.ಶೆಟ್ಟಿ ಅವರದಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
28/04/19For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore