HOME
CINEMA NEWS
GALLERY
TV NEWS
REVIEWS
CONTACT US
ಭಾರತ ಯೋಧರ ಕುರಿತಾದ ರಣಾಂಗಣ
ಹೊಸಬರ ‘ರಣಾಂಗಣ’ ಎನ್ನುವ ಸಿನಿಮಾವು ಭಾರತೀಯ ಯೋಧರ ನೈಜ ಘಟನೆ ಕುರಿತಾಗಿದೆ. ಎರಡು ಛಾಪ್ಟರ್‍ಗಳಲ್ಲಿ ಬರಲಿದ್ದು, ಮೊದಲನೆಯದು ನಿಜ ಜೀವನದ ಅಂಶಗಳಿಗೆ ಅಂತ್ಯ ಹೇಳಲಾಗುವುದು. ಹದಿನೇಳು, ಇಪ್ಪತ್ತು ಮತ್ತು ಭವಿಷ್ಯದ 30ನೇ ಶತಮಾನದ ಸನ್ನಿವೇಶಗಳಿಗೆ ತಕ್ಕಂತೆ ಸೆಟ್‍ನ್ನು ಹಾಕಲು ಕಲಾನಿರ್ದೇಶಕ ಮನುಜಗದ್ ಸನ್ನದ್ದರಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಸೈನಿಕರ ಕುರಿತಂತ ಚಿತ್ರವು ಇದೇ ಮೊದಲಾಗಿದೆ. ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ. ಮಂಗಳೂರುಬಂದರು, ರಾಮೇಶ್ವರ, ಹಿಮಾಚಲ್‍ಪ್ರದೇಶ್, ಯುರೋಪ್‍ನಲ್ಲಿರುವ ಸರ್ಬಿಯಾ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಮುಖ್ಯವಾಗಿ ಗಡಿನಾಡ ಭಾಗದಲ್ಲಿ ನಡೆದಂತ ಮೂರು ಘಟನೆಗಳನ್ನು ತೆಗೆದುಕೊಂಡಿದ್ದು, ವಿವರಕ್ಕೆ ತಂಡವು ಗೌಪ್ಯತೆಯನ್ನು ಕಾಯ್ದುಕೊಂಡಿದೆ. ಟಿ.ಎಸ್.ನಾಗಭರಣ, ವಾಸು ಬಳಿ ಕೆಲಸ ಮಾಡಿರುವ ಹಾಗೂ ನಿರ್ದೇಶಕ ಮಹೇಶ್‍ರಾವ್ ಸಹೋದರ ರೋಹಿತ್‍ರಾವ್ ಮೊದಲಬಾರಿ ಕತೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರು ಹೇಳುವಂತೆ ದೇಶ ಕಾಯುವ ಯೋಧ, ಅನ್ನ ನೀಡುವ ರೈತ ಇಬ್ಬರು ಕಷ್ಟ ಪಡುತ್ತಿರುವುದರಿಂದಲೇ ನಾವುಗಳು ನೆಮ್ಮದಿಯಿಂದ ಇರುವುದು. ಚಿತ್ರ ನೋಡಿದವನು ತಾನು ಕೂಡ ಸೈನ್ಯಕ್ಕೆ ಸೇರಬೇಕೆಂಬ ಬಯಕೆ ಉಂಟಾಗುತ್ತದೆ. ಜನವರಿ 15 ಸೈನಿಕರ ದಿನಾಚರಣೆ ಇದೆ. ಅಂದೇ ಬಿಡುಗಡೆ ಮಾಡಲು ಪ್ರಯತ್ನ ಮಾಡಲಾಗುವುದು. ಸಾರ್ವತ್ರಿಕ ಕತೆಯಾಗಿರುವ ಕಾರಣ ಕನ್ನಡ ಸೇರಿದಂತೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಪಡಿಸಲಾಗುತ್ತಿದೆ. ಭಾರತದಲ್ಲಿ ಏಳು ಗಡಿಭಾಗಗಳು ಇರುವುದರಿಂದ ಏಳು ಖಳನಾಯಕರುಗಳು ನಟಿಸಲಿದ್ದಾರೆ. ಇದರ ಪೈಕಿ ಮೊದಲ ಹಂತದಲ್ಲಿ ರಘು, ಯೋಗೀಶ್ ಅವಕಾಶ ಪಡೆದುಕೊಂಡಿದ್ದಾರೆ.

ಸ್ಕಂದಾಅಶೋಕ್ ನಾಯಕ. ಪತ್ರಕರ್ತೆ ನಂತರ ಸೇನೆಗೆ ಸೇರುವ ಶಾನ್ವಿಶ್ರೀವಾತ್ಸವ್ ನಾಯಕಿ. ಅಜ್ಜಿಯಾಗಿ ಜಯಲಕ್ಷೀ, ಇವರೊಂದಿಗೆ ಪವನ್‍ಕುಮಾರ್, ಪ್ರತೀಶ್‍ಶೆಟ್ಟಿ, ಸುಮನ್‍ನಗರ್‍ಕರ್ ಮುಂತಾದವರಿದ್ದಾರೆ. ನೃತ್ಯ ಹರ್ಷ, ಸಾಹಸ ರವಿವರ್ಮ, ಸಾಹಿತ್ಯ ಚೇತನ್‍ಭರ್ಜರಿ-ರೋಹಿತ್‍ರಾವ್-ಹರೀಶ್,ಕಾಸ್ಟ್ಯೂಮ್ ಡಿಸೈನರ್ ರಶ್ಮಿಅನೂಪ್‍ರಾವ್ ನಿರ್ವಹಿಸುತ್ತಿದ್ದಾರೆ. ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‍ಶೆಟ್ಟಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಸಂಭಾವ್ಯ ಮೇಜರ್ ಪಾತ್ರಕ್ಕೆ ಬಣ್ಣ ಹಚ್ಚುವ ಹೆಚ್.ಟಿ.ಸಾಂಗ್ಲಿಯಾನ ಕ್ಯಾಮಾರ ಆನ್ ಮಾಡಿ ಶುಭ ಹಾರೈಸಿದರು. ಸಿನಿಮಾದ ಫಸ್ಟ್ ಲುಕ್‍ನ್ನು ರಂಗಿತರಂಗದ ಕಾಪ್ಟನ್ ಅನೂಪ್‍ಭಂಡಾರಿ ಲೋಕಾರ್ಪಣೆ ಮಾಡಿದರು. ತುಳು ಚಿತ್ರ ನಿರ್ಮಾಣ ಮಾಡಿರುವ ಹೇಮಂತ್‍ಸುವರ್ಣ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
14/03/19

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore