HOME
CINEMA NEWS
GALLERY
TV NEWS
REVIEWS
CONTACT US

ತಂತ್ರಜ್ಘರ ಮಾತುಗಳು
ಸಾಮಾನ್ಯವಾಗಿ ಸಿನಿಮಾದ ಗೋಷ್ಟಿ ಅಂದರೆ ಅಲ್ಲಿ ನಾಯಕ, ನಾಯಕಿ, ಪೋಷಕ ಕಲಾವಿದರು, ನಿರ್ದೇಶಕ, ನಿರ್ಮಾಪಕ, ಟೆಕ್ನಷಿಯನ್ಸ್ ಹಾಜರಿರುವುದು ರೂಡಿಯಾಗಿದೆ. ಮಾತುಕತೆಯಲ್ಲಿ ಎಲ್ಲರ ನಂತರ ಮೈಕ್ ಸಿಕ್ಕಾಗ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತೆ ಇವರ ಪರಿಸ್ಥಿತಿ ಆಗಿರುತ್ತದೆ. ಅಪರೂಪಕ್ಕೆ ಎನ್ನುವಂತೆ ‘ರಣಭೂಮಿ’ ಚಿತ್ರದ ನಿರ್ಮಾಪಕರು ಕಲಾವಿದರನ್ನು ಹೂರತುಪಡಿಸಿ ತಂತ್ರಜ್ಘರನ್ನು ಪರಿಚಯಿಸುವ ಸಲುವಾಗಿ ವಿಶೇಷವಾಗಿ ಸುದ್ದಿಗೋಷ್ಟಿಯನ್ನು ಏರ್ಪಾಟು ಮಾಡಿದ್ದರು. ಹುಟ್ಟು ಅನಿವಾಯವಾದ್ರು... ಸಾವು ಚರಿತ್ರೆ ಆಗಬೇಕು... ಎಂದು ಅಡಿಬರಹದಲ್ಲಿರುವಂತೆ ಎಲ್ಲರು ಅನುಭವಗಳನ್ನು ಹಂಚಿಕೊಂಡರು.

ಕತೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ಚಿರಂಜೀವಿ ದೀಪಕ್ ಮಾತು ಶುರು ಮಾಡಿದರು. ಜೋಕಾಲಿ ತರುವಾಯ ಒಳ್ಳೆ ಚಿತ್ರ ಕೊಡಬೇಕೆಂಬ ಗಮ್ಯದಿಂದ ಸಾಹಸಕ್ಕೆ ಕೈ ಹಾಕಲಾಗಿದೆ. ನಲವತ್ತೈದು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲೂ ಎರಡು ದಿನ ಮಾತ್ರ ಬೆಳಗಿನ ಹೊತ್ತು, ಉಳಿದಂತೆ ರಾತ್ರಿ ವೇಳೆಯಲ್ಲಿ ಸೆರೆಹಿಡಿಯಲಾಗಿದೆ. ಸೆಸ್ಪನ್ಸ್, ಹಾರರ್, ಥ್ರಿಲ್ಲರ್ ಹಾಗೂ ಆಕ್ಷನ್‍ದಿಂದ ಕೂಡಿದೆ. ಶೀರ್ಷಿಕೆ ಆಕರ್ಷಣೆ ಇರಬೇಕು ಎನ್ನುವ ಕಾರಣದಿಂದ ರಗಡ್ ಟೈಟಲ್ ಇಡಲಾಗಿದೆ. ರಣಭೂಮಿ ಅಂದರೆ ಯುದ್ದಭೂಮಿ ಎನ್ನುತ್ತಾರೆ. ಹಾಗಂತ ಇದರ ಕತೆಯಾಗಿರುವುದಿಲ್ಲ. ಸೇಡಿನ ಚಿತ್ರ ಎನ್ನಬಹುದಾಗಿದೆ. ಸಮಾಜದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ಕಷ್ಟಕ್ಕೆ ಸಿಲುಕುತ್ತಾನೆ. ಮುಂದೆ ಸಮಾಜದಿಂದ ಗೆಲ್ತಾನಾ? ಸೋಲ್ತಾನಾ? ಎಂಬುದು ಸಾರಾಂಶವಾಗಿದೆ. ಸದ್ಯ ಡಿಟಿಎಸ್ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಧ್ವನಿಸಾಂದ್ರಿಕೆ ಅನಾವರಣಗೊಳ್ಳಲಿದೆ. ನಿರಂಜನ್‍ಒಡೆಯರ್, ಕಾರುಣ್ಯರಾಮ್, ಶೀತಲ್ ಶೆಟ್ಟಿ, ಡ್ಯಾನಿಕುಟ್ಟಪ್ಪ, ಭಜರಂಗಿಲೋಕೇಶ್ ಸಕರಾತ್ಮಕ ಇನ್ಸ್ಸ್‍ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂದು ಕ್ಲುಪ್ತವಾಗಿ ಹೇಳಿದರು.

ನಿರ್ದೇಶಕರು ಹೇಳಿದ ಸನ್ನಿವೇಶಕ್ಕೆ ಎರಡು ಗಂಟೆಯಲ್ಲಿ ಸಾಹಿತ್ಯ ಬರೆಯಲಾಯಿತು. ಅದನ್ನು ಕೊನೆಯಲ್ಲಿ ತೋರಿಸಲಾಗುತ್ತಿದೆ. ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು ವಿಜಯಭರಮಸಾಗರ.
ಪ್ರಾರಂಭದಲ್ಲಿ ಒಂದು ಹಾಡು ಇತ್ತು. ಮೇಕಿಂಗ್ ನೋಡಿದಾಗಲೇ ಹೆಚ್ಚಿನ ಗೀತೆ ಅವಶ್ಯಕತೆವಿದೆ ಎಂದು ಹೇಳಿದಾಗ ನಿರ್ಮಾಪಕರು ಸಹಮತಿ ವ್ಯಕ್ತಪಡಿಸಿದರು. ಟ್ರ್ಯಾಕ್ ಹಾಡಿದಾಗ ಚೆನ್ನಾಗಿದೆ ಅಂತ ಎಲ್ಲರೂ ಹೇಳಿದ್ದರಿಂದ ಇದನ್ನೆ ಥೀಮ್‍ಗೆ ಬಳಸಲಾಗಿದೆ ಎಂಬುದು ಎರಡು ಗೀತೆಗಳಿಗೆ ಸಂಗೀತ ಒದಗಿಸಿರುವ ಪ್ರದೀಪ್‍ವರ್ಮ ನುಡಿಗಳು.

ಗೆಳೆಯನಿಗೆ ಸಾಥ್ ನೀಡಲು ಹಣ ಹೂಡಿರುವ ಉದ್ಯಮಿಗಳಾದ ಮಂಜುನಾಥಸ್ವಾಮಿ, ಹೇಮಂತ್ ಮತ್ತು ಛಾಯಗ್ರಾಹಕ ನಾಗಾರ್ಜುನ್ ಕಡಿಮೆ ಸಮಯ ತೆಗೆದುಕೊಂಡರು. ಇದಕ್ಕೂ ಮುನ್ನ ಚಿತ್ರೀಕರಣದ ತುಣುಕುಗಳನ್ನು ತೋರಿಸಲಾಯಿತು.
ಸಿನಿ ಸರ್ಕಲ್.ಇನ್ ನ್ಯೂಸ್
5/01/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore