HOME
CINEMA NEWS
GALLERY
TV NEWS
REVIEWS
CONTACT US
ಹೊಸಬರರಮೇಶ ಸುರೇಶ
ಸ್ಯಾಂಡಲ್‍ವುಡ್‍ಗೆ ಹೊಸಬರ ಪ್ರವೇಶಜೋರಾಗಿಆಗುತ್ತಿದೆ.ಆ ಸಾಲಿಗೆ ‘ರಮೇಶ ಸುರೇಶ’ ಎನ್ನುವಚಿತ್ರವೊಂದು ಸೇರ್ಪಡೆಯಾಗಿದೆ.ನಾಗರಾಜಮಲ್ಲಿಗೇನಹಳ್ಳಿ-ರಘುರಾಜ್‍ಗೌಡ ರಚನೆ,ನಿರ್ದೇಶನವಿದೆ. ಶೀರ್ಷಿಕೆ ಹೇಳುವಂತೆ ಇಬ್ಬರು ಎಡಬಿಡಂಗಿಗಳು ಹೇಗೆ ಬದಲಾಗುತ್ತಾರೆ.ಒಂದು ನಿಗೂಢತೆ ಸುತ್ತ ಹಾಸ್ಯ ಮಾಡಲು ಹೋಗಿ ಸಮಸ್ಯೆಗಳು ಉದ್ವವವಾಗುತ್ತದೆ.ಅದರಿಂದ ಪರಿಹಾರಕಂಡುಕೊಂಡಾಗಅವರನ್ನುಹೆಂಗೇ ಬದಲಾಯಿಸುತ್ತೆಎಂಬುದುಚಿತ್ರದ ಹೂರಣವಾಗಿದೆ.ಮೋಸ ಮಾಡಿಕೊಂಡು ಮೋಜುಜೀವನ ನಡೆಸುತ್ತಾ, ಒಂದು ಹಂತದಲ್ಲಿಇಬ್ಬರು ಬದಲಾಗುವ ಪಾತ್ರದಲ್ಲಿಯಶ್‍ರಾಜ್ ಮತ್ತುಗುಬ್ಬಿವೀರಣ್ಣ ಮೊಮ್ಮಗ ಬೆನಕಗುಬ್ಬಿವೀರಣ ನಾಯಕರು.ಚಿತ್ರದಲ್ಲಿ ನಿರ್ದೇಶಕರು,ನಿರ್ಮಾಪಕರು,ನಾಯಕರು, ಖಳನಾಯಕರು ಇರುವುದು ವಿಶೇಷ.

ಸನ್ನಿವೇಶಕ್ಕೆತಕ್ಕಂತೆ ಮನಸ್ಸನ್ನು ಬದಲಾವಣೆಮಾಡಿಕೊಳ್ಳುವುದು. ಮುಂದೆಇಬ್ಬರುಈಕೆಯಜೀವನಕ್ಕೆ ಬಂದಾಗಅವರ ಬದುಕುಚೇಂಜ್‍ಆದಾಗ, ಇವಳು ಯಾವರೀತಿಯಲ್ಲಿ ಬದಲಾಗುತ್ತಾಳೆ ಎನ್ನುವ ಪಾತ್ರಕ್ಕೆಚಂದನಸೇಗು ನಾಯಕಿ.ಕಿಶೋರ್ ಹಾಗೂ ರೋಬೋಗಣೇಶ್ ಖಳನಾಯಕರು.ತಾಯಿ ಪಾತ್ರಕ್ಕೆರಂಗಭೂಮಿ ನಟಿ ವನಿತಾಜೈನ್ ಮುಂತಾದವರು ನಟಿಸುತ್ತಿದ್ದಾರೆ. ವಿಶ್ವಜಿತ್‍ರಾವ್-ಸುವರ್ಣಶರ್ಮ ಸಾಹಿತ್ಯದ ನಾಲ್ಕು ಹಾಡುಗಳಿಗೆ ನವನೀತ್ ಸಂಗೀತವಿದೆ.ಛಾಯಾಗ್ರಹಣ ವಿಶ್ವಜಿತ್‍ರಾವ್, ಸಂಕಲನ ಆಶಿಕ್‍ಗೌಡ, ಸಾಹಸ ವಿಕ್ರಮ್, ಕಾರ್ಯಕಾರಿ ನಿರ್ಮಾಪಕ ವಂಶಿ ಅವರದಾಗಿದೆ. ಸಂಭಾಷಣೆಗೆ ಪ್ರಮೋದ್‍ಮರವಂತೆ ಪೆನ್ನು ಕೆಲಸ ಮಾಡುತ್ತಿದೆ.ಪಿ.ಕೃಷ್ಣ ಮತ್ತು ಬಿ.ಶಂಕರ್‍ಜಂಟಿಯಾಗಿಆರ್.ಕೆ.ಟಾಕೀಸ್ ಮುಖಾಂತರ ನಿರ್ಮಾಣ ಮಾಡುತ್ತಿದ್ದಾರೆ.ಹೊನ್ನಾವರ, ತುಮಕೂರು ಮತ್ತು ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆಸಲುತಂಡವು ಸಿದ್ದತೆ ಮಾಡಿಕೊಂಡಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
8/08/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore