HOME
CINEMA NEWS
GALLERY
TV NEWS
REVIEWS
CONTACT US

ಚಿತ್ರೀಕರಣ ಮುಗಿಸಿದ ರಾಜುಜೇಮ್ಸ್‍ಬಾಂಡ್
‘ರಾಜುಜೇಮ್ಸ್ ಬಾಂಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಶೇಕಡ 70ರಷ್ಟು ಸಂಡೂರು ಉಳಿದಂತೆ ಶ್ರೀರಂಗಪಟ್ಟಣ್ಣ ಹಾಗೂ ಮೊದಲುಎನ್ನುವಂತೆ ಲಂಡನ್ ಸೆಂಟ್ರಲ್‍ರಸ್ತೆ, ಒಟ್ಟಾರೆ50 ದಿನಗಳ ಕಾಲ ಚಿತ್ರೀಕರಣ ನಡೆಸಿ, ಸದ್ಯ ಪೋಸ್ಟ್ ಪ್ರೊಡಕ್ಷನ್‍ದಲ್ಲಿ ಬ್ಯುಸಿ ಇದೆ. ಕತೆಯಕುರಿತು ಹೇಳುವುದಾದರೆ ಸುವರ್ಣಪುರಊರಿನಲ್ಲಿರಾಜು ಪದವಿ ಮುಗಿಸಿ ಬ್ಯಾಂಕ್ ಮ್ಯಾನೇಜರ್ ಆಗುವ ಬಯಕೆ ಹೊಂದಿರುತ್ತಾನೆ. ಗ್ಯಾಪ್‍ದಲ್ಲಿಮಾವನ ಬಳಿ ನೌಕರಿ ಮಾಡಿಕೊಂಡು ಗೆಳೆಯನೊಂದಿಗೆ ಇರುತ್ತಾನೆ. ಮತ್ತೋಂದುಕಡೆಅಪ್ಪ ಮಾಡಿದ ಮನೆಯ ಸಾಲ ತೀರಿಸಲು ಪಣತೊಡುತ್ತಾನೆ. ಅದೇಊರಿನ ಶಿಕ್ಷಕಿ ಮೇಲೆ ಪ್ರೀತಿ ಹುಟ್ಟುತ್ತದೆ. ಮುಂದೆ ಶಾಸಕನಿಂದಈತನಜೀವನದಲ್ಲಿಏರುಪೇರುಆಗುತ್ತದೆ.ಕೊನೆಗೆ ಹುದ್ದೆಗಿಟ್ಟಿಸುತ್ತಾನಾ?ಪ್ರೀತಿಸಿದ ಹುಡುಗಿ ಸಿಗುತ್ತಾಳಾ?ಶಾಸಕನೊಂದಿಗೆ ನ್ಯಾಯಕ್ಕಾಗಿ ಹೋರಾಡುತ್ತಾನಾ?ಹೀಗೆ ತನ್ನ ಮುಂದಿರುವ ಮೂರನ್ನುತನ್ನಿಚ್ಚೆಯಂತೆ ಪಡೆಯುವನೇಅಥವಾಜೇಮ್ಸ್‍ಬಾಂಡ್ ಆಗುವನೇ ಎಂಬುದುಒಂದು ಏಳೆಯ ಕತೆಯಾಗಿದೆ.

ನಾಯಕಿಯಾಗಿಮೃದುಲಾ. ತಾರಗಣದಲ್ಲಿಅಚ್ಯುತ್‍ಕುಮಾರ್, ಚಿಕ್ಕಣ್ಣ, ರವಿಶಂಕರ್ ಉಳಿದಂತೆ ತಬಲನಾಣಿ, ಜೈಜಗದೀಶ್, ವಿಜಯ್‍ಚೆಂಡೂರ್, ಮಂಜುನಾಥಹೆಗ್ಡೆ, ಜಯಸಿಂಹನ್ ನಟಿಸಿದ್ದಾರೆ. ಅನೂಪ್‍ಸೀಳನ್ ಸಂಗೀತದ ನಾಲ್ಕು ಹಾಡುಗಳ ಪೈಕಿ ಎರಡರಲ್ಲಿಚಂದನ್‍ಶೆಟ್ಟಿ, ಅಂತೋಣಿದಾಸ್‍ಧ್ವನಿಯಾಗಿದ್ದಾರೆ. ಸಂಕಲನ ಅಮಿತ್‍ಜವಾಲ್ಕರ್, ಸಾಹಸ ಮಾಸ್ ಮಾದ, ನೃತ್ಯ ಮುರಳಿ ಅವರದಾಗಿದೆ. ಅನಿವಾಸಿ ಭಾರತಿಯರಾದ ಲಂಡನ್ ನಿವಾಸಿ ಕನ್ನಡಿಗಮಂಜುನಾಥ್‍ವಿಶ್ವಕರ್ಮಎರಡು ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದು, ಅದರಂತೆಕೆನಡಾದಲ್ಲಿಕನ್ನಡ ಸಿನಿಮಾಗಳನ್ನು ವಿತರಣೆ ಮಾಡುತ್ತಿರುವಕಿರಣ್‍ಬಾರ್ತೋಡ್‍ಸೇರಿಕೊಂಡುಜಂಟಿಯಾಗಿಬಂಡವಾಳ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/01/20ಅಂದು ರ್ಯಾಂಕ್ ರಾಜು ಇಂದು ಜೇಮ್ಸ್ ಬಾಂಡ್
ಒಂದು ಚಿತ್ರದ ಹೆಸರು ಹಿಟ್ ಆದಲ್ಲಿ ಅದೇ ಹೆಸರಿನಲ್ಲಿ ಚಿತ್ರಗಳು ಬರುವುದುಂಟು. ಗುರುನಂದನ್ ಅಭಿನಯದ ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ನಂತರ ‘ರಾಜು ಜೇಮ್ಸ್ ಬಾಂಡ್’ ಸಿನಿಮಾ ಹೊಸದಾಗಿ ಸೇರಿಕೊಂಡಿದೆ. ಪಂಜಾಬ್‍ದಲ್ಲಿ ನಡೆದ ಘಟನೆಯ ಚಿತ್ರವಾಗಿಲ್ಲವೆಂದು ಸ್ಪಷ್ಟಪಡಿಸಿದ ನಿರ್ದೇಶಕ ದೀಪಕ್‍ಮಧುವನಹಳ್ಳಿ ಇದೊಂದು ಸಣ್ಣ ಹಳ್ಳಿಯಲ್ಲಿ ನಡೆಯುವ ಕತೆಯಾಗಿದೆ. ಕಥಾನಾಯಕ ರಾಜ್‍ಕುಮಾರ್ ಅಭಿಮಾನಿಯಾಗಿ ಅವರ ಜೇಮ್ಸ್ ಬಾಂಡ್ ಚಿತ್ರಗಳನ್ನು ನೋಡುತ್ತಾ ಅದರಲ್ಲಿರುವ ವ್ಯಕ್ತಿತ್ವಗಳನ್ನು ರೂಡಿಸಿಕೊಂಡಿರುತ್ತಾನೆ. ಜೀವನದಲ್ಲಿ ಬರುವ ವಸ್ತುಸ್ಥಿತಿಗಳನ್ನು ಜೇಮ್ಸ್‍ಬಾಂಡ್ ಇಲ್ಲವೆ ರಾಜು ಆಗಿ ಹೇಗೆ ನಿಭಾಯಿಸುತ್ತಾನೆ. ಕ್ಲೈಮಾಕ್ಸ್‍ನಲ್ಲಿ ಎರಡನ್ನು ಮಾಡ್ತಾನಾ ಎನ್ನುವುದು ಚಿತ್ರದ ತಿರುಳಾಗಿದೆ ಎಂದು ವಿವರಣೆ ನೀಡಿದರು.

ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾತನಾಡಿ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದಿದೆ. ಪ್ರಸಕ್ತ ಆಧುನಿಕತೆ ಹೆಚ್ಚಾದ ಕಾರಣ ಯಶಸ್ಸು ಎನ್ನುವುದು ಕಡಿಮೆ ಆಗಿದೆ. ನಮ್ಮ ಸರ್ಕಾರ ಚಿತ್ರರಂಗದ ಸಮಸ್ಯೆಯನ್ನು ಬಗೆ ಹರಿಸೋ ಪ್ರಯತ್ನ ಮಾಡುತ್ತಿದೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಜೆಡಿಎಸ್ ಅವರನ್ನು ಸಂಪರ್ಕಿಸಿ ಮುಂದೆವರೆಯ ಬೇಕಾಗಿದೆ ಎಂದು ಪಕ್ಕದಲ್ಲಿ ಕುಳಿತಿದ್ದ ಸಚಿವರನ್ನು ನೋಡಿ, ತಂಡಕ್ಕೆ ಶುಭ ಹಾರೈಸಿದರು.

ಇವರ ಮಾತುಗಳಿಗೆ ದಸ್‍ಕತ್ ಹಾಕಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬಂಗಾರದ ಮನುಷ್ಯ ಎಂಟು ಬಾರಿ ನೋಡಿದ್ದರಿಂದ, ಅದರಲ್ಲಿ ರಾಜ್‍ಕುಮಾರ್ ಪಾತ್ರ ಪ್ರಭಾವ ಬೀರಿತು. ಅದೇ ಪರಿಸ್ಥಿತಿಯನ್ನು ಎದುರಿಸಿ ಪ್ರಗತಿಪರ ರೈತನಾಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರೆ ಚಿತ್ರವು ಕಾರಣವಾಗಿದೆ. ಜನರ ಮನಸ್ಸನ್ನು ಗೆಲ್ಲುವ, ಅಡ್ಡದಾರಿ ತಪ್ಪಿಸುವ ಚಿತ್ರಗಳು ಬರಬೇಕೆಂದು ಕರೆ ನೀಡಿ, ಕ್ಯಾಮಾರ ಸ್ವಿಚ್ ಆನ್ ಮಾಡಿದರು.

ಇಬ್ಬರು ದಿಗ್ಗಜರಿಂದ ಆರ್ಶಿವಾದ ಪಡೆದಿರುವ ತಂಡಕ್ಕೆ ಗೆಲುವು ಖಚಿತ. ಮುಂದೆ ಗಳಿಕೆ ಬಂದಂತ ಹಣದಲ್ಲಿ ಒಂದಷ್ಟು ಹಣವನ್ನು ಕೊಡಗು ಜನರಿಗೆ ನೀಡಬೇಕೆಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಕೋರಿಕೊಂಡರು.

ನಾಯಕ ಗುರುನಂದನ್, ನಾಯಕಿ ಮೃದುಲಾ, ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿರುವ ಅನೂಪ್‍ಸೀಳನ್, ಸಂಕಲನಕಾರ ಅಕ್ಷಯ್.ಪಿ.ರಾವ್, ಛಾಯಗ್ರಾಹಕ ಮನೋಹರ್‍ಜೋಷಿ ಖುಷಿಯನ್ನು ಹಂಚಿಕೊಂಡರು. ಅನಿವಾಸಿ ಭಾರತಿಯರಾದ ಲಂಡನ್ ನಿವಾಸಿ ಕನ್ನಡಿಗರಾದ ಮಂಜುನಾಥ್‍ವಿಶ್ವಕರ್ಮ ಮತ್ತು ಕಿರಣ್‍ಬಾರ್ತೋಡ್ ಕನ್ನಡ ಜನತೆಗೆ ಏನಾದರೂ ಕೊಡಬೇಕೆಂದು ತೀರ್ಮಾನಿಸಿ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
25/08/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore