HOME
CINEMA NEWS
GALLERY
TV NEWS
REVIEWS
CONTACT US
ರೌಡಿಸಂ ಬೇಡ, ಸಂಬಂದಗಳಿಗೆ ಬೆಲೆ ಕಟ್ಟಲಾಗದು
ನಿನ್ನ ಅಪ್ಪನನ್ನು ಕೊಂದ ತಪ್ಪಿಗೆ ನನಗೆ ಶಿಕ್ಷೆ ಕೊಡು, ಅದು ಬಿಟ್ಟು ಕುಟುಂಬದವರಿಗೆ ಏಕೆ ತೊಂದರೆ ಕೊಡುತ್ತೀಯಾ ಎಂದು ಹೇಳುವಾಗ ‘ರಾಜಣ್ಣನ ಮಗ’ ಚಿತ್ರವು ಕ್ಲೈಮಾಕ್ಸ್ ಹಂತಕ್ಕೆ ಬಂದಿರುತ್ತದೆ. ಅಷ್ಟಕ್ಕೂ ಎದುರಾಳಿಯ ತಂದೆಯನ್ನು ಕೊಲೆ ಮಾಡಿದ್ದು ಯಾವ ಕಾರಣಕ್ಕೆ, ಹಳೇ ದ್ವೇಷ ತುಂಬ ವರ್ಷ ಇರುವುದು ಏಕೆ? ಅಂಥ ತಪ್ಪು ಮಾಡಿದ್ದಾದರೂ ಏನು? ಇವೆಲ್ಲಾ ಕುತೂಹಲವನ್ನು ತಿಳಿಯಲು ಒಮ್ಮೆ ಸಿನಿಮಾ ನೋಡಬೇಕು. ಹೆಸರೇ ಹೇಳುವಂತೆ ಸಿನಿಮಾದಲ್ಲಿ ಸಂಬಂದಗಳು ಎಷ್ಟು ಮುಖ್ಯ, ರೌಡಿಸಂ ಮಾಡಿದವರಿಗೆ ಉಳಿಗಾಲವಿಲ್ಲ. ಅದು ನೀರಿನ ಮೇಲೆ ಗುಳ್ಳೆ ಇರುವ ಹಾಗೆ. ಯಾವಾಗಬೇಕಾದರೂ ಒಡೆಯಬಹುದು. ಹಾಗಂತ ಪೂರ್ತಿ ಇದರ ಅಂಶಗಳು ಇರದೆ, ಸಂದರ್ಭಕ್ಕೆ ತಕ್ಕಂತೆ ಅಲ್ಲಿಲ್ಲಿ ಸನ್ನಿವೇಶಗಳು ಕಾಣಿಸಿಕೊಳ್ಳುತ್ತವೆ. ಖಳನಾಯಕನು ಅಪ್ಪನ ಪ್ರೀತಿಗೆ ಪರಿತಪಿಸುವುದು, ನಾಯಕನು ಅಪ್ಪನಿಗೆ ಗೌರವ ಕೊಡುವುದು ಎರಡು ಇರುವುದು ವಿಶೇಷವಾಗಿದೆ. ಮಗ ತಪ್ಪು ಮಾಡಿದನೆಂದು ಮನೆಯಿಂದ ಹೊರಹಾಕುವ ಅಪ್ಪ, ಕೊನೆಯಲ್ಲಿ ಪಶ್ಚಾತ್ತಾಪ ಪಟ್ಟಾಗ, ನೊಂದಿರುವ ಮಗನು ಸಿಗುತ್ತಾನಾ ಎಂಬುದನ್ನು ಚೆನ್ನಾಗಿ ತೋರಿಸಲಾಗಿದೆ.

ಎರಡನೆ ಬಾರಿ ನಾಯಕನಾಗಿ ನಟಿಸಿರುವ ಹರೀಶ್‍ಜಲ್‍ಗೆರೆ ಸೆಂಟಿಮೆಂಟ್ ದೃಶ್ಯಗಳಲ್ಲಿ ಪರವಾಗಿಲ್ಲ. ಅದೇ ಫೈಟ್‍ಗಳು ಮಾಸ್ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ. ಕೆಲವು ಕಡೆ ಆಕ್ಷನ್ ಸೀನ್‍ಗಳು ನೋಡುವಾಗ ಟೈಗರ್ ಪ್ರಭಾಕರ್ ಕಣ್ಣ ಮುಂದೆ ಬರುತ್ತಾರೆ. ನಾಯಕಿ ಅಕ್ಷತಾಶ್ರೀಧರ್‍ಶಾಸ್ತ್ರೀಗೆ ಒಂದು ಹಾಡು ಬಿಟ್ಟರೆ, ಉಳಿದಂತೆ ಡೈಲಾಗ್ ಹೇಳಿ ಮಾಯಾವಾಗುತ್ತಾರೆ. ರಾಜಣ್ಣನಾಗಿ ಚರಣ್‍ರಾಜ್ ಪಾತ್ರಕ್ಕೆ ಸೂಕ್ತ ಎನ್ನಬಹುದು. ಶರತ್‍ಲೋಹಿತಾಶ್ವ, ರಾಜುರೆಡ್ಡಿ, ಮೈಕೋನಾಗರಾಜ್ ಕೆಟ್ಟ ಮನುಷ್ಯರಾಗಿ ಕಾಣಿಸಿಕೊಂಡರೆ, ಕರಿಸುಬ್ಬು ಭ್ರಷ್ಟ ಕಾಪೋರೇಟರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಕೋಲಾರಸೀನು ಚೊಕ್ಕದಾಗಿ ಜನರು ಇಷ್ಟಪಡುವ ಹಾಗೆ ಸಿನಿಮಾ ಮಾಡಿರುವುದು ಪರದೆ ಮೇಲೆ ಕಾಣೀಸುತ್ತದೆ. ನಟಸಾರ್ವಭೌಮದಲ್ಲಿ ಪುನೀತ್‍ಗೆ ಹೆಜ್ಜೆ ಹಾಕಿಸಿದ್ದ ನೃತ್ಯ ಸಂಯೋಜಕ ಭೂಷಣ್ ಐಟಂ ಹಾಡಿಗೆ ಕುಣಿದಿದ್ದಾರೆ. ರವಿಬಸ್ರೂರು ಸಂಗೀತ ಕೆಲವು ಕಡೆ ಕೆಜಿಎಫ್ ಹಿನ್ನಲೆ ಸಂಗೀತ ನೆನಪಿಸುತ್ತದೆ. ಅದ್ಬುತ ಫೈಟ್‍ಗಳಿಗೆ ಕೆಲಸ ಮಾಡಿರವ ಡಿಫರೆಂಡ್‍ಡ್ಯಾನಿಗೆ ಪೂರಕವಾಗಿ ಪ್ರಮೋದ್ ಛಾಯಾಗ್ರಹಣ ಚೆನ್ನಾಗಿದೆ. ಒಟ್ಟಾರೆ ಕ್ಲಾಸ್, ಮಾಸ್ ಜನರಿಗೆ ಚಿತ್ರವು ಪೈಸಾ ವಸೂಲ್ ಆಗುವುದು ಖಚಿತ.
ನಿರ್ಮಾಣ: ಜಲಗೆರೆ ಪ್ರೈ ಲಿ.
ಸಿನಿ ಸರ್ಕಲ್.ಇನ್ ವಿಮರ್ಶೆ
****
16/03/19


ಜನರ ಎದುರು ರಾಜಣ್ಣನ ಮಗ
ಬಹು ಭಾಷಾ ನಟ ಚರಣ್‍ರಾಜ್ ಬೇರೆ ಭಾಷೆಯಲ್ಲಿ ಬ್ಯುಸಿ ಇದ್ದರೂ ಅಪರೂಪಕ್ಕೆ ಚಂದನವನಕ್ಕೆ ಬಂದು ಹೋಗುತ್ತಿರುತ್ತಾರೆ. ಅದರಂತೆ ‘ರಾಜಣ್ಣನ ಮಗ’ ಚಿತ್ರದಲ್ಲಿ ರಾಜಣ್ಣನಾಗಿ ಕಾಣಿಸಿಕೊಂಡಿದ್ದಾರೆ. ರಾಜಣ್ಣ ಎಂದು ಡಾ.ರಾಜ್‍ಕುಮಾರ್‍ಗೆ ಕರೆಯುವುದು ಎಲ್ಲರಿಗೂ ತಿಳಿದಿದೆ. ಅಣ್ಣ್ರಾವ್ರರ ಮುಗ್ದತೆ ಇರುವಂತೆ ಸಿನಿಮಾದಲ್ಲಿ ಕಾಣಲಿದೆ. ಸೌಮ್ಯ ಸ್ವಭಾವದವಾಗಿ ಹೇಗೆ ನಟಿಸುವುದು ಕಷ್ಟವಾಗಿದೆ. ಆಗ ನಿರ್ದೇಶಕರು ಡಾ.ರಾಜ್‍ಕುಮಾರ್ ಚಿತ್ರಗಳನ್ನು ನೆನಪು ಮಾಡಿಕೊಂಡು ಕ್ಯಾಮಾರ ಮುಂದೆ ಬನ್ನಿ ಅಂತ ಸಲಹೆ ನೀಡಿದ್ದಾರೆ. ಅದರಂತೆ ಬಂದಾಗ ಅಭಿನಯಿಸಲು ಸುಲಭವಾಯಿತು ಅಂತಾರೆ. ರೌಡಿ ಅಂಶಗಳು, ಭಾವನೆಗಳು ಇರಲಿದೆ. ಒಂದು ಸೊಳ್ಳೆಯನ್ನು ಕೊಲ್ಲದ ರಾಜಣ್ಣ, ಮಗ ಮರ್ಡರ್ ಮಾಡಿದಾಗ ಶಾಕ್ ಆಗುತ್ತದೆ. ಕೋಲಾರ ಸೀನು ಕತೆ ಬರೆದು ನಿರ್ದೇಶನ ಮಾಡಿರುವುದು ದ್ವಿತೀಯ ಅನುಭವ.

ಕುಟುಂಬ, ಸಮಾಜ ಹಾಗೂ ಪ್ರೀತಿ ಮೂರು ಸೇರಿಕೊಂಡಿದ್ದು, ಮಗನ ಪಾತ್ರದಲ್ಲಿ ಹರೀಶ್ ನಾಯಕ ಮತ್ತು ನಿರ್ಮಾಪಕನಾಗಿ ಎರಡನೆ ಚಿತ್ರ. ಇವರ ನಟನೆ ನೋಡುತ್ತಿರುವಾಗ ಟೈಗರ್‍ಪ್ರಭಾಕರ್ ನೆನಪು ಬರುತ್ತಿತ್ತು ಅಂತ ಚರಣ್‍ರಾಜ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಅಕ್ಷತಾಶ್ರೀಧರ್‍ಶಾಸ್ತ್ರೀ ವೈದ್ಯೆ ಪಾತ್ರದಲ್ಲಿ ನಾಯಕಿ. ಅರುಣಾಬಾಲ್‍ರಾಜ್ ತಾಯಿ, ಖಳನಟನಾಗಿ ರಾಜುರೆಡ್ಡಿ, ದುರಳ ರಾಜಕಾರಣಿಯಾಗಿ ಕರಿಸುಬ್ಬು ಗೆಳಯನಾಗಿ ಕುರಿರಂಗ ನಟನೆ ಇದೆ. ಡಿಫರೆಂಟ್‍ಡ್ಯಾನಿ ಅವರ ಆರು ಸಾಹಸ ದೃಶ್ಯಗಳು, ರವಿಬಸ್ರೂರ್ ಸಂಗೀತದಲ್ಲಿ ನಾಲ್ಕು ಹಾಡುಗಳು ಇರಲಿದೆ. ನೃತ್ಯ ಆನಂದ್, ಛಾಯಗ್ರಹಣ ಪ್ರದೀಪ್ ಅವರದಾಗಿದೆ. ಕೊನೆ ಟ್ರೈಲರ್‍ನ್ನು ಮಾಧ್ಯಮದವರಿಗೆ ತೋರಿಸಲಾಗಿ, ಚಿತ್ರವು ಶುಕ್ರವಾರದಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/03/19sಆಕ್ಷನ್‍ದಲ್ಲಿ ಮಿಂಚಿರುವ ರಾಜಣ್ಣನ ಮಗ
‘ರಾಜಣ್ಣನ ಮಗ’ ಸಿನಿಮಾದ ಧ್ವನಿಸಾಂದ್ರಿಕೆ ಲೋಕಾರ್ಪಣೆಯಲ್ಲಿ ಭರ್ಜರಿ ಫೈಟ್ ತುಣುಕುಗಳನ್ನು ನೋಡಿದಾಗ ನಿಜಕ್ಕೂ ಮೈ ಜುಂ ಅನಿಸಿತ್ತು. ಸಾಹಸ ನಿರ್ದೇಶನ ಮಾಡಿರುವುದು ಡಿಫರೆಂಟ್‍ಡ್ಯಾನಿ. ಇವರ ಗುರು ಥ್ರಿಲ್ಲರ್‍ಮಂಜು ಹಾಗೂ ಇತರೆ ಫೈಟ್ ಮಾಸ್ಟರ್‍ಗಳಾದ ಜಾಲಿಬಾಸ್ಟನ್, ಮಾಸ್‍ಮಾದ, ಕುಂಗುಫುಚಂದ್ರು, ವಿನೋಧ್, ವಿಕ್ರಂ ಇವರುಗಳನ್ನು ಆಹ್ವಾನಿಸಿದ್ದರು. ಚಿತ್ರಕ್ಕೆ ಹರಸಲು ಇವರೆಲ್ಲರೂ ಬಂದಿರುವುದು ಚಿತ್ರರಂಗದಲ್ಲಿ ಇದೇ ಮೊದಲು ಎನ್ನಬಹುದು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಮಾತನಾಡಿ ಶೀರ್ಷಿಕೆ ಕೇಳಿದರೆ ಮೊದಲು ನೆನಪಿಗೆ ಬರುವುದು ಡಾ.ರಾಜ್‍ಕುಮಾರ್ . ರಾಜಣ್ಣನಾಗಿ ಚರಣ್‍ರಾಜ್ ನಟಿಸಿದ್ದಾರೆಂದು ತಿಳಿದಿದೆ. ಅವರು ತಮಿಳು ಭಾಷೆಯಲ್ಲಿ ಮಿಂಚಿದ್ದಾರೆ. ಕಲೆಗೆ ಚೌಕಟ್ಟು ಇಲ್ಲ. ಎಲ್ಲೆ ಇದ್ದರೂ ಕನ್ನಡಿಗನಾಗಿರಲಿ. ರಾಜ್‍ಕುಮಾರ್ ಕೇವಲ ನಟನಾಗಿದ್ದರೆ ಇಷ್ಟೋಂದು ಗೌರವ ಸಿಗುತ್ತಿರಲಿಲ್ಲ. ಅದನ್ನು ಮೀರಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಸಾಂಸ್ಕ್ರತಿಕ ರಾಯಭಾರಿಯಾಗಿದ್ದರು. ಅವರ ಸರಳ ಜೀವನ, ನಯ ,ವಿನಯ ಇತರರು ಕಲಿಯಬೇಕಾಗಿದೆ ಎಂದು ತಂಡಕ್ಕೆ ಶುಭ ಹಾರೈಸಿದರು.

ರಾಜ್ ಹೆಸರು ಇದ್ದರೆ ಗೆಲುವು ಶತಸಿದ್ದ. ಅವರ ಹೆಸರಿನಲ್ಲಿ ಕಾಣಿಸಿಕೊಂಡಿರುವುದು ನಿಜಕ್ಕೂ ಸುಕೃತ. ನಟಿಸುವಾಗ ಅವರು ಕಣ್‍ಮುಂದೆ ಬಂದಂತೆ ಆಗುತ್ತಿತ್ತು ಎಂಬುದು ಚರಣ್‍ರಾಜ್ ಸಂತಸದ ನುಡಿ. ಸಿನಿಮಾದಲ್ಲಿ ಸಾಹಸ ಇದ್ದರೆ ಹೀರೋಗೆ ಕಳೆ ಬರುತ್ತದೆ. ಅದಕ್ಕಾಗಿ ಸ್ಟಂಟ್ ನಿರ್ದೇಶಕರ ಅಗತ್ಯತೆ ಇದೆ. ಇವತ್ತು ಎಲ್ಲಾ ಮಾಸ್ಟರ್‍ಗಳು ಬಂದಿದ್ದು ಖುಷಿ ತಂದಿದೆ. ನಾಯಕಿ ಅಕ್ಷರಾ ಬೇರೆ ಚಿತ್ರದಲ್ಲಿ ಬ್ಯುಸಿ ಇರುವುದರಿಂದ ಬಂದಿಲ್ಲವೆಂದು ನಾಯಕ ಮತ್ತು ನಿರ್ಮಾಪಕ ಹರೀಶ್‍ಜಲೆಗೆರೆ ಹೇಳಿದರು. ನಿರ್ದೇಶಕ ಕೋಲಾರಸೀನು ಹೆಚ್ಚೇನು ಮಾತನಾಡಲಿಲ್ಲ. ನಾಲ್ಕು ಹಾಡುಗಳಿಗೆ ಸಂಗೀತ ಒದಗಿಸಿರುವ ರವಿಬಸ್ರೂರು ಅನುಪಸ್ಥಿತಿಗೆ ಕಾರಣ ತಿಳಿಯಲಿಲ್ಲ. ವಾಣಿಜ್ಯ ಮಂಡಳಿ ಪದಾದಿಕಾರಿಗಳು ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/11/18


ರಾಜಣ್ಣನ ಮಗ ಟೀಸರ್ ಬಿಡುಗಡೆ
ಬಹು ಭಾಷಾ ನಟ ಚರಣ್‍ರಾಜ್ ಬೇರೆ ಭಾಷೆಯಲ್ಲಿ ಬ್ಯುಸಿ ಇದ್ದರೂ ಅಪರೂಪಕ್ಕೆ ಚಂದನವನಕ್ಕೆ ಬಂದು ಹೋಗುತ್ತಿರುತ್ತಾರೆ. ಅದರಂತೆ ‘ರಾಜಣ್ಣನ ಮಗ’ ಚಿತ್ರದಲ್ಲಿ ರಾಜಣ್ಣನಾಗಿ ಕಾಣಿಸಿಕೊಂಡಿದ್ದಾರೆ. ರಾಜಣ್ಣ ಎಂದು ಡಾ.ರಾಜ್‍ಕುಮಾರ್‍ಗೆ ಕರೆಯುವುದು ಎಲ್ಲರಿಗೂ ತಿಳಿದಿದೆ. ಒಮ್ಮೆ ಶಿವರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್ ಪ್ರತ್ಯೇಕವಾಗಿ ಸೆಟ್‍ಗೆ ಭೇಟಿ ನೀಡಿ ಕತೆ ಕೇಳಿ ಟೈಟಲ್ ಸೂಕ್ತವಾಗಿದೆ ಮುಂದುವರೆಸಿ ಅಂತ ಆಶಿರ್ವಾದ ನೀಡದ್ದಾರಂತೆ. ಅಣ್ಣ್ರಾವ್ರರ ಮುಗ್ದತೆ ಇರುವಂತೆ ಸಿನಿಮಾದಲ್ಲಿ ಕಾಣಲಿದೆ. ರೌಡಿ ಅಂಶಗಳು, ಭಾವನೆಗಳು ಇರಲಿದೆ. ಒಂದು ಸೊಳ್ಳೆಯನ್ನು ಕೊಲ್ಲದ ರಾಜಣ್ಣ, ಮಗ ಮರ್ಡರ್ ಮಾಡಿದಾಗ ಶಾಕ್ ಆಗುತ್ತದೆ. ಇಲ್ಲಿವರೆಗೂ 400 ಸಿನಿಮಾಗಳಲ್ಲಿ ನಟಿಸಿರುವ ಚರಣ್‍ರಾಜ್‍ಗೆ ಈ ಪಾತ್ರವು ವಿಭಿನ್ನವಾಗಿದೆಯಂತೆ. ಕೋಲಾರ ಸೀನು ಕತೆ ಬರೆದು ನಿರ್ದೇಶನ ಮಾಡಿರುವುದು ದ್ವಿತೀಯ ಅನುಭವ.

ಕುಟುಂಬ, ಸಮಾಜ ಹಾಗೂ ಪ್ರೀತಿ ಮೂರು ಸೇರಿಕೊಂಡಿದ್ದು, ಮಗನ ಪಾತ್ರದಲ್ಲಿ ಹರೀಶ್ ನಾಯಕ ಮತ್ತು ನಿರ್ಮಾಪಕನಾಗಿ ಎರಡನೆ ಚಿತ್ರ. ಅಕ್ಷತಾ ವೈದ್ಯೆ ಪಾತ್ರದಲ್ಲಿ ನಾಯಕಿ. ಖಳನಟನಾಗಿ ರಾಜೀವ್ ಇವರೊಂದಿಗೆ ಕರಿಸುಬ್ಬು ನಟನೆ ಇದೆ. ಆರು ಸಾಹಸ ದೃಶ್ಯಗಳು, ನಾಲ್ಕು ಹಾಡುಗಳು ಇರಲಿದೆ. ನೃತ್ಯ ಆನಂದ್, ಛಾಯಗ್ರಹಣ ಪ್ರದೀಪ್. ಸಿನಿಮಾವು ಚಿತ್ರೀಕರಣೋತ್ತರ ಕೆಲಸದಲ್ಲಿ ಬ್ಯುಸಿ ಇದ್ದು, ಸೆಪ್ಟಂಬರ್‍ನಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
17/07/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore