HOME
CINEMA NEWS
GALLERY
TV NEWS
REVIEWS
CONTACT US
ಸಿಂಹಾದ್ರಿಯ ಸಿಂಹ ಮುಂದುವರಿದ ಭಾಗ
ಡಾ.ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹದಲ್ಲಿ ನರಸಿಂಹೆಗೌಡನ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದರು. ಅದರ ಭಾಗವನ್ನು ಮುಂದುವರೆಸಿ ‘ರಾಜಸಿಂಹ’ ಚಿತ್ರವು ತೆರೆಕಂಡಿದೆ. ಸಿಂಹಾದ್ರಿ ಗ್ರಾಮದಲ್ಲಿ ಡ್ಯಾಮ್ ಕಟ್ಟಿಸುವ ಸಲುವಾಗಿ ಗೌಡರು ಆಸ್ತಿಯನ್ನು ಜನರಿಗೆ ಬರೆದಾಗ, ತಮ್ಮ ಇದನ್ನು ಸಹಿಸದೆ ತೆಪ್ಪದಲ್ಲಿ ಪ್ರಯಾಣ ಮಾಡುತ್ತಿದ್ದ ಗೌಡರಿಗೆ ಗುಂಡು ಹೊಡೆದಾಗ, ಪತ್ನಿ, ಮಗುವನ್ನು ಕಾಪಾಡಿ ಸಾವಿಗೆ ಶರಣಾಗುತ್ತಾನೆ. ಕಟ್ ಮಾಡಿದರೆ ಇಬ್ಬರು ಪಟ್ಟಣದಲ್ಲಿ ನೆಲಸಿರುತ್ತಾರೆ. ಒಂದು ಹಂತದಲ್ಲಿ ರಾಜ ಹುಡುಗಿಯನ್ನು ಪ್ರೀತಿಸಿ. ಆಕೆ ಗೌಡರ ತಮ್ಮನ ಮಗನೆಂದು ತಿಳಿದ ತಾಯಿ ಮಗನಿಗೆ ಅಪ್ಪನ ಸಾವಿಗೆ ಯಾರು ಕಾರಣರೆಂದು ತಿಳಿಸಿ, ಅಲ್ಲಿಗೆ ಹೋಗಬೇಡವೆಂದು ಬುದ್ದಿವಾದ ಹೇಳುತ್ತಾಳ. ಇದರಿಂದ ಕುಪಿತಗೊಂಡ ಮಗ ಅಲ್ಲಿಗೆ ಹೋಗಿ ಆಕೆಯನ್ನು ಕಂಡು, ಅಲ್ಲಿದ್ದ ಅವ್ಯವಸ್ಥೆಯನ್ನು ಸರಿಪಡಿಸಿ ಅಪ್ಪನ ಆಸೆಯನ್ನು ಈಡೇರಿಸುತ್ತಾನೆ. ಎಲ್ಲಾ ಚಿತ್ರದಲ್ಲಿ ಸೇಡು ಎಂಬುದಾಗಿ ಇರುತ್ತದೆ. ಚಿತ್ರದಲ್ಲಿ ಅದರ ಬಗ್ಗೆ ಹೆಚ್ಚು ತೋರಿಸದೆ ರಾಜಸಿಂಹನು ಅಣೆಕಟ್ಟು ಕಟ್ಟಿಸುವುದು, ಶಾಲೆಗಳನ್ನು ತೆರೆಯುವುದು, ಸ್ವಚ್ಚಾಭಾರತ್ ಅಭಿಯಾನದಂತೆ ಶೌಚಾಲಯಗಳ ನಿರ್ಮಾಣ ಹೀಗೆ ಬಗೆ ಬಗೆಯ ಸಮಾಜಸೇವೆಗಳನ್ನು ಮಾಡಿಸುತ್ತಾನೆ. ಗ್ರಾಮ ಉದ್ದಾರಕ್ಕಾಗಿ ಆತ ಏನೇನು ಮಾಡುತ್ತಾನೆ, ಚಿಕ್ಕಪ್ಪ, ದುಷ್ಟ ಮಗನನ್ನು ಯಾವ ರೀತಿಯಲ್ಲಿ ಹತೋಟಿಗೆ ತರುತ್ತಾನೆ ಎಂಬುದು ಸಿಂಹನ ಆರ್ಭಟದಲ್ಲಿ ತಿಳಿಯಲಿದೆ.

ಲವ್ವರ್‍ಬಾಯ್ ಆಗಿ ಕಾಣ ಸಿಕೊಂಡಿದ್ದ ಅನಿರುದ್ದ್ ಮೊದಲಬಾರಿ ಆಕ್ಷನ್ ಹೀರೋ ಆಗಿ ಜಬರ್‍ದಸ್ತ್ ಫೈಟ್‍ಗಳನ್ನು ಮಾಡಿದ್ದಾರೆ. ಜೊತೆಯಲ್ಲಿ ಅಭಿಯನವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಅವರು ನಡೆದುಕೊಂಡು ಬರುವ ಸ್ಟೈಲ್, ಹಾವಭಾವ ಎಲ್ಲವು ಒಂದು ಕಡೆ ವಿಷ್ಣುರವರನ್ನು ನೋಡಿದಂತೆ ಭಾಸವಾಗುತ್ತದೆ. ಮರಸುತ್ತವ ನಾಯಕಿ ಎನ್ನುವಂತೆ ನಿಖಿತಾತುಕ್ರಾಲ್‍ಗೆ ಅವಕಾಶಗಳು ಇಲ್ಲ. ವಿರಾಮದ ನಂತರ ಕಾಣ ಸಿಕೊಳ್ಳುವ ಸಂಜನಾ ಒಂದು ಹಾಟ್ ಹಾಡಿನಲ್ಲಿ ಕಣ ್ಣಗೆ ತಂಪು ಕೊಡುತ್ತಾರೆ. ಶರತ್‍ಲೋಹಿತಾಶ್ವ ಸಾರಥಿ ಚಿತ್ರದ ಗೆಟಪ್‍ನಲ್ಲಿ ಮಿಂಚಿದ್ದಾರೆ. ಮಗನಾಗಿ ಅರುಣ್‍ಸಾಗರ್ ಖಳನಾಯಕ, ನಗಿಸಲು ಬುಲೆಟ್‍ಪ್ರಕಾಶ್, ಮೋಹನ್‍ಜುನೇಜ, ಸ್ನೇಹಿತರುಗಳಾಗಿ ಪವನ್‍ಕುಮಾರ್, ವಿಜಯ್‍ಚೆಂಡೂರ್ ಇವರೆಲ್ಲರೂ ಸ್ಪರ್ಧೇಗೆ ಬಿದ್ದವರಂತೆ ಪಾತ್ರಗಳಲ್ಲಿ ಮುಳುಗಿದ್ದಾರೆ. ಅಮ್ಮನಾಗಿ ಭಾರತಿವಿಷ್ಣುವರ್ಧನ್, ಸಚಿವರ ಪಾತ್ರದಲ್ಲಿ ಒಂದು ನಿಮಿಷ ಅಂಬರೀಷ್ ಬಂದುಹೋಗುತ್ತಾರೆ. ನಿರ್ಮಾಪಕ ಸಿ.ಡಿ.ಬಸಪ್ಪ ಪುಟ್ಟ ಪಾತ್ರ ಹಾಗೂ ನಾಯಕನನ್ನು ಹೊಗಳುವ ಹಾಡಿಗೆ ಬಣ್ಣ ಹಚ್ಚಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತದ ಎರಡು ಹಾಡುಗಳು ನೆನಪಿನಲ್ಲಿ ಉಳಿಯುತ್ತದೆ. ಅಭಿಮಾನಿಗಳು ಡಾ.ವಿಷ್ಣು ಅವರನ್ನು ನೋಡಲು ಬಯಸಿದರೆ ರಾಜಸಿಂಹದಲ್ಲಿ ಕಾಣ ಸಿಕೊಳ್ಳುತ್ತಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
-3/02/18
ರಾಜಸಿಂಹನ ರಥಯಾತ್ರೆಗೆ ಚಾಲನೆ
ಇಲ್ಲಿಯವರೆಗೂ ಚಾಕಲೇಟ್ ಬಾಯ್ ಆಗಿದ್ದ್ದ ಅನಿರುದ್ದ್ ಪ್ರಥಮಬಾರಿ ಆಕ್ಷನ್ ಹೀರೋ ಆಗಿ ‘ರಾಜಸಿಂಹ’ ಚಿತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ಸಿಂಹಾದ್ರಿ ಎಂಬ ಗ್ರಾಮದಲ್ಲಿ ಹೆಸರು ಮಾಡಿದ್ದ ನರಸಿಂಹಗೌಡ ನಿಧನದ 10 ವರ್ಷ ನಂತರ ನಾಯಕ ಗ್ರಾಮಕ್ಕೆ ಬಂದಾಗ ಎಲ್ಲವು ಅವ್ಯವಸ್ಥೆಯಲ್ಲಿ ಇರುತ್ತದೆ. ಅದನ್ನು ಸರಿಪಡಿಸುವ ಪಾತ್ರದಲ್ಲಿ ಅನಿರುದ್ದ್ ನಟನೆ ಇದೆ. ಅರ್ಧ ಸಿನಿಮಾ ಡಾ.ವಿಷ್ಣುವರ್ದನ್ ಮುಖ್ಯ ಪಾತ್ರವಾಗಿ ತೆರೆ ಮೇಲೆ ಬರುತ್ತಾರಂತೆ. ಅದನ್ನು ವಿಶೇಷ ರೀತಿಯಲ್ಲಿ ಗ್ರಾಫಿಕ್ಸ್ ಮೂಲಕ ತೋರಿಸಲಾಗಿದೆ. ಮುಖ್ಯ ನಾಯಕಿಯಾಗಿ ನಿಖಿತಾತುಕ್ರಾಲ್ ಇದ್ದರೆ, ವಿರಾಮದ ನಂತರ ಕಾಣ ಸಿಕೊಳ್ಳುವ ಸಂಜನಾ ಒಂದು ಹಾಟ್ ಹಾಡಿನಲ್ಲಿ ಬರಲಿದ್ದು, ನಾಯಕನ ಗುರಿಗೆ ಪ್ರೋತ್ಸಾಹ ನೀಡುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಐಟಂಸಾಂಗ್‍ನಲ್ಲಿ ಕಾಮ್ನಾಸಿಂಗ್ ಹೆಜ್ಜೆ ಹಾಕಿದ್ದಾರೆ. ತಾಯಿಯಾಗಿ ಭಾರತಿವಿಷ್ಣುವರ್ಧನ್ , ಅತಿಥಿ ಪಾತ್ರಕ್ಕೆ ಅಂಬರೀಷ್ ಇರುವುದು ವಿಶೇಷ.

ನಿರ್ದೇಶಕ ರವಿರಾಮ್ ಅವರು ಅಭಿಮಾನಿಗಳು ಬೇಸರಗೊಳ್ಳದಂತೆ ಜತನದಿಂದ ಸನ್ನವೇಶಗಳನ್ನು ಸೃಷ್ಟಿಸಿದ್ದು ಡಾ.ವಿಷ್ಣುವರ್ಧನ್ ಅವರನ್ನು ನೋಡುತ್ತಿರುವಾಗ ಅವರಿಲ್ಲ ಅನಿಸುವುದಿಲ್ಲವಂತೆ. ಐದು ಸಾಹಸಕ್ಕೆ ರವಿವರ್ಮ, ಥ್ರಿಲ್ಲರ್ ಮಂಜು ನಿರ್ದೇಶನವಿದೆ. ಆರು ಹಾಡುಗಳಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಸೆಟ್‍ನಲ್ಲಿ ಬಳಸಲಾಗಿದ್ದ ನರಸಿಂಹಗೌಡರ ಪುತ್ತಳಿಯನ್ನು ಶುಕ್ರವಾರದಂದು ರಾಜಸಿಂಹನ ರಥಯಾತ್ರ ಅಂತ ಆನಂದರಾವ್ ವೃತ್ತದಿಂದ ಚಿತ್ರಮಂದಿರವರೆಗೆ ಮರೆವಣ ಗೆ ಮೂಲಕ ತರಲು ಯೋಜನೆ ಹಾಕಿಕೊಳ್ಳಲಾಗಿದೆ. ಅಂದು ಸಾವಿರಾರು ಅಭಿಮಾನಿಗಳು ಭಾಗವಹಿಸುವರು. ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕದೆ ಯುಎ ನೀಡಿದ್ದಾರೆ. ವಿಷ್ಣು ಅಭಿಮಾನಿ ಸಿ.ಡಿ.ಬಸಪ್ಪ ನಿರ್ಮಾಣ ಮಾಡಿದ್ದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶುಕ್ರವಾರದಂದು ವಿಜಯ್ ಮೂವೀಸ್ ಮುಖಾಂತರ ತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-01/02/18
ಡಾ.ವಿಷ್ಣುವರ್ಧನ್- ಅಭಿಮಾನಿಗಳ ಸಂಗಮ ರಾಜಸಿಂಹ
ಬಹು ನಿರೀಕ್ಷಿತ ‘ರಾಜ ಸಿಂಹ’ ಚಿತ್ರದ ಧ್ವನಿಸಾಂದ್ರಿಕೆಯು ಅಭಿಮಾನಿಗಳ ಸಮ್ಮುಖದಲ್ಲಿ ಅನಾವರಣಗೊಂಡಿತು. ಮೈಕ್ ತೆಗೆದುಕೊಂಡ ನಾಯಕ ಅನಿರುದ್ದ್ ಸಿನಿಮಾ ಹುಟ್ಟಿದ್ದನ್ನು ನೆನಪು ಮಾಡಿಕೊಂಡು, ನಿರ್ದೇಶಕರು ಸಿಂಹಾದ್ರಿಯ ಸಿಂಹ ಮುಂದುವರೆದ ಭಾಗದಂತೆ ಕತೆ ಹೇಳಿದಾಗ ಖುಷಿ ತಂದುಕೊಟ್ಟಿತ್ತು. ಇಲ್ಲಿಯವರೆವಿಗೂ ಚಾಕಲೇಟ್ ಹೀರೋ ಆಗಿದ್ದ ನನಗೆ ಆಕ್ಷನ್ ಹೀರೋ ಆಗಿ ಚೆನ್ನಾಗಿ ತೋರಿಸಿದ್ದಾರೆ. ಅಪ್ಪ ಅವರು ಹೇಳಿ ಮಾಡಿಸಿದಂತಿದೆ ಎಂದರು. ಸಾಧರಣ ಸಿನಿಮಾ ಮಾಡಬೇಕೆಂದು ಶುರು ಮಾಡಿ, ನಂತರ ಅದ್ಬುತ ಚಿತ್ರವಾಗಿ ಮೂಡಿಬಂದಿದೆ. ವಿಷ್ಣು ಸರ್ ಚಿತ್ರಗಳನ್ನು ನೋಡಿಕೊಂಡು ಬೆಳದ ನನಗೆ ಅವರ ನಟನೆಗೆ ಆಕ್ಷನ್ ಕಟ್ ಹೇಳುವ ಅವಕಾಶ ದೊರೆಯಲಿಲ್ಲ. ರಾಜಸಿಂಹ ವಿಷ್ಣು ಅಭಿಮಾನಿಗಳ ಸಂಭ್ರಮವೆಂದು ಬಣ್ಣನೆ ಮಾಡಿದರು ನಿರ್ದೇಶಕ ರವಿರಾಮ್. ಮಹಾನ್ ಕಲಾವಿದರು ಅಮರರಾಗಿರುತ್ತಾರೆ ಎಂಬುದಕ್ಕೆ ಸಾಕ್ಷಿ ಡಾ.ವಿಷ್ಣು ಆಗಿದ್ದಾರೆಂದು ವರ್ಣನೆ ಕೊಟ್ಟಿದ್ದು ಸಾಹಿತಿ ಕವಿರಾಜ್. ಮೊದಲ ಬಾರಿ ಗ್ಲಾಮರ್ ಹಾಡಿನಲ್ಲಿ ಕಾಣ ಸಿಕೊಂಡಿರುವುದಕ್ಕೆ ತೃಪ್ತಿ ತಂದಿದೆ. ನಿರ್ಮಾಪಕರು ಆಸಕ್ತಿಯಿಂದ ಸಿನಿಮಾ ಮಾಡಿದ್ದಾರೆಂದು ಹೊಗಳಿದರು ಸಂಜನಾ.

ಕೆಲವು ದೃಶ್ಯಗಳನ್ನು ನೋಡುವಾಗ ವಿಷ್ಣುವರ್ಧನ್ ನೆನಪಿಗೆ ಬಂದು ಎಲ್ಲರನ್ನು ಕಾಡುತ್ತಾರೆ. ಮತ್ತೆ ಅವರು ನಿಮ್ಮ ರೂಪದಲ್ಲಿ ಕಾಣ ಸಿಕೊಂಡಿದ್ದಾರೆ. ಶಂಕರ್‍ನಾಗ್, ರಾಜಕುಮಾರ್, ವಿಷ್ಣುವರ್ಧನ್ ಇಲ್ಲದೆ ಇದ್ದರೂ ಅವರ ಆದರ್ಶ, ಕೆಲಸ ನಮ್ಮ ಕಣ್ ಮುಂದೆ ಇದೆ. ವಿಷ್ಣು ಪಟ್ಟಿರುವ ಶ್ರಮ ಎಂದಿಗೂ ಮರೆಯಲಾಗದು ಎನ್ನುತ್ತಾರೆ ವಾಣ ಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು. ಒಬ್ಬರಿಂದ ಒಂದು ಸಿನಿಮಾ ಆಗೋಲ್ಲ. ಅದರ ಹಿಂದೆ ಕಲಾವಿದರು, ತಂತ್ರಜ್ಘರು ಸೇರಿದರೆ ಪ್ರಾಡ್ಕಟ್ ಆಗುತ್ತದೆ. ಸಾಹಸ ಸಿಂಹ ಚಿತ್ರೀಕರಣ ಸಂದರ್ಭದಲ್ಲಿ ಯಜಮಾನರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದರು. ಅದೇ ತರಹ ಅನಿರುದ್ ಮೊದಲಿನಿಂದಲೂ ಎಲ್ಲಾ ವಿಭಾಗದಲ್ಲಿ ತೊಡಗಿಕೊಂಡು ಒಳ್ಳೆ ರೀತಿಯಲ್ಲಿ ಸಿನಿಮಾ ಬರಬೇಕೆಂದು ಶ್ರದ್ದೆ ವಹಿಸಿದ್ದಾರೆ. ಇನ್ನೆನಿದ್ದರೂ ಭಗವಂತ ಕರುಣೆ ತೋರಿಸಬೇಕು ಅಂತ ಅಳಿಯನಿಗೆ ಶುಭ ಹಾರೈಸಿದ್ದು ಡಾ.ಭಾರತಿವಿಷ್ಣುವರ್ಧನ್.

ಡಾ.ವಿಷ್ಣುವರ್ಧನ್-ಅಭಿಮಾನಿಗಳ ಸಂಗಮವನ್ನು ರಾಜಸಿಂಹ ಅಂತ ಕರೆಯಬಹುದು ಎಂದು ಬಣ್ಣನೆ ಮಾಡಿದರು ನಿರ್ಮಾಪಕ ಸಿ.ಡಿ.ಬಸಪ್ಪ. ಭಾರತದ ಎವರ್‍ಗ್ರೀನ್ ನಾಯಕಿ ಭಾರತಿ ಮೇಡಂ. ಚಿಕ್ಕಂದಿನಿಂದಲೂ ಅವರ ಅಭಿಮಾನಿಯಾಗಿರುವೆ. ರಾಮಾಚಾರಿ ಕತೆ ಅಕಸ್ಮಾತ್ ಒದಗಿಬಂತು. ಪರದೆ ಮೇಲೆ ಮಾತ್ರ ಅವರ ಅಭಿಮಾನಿಯಾಗಿ ರಾಮಾಚಾರಿ ಆಗಿದ್ದೇನೆ. ರಿಯಲ್‍ನಲ್ಲಿ ರಾಮಾಚಾರಿ ಎಂದೆಂದಿಗೂ ವಿಷ್ಣು ಸರ್ ಆಗಿರುತ್ತಾರೆ. ಅವರು ರಾಜಸಿಂಹದಲ್ಲಿ ಮತ್ತೆ ಅಭಿಮಾನಿಗಳನ್ನು ಕಾಣಲು ಬರುತ್ತಿದ್ದಾರೆ. ತಾವುಗಳು ಚಿತ್ರವನ್ನು ಗೆಲ್ಲಿಸಬೇಕು. ಇಲ್ಲಿಯವರೆಗೂ ಅವರಿಗೆ ಗೌರವ ಸರ್ಕಾರದಿಂದ ಸಿಕ್ಕಿಲ್ಲ. ಅವರಿಂದ ಆಗದೆ ಇದ್ದಲ್ಲಿ ನಾವುಗಳು ಮುಂದೆ ನಿಂತು ಕೆಲಸವನ್ನು ಪೂರೈಸುತ್ತೇವೆ. ವಿಷ್ಣು ಸರ್ ಕರ್ನಾಟಕದ ಆಸ್ತಿ ಎಂದು ಯಶ್ ಹೇಳಿದಾಗ ಅಭಿಮಾನಿಗಳ ಕೂಗಾಟ, ಜೈ ಕಾರ ಜೋರಾಗಿ ಕೇಳಿಬಂದವು. ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್, ನಟಿ ಅರ್ಚನಾ, ಕೀರ್ತಿವಿಷ್ಣುವರ್ಧನ್, ಸಿನಿಪಂಡಿತರು ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ನಾಯಕಿ ನಿಖಿತಾತುಕ್ರಾಲ್ ಗೈರು ಹಾಜರಿಗೆ ಕಾರಣ ತಿಳಿಯಲಿಲ್ಲ.
-21/11/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore