HOME
CINEMA NEWS
GALLERY
TV NEWS
REVIEWS
CONTACT US
ರಾಜಪಥ ಗಾನಲಹರಿ
ಹೊಸಬರ ‘ರಾಜಪಥ’ ಚಿತ್ರಕ್ಕೆ ಸಿದ್ದುಮೂಗೂರು ಚಿತ್ರಕ್ಕೆ ರಚನೆ ಮತ್ತು ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಪ್ರತಿಯೊಬ್ಬರ ಜೀವನದಲ್ಲಿ ಪುಟ್ಟ ಪುಟ್ಟ ಕನಸುಗಳು ಇರುತ್ತವೆ. ಅದನ್ನು ನನಸು ಮಾಡಿಕೊಳ್ಳಬೇಕಾದರೆ ತಾಳ್ಮೆ, ನಂಬಿಕೆ ಮುಖ್ಯವಾಗಿರುತ್ತದೆ. ಹಾಗೆ ಪ್ರೀತಿ, ಸಂಸಾರ, ಸ್ನೇಹ ನಿಲ್ಲಬೇಕು ಅಂದರೆ ಇವರೆಡು ಇರಲೇ ಬೇಕು. ಇದರ ಸುತ್ತ ನಡೆಯಲಿರುವ ಸನ್ನಿವೇಶಗಳಲ್ಲಿ ಒಟ್ಟಾರೆ ಮೂವತ್ತಾರು ಪಾತ್ರಗಳು ಸಾಗುತ್ತದೆ. ಆ ಪೈಕಿ ಆರು ಪಾತ್ರಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ, ಬೆಂಗಳೂರು, ನೆಲಮಂಗಲ ಕಡೆಗಳಲ್ಲಿ ಇಪ್ಪತ್ತೆರಡು ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ಸಂತೋಷ್.ಹೆಚ್.ರಾಯ್ಕರ್ ನಾಯಕ ಮತ್ತು ನಿರ್ಮಾಪಕ. ಕೊಳ್ಳೆಗಾಲದ ನಿತ್ಯಾ ಮಗುವಿನ ತಾಯಿಯಾಗಿ ನಾಯಕಿ. ಸಿಂಧೂಗೊಂಬೆ ಉಪನಾಯಕಿ. ಇವರೊಂದಿಗೆ ಉಮೇಶ್, ಸುಧೀರ್.ಹೆಚ್.ರಾಯಕರ್, ಆನಂದ್.ಡಿ.ಕಳಸ, ಎಸ್.ಎ.ಮುತ್ತಗಿ, ಲಕ್ಷಣ್‍ಪೂಜಾರಿ, ರಮಾಕಾಂತ್‍ಆರ್ಯನ್, ಬೇಬಿ ಪರಿಣಿತ, ಬೇಬಿ ಐಶ್ವರ್ಯ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ಹಾಗೂ ಮೂರು ಗೀತೆಗಳಿಗೆ ಕಂಠದಾನ ಮಾಡಿರುವುದು ಚಂದ್ರುಓಬಯ್ಯ. ಛಾಯಾಗ್ರಹಣ ರಘುರೂಗಿ, ಸಂಕಲನ ಸಂಜೀವ್‍ರೆಡ್ಡಿ, ಹಿನ್ನಲೆ ಶಬ್ದ ಜೇಮ್ಸ್‍ಪರಿಕಟ್ಟಿಲ್, ಕಲೆ ರಘುಚಾರ್ಲಿ ಅವರದಾಗಿದೆ. ಪ್ರಚಾರದ ಮೊದಲ ಹಂತವಾಗಿ ಕಲಾವಿದರ ಸಂಘದಲ್ಲಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು. ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಗುರೂಜಿ ಆಗಮಿಸಿ ಲಿರಿಕಲ್ ವಿಡಿಯೋ ಹಾಡಿಗೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಸೆನ್ಸಾರ್‍ನಿಂದ ಪ್ರಶಂಸೆ ಪಡೆದುಕೊಂಡು ಯು ಪ್ರಮಾಣ ಪತ್ರ ಪಡೆದುಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
30/09/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore