HOME
CINEMA NEWS
GALLERY
TV NEWS
REVIEWS
CONTACT US
ಹೊಸಬರರಾಜಲಕ್ಷೀ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ರಾಜಲಕ್ಷೀ’ ಚಿತ್ರವುಕೆರಗೂಡು ಸಮೀಪ ಸಿದ್ದಗೌಡನ ಹೋಬ್ಲಿಯಲ್ಲಿ ನಡೆದಂತ ಘಟನೆಗಳನ್ನು ತೆಗೆದುಕೊಂಡಿದೆ. ವೃತ್ತಿಯಲ್ಲಿ ವಕೀಲ, ಅಂಶಕಾಲಿಕವಾಗಿ ಸಹಾಯಕ ನಿರ್ದೇಶನ, ಸಾಹಿತ್ಯ, ಕತೆ ಬರೆಯುವ ಹವ್ಯಾಸ ರೂಡಿಸಿಕೊಂಡಿರುವ ಕಾಂತರಾಜ್‍ಗೌಡ ಅವಕಾಶಕ್ಕಾಗಿ ಹದಿನೇಳು ಕತೆಗಳನ್ನು ನಿರ್ಮಾಪಕರಿಗೆ ಹೇಳಿದಾಗ ಎಲ್ಲವನ್ನು ತಿರಸ್ಕರಿಸಿದ್ದಾರೆ. ಕೊನೆಗೆ ಸಕ್ಕರೆ ನಾಡಿನ ಶೈಲಿಯಕತೆಯನ್ನು ಹೇಳಿದಾಗ ಒಪ್ಪಿಕೊಂಡಂತೆ, ಮೊದಲಬಾರಿ ನಿರ್ದೇಶನ ಮತ್ತುಎರಡು ಹಾಡುಗಳಿಗೆ ಸಾಹಿತ್ಯ ರಚಿಸಿ ಬಿಡುಗಡೆ ಹಂತದವರೆಗೂತಂದಿದ್ದಾರೆ. ಶೀರ್ಷಿಕೆಯಲ್ಲಿ ಪ್ರೀತಿಕಥನಇರುವುದರಜೊತೆಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ.ಅಲ್ಲದೆಗ್ರಾಮೀಣ ಭಾಗದಲ್ಲಿ ನಡೆಯುವರಾಜಕೀಯ ಚಟುವಟಿಕೆಗಳನ್ನು ತೋರಿಸಲಾಗಿದೆ.

ನವೀನ್‍ತೀರ್ಥಹಳ್ಳಿ ಇದರಲ್ಲಿರೈತ, ಕಾಲೇಜು ಹುಡುಗನಾಗಿ ನಾಯಕ.ರಶ್ಮಿಗೌಡ ತಾಲ್ಲೋಕು ಪಂಚಾಯತಿಅಧ್ಯಕ್ಷರ ಮಗಳು.ನೋಡೋಕೆ ಸೈಲೆಂಟ್, ಮಾತಾಡಿದ್ರೆ ವೈಲೆಂಟ್ ಆಗುವ ಪಾತ್ರದಲ್ಲಿ ನಾಯಕಿ.ಅಧ್ಯಕ್ಷನಾಗಿ ಕೆ.ಹೆಚ್.ಮೀಸೆಮೂರ್ತಿ, ಖಳನಾಗಿ ಕಿರಣ್‍ಗೌಡ, ನಗಿಸಲು ಕಾಮಿಡಿ ಕಿಲಾಡಿಗಳು ಖ್ಯಾತಿಯ ಮುತ್ತುರಾಜ್ ಇವರುಗಳೊಂದಿಗೆ ಮಜಾಭಾರತ, ಮಜಾಟಾಕೀಸ್‍ಕಲಾವಿದರುಹಾಗೂ ಹಿರಿಯ ನಟರಾದ ಹೊನ್ನವಳ್ಳಿಕೃಷ್ಣ, ಟೆನ್ನಿಸ್‍ಕೃಷ್ಣ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳಿಗೆ ಸಂಗೀತವನ್ನುಗಾಯಕಿಡಾ.ಶಮಿತಾಮಲ್ನಾಡ್ ಸಂಯೋಜಸಿದ್ದಾರೆ.ಮೂರು ಸಿನಿಮಾಗಳಲ್ಲಿ ಪಾಲುದಾರರಾಗಿ ಹೊರಬಂದು ಕೈ ಸುಟ್ಟುಕೊಂಡಿರುವ ವಕೀಲ ಅದೇ ಭಾಗದಎಸ್.ಕೆ.ಮೋಹನ್‍ಕುಮಾರ್‍ಅವರಿಗೆಛಾಲೆಂಜ್ ಮಾಡಲು ಸ್ವತಂತ್ರ ನಿರ್ಮಾಪಕರಾಗಿ ಹಣ ಹೂಡಿರುವುದು ಹೊಸ ಅನುಭವ. ನಾಯಕ-ನಾಯಕಿ, ನಿರ್ಮಾಪಕರತಂದೆ-ತಾಯಿ ಹೆಸರುರಾಜಲಕ್ಷೀಇರುವುದು ವಿಶೇಷ. ಇವರುಕಟ್ಟಾಅಂಬರೀಷ್‍ಅಭಿಮಾನಿಯಾಗಿದ್ದರಿಂದಅವರ ಹುಟ್ಟಹಬ್ಬದಂದುಧ್ವನಿಸಾಂದ್ರಿಕೆಯನ್ನು ಸುಮಲತಾಅಂಬರೀಷ್ ಮತ್ತುದರ್ಶನ್‍ಅಮೃತಹಸ್ತದಿಂದ ಲೋಕಾರ್ಪಣೆ ಮಾಡಿಸಿ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/06/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore