HOME
CINEMA NEWS
GALLERY
TV NEWS
REVIEWS
CONTACT US

ರಾಜ್‍ವಿಷ್ಣು ಹೊಸ ಕಾಮಿಡಿ ಕಮಾಲ್
ನಟ ಶರಣ್ ಮತ್ತು ಚಿಕ್ಕಣ್ಣ ಮೂರು ವರ್ಷಗಳ ಬಳಿಕ ಒಟ್ಟಾಗಿ ಕಾಣ ಸಿರುವ ಚಿತ್ರ ರಾಜ್‍ವಿಷ್ಣು ಈ ವಾರ ತೆರೆಗೆ ಬಂದಿದೆ. ಡಾ.ರಾಜ್‍ಕುಮಾರ್ ಮತ್ತು ಸಾಹಸಸಿಂಹ ವಿಷ್ಣುವರ್ಧನ್‍ರ ಅಭಿಮಾನಿಗಳಾದ ಇಬ್ಬರು ಸ್ನೇಹಿತರು. ಅವರಲ್ಲಿ ಒಬ್ಬನಿಗೆ ಮಗ, ಮತ್ತೊಬ್ಬನಿಗೆ ಮಗಳು. ಆ ಹುಡುಗನಿಗೆ ಇಬ್ಬರು ಮಹಾನ್ ನಟರ ಹೆಸರನ್ನು ಸೇರಿಸಿ ರಾಜ್‍ವಿಷ್ಣು (ಶರಣ್) ಎಂದು ಹೆಸರಿಡುತ್ತಾರೆ. ಮೂವರು ಗಂಡು ಮಕ್ಕಳು ಉನ್ನತ ಹುದ್ದೆಯಲ್ಲಿ ದೂರವಿದ್ದರೂ, ತಾತ ಸಂಜೀವಪ್ಪನಿಗೆ (ಶ್ರೀನಿವಾಸ ಮೂರ್ತಿ) ಮೊಮ್ಮಗನ ಮೇಲೆಯೇ ಅತಿಯಾದ ಪ್ರೀತಿ. ಹೆಚ್ಚು ವಿದ್ಯೆ ಕಲಿಯದ ರಾಜ್‍ವಿಷ್ಣುಗೆ ಒಂದು ಉದ್ಯೋಗ ಕಲ್ಪಿಸಿಕೊಟ್ಟು ಮದುವೆ ಮಾಡಬೇಕೆಂಬುದು ತಾತನ ಆಸೆ. ಇದಕ್ಕಾಗಿ ತನ್ನ ಆಸ್ತಿಯನ್ನು ಪಾಲುಮಾಡಿ ರಾಜ್‍ವಿಷ್ಣುಗೆ ಹಣ ನೀಡುವ ಪ್ಲಾನ್ ಮಾಡುತ್ತಾನೆ. ಅದಕ್ಕೆ ವಿದೇಶಗಳಲ್ಲಿರುವ ತಾತನ ಎಲ್ಲಾ ಮಕ್ಕಳು ಬಂದು ಆಸ್ತಿಪತ್ರಕ್ಕೆ ಸಹಿ ಹಾಕಬೇಕು. ಆದರೆ ಎಷ್ಟೋ ವರ್ಷಗಳಿಂದ ವಿದೇಶದಲ್ಲಿರುವ ಮಕ್ಕಳು ಆಸ್ತಿಪಾಲಿಗಾಗಿ ಅಷ್ಟು ಬೇಗ ಊರಿಗೆ ಬರುತ್ತಾರೆಯೇ..? ಇದಕ್ಕಾಗಿ ತಾತ ಮತ್ತು ಮೊಮ್ಮಗ ಸೇರಿ ಒಂದು ಪ್ಲಾನ್ ಮಾಡುತ್ತಾರೆ. ಈ ಪ್ಲಾನ್‍ಗೆ ರಾಜ್‍ವಿಷ್ಣು ಸ್ನೇಹಿತ ಶಂಕರನಾಗ್ (ಚಿಕ್ಕಣ್ಣ) ಸಾಥ್ ನೀಡುತ್ತಾನೆ. ಅದರಂತೆ ವಿದೇಶದಲ್ಲಿರುವ ತಾತನ ಎಲ್ಲಾ ಮಕ್ಕಳು ಊರಿಗೆ ಬರುತ್ತಾರೆ. ಅಂತಿಮವಾಗಿ ರಾಜ್‍ವಿಷ್ಣುಗೆ ಆಸ್ತಿ ಸಿಗುತ್ತದೆಯಾ.., ರಾಜ್‍ವಿಷ್ಣು ತಾನು ಪ್ರೀತಿಸಿದ ಹುಡುಗಿ(ವೈಭವಿ)ಯನ್ನು ಮದುವೆಯಾಗ್ತಾನಾ, ಇದಕ್ಕೆಲ್ಲ ಉತ್ತರ ರಾಜ್‍ವಿಷ್ಣು ಚಿತ್ರದಲ್ಲಿದೆ.

ರಾಜ್‍ವಿಷ್ಣು ಪಾತ್ರದಲ್ಲಿ ಶರಣ್ ಗಮನ ಸೆಳೆಯುತ್ತಾರೆ. ಶರಣ್ ಸ್ನೇಹಿತನಾಗಿ ಅಭಿನಯಿಸಿರುವ ಚಿಕ್ಕಣ್ಣ ಕೂಡ ತಮ್ಮ ಪಾತ್ರಕ್ಕೆ ಫುಲ್‍ಮಾಕ್ರ್ಸ್ ಪಡೆದುಕೊಳ್ಳುತ್ತಾರೆ. ಶರಣ್ ಮತ್ತು ಚಿಕ್ಕಣ್ಣ ತಮ್ಮ ಡ್ಯಾನ್ಸ್, ಕಾಮಿಡಿ ಅಭಿನಯ ಮತ್ತು ವಿಭಿನ್ನ ಮ್ಯಾನರಿಸಂನಿಂದ ವೀಕ್ಷಕರ ಗಮನ ಸೆಳೆಯುತ್ತಾರೆ. ನಾಯಕಿಯಾಗಿ ವೈಭÀವಿ ಶಾಂಡಿಲ್ಯ ಮಧ್ಯಮ ವರ್ಗದ ಹುಡುಗಿಯಾಗಿ ಗಮನಸೆಳೆಯುತ್ತಾರೆ. ಉಳಿದಂತೆ ಸಾಧುಕೋಕಿಲ, ಮಿಮಿಕ್ರಿ ಗೋಪಿ, ಸುಚೇಂದ್ರ ಪ್ರಸಾದ್ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ರಾಜೇಶ್ ಕಟ್ಟಾ ತಮ್ಮ ಕ್ಯಾಮರಾ ಕಣ್ಣಲ್ಲಿ ಚಿತ್ರವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಹಾಡುಗಳು ಪರವಾಗಿಲ್ಲ. ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಎಂದಿನಂತೆ ರಾಜ್‍ವಿಷ್ಣು ಚಿತ್ರವನ್ನು ಅದ್ದೂರಿಯಾಗಿಯೇ ನಿರ್ಮಿಸಿದ್ದಾರೆ.
-Cine Circle News
-5/08/17


RAJ-VISHNU TO RELEASE ON AUGUST 4
I
f everything goes as per plan, the much-awaited film Raj-Vishnu, a remake of Tamil film Rajani Murugan, is scheduled to release on August 4, on the eve of Varamahalakshmi festival.

Sharan and Chikkanna are in the lead roles while Vybhavi Shandilya is the heroine in this film directed by K Madesh, who is known for successfully re-making other language films in Kannada. After a gap of three years, Sharan and Chikkanna are set to appear on the silver screen. Their earlier film was Adhyaksha.

“We wanted to continue acting in films after Adhyaksha but waited for suitable script. Finally, we got an opportunity to act in this film,’’ says Chikkanna thanking producer Ramu and director Madesh for selecting him to act in this film.

Expressing similar opinion, Sharan recalled how he used to struggle to answer queries from many people enquired about his next film with Chikkanna. “Their only query was when they can see me on the silver screen along with Chikkanna. Now, I am happy to have such opportunity. I am grateful to producer Ramu and director Madesh. Though I played character roles in films produced by Ramu, it is the first time I am playing the lead role in this film produced on Ramu Films banner,’’ Sharan said.

Speaking on the occasion, producer Ramu said he had decided to make a film with Sharan after releasing his film Adhyaksha in Mysuru region. “I was surprised to see the response from the movie buffs in Mysuru region for Adhyaksha film. There are occasions where theatre staffs have to issue tickets in the early morning. Four shows were houseful for a few weeks,’’ Ramu said.

Director Madesh said the film Raj-Vishnu has all the ingredients to entertain the audiences. “The script has been modified to suit Kannada nativity. Arjun Janya has provided good music for this film. Sharan, Chikkanna, Vybhavai have performed well. I have no doubt about the success of this film at the box-office,’’ director Madesh said.

Besides Sharan, Chikkanna and Vybhavi Shandilya, there are other artistes such as Srinivasamurthy, Ravishankar and Murali who played a guest role in this romantic comedy film.
-14/07/17`ರಾಜ್ ವಿಷ್ಣು’ ಚಿತ್ರಕ್ಕೆ ವಿಶೇಷ ಹಾಡು
ಅದ್ದೂರಿ ಚಿತ್ರ ನಿರ್ಮಾಣಕ್ಕೆ ಹೆಸರಾಗಿರುವ ರಾಮು ಅವರು ಖುಷಿಯಲ್ಲಿದ್ದಾರೆ. ತಮ್ಮ ರಾಮು ಫಿಲಂಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ 37ನೇ ಚಿತ್ರ `ರಾಜ್‍ವಿಷ್ಣು' ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋದು ರಾಮು ಅವರ ಖುಷಿಗೆ ಕಾರಣ.

ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿರುವ `ರಾಜ್ ವಿಷ್ಣು’ ಚಿತ್ರದ ವಿಶೇಷ ಹಾಡೊಂದರ ಚಿತ್ರೀಕರಣ ನೆಲಮಂಗಲ ಬಳಿಯಿರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದೆ.
ಈ ಸ್ಟುಡಿಯೋದಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್‍ನಲ್ಲಿ ಶರಣ್ ಮತ್ತು ವೈಭವಿ ಕಾಂಬಿನೇಷನ್ನಿನಲ್ಲಿ `ನನ್ನೋಡುದ್ರೆ ಧೂಳ್ ಕಣ್ಣೋಡುದ್ರೆ ಧೂಳ್’ ಎಂಬ ಡ್ಯುಯೆಟ್ ಹಾಡಿನ ಚಿತ್ರೀಕರಣವನ್ನು ನಾಲಕ್ಕು ದಿನಗಳ ಕಾಲ ಮಾಡಲಾಗಿದೆÉ. ಈ ಹಾಡಿಗೆ ಮುರಳಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಮೂಲಕ ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಂತಾಗಿದೆ. ಈಗಾಗಲೇ ಡಬ್ಬಿಂಗ್, ಸಿಜಿ ಮುಂತಾದ ಕೆಲಸಗಳೂ ಮುಗಿದಿವೆ. ಬಾಕಿ ಉಳಿದಿರುವ ಕೆಲವೇ ಕೆಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು `ರಾಜ್ ವಿಷ್ಣು` ಇನ್ನೇನು ತೆರೆಗೆ ಬರಲಿದೆ.

ತಮಿಳಿನಲ್ಲಿ ನಿರ್ಮಾಣಗೊಂಡು ಯಶಸ್ವಿಯಾಗಿದ್ದ `ರಜನಿ ಮುರುಘ' ಚಿತ್ರದ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು `ರಾಜ್ ವಿಷ್ಣು' ಸಿನಿಮಾವನ್ನು ರೂಪಿಸಲಾಗಿದೆÉ. ಈ ಹಿಂದೆ `ಅಧ್ಯಕ್ಷ' ಚಿತ್ರಕ್ಕೆ ಕಥೆ ಬರೆದಿದ್ದ ಪೊನ್ ರಾಜ್ ಅವರು `ರಜನಿ ಮುರುಘ' ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದರು. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಗುತ್ತಿದ್ದು, ಈ ಹಿಂದೆ ಆಕಾಶ್ ಮತ್ತು ಅರಸು ಚಿತ್ರಗಳಿಗೆ ಕಥೆ ಒದಗಿಸಿದ್ದ ಖ್ಯಾತ ಬರಹಗಾರ ಜನಾರ್ಧನ ಮಹರ್ಷಿ `ರಾಜ್ ವಿಷ್ಣು' ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ.

ಕೆ.ಮಾದೇಶ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಜೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ, ಥ್ರಿಲ್ಲರ್ ಮಂಜು, ವಿನೋದ್ ಅವರ ಸಾಹಸ ಸಂಯೋಜನೆ, ಯೋಗರಾಜ್ ಭಟ್, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಗೀತರಚನೆ, ರಘು ನಿಡುವಳ್ಳಿ ಸಂಭಾಷಣೆ, ಜನಾರ್ಧನ ಮಹರ್ಷಿ ಚಿತ್ರಕತೆ, ಸುರೇಶ್ ಗೋಸ್ವಾಮಿ ಸಹ ನಿರ್ದೇಶನ, ಅನಿಲ್ ಕುಮಾರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ಶರಣ್ ಮತ್ತು ಚಿಕ್ಕಣ್ಣ ಪ್ರಮುಖವಾಗಿರುವ ಈ ಚಿತ್ರದಲ್ಲಿ ಸಾಧು ಕೋಕಿಲ, ರವಿಶಂಕರ್, ಶ್ರೀನಿವಾಸಮೂರ್ತಿ, ವೀಣಾ ಸುಂದರ್, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಮತ್ತು ಸ್ವಾತಿ ಸೇರಿದಂತೆ ಇನ್ನು ಅನೇಕರ ತಾರಾಗಣವಿದೆ. ಮುಂಬೈ ಮೂಲದ ವೈಭವಿ `ರಾಜ್ ವಿಷ್ಣು' ಚಿತ್ರಕ್ಕೆ ನಾಯಕಿಯಾಗಿದ್ದಾರೆ.
-18/04/17
ರಾಜ್ ವಿಷ್ಣು ತೆರೆಗೆ ಬರಲು ತಯಾರು!
ಅದ್ದೂರಿ ಚಿತ್ರ ನಿರ್ಮಾಣಕ್ಕೆ ಹೆಸರಾಗಿರುವ ರಾಮು ಅವರು ಖುಷಿಯಲ್ಲಿದ್ದಾರೆ. ತಮ್ಮ ರಾಮು ಫಿಲಂಸ್ ಸಂಸ್ಥೆಯಡಿ ನಿರ್ಮಾಣವಾಗಿದ್ದ ರಾಜ್‍ವಿಷ್ಣು ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ, ರೇಣುಕಾಂಬ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಕೂಡಾ ಮುಕ್ತಾಯಗೊಂಡಿರುವುದು ರಾಮು ಅವರ ಖುಷಿಗೆ ಕಾರಣ. `ರಾಜ್‍ವಿಷ್ಣು' ಚಿತ್ರದ ಕೆಲಸಗಳು ಸಂಪೂರ್ಣಗೊಂಡಿರುವುದರಿಂದ ಫೆಬ್ರವರಿ ತಿಂಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ.

ಇದುವರೆಗೆ ಒಂದಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ಕೆ. ಮಾದೇಶ್ ನಿರ್ದೇಶನದ `ರಾಜ್ ವಿಷ್ಣು’ ಚಿತ್ರ ಶರಣ್ ಮತ್ತು ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿರುವ ಚಿತ್ರ. ಇವರಿಬ್ಬರು ನಾಯಕರಾಗಿದ್ದಾರೆಂದ ಮೇಲೆ ಈ ಚಿತ್ರ ಸಂಪೂರ್ಣ ಕಾಮಿಡಿ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವೇನಿಲ್ಲ. ಇದುವರೆಗೆ ಸಾಹಸ ಪ್ರಧಾನ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಾ ಬಂದಿದ್ದ ರಾಮು ಈ ಮೂಲಕ ಕಾಮಿಡಿ ಚಿತ್ರ ನಿರ್ಮಾಣಕ್ಕೂ ಕೈಯಿಟ್ಟಿದ್ದಾರೆ.

ತಮಿಳಿನಲ್ಲಿ ನಿರ್ಮಾಣಗೊಂಡು ಯಶಸ್ವಿಯಾಗಿದ್ದ `ರಜನಿ ಮುರುಘ' ಚಿತ್ರದ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು `ರಾಜ್ ವಿಷ್ಣು' ಸಿನಿಮಾವನ್ನು ರೂಪಿಸಲಾಗಿದೆÉ. ಈ ಹಿಂದೆ `ಅಧ್ಯಕ್ಷ' ಚಿತ್ರಕ್ಕೆ ಕಥೆ ಬರೆದಿದ್ದ ಪೊನ್ ರಾಜ್ ಅವರು `ರಜನಿ ಮುರುಘ' ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದರು. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಗುತ್ತಿದ್ದು, ಈ ಹಿಂದೆ ಆಕಾಶ್ ಮತ್ತು ಅರಸು ಚಿತ್ರಗಳಿಗೆ ಕಥೆ ಒದಗಿಸಿದ್ದ ಖ್ಯಾತ ಬರಹಗಾರ ಜನಾರ್ಧನ ಮಹರ್ಷಿ `ರಾಜ್ ವಿಷ್ಣು' ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ.

ಶರಣ್ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಸಾಧು ಕೋಕಿಲ, ರವಿಶಂಕರ್, ವೀಣಾ ಸುಂದರ್, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಮತ್ತು ಸ್ವಾತಿ ಸೇರಿದಂತೆ ಇನ್ನು ಅನೇಕರ ತಾರಾಗಣವಿದೆ. ಮುಂಬೈ ಮೂಲದ ವೈಭವಿ `ರಾಜ್ ವಿಷ್ಣು' ಚಿತ್ರಕ್ಕೆ ನಾಯಕಿಯಾಗಿದ್ದಾರೆ.
ರಾಜೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ, ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಯೋಗರಾಜ್ ಭಟ್, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಗೀತರಚನೆ, ರಘು ನಿಡುವಳ್ಳಿ ಸಂಭಾಷಣೆ, ಜನಾರ್ಧನ ಮಹರ್ಷಿ ಚಿತ್ರಕತೆ, ಸುರೇಶ್ ಗೋಸ್ವಾಮಿ ಸಹ ನಿರ್ದೇಶನ, ಅನಿಲ್ ಕುಮಾರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
-18/12/16

`ರಾಜ್ ವಿಷ್ಣು’ಚಿತ್ರೀಕರಣ ಮುಕ್ತಾಯ
ರಾಮು ಫಿûಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸುತ್ತಿರುವ `ರಾಜ್ ವಿಷ್ಣು` ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ ರೇಣುಕಾಂಬ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.

ಕೆ.ಮಾದೇಶ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ರಾಜೇಶ್ ಕಾಟ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ವಿನೋದ್ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂಅನಿಲ್ ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಕಥೆಯನ್ನು ಪೆÇನ್‍ರಾಂ ಬರೆದಿದ್ದಾರೆ. ಚಿತ್ರಕಥೆಯನ್ನು ಜನಾರ್ದನ್ ಮಹರ್ಷಿ, ಸಂಭಾಷಣೆಯನ್ನು ರಘು ಬರೆದಿದ್ದಾರೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಕವಿರಾಜ್ ಚಿತ್ರದ ಹಾಡುಗಳನ್ನುರಚಿಸಿದ್ದಾರೆ.

ಶರಣ್, ಚಿಕ್ಕಣ್ಣ, ವೈಭವಿ, ಸಾಧುಕೋಕಿಲ, ಶ್ರೀನಿವಾಸಮೂರ್ತಿ, ಭಜರಂಗಿ ಲೋಕಿ, ಸುಚೀಂದ್ರ ಪ್ರಸಾದ್, ಮಿಮಿಕ್ರಿ ಗೋಪಿ, ವೀಣಾ ಸುಂದರ್, ಮಿಮಿಕ್ರಿ ದಯಾನಂದ್ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀಮುರುಳಿ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
-4/08/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore