HOME
CINEMA NEWS
GALLERY
TV NEWS
REVIEWS
CONTACT US
ಅಂಧಕಾರನ ರೋಚಕ ಕಥನ
ಮಂಡ್ಯಾ ಭಾಗದಲ್ಲೆ ನಡೆದ ನೈಜ ಘಟನೆಯನ್ನು ಹೆಕ್ಕಿಕೊಂಡ ಚಿತ್ರ ‘ರಘುವೀರ’ ಕತೆಯಲ್ಲಿ ಪ್ರೇಮಿಯೊಬ್ಬನ ಕರಾಳ ಚಿತ್ರಣವನ್ನು ತೋರಿಸಲಾಗಿದೆ. ನಿರೂಪಣೆ, ಚಿತ್ರಕತೆ ಎರಡನ್ನು ಸಮವಾಗಿ ತೂಗಿಸಿಕೊಂಡಿರುವ ನಿರ್ದೇಶಕ ಸೂರ್ಯಸತೀಶ್ ಶ್ರಮ ಕಾಣ ಸುತ್ತದೆ. ಇಂತಹ ದುರಂತ ಪ್ರೇಮಕತೆಗಳು ಸಾಕಷ್ಟು ಬಂದಿರುವುದರಿಂದ ಪರೇಕ್ಷಕನಿಗೆ ಮಾಮೂಲು ಅನಿಸಿದರೂ ಸನ್ನಿವೇಶಗಳು ನೋಡುವಂತೆ ಮಾಡುತ್ತದೆ. ಮೊದಲ ನೋಟಕ್ಕೆ ಫಿದಾ ಆಗುವ ಆತ ಅವಳ ಹಿಂದೆ ಬೀಳುತ್ತಾನೆ. ಒಮ್ಮೆ ಆಕೆಯ ಅಣ್ಣ ಎದುರಿಗೆ ಸಿಕ್ಕಿ ಗುರಾಯಿಸಬೇಡ, ಕಣ್‍ಗುಡ್ಡೆ ಕಿತ್ತಾಕ್ ಬಿಡ್ತಿನಿ ಎಂದು ಸಾಕಷ್ಟು ಬಾರಿ ಹೇಳುವಂತೆ ಅದನ್ನೆ ಮಾಡುವುದು ಕ್ಲೈಮಾಕ್ಸ್‍ನಲ್ಲಿ ಬರುತ್ತದೆ. ಮಂಡ್ಯಾದಲ್ಲಿ ನಡೆದ ಕಾರಣ ಅಲ್ಲಿನ ಸೊಗಡಿನ ಗ್ರಾಮೀಣ ಭಾಷೆಯನ್ನು ಬಳಸಿಕೊಂಡಿದ್ದಾರೆ. ಒಂದು ಹಂತದಲ್ಲಿ ಕತೆಯು ಎಲ್ಲೋ ಹೋಯಿತು ಎಂದು ಕೊಳ್ಳವಷ್ಟರಲ್ಲಿಯೇ ಒಂದಾನೊಂದು ಊರಲ್ಲೊಂದು ಹಕ್ಕಿ ಇತ್ತು. ಆ ಹಕ್ಕಿ ಮೇಲೆ ಪ್ರೀತಿಯ ಮಳೆ ಸುರಿದೇ ಬಿಡ್ತು’ ಎಂಬು ಹಾಡು ಬಂದು ನೋಡುಗನಿಗೆ ಆಸಕ್ತಿ ಬರುವಂತೆ ಮಾಡುತ್ತದೆ. ಅಣ್ಣನ ಅಡ್ಡಿಯಿಂದ ದೂರ ಹೋಗಿ ಎರಡು ವರ್ಷದ ನಂತರ ಆಕೆಯನ್ನು ನೋಡಲು ಬಂದಾಗ ಏನೆಲ್ಲಾ ಘಟನೆಗಳು ನಡೆಯುತ್ತವೆ ಎಂಬುದು ಸಾರಾಂಶ.

ಹಳ್ಳಿ ಹೈದ, ಮುಗ್ದ ಪ್ರೇಮಿಯಾಗಿ ಹರ್ಷ ನಾಯಕನಾಗಿ ಮಿಂಚಿದ್ದಾರೆ. ಅವರ ಫೈಟಿಂಗ್, ಬಾಡಿ ಲಾಗ್ವೇಂಜ್ ಇಷ್ಟವಾಗುತ್ತದೆ. ನಿರ್ಮಾಪಕಿಯಾಗಿರುವ ಧೇನುಅಚ್ಚಪ್ಪ ನಾಯಕಿ ಪಾತ್ರದಲ್ಲಿ ಅಭಿನಯ ಸುದಾರಿಸಬೇಕಿತ್ತು. ಖಳನಾಯಕನಾಗಿ ಸ್ವಾಮಿನಾಥನ್ ಅಬ್ಬರಿಸಿದ್ದಾರೆ. ರೋಬೋಗಣೇಶ್, ಮೈತ್ರಿಜಗದೀಶ್, ಗಜೇಂದ್ರ, ಅಂಜಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಡುಗಳು ಪರವಾಗಿಲ್ಲ, ಹಿನ್ನಲೆಸಂಗೀತ ಕೆಲವು ಕಡೆಗಳಲ್ಲಿ ಕೆಲಸ ಮಾಡಿಲ್ಲ. ಕಣ್ಣು ಕಳೆದುಕೊಂಡವರ ಕತೆಯೆಂದು ಸುದ್ದಿ ಮಾಡಿದ್ದರಿಂದ ಇದನ್ನು ತೆರೆ ಮೇಲೆ ನೋಡುವ ಆಸಕ್ತಿ ಇದ್ದಲ್ಲಿ ಚಿತ್ರ ನೋಡಬಹುದು.
ಸಿನಿ ಸರ್ಕಲ್. ಇನ್ ನ್ಯೂಸ್
-10/02/18


ಜನರ ಎದುರು ರಘುವೀರ
ಮಂಡ್ಯಾದಲ್ಲಿ ಪ್ರೀತಿ ಮಾಡಿದ ಹುಡುಗನಿಗೆ ಕಣ್ಣು ಕಿತ್ತ ಪ್ರಸಂಗವು ರಾಷ್ಟ್ರವ್ಯಾಪ್ತಿ ಸುದ್ದಿಯಾಗಿತ್ತು. ಇದರ ಘಟನೆಯನ್ನು ತೆಗೆದುಕೊಂಡು ‘ರಘುವೀರ’ ಎನ್ನುವ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ಜಿಮ್ ತರಭೇತುದಾರನೊಂದಿಗೆ ಅಲ್ಲಿನ ಹುಡುಗಿಯ ಜೊತೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಇದರಿಂದ ಕುಪಿತರಾದ ಆಕೆ ಕಡೆಯವರು ಆತನನ್ನು ಥಳಿಸಿ ಮನುಷ್ಯತ್ವ ನೋಡದೆ ಸ್ಕ್ರೂಡ್ರೈವರ್‍ನಿಂದ ಕಣ್ಣನ್ನು ತೆಗೆಯುತ್ತಾರೆ. ಇಲ್ಲಿಯವರೆಗಿನ ಘಟನೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ನತದೃಷ್ಟ ರಘು ತಂಡದೊಂದಿಗೆ ಹಾಜರಿದ್ದರು. ಅವರು ಹೇಳುವಂತೆ ಜೀವನದಲ್ಲಿ ಸಿಹಿ-ಕಹಿ ಎರಡನ್ನು ಅನುಭವಿಸಿದ್ದೇನೆ. ಕಣ್ಣು ಕಳೆದುಕೊಂಡಾಗ ಕನ್ನಡಿಗರು ಸಹಾಯ ಮಾಡಿದ್ದಾರೆ. ಇದರಿಂದ ಜಿಮ್ ನಡೆಸುತ್ತಾ ಜೀವನ ಮಾಡುತ್ತಿದ್ದೇನೆ. 27 ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಕಣ ್ಣನ ಅಂಶಗಳು ನಾಶವಾಗಿರುವುದಿಂದ ದೃಷ್ಟಿ ಬರುವುದು ಅಸಾಧ್ಯವೆಂದು ಹೇಳಿದ್ದಾರೆ. ಲಂಡನ್‍ನಲ್ಲಿ ವಿಶೇಷ ರೀತಿಯ ಸಲಕರಣೆ ಇರುವುದರಿಂದ ಅಲ್ಲಿ ಆಪರೇಶನ್ ಮಾಡಿಸಿದರೆ ಕಣ್ಣು ಬರುವುದೆಂದು ಗೊತ್ತಾಗಿದೆ. ನಿರ್ಮಾಪಕರು ಇದರ ವೆಚ್ಚವನ್ನು ಭರಿಸಲು ಸಿದ್ದರಿದ್ದಾರೆ. ದುಡುಕಿ ಹಿರಿಯರಿಗೆ ಹೇಳದೆ ಪ್ರೀತಿ ಮಾಡಬೇಡಿ. ಅವರನ್ನು ಮನವೊಲಿಸಿ ಮದುವೆಯಾದರೆ ಬಾಳು ಚೆನ್ನಾಗಿರುತ್ತದೆ ಎಂಬುದು ಅನಿಸಿಕೆಯಾಗಿದೆ ಅಂತಾರೆ.

ರೀಲ್‍ನಲ್ಲಿ ರಘು ಆಗಿರುವ ಹರ್ಷ ಗೆಳಯನ ಪಾತ್ರದಲ್ಲಿ ನಟಿಸಿದ್ದೇನೆ. ಆದಷ್ಟು ಬೇಗನೆ ಅವನು ನಮ್ಮೆಲ್ಲರನ್ನು ನೋಡುವಂತಾಗಲಿ ಎಂದರು. ನಾಯಕಿ, ನಿರ್ಮಾಪಕಿ ಧೇನುಅಚ್ಚಪ್ಪ ಮಾತನಾಡಿ ರಘು ಚಿತ್ರ ಮಾಡಲು ಯಾರಿಗೂ ಅನುಮತಿ ನೀಡಿರಲಿಲ್ಲ. ಬಾಲ್ಯದಿಂದಲೂ ಅವರನ್ನು ಬಲ್ಲವರಾಗಿದ್ದರಿಂದ ನನಗೆ ಹಸಿರುನಿಶಾನೆ ಕೊಟ್ಟರು. ಅವರಿಗೆ ದೃಷ್ಟಿ ಬರಲು ಸಹಕಾರ ಮಾಡುವುದಾಗಿ ಭರವಸೆ ನೀಡಲಾಗಿದೆ. ಸಿನಿಮಾದಿಂದ ಅವರಿಗೆ ನ್ಯಾಯ ಸಿಗುವಂತಾಗಬೇಕು . ಹಣ ಬರಲಿ ಹೋಗಲಿ ಸಹಾಯ ಮಾಡುವುದು ಖಚಿತ ಎಂದರು. ಖಳನಟ ಸ್ವಾಮಿನಾಥನ್ ಬಹಳ ವರ್ಷಗಳ ಕನ್ನಡ ಭೂಮಿಯಲ್ಲಿ ಬಂದಿರುವುದು ಖುಷಿಯಾಗಿದೆ ಎಂದರು. ಶುಕ್ರವಾರದಂದು ರಾಜ್ಯದ್ಯಂತೆ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-7/02/18ಚನ್ನೈನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಪ್ರೋತ್ಸಾಹ – ವಿಶಾಲ್
2008 ಮಂಡ್ಯಾದ ಮಣ ್ಣನ ನೆಲದಲ್ಲಿ ನಡೆದ ನೈಜ ಪ್ರೇಮಿಗಳ ಘಟನೆಯು ‘ರಘುವೀರ’ ಅಡಿಬರಹದಲ್ಲಿ ರಗಡ್ ಲವ್ ಸ್ಟೋರಿ ಎನ್ನುವ ಚಿತ್ರದ ಶೀರ್ಷಿಕೆಯೊಂದಿಗೆ ತೆರೆ ಮೇಲೆ ಬರಲು ಸಜ್ಜಾಗಿದೆ. ಪ್ರಚಾರದ ಮೊದಲ ಅಂಗವಾಗಿ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮವು ಬುದುವಾರ ಟೌನ್‍ಹಾಲ್‍ನಲ್ಲಿ ಕಿಕ್ಕಿರಿದ ಜನರ ನಡುವೆ ನಡೆಯಿತು. ಸ್ಯಾಂಡಲ್‍ವುಡ್‍ನ ಶಿವರಾಜ್‍ಕುಮಾರ್, ಕಾಲಿವುಡ್‍ನ ವಿಶಾಲ್ ಬರುವಿಕೆ ಇದಕ್ಕೆ ಕಾರಣವಾಗಿತ್ತು. ಅತಿಥಿಗಳು ಬರುವುದು ತಡವಾಗುವುದರಿಂದ ಚಿತ್ರಕತೆ,ಸಂಭಾಷಣೆ,ಸಾಹಿತ್ಯ ಮತ್ತು ಮೊದಲಬಾರಿ ನಿರ್ದೇಶನ ಮಾಡಿರುವ ಸೂರ್ಯಸತೀಶ್ ತಮ್ಮದೆ ಅನುಭವದ ವಿವರಗಳನ್ನು ಹೇಳಿಕೊಂಡು ಮಂಡ್ಯಾ, ಮೈಸೂರು, ಮಳವಳ್ಳಿ, ಶ್ರೀರಂಗಪಟ್ಟಣ ತಟಗಳಲ್ಲಿ 48 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂದಷ್ಟೇ ಹೇಳಿ ಕುತೂಹಲವನ್ನು ಕಾಯ್ದಿರಿಸಿದರು. ನಾಯಕ ಹರ್ಷ ಹದಿನೆಂಟು ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿ ಇಲ್ಲಿಯೇ ಹೆಜ್ಜೆ ಹಾಕಿದ್ದೆ. ಈಗ ಇದೇ ವೇದಿಕೆ ಮೇಲೆ ನನ್ನ ಸಿನಿಮಾದ ಕಾರ್ಯಕ್ರಮ ನಡೆಯುತ್ತಿರುವುದು ಮರೆಯಲಾಗದ ಅನುಭವ ಅಂತ ಭಾವುಕರಾದರು. ಕೊಡಗು ಮೂಲದ ನಾಯಕಿ,ನಿರ್ಮಾಪಕಿ ಹಳ್ಳಿಯಲ್ಲಿ ನಡೆಯುವ ಪ್ರೀತಿ ಕತೆ. ಸ್ಯಾಡ್, ಬ್ಯಾಡ್ ಎಂಡಿಂಗ್ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬನ್ನಿರೆಂದು ಅಹವಾಲು ಮಾಡಿಕೊಂಡರು. ಕತೆ ಬರೆದಿರುವ ಅಂದ ಜಿಮ್ ರವಿ ತನ್ನ ಬದುಕಿನಲ್ಲಿ ನಡೆದ ಘೋರ ಸಿಹಿ,ಕಹಿ ಘಟನೆಯು ಚಿತ್ರರೂಪದಲ್ಲಿ ಬರುತ್ತಿದೆ. ಎಲ್ಲರು ಸಿನಿಮಾ ನೋಡಿ ಹರಸಿ ಎಂದು ಹೇಳಿದರು. 90 ನಿಮಿಷದ ನಂತರ ನಿರೂಪಕಿ ಅನುಷಾ ಶಿವಣ್ಣ ಚಿತ್ರೀಕರಣ ಸಲುವಾಗಿ ವಿದೇಶದಲ್ಲಿ ಇದ್ದಾರೆ ಎಂದಾಗ ತಂಡಕ್ಕೆ ಹೇಳಿರುವ ಶುಭಹಾರೈಕೆ ಮಾತುಗಳು ಪರದೆ ಮೇಲೆ ಬಿತ್ತರಿಸಿದವು. ಇನ್ನು ಕೇವಲ ಎರಡು ನಿಮಿಷದಲ್ಲಿ ವಿಶಾಲ್ ಆಗಮಿಸುವರೆಂದು ಹೇಳಿ 90 ನಿಮಿಷದ ನಂತರ ಗ್ರ್ಯಾಂಡ್ ಎಂಟ್ರಿ ಕೊಟ್ಟರು.

ಮೈಕ್ ತೆಗೆದುಕೊಂಡ ವಾಣ ಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದುರವರು ಮೂರು ಘಂಟೆ ಸಹನೆಯಿಂದ ಕಾಯ್ದುಕೊಂಡಿದ್ದು ತಮಿಳುನಾಡಿನಿಂದ ಕಲಾವಿದರು ಬರ್ತಾ ಇದ್ದಾರೆಂದು. ಅವರನ್ನು ಗೌರವಿಸುವುದು ನಮ್ಮಗಳ ಕರ್ತವ್ಯವಾಗಿದೆ. ಸಮಾಜದಲ್ಲಿ ತಿಳಿದುಕೊಳ್ಳುವ ಸತ್ಯ ಘಟನೆಯನ್ನು ಚಿತ್ರ ಮಾಡಿದ್ದಾರೆ. ಇಂಥ ಘಟನೆ ಮುಂದೆ ಎಲ್ಲಿಯೂ ನಡಿಬಾರದೆಂದು ಕೊನೆಯಲ್ಲಿ ತೋರಿಸಬೇಕೆಂದು ಸಲಹೆ ನೀಡಲಾಗಿದೆ. ಮೂಡನಂಬಿಕೆಗೋಸ್ಕರ ಅಮಾಯಕ ಪ್ರೀತಿ-ಪ್ರೇಮವನ್ನು ಬಲಿ ಕೊಡುವುದು ಯಾವ ನ್ಯಾಯ. ಮೂರು ವರ್ಷದಿಂದ ಪ್ರೀತಿ ಮಾಡುತ್ತಿದ್ದ ಹುಡುಗಿ ಒಂದು ಹಂತದಲ್ಲಿ ಆತ ಗೊತ್ತಿಲ್ಲವೆಂದು ಹೇಳಿದಾಗ ಆಕೆಯ ಮಾನಸಿಕ ಒತ್ತಡ ಹೇಗಿರಬಹುದು. ಇದೆಲ್ಲಾ ಸಿನಿಮಾದಲ್ಲಿ ಬಂದಿದೆ. ಒಂದು ವೇಳೆ ಸಿನಿಮಾ ಹಿಟ್ ಆದಲ್ಲಿ ಲಾಭದ ಒಂದು ಭಾಗವನ್ನು ರಘುಗೆ ನೀಡಬೇಕು. ನಾಳೆಯಿಂದ ಜಿಎಸ್‍ಟಿ ತೆರಿಗೆ ಜಾರಿ ಬರಲಿದೆ. ಇದರಿಂದ ಚಿತ್ರರಂಗಕ್ಕೆ ಮಾರಕವಾಗುತ್ತದೆ. ಎಲ್ಲಾ ಭಾಷೆಯ ಚಿತ್ರರಂಗವನ್ನು ಗೌರವಿಸುತ್ತೇವೆ. ಹಾಗಂತ ಕಾವೇರಿ ವಿಷಯ ಬಂದಾಗ ನಮ್ಮ ಹಕ್ಕುಗಳ ಪರವಾಗಿ ಹೋರಾಡುತ್ತೇವೆ. ನಿಮ್ಮ ಹಕ್ಕು ಚಲಾಯಿಸಿ ಅದು ತಪ್ಪು ಅನಿಸುವುದಿಲ್ಲ. ಕಾವೇರಿ ವಿವಾದದಲ್ಲಿ ವಿರೋಧ ವ್ಯಕ್ತಪಡಿಸಬಾರದು. ಕೆಲವೊಮ್ಮೆ ಐಲುತನದಿಂದ ಮಾತನಾಡುವ ಶಬ್ದಗಳು ಅಪಾಯಕ್ಕೆ ತಂದೊಡ್ಡುತ್ತವೆ. ಇದಕ್ಕೆ ಸಾಕ್ಷಿಯಾಗಿ ಬಾಹಿಬಲಿಯಲ್ಲಿ ನಟನೆ ಮಾಡಿದ್ದ ಸತ್ಯರಾಜ್ ಅವರ ಹೇಳಿಕೆ. ತಮಿಳುನಾಡು ಮಂದಿ ಸಹೋದರರಂತೆ. ಅವರುಗಳು ನಮ್ಮ ನಾಡಿನಲ್ಲಿ ಇರುವಾಗ ಕನ್ನಡ ಕಲಿತು ಸಂಸ್ಕøತಿಯನ್ನು ಒಪ್ಪಿಕೊಳ್ಳಬೇಕು. ಐದು ಭಾಷೆಗಳ ಮಧ್ಯೆ ಪೈಪೋಟಿ ನಡೆಸಬೇಕಾದ ಸಂದಿಗ್ದ ಪರಿಸ್ಥತಿ ಬಂದಿದೆ. ಇಲ್ಲಿ ಎಲ್ಲಾ ಭಾಷೆಯ ಚಿತ್ರಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿಯಲ್ಲಿ ನಿಮ್ಮಲ್ಲೂ ಕನ್ನಡ ಚಿತ್ರಗಳು ಪ್ರದರ್ಶನವಾಗಲು ಸಹಕಾರ ನೀಡಬೇಕು. ಕೊನೆಪಕ್ಷ ನೂರಕ್ಕೆ 25ರಷ್ಟು ಆದರೂ ನಮ್ಮ ಸಿನಿಮಾಗಳನ್ನು ಪ್ರದರ್ಶಿಸಲು ಎಲ್ಲರನ್ನು ಕರೆಸಿ ನಿರ್ಣಯಕ್ಕೆ ಬಂದರೆ ಆರೋಗ್ಯಕರ ವಾತವರಣ ಪ್ರಾರಂಭವಾಗುತ್ತದೆ. ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರುವ ತಮಗೆ ಇದೆಲ್ಲಾ ಸುಗಮವಾಗುತ್ತದೆ. ನಾವೆಲ್ಲರೂ ಸೇರಿಕೊಂಡು ಪೈರಸಿಯನ್ನು ತಡೆಗಟ್ಟೋಣ. ನಿಮಗೆ ಗೈರುಹಾಜರಾಗಿ ಅಗೌರವ ತೋರಿಸಬಾರದೆಂದು ತಡವಾದರೂ ಕಾಯ್ದುಕೊಂಡಿದ್ದು, ಇದೆಲ್ಲಾವನ್ನು ಹೇಳಿಕೊಳ್ಳಲಿಕ್ಕೆ ಅಂತ ದೀರ್ಘ ಕಾಲದ ಮಾತಿಗೆ ವಿರಾಮ ಹಾಕಿದರು.

ಒಂದು ಹಂತದವರೆಗೂ ಅರ್ಥ ಮಾಡಿಕೊಂಡಿರುವ ವಿಶಾಲ್ ಮೊದಲು ಬಹಳ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಯಾಚಿಸಿ, ಸೈಕಲ್, ನಡೆದುಕೊಂಡು ಬಂದಿದ್ದರೆ ಬೇಗನೆ ತಲುಪ ಬಹುದಿತ್ತು. ಈ ಮಟ್ಟದ ಟ್ರಾಫಿಕ್ ಇರುತ್ತದೆಂದು ತಿಳಿದಿರಲಿಲ್ಲ. ನಿಜ ಜೀವನದ ನಾಯಕ ರಘು ಅವರನ್ನು ಖುದ್ದಾಗಿ ನೋಡಲು, ಚಿತ್ರದಲ್ಲಿ ನಟಿಸಿರುವ ಗೆಳಯ ಸ್ವಾಮಿ ಆರು ತಿಂಗಳಿಂದ ನಾನೆ ಬರಬೇಕೆಂದು ವರಾತ ಮಾಡಿದ್ದಾರೆ. ಇಬ್ಬರ ಸಲುವಾಗಿ ಬೆಂಗಳೂರಿಗೆ ಆಗಮಿಸಿರುವೆ. ಎಲ್ಲಿಯೂ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಸಹದ್ಯೋಗಿಗಳಿಂದ ನಿಂದನೆಗೆ ಒಳಪಡುವೆ. ಸ್ಟೇಜ್ ಫಿಯರ್ ಇದೆ. ಕಾವೇರಿ ವಿಷಯ ಮೊದಲು ನಾವೆಲ್ಲರೂ ಭಾರತೀಯರು ಎಂಬುದನ್ನು ಅರಿತುಕೊಳ್ಳಬೇಕು. ಕನ್ನಡ ಚಿತ್ರಗಳನ್ನು ಚೆನ್ನೈನಲ್ಲಿ ಪ್ರದರ್ಶನ ಮಾಡಲು ನಮ್ಮ ಕಡೆಯಿಂದ ಪ್ರೋತ್ಸಾಹ ಸಿಗುವುದು ಖಚಿತ. ಪ್ರೀತಿ ಎನ್ನುವುದು ಸಾರ್ವಕಾಲಿಕವಾಗಿದೆ. ನಾನು ಬಂದಂತೆ ಪುನೀತ್, ಸುದೀಪ್, ದರ್ಶನ್ ತಮಿಳು ಚಿತ್ರಗಳ ಕಾರ್ಯಕ್ರಮಕ್ಕೆ ಬಂದರೆ ವೈಮನಸ್ಯಗಳು ಬರುವುದಿಲ್ಲ. ನಿರ್ಮಾಪಕರು ಬೇರೆಯಾಗಿರಬಹುದು. ಸಿನಿಮಾ ಒಂದೇಯಾಗಿರುತ್ತದೆ. ಗೆಳತನಕ್ಕಿಂತ ಹೆಚ್ಚಾಗಿ ಅಭಿಮಾನಿಗಳನ್ನು ಖುಷಿ ಪಡಿಸುವುದು ಆದ್ಯ ಕರ್ತವ್ಯವಾಗಿದೆ. ಚಿತ್ರರಂಗ ನಮ್ಮ ಕುಟುಂಬ ಅಂತ ಭಾವಿಸಲಾಗಿದೆ. ನಾವುಗಳು ಸೇರಿಕೊಂಡು ದಕ್ಷಿಣ ಭಾರತ ಚಿತ್ರರಂಗವನ್ನು ಉಳಿಸುವ ಪ್ರಯತ್ನ ಮಾಡೋಣ. ನಾಳೆಯಿಂದ ಜಿಎಸ್‍ಟಿ ತೆರಿಗೆ ಜಾರಿಯಾಗಲಿದೆ. ಇದರ ಕುರಿತು ಚರ್ಚೆ ನಡೆಸಲಾಗುವುದು. ಇದನ್ನು ಎದುರಿಸಲು ಸಿದ್ದರಿದ್ದೇವೆ. ಚಿತ್ರರಂಗವನ್ನು ನಂಬಿಕೊಂಡು ನೂರಾರು ಕುಟುಂಬಗಳು ಅವಲಂಬಿತವಾಗಿವೆ. ಚಿಕ್ಕ ಚಿತ್ರಗಳು ಗೆದ್ದಲ್ಲಿ ಹಲವು ಕುಟುಂಬಗಳು ಬದುಕುತ್ತವೆ. ಸಾಂಪ್ರತ ಯಾವುದೆ ಚಿತ್ರ ಬಿಡುಗಡೆ ಮುನ್ನ ಪ್ರಚಾರ ಅವಶ್ಯಕವಾಗಿದೆ. ರಘುವೀರ ಚಿತ್ರದ ಪ್ರಚಾರಕ್ಕೆ ಆಹ್ವಾನಿಸಿದ್ದಲ್ಲಿ ಖಂಡಿತ ಬರುತ್ತೇನೆ. ಮತ್ತೋಂಮೆ ತಡವಾಗಿ ಬಂದುದಕ್ಕೆ ಕ್ಷಮೆ ಇರಲಿ ಎಂದಾಗ ಅಭಿಮಾನಿಗಳ ಮೊರೆತ ಜೋರಾಗಿ ಕೇಳಿಬಂತು.
-30/06/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore