HOME
CINEMA NEWS
GALLERY
TV NEWS
REVIEWS
CONTACT US

ಶ್ರೀ ರಾಘವೇಂದ್ರ ಚಿತ್ರವಾಣ ಸಂಸ್ಥೆಯಿಂದ ಪ್ರಶಸ್ತಿಗಳು
ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಾ, ಚಿತ್ರರಂಗದ ಏಳಿಗೆಗೆ ತಮ್ಮದೇ ಕೊಡುಗೆ ನೀಡಿರುವವರು ದಿವಂಗತ ಡಿ.ವಿ ಸುಧೀಂದ್ರ. ಚಂದನವನದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದ ಸುಧೀಂದ್ರ ಅವರು ರಾಘವೇಂದ್ರ ಚಿತ್ರವಾಣ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಸುಧೀರ್ಘಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದ್ದರು. ಮೊದಲಿಗೆ ಎರಡರಿಂದ ಆರಂಭವಾದ ಪ್ರಶಸ್ತಿಯು ಈಗ ಹನ್ನೊಂದಕ್ಕೆ ವಿಸ್ತಾರವಾಗಿದೆ. ಪ್ರಸಕ್ತ ಸಾಲಿನಲ್ಲಿ ನಿರ್ಮಾಪಕರುಗಳಾದ ಕೃಷ್ಣರಾವ್,ವೇಣುಗೋಪಾಲ್, ನಿರ್ದೇಶಕರುಗಳಾದ ಎಸ್.ನಾರಾಯಣ್, ರಾಜಕುಮಾರ ಖ್ಯಾತಿಯ ಸಂತೋಷ್‍ಆನಂದ್‍ರಾಮ್, ಮಫ್ತಿಯ ನರ್ತನ್, ಒಂದು ಮೊಟ್ಟೆಯ ಕತೆಯ ರಾಜ್.ಬಿ.ಶೆಟ್ಟಿ, ಕಲಾವಿದರಲ್ಲಿ ಹಿರಿಯ ನಟ ಮನ್‍ದೀಪ್‍ರಾಯ್, ಸುಂದರ್‍ಶ್ರೀ, ಸಂಗೀತ ನಿರ್ದೇಶಕ ಬಾಪುಪದ್ಮನಾಭ, ಗಾಯಕಿ ನಂದಿತ, ಸಾಹಿತಿ,ನಿರ್ದೇಶಕ ಡಾ.ವಿ.ನಾಗೇಂದ್ರಪ್ರಸಾದ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಸುದೀಂದ್ರವೆಂಕಟೇಶ್ ಸಾರಥ್ಯದಲ್ಲಿ ಎಸ್.ಸುನೀಲ್ ಮತ್ತು ವಾಸು ಸಂಸ್ಥೆಯಲ್ಲಿ ಇದ್ದಾರೆ. ಜನವರಿ 25ರಂದು ಸಂಜೆ 5.30ಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಂಸ್ಥೆಯ 41ನೇ ವಾರ್ಷಿಕೋತ್ಸವ ಮತ್ತು 17ನೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-9/01/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\