HOME
CINEMA NEWS
GALLERY
TV NEWS
REVIEWS
CONTACT US
ಸಿನಿ ಪಯಣದಲ್ಲಿ ಹತ್ತು ಹೆಜ್ಜೆ ಏರಿದ ರಾಗಿಣಿÂ
ತುಪ್ಪದರಾಣಿ ಖ್ಯಾತಿ ರಾಗಿಣಿ ‘ವೀರ ಮದಕರಿ’ ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿ ಯಶಸ್ವಿಯಾಗಿ ಹತ್ತು ವರ್ಷಗಳನ್ನು ಮುಗಿಸಿದ್ದಾರೆ. ಇಪ್ಪತ್ತೆರಡಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಇದರಲ್ಲಿ ಮಲೆಯಾಳಂ-3, ತಮಿಳು-2 ಮತ್ತು ತೆಲುಗು-1 ಖಾತೆಯಲ್ಲಿ ಸೇರಿಕೊಂಡಿದೆ. ಇವುಗಳಲ್ಲಿ ಹಿಟ್, ಫ್ಲಾಪ್ ಆಗಿದ್ದು ಉಂಟು. ಹಾಗಂತ ಇದರ ಬಗ್ಗೆ ಚಿಂತನೆ ಮಾಡದೆ ಒಳ್ಳೆಯದನ್ನು ಆರಿಸಿತ್ತಾ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಮುಂಬರುವ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಬದುಕಿನಲ್ಲಿ ಕಷ್ಟ, ಸುಖಕ್ಕಿಂತ ಹೆಚ್ಚು ಸಂತಸವನ್ನು ಅನುಭವಿಸುದ್ದು ಇವರ ಖುಷಿಗೆ ಕಾರಣವಾಗಿದೆಯಂತೆ. ಪ್ರಾರಂಬದಲ್ಲಿ ಸಣ್ಣಗಿದ್ದು, ಮುಂದೆ ದಪ್ಪ, ಈಗ ಸಪೂರಿಯಾಗಿ ಕಾಣಿಸಿಕೊಂಡು ನಾಯಕಿಗೆ ಅರ್ಹತೆವುಳ್ಳಂತೆ ಚೆಂದ ಕಾಣಿಸುತ್ತಿದ್ದಾರೆ. ನಾಯಕಿ ಪ್ರಧಾನ ಚಿತ್ರಗಳಲ್ಲಿ ಹೆಚ್ಚು ಅವಕಾಶ ಸಿಕ್ಕಿರುವುದು, ಮತ್ತು ಇವರ ಹೆಸರಿನ ‘ರಾಗಿಣಿ ಐಪಿಎಸ್’ ಮಾಸ್ ಸಿನಿಮಾವನ್ನು ಜನರು ಇಷ್ಟಪಟ್ಟಿದ್ದಾರೆ.

ಲೆಕ್ಕಚಾರ ಹಾಕಿ ಚಿತ್ರರಂಗಕ್ಕೆ ಬಂದವಳಲ್ಲ. ಬಂದ ಅವಕಾಶಗಳನ್ನು ತೆಗೆದುಕೊಂಡಿದ್ದರೆ ವರ್ಷಪೂರ್ತಿ ಬ್ಯುಸಿ ಇರಬಹುದಿತ್ತು. ಒಳ್ಳೆ ಕತೆ, ನಿರ್ಮಾಣ, ನಿರ್ದೇಶಕ ಇವುಗಳು ಇದ್ದರೆ ಸಹಿ ಹಾಕುತ್ತಾ, ಸದ್ಯ ‘ಗಾಂಧಿಗಿರಿ’ ಶರಣ್‍ರೊಂದಿಗೆ ‘ಅಧ್ಯಕ್ಷ ಇನ್ ಅಮೇರಿಕಾ’ದಲ್ಲಿ ನಟಿಸುತ್ತಿದ್ದಾರೆ. ಇನ್ನು ಎರಡು ಚಿತ್ರಗಳು ಮಾತುಕತೆ ಹಂತದಲ್ಲಿದೆ. ಕೆಲವರಿಗೆ ಬೇಜಾರು ಮಾಡಬಾರದೆಂಬ ದೃಷ್ಟಿಯಿಂದ ಐಟಂ ಹಾಡಿಗೆ ಕುಣಿದಿದ್ದಾರೆ.

ಕಲಾವಿದೆ ಎಂಬ ಸೀಲ್ ಬಂದಾಗ, ಏನು ಮಾಡಿದರೂ ಸುದ್ದಿಯಾಗುತ್ತದೆ. ನಮಗೂ ಖಾಸಗಿ ಬದುಕು ಅಂತ ಇದೆ. ಯಾರೋ ಅವಿವೇಕಿಗಳು ಹೇಳಿದ ತಕ್ಷಣ ನಾನೇಕೇ ಸ್ಪಷ್ಟನೆ ನೀಡಬೇಕು. ಯಾರದು ತಪ್ಪು ಎಂಬುದನ್ನು ನ್ಯಾಯಲಯವು ತೀರ್ಮಾನಿಸುತ್ತದೆ. ಇದರ ಬಗ್ಗೆ ಹೆಚ್ಚಿನದೇನು ಹೇಳಲು ಇಷ್ಟಪಡುವುದಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಮುಂದೆ ತಂದಾಗ, ಅದಕ್ಕೂ ನನಗೂ ಯಾವುದೇ ಸಂಬಂದವಿಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಖಾರವಾಗಿ ಪ್ರತಿಕ್ರಿಯಿಸಿದ್ದೇನೆಂದು ರಾಗಿಣಿ ಮಾದ್ಯಮದ ಪ್ರಶ್ನೆಗೆ ಉತ್ತರವಾಗುತ್ತಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
6/04/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore