HOME
CINEMA NEWS
GALLERY
TV NEWS
REVIEWS
CONTACT US
ಬಂಡವಾಳ ಬಂದಿಲ್ಲ, ಜನರಿಂದ ತಿರಸ್ಕ್ರತ ಆಗಿಲ್ಲ
ಮೊದಲನೆಯದಾಗಿ ಚಿತ್ರದ ಬಂಡವಾಳ ವಾಪಸ್ಸು ಬಂದರೆ ನಿರ್ಮಾಪಕರ ಚಿತ್ರ ಅಂತಾರೆ, ಎರಡನೆಯದು ಲಾಭ ಬಂದಲ್ಲಿ ಸೂಪರ್ ಹಿಟ್, ಮೂರನೆಯದಾಗಿ ಇವರೆಡು ಬಾರದೆ ಜನರು ಇಷ್ಟಪಟ್ಟರೆ ಅದನ್ನು ಯಶಸ್ವಿ ಸಿನಿಮಾ ಎಂದು ಕರೆಯುತ್ತಾರೆ. ‘’ರುಕ್ಕು’’ ಎನ್ನುವ ಸಿನಿಮಾವೊಂದು ಸತತ 25 ದಿನಗಳನ್ನು ಪೂರೈಸಿದ್ದು ಮೂರನೆ ಸಾಲಿಗೆ ಸೇರುತ್ತದೆ. ನಿರ್ದೇಶಕ ಬಸವರಾಜುಬಳ್ಳಾರಿ ಹೇಳುವಂತೆ ಸದ್ಯದ ಪರಿಸ್ಥತಿಯಲ್ಲಿ ಒಂದು ವಾರ ಚಿತ್ರಮಂದಿರದಲ್ಲಿ ನಿಲ್ಲುವುದೇ ಕಷ್ಟವಾಗಿದೆ. ನಮ್ಮ ಚಿತ್ರಕ್ಕೆ ಜನರಿಂದ ಪ್ರಶಂಸೆ ಸಿಕ್ಕ ಕಾರಣ, ಸತತ ಸಿಲ್ವರ್ ಜುಬ್ಲಿ ಡೇಸ್ ಪ್ರದರ್ಶನವಾಗಿರುವುದು ಸಂತಸ ತಂದಿದೆ. ಕ್ಲೈಮಾಕ್ಸ್‍ನ್ನು ಇಷ್ಟು ಪಟ್ಟಿದ್ದಾರೆ. ಹೂರಬರುವಾಗ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುತ್ತದೆ. ಹಾಕಿದ ಹಣ ಇನ್ನು ವಾಪಸ್ಸು ಬರಬೇಕಾಗಿದೆ. ಚುನಾವಣೆ ದಿನಾಂಕ ಪ್ರಕಟವಾಗಿದ್ದರಿಂದ ಹೆಚ್ಚಿನ ಜನರು ಟಾಕೀಸ್‍ಗೆ ಬರುತ್ತಿಲ್ಲ. ನಂತರ ನೋಡಲು ಬರುವರೆಂಬ ನಿರೀಕ್ಷೆ ಇದೆ. ತಂತ್ರಜ್ಘರ ಶ್ರಮದಿಂದ ಚಿತ್ರವು ಚೆನ್ನಾಗಿ ಬಂದಿದೆ ಅಂತ ಸಮರ್ಥನೆ ಉತ್ತರ ಕೊಡುತ್ತಾರೆ,

ಅಪ್ಪನ 1.25 ಕೋಟಿ ಖರ್ಚು ಮಾಡಿಸಿರುವ ನಾಯಕ ಶ್ರೇಯಸ್, ಇದರಲ್ಲಿ ಕಾಲು ಭಾಗ ಬಂದಿದೆ ಎಂದು ಮುಗ್ದತೆಯಿಂದ ಹೇಳಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಎ.ಟಿ.ರವೀಶ್, ಹಿನ್ನಲೆ ಸಂಗೀತ ಒದಗಿಸಿರುವ ಸತೀಶ್‍ಬಾಬು, ಛಾಯಗ್ರಾಹಕ ರೇಣುಕುಮಾರ್, ಡಿಸೈನರ್ ವಿಶ್ವ ಖುಷಿಯಲ್ಲಿ ಭಾಗಿಯಾಗಿದ್ದರು. ನಾಯಕಿ ವೆಗರಮ್ಯಾ, ಸಾಧುಕೋಕಿಲ, ಪದ್ಮಜರಾವ್ ಉಳಿದವರೆಲ್ಲರಿಗೂ ಆಹ್ವಾನ ನೀಡಲಾಗಿತ್ತು. ಅವರು ಬಾರದೆ ಇರುವುದು ನಿರ್ದೇಶಕರ ಬೇಸರಕ್ಕೆ ಕಾರಣವಾಗಿತ್ತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/05/18

ಚಿತ್ರದ ಹಾಡಿನ ಪದ ಶೀರ್ಷಿಕೆ
ಹಿಟ್ ಚಿತ್ರ ಸಿಪಾಯಿದಲ್ಲಿ ರವಿಚಂದ್ರನ್ ರುಕ್ಕಮ್ಮ ಎಂದು ತಾರ ಅವರನ್ನು ಕೆಣಕುವ ಹಾಡು ಆ ಕಾಲದಲ್ಲಿ ಯಶಸ್ವಿ ಎನಿಸಿಕೊಂಡಿತ್ತು. ಈಗ ‘ರುಕ್ಕು’ ಎನ್ನುವ ಹೊಸಬರ ಚಿತ್ರೆವೊಂದು ಸೆನ್ಸಾರ್ ಅಂಗಳದಲ್ಲಿ ಕಾದಿದೆ. ಸಿನಿಮಾ ಕುರಿತು ಹೇಳುವುದಾದರೆ ಹಳ್ಳಿಯ ಮುಗ್ದ ಪ್ರೇಮಕತೆಯಲ್ಲಿ ಹಲವು ತಿರುವುಗಳು ಇರಲಿದ್ದು, ಕೊನೆಯ ಸನ್ನಿವೇಶಗಳು ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದಂತೆ. ಮಡಕೇರಿ, ಕುಶಾಲನಗರ, ಬೆಂಗಳೂರು ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶನ ಮಾಡಿರುವ ಬಸವರಾಜು ಬಳ್ಳಾರಿ ಇವರಿಗೆ ಎರಡನೆ ಸಿನಿಮಾವಾಗಿದೆ. ಸೋಮಾರಿಯಾಗಿ ಪ್ರೀತಿಯಲ್ಲಿ ಬಿದ್ದಾಗ ಅವಳಿಗೋಸ್ಕರ ತ್ಯಾಗ ಮಾಡುವ ಪಾತ್ರದಲ್ಲಿ ಶ್ರೇಯಸ್ ನಾಯಕನಾಗಿ ಮೊದಲ ಅನುಭವ. ಹಳ್ಳಿ ಹುಡುಗಿ ಪಾತ್ರದಲ್ಲಿ ವೆಗಾರಮ್ಯಾ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಮತ್ತೋಂದು ಮುಖ್ಯ ಪಾತ್ರಕ್ಕೆ ತಿಲಕ್, ನಗಿಸಲು ಸಾಧುಕೋಕಿಲ, ಸತ್ಯಜಿತ್, ಪದ್ಮಜರಾವ್ ನಟನೆ ಇದೆ. ಜಯಂತ್‍ಕಾಯ್ಖಣ , ಪವನ್‍ಒಡೆಯರ್, ನಿರ್ದೇಶಕರು ರಚಿಸಿರುವ ಏಳು ಗೀತೆಗಳಿಗೆ ಎ.ಟಿ.ರವೀಶ್ ರಾಗ ಸಂಯೋಜನೆ, ಮತ್ತು ಹಿನ್ನಲೆ ಸಂಗೀತವನ್ನು ಸತೀಶ್‍ಬಾಬು ನಿರ್ವಹಿಸಿದ್ದಾರೆ. ಛಾಯಗ್ರಹಣ ರೇಣುಕುಮಾರ್ ಹಾಗೂ ತ್ರಿಭುವನ್,ರಾಮು,ಕಂಬಿರಾಜು ತಲಾ ಒಂದೊಂದು ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಸಂಕಲನದ ಜೊತೆಗೆ ನಟನೆ ಮಾಡಿರುವುದು ನಾಗೇಂದ್ರಅರಸ್, ಸಾಹಸ ಥ್ರಿಲ್ಲರ್‍ಮಂಜು ಅವರದಾಗಿದೆ. ಗುರುವಾರ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಹಾಡುಗಳು ಮತ್ತು ಟ್ರೈಲರ್‍ರನ್ನು ತೋರಿಸಲಾಯಿತು. ಪುತ್ರನನ್ನು ನಾಯಕ ಮಾಡುವ ಪ್ರಯುಕ್ತ ಆರ್.ರಾಜಣ್ಣ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ತೆರೆಕಾಣಲಿದೆ.
-11/11/17


IT IS BASAVARAJ BELLARY ‘RUKKU
A
fter ‘Seena’ Basavaraj Bellary is back with ‘Rukku’, the heroine Rashmitha also hails from Bellary, the protagonist Shreyas is making debut and his father is the producer from real estate business.

You watch the film in the climax you will find the difference. What are the contents for the rest of the time? You have love; sentiment, comedy and two action portions assure Bellary Basavaraj.

Shreyas a II PUC studies plays the son of a landlord get a change over from the heroine. Rahmitha is also II PUC studied is in her second film but her first film ‘Bili Haale’ is not yet completed.

Nagendra Urs is editing the film, Renu is handling camera, Thriller Manju is doing two stunts for the film. The film went on the floors at the serene Sri Saibaba Temple in RT Nagar on Thursday morning.
-14/11/14

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore