HOME
CINEMA NEWS
GALLERY
TV NEWS
REVIEWS
CONTACT US
ಮಹಿಳೆಯರ ನೋವಿಗೆ ದನಿಯಾಗುವರುದ್ರಿ
ಇಂದುಒಂದು ಹೆಣ್ಣಿಗೆತೊಂದರೆಯಾದರೆ ಸಹಾಯಕ್ಕೆಧಾವಿಸಲು ಸಹಾಯವಾಣಿ, ಸಂಘಸಂಸ್ಥೆಗಳು ಕಾನೂನಿನ ಬಗ್ಗೆ ತಿಳುವಳಿಕೆಯನ್ನು ಕೊಡುತ್ತವೆ. ಆದರೆಇದೇಘಟನೆ ಮೂರುದಶಕದ ಹಿಂದೆ ಮಹಿಳೆಗೆ ದೌರ್ಜನ್ಯ ನಡೆದರೆ ಆಕೆ ಯಾರಿಗೆ ಹೇಳಿಕೊಳ್ಳುವುದು.ತನ್ನ ನೋವನ್ನು ತೋಡಿಕೊಳ್ಳವುದಾದರೂ ಹೇಗೆ. ಅದಕ್ಕೆ ಕಾನೂನಿನ ನೆರವು ಪಡೆದುಕೊಳ್ಳುವ ಬಗೆ.ಇದ್ಯಾವುದು ಮುಗ್ದ ಮಹಿಳೆಯರಿಗೆ ತಿಳಿಯದಾಗಿತ್ತು. ಹಾಗಾದರೆ ನೊಂದ ಹೆಣ್ಣುತನ್ನ ವಿರುದ್ದದದೌರ್ಜನ್ಯವನ್ನು ಮೆಟ್ಟಿ ನಿಲ್ಲುವುದಕ್ಕೆಉತ್ತರವನ್ನು ‘ರುದ್ರಿ’ ಸಿನಿಮಾದಲ್ಲಿತೋರಿಸಲಾಗಿದೆ. ಮಹಿಳೆಯು ಶೋಷಣೆಯನ್ನು ಸಹಿಸಿಕೊಂಡು ನೋವನ್ನು ನುಂಗಿ ಬದುಕುತ್ತಿದ್ದಾಳೆ.ಕಾರಣತನ್ನ ಮೇಲಾಗುತ್ತಿರುವ ಅವಘಡಗಳು ಸಮಾಜಕ್ಕೆ ತಿಳಿದರೆ ತನ್ನನ್ನು ನೋಡುವರೀತಿ ಬೇರೆಯದೆಆಗಿರುತ್ತದೆಂಬ ಆತಂಕಕಾಡುತ್ತಿರುತ್ತದೆ.

ಒಮ್ಮೆಯಾರಾದರೂ ಬೆಂಬಲ ನೀಡಿದರೆತಾನು ದುರುಳರ ವಿರುದ್ದ ಸೆಟೆದು ನಿಲ್ಲಬಹುದು.ಅದಕ್ಕೆರುದ್ರಿಯಅವತಾರ ತಾಳಿ, ದುಷ್ಟರನ್ನು ಸಂಹಾರ ಮಾಡುತ್ತಾಳೆ. ಹೆಣ್ಣುಕ್ಷಮಯಾಧರಿತ್ರಿ, ಶಕ್ತಿ ರೂಪಿಣಿ. ಇಂತಹಎಲ್ಲಾ ಅಂಶಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ.ಶೀರ್ಷಿಕೆ ಹೆಸರಿನಲ್ಲಿ ಪಾವನಾಗೌಡ ನಟಿಸಿದ್ದಾರೆ.ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವದೇವೇಂದ್ರಬಡಿಗೇರ ಶ್ರಮಕ್ಕೆ ಪ್ರತಿಫಲವಾಗಿ ಚಿತ್ರವುಇಟಲಿಯ ‘ಒನಿರೋಸ್ ಫಿಲ್ಮ್ ಪ್ರಶಸ್ತಿ’ ಸುತ್ತಿಗೆಆಯ್ಕಯಾಗಿದೆ. ಜಗತ್ತಿನ ಮೂಲೆ ಮೂಲೆಗಳಿಂದ ಉತ್ತಮ ಚಿತ್ರಗಳು ಪ್ರದರ್ಶನವಾಗುತ್ತಿದ್ದು, ಈ ಬಾರಿಕನ್ನಡ ಭಾಷೆಯ ಸಿನಿಮಾಗೂ ಅವಕಾಶ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಇಂತಹ ಸದಭಿರುಚಿಯ ಸಿನಿಮಾಕ್ಕೆ ಸಿ.ಆರ್.ಮಂಜುನಾಥ್ ಬಂಡವಾಳ ಹೂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
22/03/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore