HOME
CINEMA NEWS
GALLERY
TV NEWS
REVIEWS
CONTACT US

ಸತ್ಯ ಘಟನೆಯ ಆರ್‍ಟಿಓ
ಸೇವೆಯಲ್ಲಿದ್ದಾಗಲೇ ಆರ್‍ಟಿಓ ಇನ್ಸ್‍ಪೆಕ್ಟರ್ ಮಂಜುನಾಥ್ ವಾಹನ ಚಲಾಯಿಸುವಾಗ ಆರೋಗ್ಯ ಸಮಸ್ಯೆಯಿಂದ ಅಪಘಾತವೆಸಗಿ, ಜನರಿಂದ ಥಳಿಸಿಕೊಂಡಂತೆ, ವಾಹಿನಿಗಳು ಇವರ ಮೇಲೆ ಕೆಟ್ಟದಾಗಿ ಪ್ರಚಾರ ಮಾಡಿದ್ದರು. ಇದರಿಂದ ದುಗುಡಕ್ಕೆ ಒಳಗಾದ ಅಧಿಕಾರಿಯು ಇಹಲೋಕ ತ್ಯಜಿಸಿದ್ದರು. ನಂತರ ಇವರ ಬಗ್ಗೆ ಮಾಹಿತಿ ತಿಳಿದುಕೊಂಡು ಕನಿಕರ ವ್ಯಕ್ತಪಡಿಸಿದರೂ ಪ್ರಯೋಜವಾಗಲಿಲ್ಲ. ಇಂತಹುದೆ ನೈಜ ಘಟನೆಯ ಕತೆಯನ್ನು ನಟ ಯತಿರಾಜ್, ಅರವಿಂದ್ ಹಾಗೂ ನಿರ್ದೇಶಕರುಗಳಾದ ಹಿರಿಯ ಪ್ರಚಾರಕರ್ತ ಸುದೀಂದ್ರವೆಂಕಟೇಶ್, ಭಾಸ್ಕರ್ ಮತ್ತು ಆರ್.ಚಂದ್ರಶೇಖರ್ ಒಡೆತನದ ‘ಕಲಾವಿಧ ಫಿಲಿಂ ಅಕಾಡೆಮಿ’ ಸಂಸ್ಥೆಯಿಂದ ಎಂಟು ನಿಮಿಷದ ಕಿರುಚಿತ್ರವೊಂದು ಸಿದ್ದಗೊಂಡಿದೆ. ಮಂಜುನಾಥ್ ಪಾತ್ರವನ್ನು ಯತಿರಾಜ್ ನಟನೆ ಜೊತೆಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಹಾಜರಿದ್ದ ಶ್ರೀಮತಿ.ಶೈಲಾಮಂಜುನಾಥ್ ಮಾತನಾಡಿ ಇಂತಹ ಸತ್ಯ ಘಟನೆಯನ್ನು ಚಿತ್ರರೂಪಕ್ಕೆ ತಂದಿರುವ ಅಕಾಡೆಮಿಯನ್ನು ಶ್ಲಾಘಿಸಬಹುದು. ಇಬ್ಬರೂ ಅಪರಾಧಿಗಳು ಹೋದರೂ ಚಿಂತೆಇಲ್ಲ. ಆದರೆ ಒಬ್ಬ ಮುಗ್ದ ಹೋಗುವುದು ಸರಿಯಲ್ಲ. ವೈದ್ಯಕೀಯ ಮತ್ತು ಪಿಯುಸಿ ಓದುತ್ತಿರುವ ಇಬ್ಬರು ಮಗಳನ್ನು ಯಜಮಾನರು ಬಿಟ್ಟುಹೋಗಿದ್ದರೆ. ಸಾಮಾಜಿಕ ಜಾಲತಾಣಗಳು, ವಾಹಿನಿಯವರು ದಯವಿಟ್ಟು ಇನ್ನು ಮುಂದಾದರೂ ಸತ್ಯ ಏನೆಂದು ತಿಳಿದುಕೊಂಡು ಬಿಂಬಿಸುವುದು ಸೂಕ್ತವೆಂದು ಬೇಸರ ತೋರ್ಪಡಿಸಿಕೊಂಡರು. ಸೇವೆಯಲ್ಲಿದ್ದಾಗ ಅಧಿಕಾರಿಯು ಆರ್‍ಟಿಓ ಪರವಾನಗಿ ನೀಡುವ ಸಂದರ್ಭದಲ್ಲಿ ಪ್ರತಿಯೊಬ್ಬರಿಂದಲೂ ಎರಡು ಸಸಿಗಳನ್ನು ನೆಡಲು ಬೇಡಿಕೆ ಇಡುತ್ತಿದ್ದರು, ಅಲ್ಲದೆ ಶಾಲೆಗೆ ಧನಸಹಾಯ ಮಾಡಿದ್ದರೆಂದು ಕಲಾ ಶಾಲೆಯ ಶಿವಾನಂದ್ ನೆನಪುಗಳನ್ನು ತೆರೆದಿಟ್ಟರು. ಅಕಾಡೆಮಿ ವಿದ್ಯಾರ್ಥಿಗಳು ಬಣ್ಣ ಹಚ್ಚಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
05/10/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore