HOME
CINEMA NEWS
GALLERY
TV NEWS
REVIEWS
CONTACT US
ಜನರ ಎದುರು ರ್ಯಾಂಬೋ-2
‘ರ್ಯಾಂಬೋ-2’ ಚಿತ್ರದಲ್ಲಿ ಹಲವು ವಿಶೇಷತೆಗಳು ಇರಲಿದೆ. ಒಂದು ಹಾಡಿನಲ್ಲಿ ಶರಣ್ ಜೊತೆಗೆ ಶುಭಾಪೂಂಜಾ, ಸಂಚಿತಪಡುಕೋಣೆ, ಭಾವನರಾವ್, ಶೃತಿಹರಿಹರನ್ ಮತ್ತು ಮಯೂರಿ ಹೆಜ್ಜೆ ಹಾಕಿದ್ದಾರೆ. ಕತೆಯು ಪ್ರಯಾಣದಲ್ಲಿ ಸಾಗುವುದರಿಂದ ಗಡಿಭಾಗ ಶ್ರೀಲಂಕಾದಿಂದ ಪಾಕಿಸ್ತಾನ ಗಡಿಭಾಗದವರೆಗೆ ಸಂಚರಿಸಿದ್ದಾರೆ. ರಾಮೇಶ್ವರ, ಗೋವಾ, ಬೆಂಗಳೂರು, ಜೈಸಲ್ಮರ್ ಹಾಗೂ ಉತ್ತರಕರ್ನಾಟಕದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಿದೆ. ಚಿತ್ರಕ್ಕೆ ಸೂತ್ರದಾರ ಆಗಿರುವ ತರುಣ್‍ಸುದೀರ್ ಹೇಳುವಂತೆ ಇದು ತಂತ್ರಜ್ಘರ ಸಿನಿಮಾ ಎನ್ನಬಹುದು. ಎಲ್ಲರು ಸಂಭಾವನೆರಹಿತ ಕೆಲಸ ಮಾಡಿ ನಿರ್ಮಾಣದಲ್ಲಿ ಪಾಲುದಾರರಾಗಿದ್ದು, ಶರಣ್.ಜಿ.ಕೆ. ಮತ್ತು ಅಟ್ಲಾಂಟ ನಾಗೇಂದ್ರ ನಿರ್ಮಾಣ ಮಾಡಿದ್ದಾರೆ. ಪ್ರಯಾಣದ ಸಿನಿಮಾವಾಗಿದ್ದರಿಂದ ಡೈಲಾಗ್ ಕಡಿಮೆ. ಹಾಗಂತ ಹಾಸ್ಯಕ್ಕೆ ಕೊರತೆ ಮಾಡಿಲ್ಲ. ಜೀವನ ಏನು ಅಂತ ತಿಳಿಯಲು ಲಾಂಗ್ ರೈಡ್ ಹೋಗುವ ಸಂದರ್ಭದಲ್ಲಿ ಶರಣ್ ಜೊತೆಗೆ ಚಿಕ್ಕಣ್ಣ, ಆಶಿಕಾರಂಗನಾಥ್ ಮತ್ತು ಕಾರು ಹೀಗೆ ನಾಲ್ಕು ಪಾತ್ರಗಳು ಮುಖ್ಯವಾಗಿ ಬರುತ್ತದೆ. ಹತ್ತಿರ ಇರುವವರು ದೂರ ಆಗುತ್ತಾರೆ. ದೊರದಲ್ಲಿರುವವರು ಹತ್ತಿರಕ್ಕೆ ಬರುವುದನ್ನು ಕಾಮಿಡಿ, ಥ್ರಿಲ್ಲಿಂಗ್, ಸೆಸ್ಪನ್ಸ್ ಮಾದರಿಯಲ್ಲಿ ತೋರಿಸಲಾಗಿದೆ.

ಅನಿಲ್‍ಕುಮಾರ್ ನಿರ್ದೇಶನದಲ್ಲಿ ಅರ್ಜುನ್‍ಜನ್ಯಾ ಸಂಗೀತದ ಹಾಡುಗಳು ವೈರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಛಾಯಗ್ರಾಹಕ ಸುಧಾಕರ್, ನಿರ್ಮಾಣ ನಿರ್ವಾಹಕ ಜಾಲಹಳ್ಳಿನರಸಿಂಹ, ಕತೆಗಾರ ಉದಯರಾಜ್, ಸಂಕಲನಕಾರ ಕೆ.ಎಂ.ಪ್ರಕಾಶ್, ಡಿಸೈನರ್ ಸಾಯಿ, ಕಲಾ ನಿರ್ದೇಶಕ ಮೋಹನ್.ಬಿ.ಕೆರೆ ತಮ್ಮದೆ ಚಿತ್ರವೆಂದು ಕೆಲಸ ಮಾಡಿದ್ದಾರೆ. ತಾರಬಳಗದಲ್ಲಿ ಸಾಧುಕೋಕಿಲ, ರವಿಶಂಕರ್, ಕುರಿಪ್ರತಾಪ್, ತಬಲನಾಣಿ, ನಿಹಾಲ್, ವಿಠಲ್,ಕರಿಸುಬ್ಬು ಮುಂತಾರದವರ ನಟನೆ ಇದೆ. ಚಿತ್ರವು ಇದೇ ಶುಕ್ರವಾರದಂದು ಬಿಡುಗಡೆಯಾಗುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
17/05/18

ರ್ಯಾಂಬೋ 2 ಹಾಡಿನಲ್ಲಿ ಐವರು ನಾಯಕಿಯರು
ಶರಣ್‍ಗೆ ಹೆಸರು ತಂದುಕೊಟ್ಟ ರ್ಯಾಂಬೋ ಚಿತ್ರವು ‘ರ್ಯಾಂಬೋ-2’ ದಲ್ಲಿ ಬರುತ್ತಿರುವುದು ತಿಳಿದಿರುವ ವಿಷಯವಾಗಿದೆ. ಚಿತ್ರೀಕರಣೋತ್ತರ ಕೆಲಸವನ್ನು ಮುಗಿಸಿರುವ ತಂಡವು ಮದ್ಯದಲ್ಲಿ ಒಂದು ಹಾಡನ್ನು ಸೇರಿಸಲು ಯೋಜನೆ ಹಾಕಿಕೊಂಡಿದೆ. ಅದರಂತೆ ವಿಶೇಷ ಹಾಡಿನಲ್ಲಿ ಶರಣ್ ಅವರೊಂದಿಗೆ ನಟಿಸಿರುವ ಶುಭಪೂಂಜಾ, ಸಂಚಿತಾಪಡುಕೋಣೆ, ಭಾವನಾರಾವ್, ಶೃತಿಹರಿಹರನ್ ಮತ್ತು ಮಯೂರಿ ಅವರುಗಳು ಹೆಜ್ಜೆ ಹಾಕಿದ್ದಾರೆ. ಮದುವೆಯಾಗದ ನಾಯಕ ಹುಡುಗಿಯ ಹುಟುಕಾಟದಲ್ಲಿರುವಾಗ ಬರುವ ‘ಎಲ್ಲಿ ಕಾಣೆ ಎಲ್ಲಿ ಕಾಣ ’ ಹಾಡಿನ ಚಿತ್ರೀಕರಣವನ್ನು ಇನ್ನೋವೇಟಿವ್ ಫಿಲಿಂ ಸಿಟಿಯಲ್ಲಿ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಲಾಗುತ್ತಿದೆ. ಅರ್ಜುನ್ ಜನ್ಯಾ ಸಂಗೀತದ ಹಾಡಿಗೆ ಮುರಳಿ ನೃತ್ಯ ಸಂಯೋಜಿಸಿದ್ದಾರೆ. ಅಟ್ಲಾಂಟನಾಗೇಂದ್ರ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ತಂತ್ರಜ್ಘರು ಕೈ ಜೋಡಿಸಿರುವುದು ವಿಶೇಷವಾಗಿದೆ.

ಛಾಯಗ್ರಾಹಕ ಸುಧಾಕರರಾವ್, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್.ಬಿ.ಕೆರೆ, ಕ್ರಿಯೆಟೀವ್ ಹೆಡ್ ತರುಣ್‍ಸುದೀರ್, ಕಾರ್ಯನಿರ್ವಾಹಕ ನಿರ್ಮಾಪಕ ನರಸಿಂಹ ಇವರುಗಳು ವರ್ಕಿಂಗ್ ಪಾಟ್ರ್ನರ್‍ಗಳಾಗಿ ಕೆಲಸ ಮಾಡುತ್ತಿದ್ದಾರೆ. ಬಂದ ಲಾಭದಲ್ಲಿ ಎಲ್ಲರಿಗೂ ಶೇರ್ ಸಿಗಲಿದೆ. ಅನಿಲ್ ನಿರ್ದೇಶನದಲ್ಲಿ ಆಶಿಕಾ ನಾಯಕಿ, ಚಿಕ್ಕಣ್ಣ ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ಚಿತ್ರವು ಇದೇ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
11/03/18

ಶರಣ್ ಹುಟ್ಟುಹಬ್ಬದಲ್ಲಿ ರ್ಯಾಂಬೋ-2 ಮಾತುಗಳು
ಶರಣ್ ಮೊದಲಬಾರಿ ನಾಯಕನಾಗಿ ಅಭಿನಯಿಸಿದ್ದ ರ್ಯಾಂಬೋ ಹಿಟ್ ಆಗಿತ್ತು. ಈಗ ‘ರ್ಯಾಂಬೋ-2’ ಬಿಡುಗಡೆಗೆ ಸಿದ್ದವಾಗಿದೆ. ಇಲ್ಲಿಯವರೆಗೂ ಚಿತ್ರದ ಮಾಹಿತಿಗಳನ್ನು ಬಿಟ್ಟುಕೊಡದ ತಂಡವು ಶರಣ್ ಅವರ ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ವಿಷಯಗಳನ್ನು ಮಾದ್ಯಮದವರಿಗೆ ಹರಿಬಿಟ್ಟರು. ನಿರ್ದೇಶಕ ಅನಿಲ್‍ಕುಮಾರ್ ಹೇಳುವಂತೆ ಕತೆಯಲ್ಲಿ ಎರಡು ಕಾರುಗಳು ಪಾತ್ರವಾಗಿ ಬರುತ್ತವೆ. ಪ್ರಯಾಣದಲ್ಲಿ ಸನ್ನಿವೇಶಗಳು ಸಾಗುವುದರಿಮದ ಗಡಿಭಾಗ ಶ್ರೀಲಂಕಾದಿಂದ ಪಾಕಿಸ್ತಾನ ಗಡಿಭಾಗದವರೆಗೆ ಸಂಚರಿಸಲಾಗಿದೆ. ಇವರೊಂದಿಗೆ ಚಿತ್ರ ಮಾಡುವ ಕನಸು ಈಡೇರಿದೆ. ರಾಮೇಶ್ವರ, ಗೋವಾ, ಬೆಂಗಳೂರು, ಜೈಸಲ್ಮರ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು. ಚಿತ್ರಕ್ಕೆ ಸೂತ್ರದಾರ ಆಗಿರುವ ತರುಣ್‍ಸೂದೀರ್ ಮಾತನಾಡಿ ಇದು ತಂತ್ರಜ್ಘರ ಸಿನಿಮಾ ಎನ್ನಬಹುದು. ಎಲ್ಲರು ಸಂಭಾವನೆರಹಿತ ಕೆಲಸ ಮಾಡಿ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಭಾಗ-2 ಹುಟ್ಟಿಕೊಳ್ಳಲು ಅಟ್ಲಾಂಟ ನಾಗೇಂದ್ರ ಕಾರಣರಾಗಿರುತ್ತಾರೆ. ಅವರೊಂದಿಗೆ ನಾವುಗಳು ಸೇರಿಕೊಂಡಿದ್ದೇವೆ. ಶರಣ್-ನಾಗೇಂದ್ರ ಪಾಲು ಜಾಸ್ತಿ ಇದೆ ಎನ್ನುತ್ತಾರೆ.

ಹುಟ್ಟುಹಬ್ಬಕ್ಕೆ ಕಾಣ ಸಿಕೊಳ್ಳುವುದು ಅಪರೂಪ. ಈ ಹಂತಕ್ಕೆ ಬರಲು ಇಲ್ಲಿರುವ ಎಲ್ಲರ ಪರಿಶ್ರಮ ಕಾರಣವಾಗಿದೆ. ಚಿತ್ರಕ್ಕೆ ಓಂಕಾರ, ನಾಂದಿ ಹಾಕಿದ್ದು ತರುಣ್. ಅವರನ್ನು ಒಂದು ತರಹ ಸೂತ್ರಧಾರ ಅಂದರೂ ತಪ್ಪಿಲ್ಲ. ಎಲ್ಲರೂ ಧೋರಣೆ ಮರೆತು ಕೆಲಸ ಮಾಡಿದ್ದಾರೆ. ಪ್ರಯಾಣದ ಸಿನಿಮಾವಾಗಿದ್ದರಿಂದ ಡೈಲಾಗ್ ಕಡಿಮೆ. ಹಾಗಂತ ಹಾಸ್ಯಕ್ಕೆ ಕೊರತೆ ಮಾಡಿಲ್ಲ. ಜೀವನ ಏನು ಅಂತ ತಿಳಿಯಲು ಲಾಂಗ್ ರೈಡ್ ಹೋಗುವ ಸಂದರ್ಭದಲ್ಲಿ ನಾನು ಸೇರಿದಂತೆ, ಚಿಕ್ಕಣ್ಣ, ಆಶಿಕಾ ಜೊತೆಗೆ ಕಾರು ಹೀಗೆ ನಾಲ್ಕು ಪಾತ್ರಗಳು ಮುಖ್ಯವಾಗಿ ಬರುತ್ತದೆ. ಹತ್ತಿರ ಇರುವವರು ದೂರ ಆಗುತ್ತಾರೆ. ದೊರದಲ್ಲಿರುವವರು ಹತ್ತಿರಕ್ಕೆ ಬರುವುದನ್ನು ಕಾಮಿಡಿ, ಥ್ರಿಲ್ಲಿಂಗ್, ಸೆಸ್ಪನ್ಸ್ ಮಾದರಿಯಲ್ಲಿ ತೋರಿಸಲಾಗಿದೆ. ಇದೇ ತಂಡದೊಂದಿಗೆ ವರ್ಷಕ್ಕೆ 2-3 ಸಿನಿಮಾ ಮಾಡುವ ಯೋಜನೆ ಇದೆ ಅಂತ ಹೇಳುತ್ತಾ ಹೋದರು ಶರಣ್.

ಇದಕ್ಕೂ ಮುನ್ನ ಚಿಕ್ಕಣ್ಣ ಮಾತನಾಡಿ ಶರಣ್ ಅವರೊಂದಿಗೆ ಹಿಂದಿನ ಚಿತ್ರಗಳಲ್ಲಿ ಹಳ್ಳಿ ಹುಡುಗನಾಗಿ ನಟಿಸಿದ್ದು, ಇದರಲ್ಲಿ ವಿಭಿನ್ನ ಹೇರ್‍ಸ್ಟೈಲ್ ಹಿಪ್‍ಹಾಪ್ ರೀತಿಯಂತೆ ಕಾಣ ಸಿಕೊಂಡಿದ್ದೇನೆ. ಹನಿಹನಿಗೂಡಿದರೆ ಹಳ್ಳ ಎನ್ನುವ ಹಾಗೆ ಇಲ್ಲಿರುವ ಎಲ್ಲಾ ನದಿಗಳು ಸೇರಿದರೆ ಸಮುದ್ರವಾಗುವಂತೆ ನಾನು ಭಾಗಿಯಾಗಿರುವುದು ಖುಷಿಯಾಗಿದೆ ಎಂದರು. ನಾಯಕಿ ಆಶಿಕಾರಂಗನಾಥ್ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇದೆ. ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು. ಸಂಗೀತ ನಿರ್ದೇಶಕ ಅರ್ಜುನ್‍ಜನ್ಯಾ, ಛಾಯಗ್ರಾಹಕ ಸುಧಾಕರ್, ನಿರ್ಮಾಣ ನಿರ್ವಾಹಕ ಜಾಲಹಳ್ಳಿನರಸಿಂಹ, ಕತೆಗಾರ ಉದಯರಾಜ್, ಆನಂದ್ ಆಡಿಯೋ ಶ್ಯಾಂ, ಸಂಕಲನಕಾರ ಕೆ.ಎಂ.ಪ್ರಕಾಶ್, ಡಿಸೈನರ್ ಸಾಯಿ, ಕಲಾ ನಿರ್ದೇಶಕ ಮೋಹನ್.ಬಿ.ಕೆರೆ ಉಪಸ್ತಿತರಿದ್ದು ಸಂತಸವನ್ನು ಹಂಚಿಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-7/02/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore