HOME
CINEMA NEWS
GALLERY
TV NEWS
REVIEWS
CONTACT US
ಕನಕದಾಸರ ಜೀವನದ ಮಜಲುಗಳು
ರೂಪಾಂತರ ಸಂಸ್ಥೆ ಮೂಲಕ 75ಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದ ನಾಟಕ ಈಗ ‘’ರಾಮಧಾನ್ಯ’’ ಸಿನಿಮಾವಾಗಿದೆ. ಕತೆಯಲ್ಲಿ ಭತ್ತವನ್ನು ಶ್ರೀಮಂತರು, ರಾಗಿಯನ್ನು ಬಡವರು ಬಳಸುತ್ತಾರೆ ಎಂದು ಮೇಲು-ಕೀಳು ಬಿಡಿ ಎಂದು ಹೇಳುತ್ತಾ ಕನಕದಾಸರ ಜೀವನದ ಮಜಲುಗಳನ್ನು ಬಳಸಿಕೊಂಡಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಂದರೂ ಪ್ರಸ್ತುತ ಜೀವನದ ನಿರುದ್ಯೋಗ ಸಮಸ್ಯೆ, ಆಸ್ತಿ-ಅಂತಸ್ತು, ಪ್ರೀತಿ-ಪ್ರೇಮಗಳ ಮೂಲಕ ಸಿನಿಮಾ ಶುರು ಮಾಡಿರುವುದು ಕಂಡು ಬರುತ್ತದೆ. ಮನುಷ್ಯ ಶ್ರೇಷ್ಟತೆಯ ಚಟಕ್ಕೆ ದಾಸನಾದಾಗ, ಎದುರಾಗುವ ಕಷ್ಟಗಳು, ಜಾತಿಯತೆಯ ಸಂಕೋಲೆಯೊಳಗೆ ಸಮಾಜದಲ್ಲಿ ಸಿಲುಕಿ ನರುಳುತ್ತಿರುವ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಸಮಾಜಕ್ಕೆ ಕಂಟಕವಾಗಿರುವ ಅನಿಷ್ಟ ಜಾತಿ ಪದ್ದತಿಯ ಮೂಲೋತ್ಟಾಟನೆಗೆ ಕನಕದಾಸರ ಕೀರ್ತನೆಗಳೇ ದಾರಿದೀಪ ಎಂಬ ಆಶಯದ ಅಂಶಗಳು ಇರಲಿದೆ. ಸಮಾಜದ ಒಳಿತು ಕಡೆಕುಗಳನ್ನು ತಿಳಿಸಿ ಹೇಳಲು ರಾಮಾಯಣದ ಪಾತ್ರಗಳು ಬಂದು ಹೋಗಿತ್ತದೆ. ಕನಕದಾಸರ ಜನ್ಮದಿನದಂದು ದಾಸರಿಬ್ಬರು ನಾಯಕನನ್ನು ಕೂರಿಸಿಕೊಂಡು ವಿವರವಾಗಿ ಸಾಧಕನ ಚರಿತ್ರೆಯನ್ನು ಹೇಳಿ ಮುಗಿಸುವಲ್ಲಿಗೆ ಪರದೆ ಬೀಳುತ್ತದೆ.

ನಾಯಕ ಯಶಸ್‍ಸೂರ್ಯ ಪ್ರಸ್ತುತ ಕಾಲದ ಪ್ರೇಮಿ, ರಾಮ ಮತ್ತು ಕನಕದಾಸರ ಪಾತ್ರಕ್ಕೆ ಒಗ್ಗಿಕೊಳ್ಳುವಲ್ಲಿ ಸಪಲರಾಗಿದ್ದಾರೆ. ನಾಯಕಿ ನಿಮಿತಾರತ್ನಾಕರ್ ಮೊದಲ ಚಿತ್ರದಲ್ಲೆ ಕನಕನ ಪತ್ನಿ, ಸೂರ್ಯನ ಪ್ರೇಮಿ ಹಾಗೂ ಸೀತೆಯಾಗಿ ನಟಿಸಿದ್ದಾರೆ. ಇಬ್ಬರು ಮೂರು ಶೇಡ್‍ಗಳಲ್ಲಿ ಅದ್ಬುತವಾಗಿ ಕಾಣಿಸುತ್ತಾರೆ. ನಿರ್ದೇಶಕ ಟಿ.ಎನ್.ನಾಗೇಶ್ ಒಂದೇ ಚಿತ್ರದಲ್ಲಿ ಮೂರು ಕಾಲಘಟ್ಟವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಕನಕದಾಸರ ಕವಿತೆಗಳಲ್ಲಿ ಒಂದಾದ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಹಾಡನ್ನು ಸನ್ನಿವೇಶಕ್ಕೆ ಅನುಗುಣವಾಗಿ ಬಳಸಲಾಗಿದೆ. ಬಸವರಾಜಸೋಳೇರಿಪಾಳ್ಯ ಸಂಭಾಷಣೆ ಪ್ಲಸ್ ಪಾಯಿಂಟ್ ಆಗಿದೆ. ಬೆನಕರಾಜು ಛಾಯಗ್ರಹಣ, ದೇಸಿಮೋಹನ್ ಸಂಗೀತ ನೋಡಲು, ಕೇಳಲು ಚೆನ್ನಾಗಿದೆ. ಎಲ್ಲಾ ಕಾಲದಿಂದ ಜಾತಿ ಪದ್ದತಿಯು ಇದೆ ಎನ್ನುವುದನ್ನು ಹೇಳುತ್ತಾ, ಅದನ್ನು ಹೊಗಲಾಡಿಸಿದಲ್ಲಿ ಪಾರದರ್ಶಕ ಸಮಾಜವನ್ನು ಕಾಣಬಹುದೆಂಬ ಅರ್ಥ ಬರುವಂತಹ ಸಂದೇಶವನ್ನು ಸಾರಿದ್ದಾರೆ. ದಶಮುಖ ವೆಂಚರ್ಸ್ ಮೂಲಕ ಹತ್ತು ಸಿನಿಮಾಸಕ್ತರು ನಿರ್ಮಾಣ ಮಾಡಿರುವ ಚಿತ್ರವು ಮನಸ್ಸಿಗೆ ಹಿತ ಕೊಡುತ್ತದೆ.
ಸಿನಿ ಸರ್ಕಲ್.ಇನ್ ವಿಮರ್ಶೆ
27/05/18

ರಾಮಧಾನ್ಯ ಮಾತುಗಳು
‘ರಾಮಧಾನ್ಯ’ ಚಿತ್ರವು ತೆರೆಗೆ ಬರಲು ಸಿದ್ದವಾಗಿರುವುದರಿಂದ ಕೊನೆ ಬಾರಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ನಿರ್ಮಾಪಕರುಗಳ ಸರದಿ ನಂತರ ನಿರ್ದೇಶಕ ಟಿ.ಎನ್.ನಾಗೇಶ್ ಮೈಕ್ ತೆಗೆದುಕೊಂಡು ಒಂದು ವರ್ಷದ ಶ್ರಮ ಮೊದಲ ಪ್ರತಿ ನೋಡಿದಾಗ ಎಲ್ಲರಿಗೂ ಖುಷಿ ನೀಡಿತು. ಕನಕದಾಸ ಎಂದರೆ ಅವರೊಬ್ಬ ಸಂತ, ಕವಿ, ಸನ್ಯಾಸಿ ಎಂದು ಎಲ್ಲರು ತಿಳಿದುಕೊಂಡಿದ್ದಾರೆ. ಆದರೆ ಅವರೊಬ್ಬ ಅಪ್ರತಿಮ ವೀರಯೋಧ ಎಂಬುದು ತಿಳಿದಿಲ್ಲ. ಕಳಿಂಗ ಯುದ್ದದ ಬಳಿದ ಅವರು ಹೇಗೆ ದಾಸರಾದರು, ಮತ್ತು ದಂಡನಾಯಕ ಆಗಿದ್ದ ಬಗೆಯನ್ನು ತೋರಿಸಲಾಗಿದೆ ಎಂದರು.

ಕಮರ್ಷಿಯಲ್ ಸಿನಿಮಾಗಳು ವರ್ಷಕ್ಕೆ 100ಕ್ಕೂ ಹೆಚ್ಚು ಬರುತ್ತದೆ. ಇಂತಹ ಚಿತ್ರ ಬರುವುದು ವಿರಳ. ನಿರ್ಮಾಪಕರು ಧೈರ್ಯ ಮಾಡಿ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರಾರಂಭದಲ್ಲಿ ಕನಕನ ಪಾತ್ರ ಮಾಡಲು ಭಯವಿತ್ತು. ತರುವಾಯ ನಾಟಕ ನೋಡಿದ್ದು ಸಹಾಯಕ್ಕೆ ಬಂತು, ಹಳಗನ್ನಡ ಪದಗಳನ್ನು ಚೆನ್ನಾಗಿ ಪರಿಪಾಠ ಮಾಡಿಕೊಂಡು ಕ್ಯಾಮಾರ ಮುಂದೆ ನಿಲ್ಲಬೇಕಾಯಿತು. ಮೂರು ಕಾಲಘಟ್ಟದ ಕತೆಯು ಅದ್ಬುತವಾಗಿ ಮೂಡಿಬಂದಿದೆ ಎಂದು ಹೇಳಿದ್ದು ನಾಯಕ ಯಶಸ್‍ಸೂರ್ಯ.

ಮೊದಲ ಚಿತ್ರದಲ್ಲೆ ಮೂರು ಶೇಡ್‍ಗಳು ಇರುವ ಪಾತ್ರದಲ್ಲಿ ನಟಿಸಿದ್ದು ಸಂತಸ ತಂದಿದೆ. ಶ್ರೀಮಂತ-ಬಡವ ಎಂಬುದರ ತಾರತಮ್ಯ ಲಾಗಾಯ್ತಿನಿಂದಲೂ ಇದೆ. ಅಂತಹ ಅಂಶಗಳು ಸನ್ನಿವೇಶಗಳಲ್ಲಿ ಬರಲಿದೆ ಎನ್ನುತ್ತಾರೆ ನಾಯಕಿ ನಮಿತಾರತ್ನಾಕರ್.
ಹಾಡುಗಳಿಗೆ ದೇಸಿಮೋಹನ್ ಸಂಗೀತ ಒದಗಿಸಿದ್ದಾರೆ. ಹಿನ್ನಲೆ ಸಂಗೀತ ಒದಗಿಸಲು ಕರೆ ಬಂದಾಗ ಕನಕ ಚಿತ್ರವೆಂದರೆ ಭಕ್ತಿ ಪ್ರಧಾನವಾಗಿರುತ್ತದೆ. ಇದಕ್ಕೆ ವೀಣೆ, ಸಿತಾರ್ ಬಳಸಿದರೆ ಸಾಕು ಅಂತ ಭಾವಿಸಲಾಗಿತ್ತು. ಸಿನಿಮಾ ನೋಡಿದಾಗ ಇದರಲ್ಲಿ ಯುದ್ದದ ದೃಶ್ಯಗಳನ್ನು ನೋಡಿ ಅದರಂತೆ ಭರ್ಜರಿ ಸೌಂಡ್‍ನ್ನು ಅಳವಡಿಸಲಾಗಿದೆ. ಕೆಲಸದ ವಿಷಯದಲ್ಲಿ ಚೌಕಾಶಿ ಮಾಡದೆ ಇರುವುದರಿಂದ ನೆಮ್ಮದಿಯಾಗಿ ಸಂಗೀತ ನೀಡಲು ಅನುಕೂಲವಾಯಿತು ಎಂಬುದು ವೀರ್‍ಸಮರ್ಥ್ ಮಾತು.

ಜಾತಿ ಪದ್ದತಿ, ವ್ಯವಸ್ಥೆ ಹಿಂದಿನಿಂದಲೂ ಬಂದಿದೆ. ಭತ್ತವನ್ನು ಹಣವಂತರು ಉಪಯೋಗಿಸುತ್ತಾರೆ, ರಾಗಿಯನ್ನು ಬಡವರು ಬಳಸುತ್ತಾರೆ ಎಂಬುದರ ಚರ್ಚೆ ರಾಮನ ಕತೆಯಲ್ಲಿ ಬರುತ್ತದೆ. 15ನೇ ಶತಮಾನದಿಂದ 21ನೇ ಶತಮಾನದವರೆಗೂ ಸಂಗತವಾಗಿದೆ. ಸಮಾಜಮುಖಿ ಸಂದೇಶ ಇರುವುದರಿಂದ ಇದೊಂದು ಜಾಗತಿಕ ಚಿತ್ರ ಆಗಬಹುದೆಂದು ಸಂಭಾಷಣೆಗಾರ ಬಸವರಾಜುಸೂಳೇರಿಪಾಳ್ಯ, ಸಹ ನಿರ್ದೇಶಕರುಗಳಾದ ಕೆಎಸ್‍ಡಿಎಲ್ ಚಂದ್ರು ಹಾಗೂ ವಾದಿರಾಜ್ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡರು.

ದಶಮುಖ ವೆಂಚರ್ಸ್ ಮೂಲಕ ವೆಂಕಟೇಶ್‍ಸವಣೂರ, ಜಂಬಣ್ಣ.ಬಿ.ಹವಳದ, ಸಂತೋಷ್ ಅಂಗಡಿ, ಅನಿಲಕುಮಾರ್‍ಪಾವಲಿ, ಗೋವಿಂದರಾಜ್.ಆರ್, ಮಲ್ಲೇಶ್‍ರಾಜಗಂಧರ್ವ, ಎಸ್.ಎನ್.ರಾಜಶೇಖರ್‍ಬೂದಾಳ್ ಮತ್ತು ಮಹಾಂತೇಶ.ಎಂ.ತಾಂವಶಿ ಸೇರಿಕೊಂಡು ನಿರ್ಮಾಣ ಮಾಡಿರುವ ಚಿತ್ರವು ಇದೇ 25ರಂದು ಸುಮಾರು 75 ಕೇಂದ್ರಗಳಲ್ಲಿ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
15/05/18ರಾಮಧಾನ್ಯದಲ್ಲಿ ದರ್ಶನ್ ಕಂಠವನ್ನು ಆಲಿಸಬಹುದು
ದರ್ಶನ್ ತನ್ನ ಗೆಳೆಯರ ಚಿತ್ರಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಪ್ರೇಮಬರಹ ಚಿತ್ರಕ್ಕೆ ಹಾಡಿನಲ್ಲಿ ಕಾಣಿಸಿಕೊಂಡಂತೆ, ಭರ್ಜರಿ ಸಿನಿಮಕ್ಕೆ ಪ್ರಾರಂಭದಲ್ಲಿ ಧ್ವನಿ ನೀಡಿದ್ದರು. ಈಗ ‘ರಾಮಧಾನ್ಯ’ ಸರದಿಯಾಗಿದೆ. ಈ ಚಿತ್ರದಲ್ಲಿ ಅವರು ಎಲ್ಲಿಯೂ ಕಾಣಿಸದೆ, ಬದಲಿಗೆ ಆರಂಭ ಮತ್ತು ಅಂತ್ಯದಲ್ಲಿ ಅವರ ಧ್ವನಿ ಬರಲಿದೆ. ಪೌರಾಣಿಕ ಕಥಾಹಂದರವಿದ್ದರೂ, ಪ್ರಸಕ್ತ ಟೆಕ್ಕಿಗಳ ಬದುಕು, ದ್ವಾಪರಯುಗದ ರಾಮ ಹಾಗೂ ಕನಕದಾಸರ ಚರಿತೆಯನ್ನು ಸನ್ನಿವೇಶಗಳಲ್ಲಿ ಸೇರಿಸಲಾಗಿದೆಯಂತೆ. ಯಶಸ್‍ಸೂರ್ಯ ನಾಯಕನಾಗಿ ಸಾಫ್ಟ್‍ವೇರ್ ಇಂಜಿನಿಯರ್, ರಾಮ ಮತ್ತು ಕನಕದಾಸ ಮತ್ತು ರಣರಂಗದಲ್ಲಿ ಹೋರಾಡುವ ವಾರಿಯರ್ ರೀತಿಯ ನಾಲ್ಕು ಭಿನ್ನ ಶೇಡ್‍ಗಳಲ್ಲಿ ನಟಿಸಿದ್ದಾರೆ. ಟೀಸರ್ ನೋಡಿದ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರವು ಎಲ್ಲರಿಗೂ ತಲುಪಬೇಕೆಂದು ಖುದ್ದು ಧ್ವನಿ ನೀಡಲು ಒಪ್ಪಿಕೊಂಡಿದ್ದು ತಂಡಕ್ಕೆ ಆನೆ ಬಲ ಬಂದಂತೆ ಆಗಿದೆಯಂತೆ.

ಚಂದನವನಕ್ಕೆ ಪರಿಚಯವಾಗಿರುವ ಮಂಗಳೂರಿನ ನಮಿತಾರತ್ನಕರ್ ನಾಯಕಿಯಾಗಿ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನಕದಾಸರ ಸ್ಥಳ ಕಾಗಿನೆಲೆ, ಶ್ರೀರಂಗಪಟ್ಟಣ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳಲ್ಲಿ ಎರಡು ಗೀತೆಗಳಿಗೆ ಕನಕದಾಸರ ಪದಗಳು, ಒಂದು ಪುರಂದರದಾಸ ಮತ್ತು ಶೃಂಗಾರ ಹಾಡಿಗೆ ನಾಗೇಂದ್ರಪ್ರಸಾದ್ ಸಾಹಿತ್ಯ ಒದಗಿಸಿದ್ದು ದೇಸಿಮೋಹನ್ ಸಂಗೀತ ಒದಗಿಸಿದ್ದಾರೆ. ಬಸವರಾಜಸೊಳೇರಿಪಾಳ್ಯ ಸಂಭಾಷಣೆಗೆ ಪದಗಳನ್ನು ಪೋಣಿಸಿದ್ದಾರೆ. ನಿರ್ದೇಶಕ ಟಿ.ಎನ್.ನಾಗೇಶ್ ಗೆಳಯರೊಂದಿಗೆ ಸೇರಿಕೊಂಡು ದಶಮುಖ ವೆಂಚರ್ಸ್ ಸಂಸ್ಥೆ ಹುಟ್ಟುಹಾಕಿ ನಿರ್ಮಾಣ ಮಾಡಿರುವ ಸಿನಿಮಾವು ಇದೇ 25ರಂದು ತೆರೆ ಕಾಣುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
14/05/18
ರಾಮಧಾನ್ಯದಲ್ಲಿ ಕನಕನ ಗೀತೆಗಳು
ಸಂತ ಕವಿ ಕನಕದಾಸ ಚರಿತೆಗಳಲ್ಲಿ ಒಂದಾದ ‘ರಾಮಧಾನ್ಯ’ ನಾಟಕವು ಯಶಸ್ವಿಯಾಗಿದ್ದು, ಈಗ ಚಿತ್ರರೂಪದಲ್ಲಿ ಬರಲು ಸಿದ್ದಗೊಂಡಿದೆ. ಪ್ರಚಾರದ ಹಂತವಾಗಿ ಮಂಗಳವಾರ ಧ್ವನಿಸಾಂದ್ರಿಕೆ ಲೋಕಾರ್ಪಣೆಗೊಂಡಿತು. ಸಾಹಿತಿ ಕಾತಾಚಿಕ್ಕಣ್ಣ ಮಾತನಾಡುತ್ತಾ ದಾರ್ಶನಿಕ ಕವಿಗಳ ಅಪರೂಪದ ಸಾಲಿನಲ್ಲಿ ಕನಕದಾಸರು ನಿಲ್ಲುತ್ತಾರೆ. 16ನೇ ಶತಮಾನದಿಂದ 21ನೇ ಶತಮಾನದವರೆಗೂ ಪ್ರಸ್ತುತರಾಗಿರುವುದು ವಿಶೇಷ. ಕನಕದಾಸರು ಪ್ರಾರಂಭದಲ್ಲಿ ತಿಮ್ಮಪ್ಪ, ದಂಡನಾಯಕ ಮುಂದೆ ಪದವಿ, ಅಧಿಕಾರವನ್ನು ತ್ಯಜಿಸಿ ಸಮಾಜ ಸುಧಾರಣೆ ಮಾಡಲು ಬಂದಾಗ ಕನಕನಾಗುತ್ತಾನೆ. ಕುಲ-ಅಹಂ ಎರಡನ್ನು ಬಿಟ್ಟು ಮನುಷ್ಯರಾಗಿ ಜೀವನ ಸಾಗಿಸಿ ಎಂದು ಸಂದೇಶ ಸಾರುತ್ತಾರೆ. ಮೇಲು-ಕೀಳು ಇವೆಲ್ಲಕ್ಕೂ ಪರಿಹಾರ ನಮ್ಮಲ್ಲೆ ಇದೆ ಎಂಬ ಕವಚವನ್ನು ತೆಗೆದಿಡಲು ಅವರು ಕೈಗೊಂಡ ಪ್ರಯತ್ನವು ಫಲಕಾರಿಯಗುತ್ತದೆ ಎಂದು ಸಾಕಷ್ಟು ಮಾಹಿತಿಗಳನ್ನು ನೀಡುತ್ತಾ ಹೋದರು. ಮಗ ನಾಟಕ ನೋಡಿ ಸಿನಿಮಾ ಮಾಡಲು ಹೇಳಿದಾಗ ಅದರಂತೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಪ್ರಾರಂಭದಲ್ಲಿ ನಾನು ಸೇರಿದಂತೆ ನಾಲ್ಕು ಜನರು ಹಣ ಹೂಡಲು ಮುಂದೆ ಬಂದರು. ತರುವಾಯ ತುಣುಕುಗಳನ್ನು ನೋಡಿ ಮತ್ತಷ್ಟು ಮಂದಿ ಬರುವಲ್ಲಿಗೆ 10 ಸಂಖ್ಯೆ ಆಗಿದ್ದರಿಂದ ದಶಮುಖ ವೆಂಚರ್ಸ್ ನೊಂದಿಗೆ ಚಿತ್ರ ಮಾಡಲಾಯಿತು.

ಕನಕದಾಸರ ಸ್ಥಳ ಕಾಗಿನೆಲೆ, ಶ್ರೀರಂಗಪಟ್ಟಣ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳಲ್ಲಿ ಎರಡು ಗೀತೆಗಳಿಗೆ ಕನಕದಾಸರ ಪದಗಳು, ಒಂದು ಪುರಂದರದಾಸ ಮತ್ತು ಶೃಂಗಾರ ಹಾಡಿಗೆ ನಾಗೇಂದ್ರಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆಂದು ನಿರ್ದೇಶಕ ಟಿ.ಎನ್.ನಾಗೇಶ್ ವಿವರ ನೀಡಿದರು. ಇದೇ ಮಾದರಿ ಸಿನಿಮಾ ಮುಂದೆ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ಇಂತಹ ಚಿತ್ರ ಮಾಡಲು ಧೈರ್ಯ ಇರಬೇಕು. ನಾಟಕ ನೋಡಿ ಚಿತ್ರ ಮಾಡುವುದು ಕಷ್ಟದ ಕೆಲಸ. ಒಳ್ಳೆ ಚಿತ್ರದಲ್ಲಿ ನಟನೆ ಮಾಡಿದ್ದೇನೆ ಅಂತ ಭಾವನೆ ಇದೆ ಎಂದು ಕನಕದಾಸನಾಗಿ ಕಾಣ ಸಿಕೊಂಡಿರುವ ಯಶಸ್‍ಸೂರ್ಯ ಮಾತು. ಮೊದಲ ಚಿತ್ರದಲ್ಲೆ 3 ಶೇಡ್‍ಗಳಲ್ಲಿ ನಟಿಸಿರುವುದು ಖುಷಿ ತಂದಿದೆ ಅಂತಾರೆ ನಾಯಕಿ ನಿಮಿತಾರತ್ಮಾಕರ್. ಪ್ರಥಮ ಸಂಯೋಜನೆಗೆ ಕನಕ,ಪುರಂದರ, ನಾಗೇಂದ್ರಪ್ರಸಾದ್ ಸಾಹಿತ್ಯವನ್ನು ಪ್ರಾಮಾಣ ಕವಾಗಿ ಬಳಸಲಾಗಿದೆ ಎನ್ನುತ್ತಾರೆ ಸಂಗೀತ ನಿರ್ದೇಶಕ ದೇಸಿಮೋಹನ್. ಸಂಭಾಷಣೆ ಬಸವರಾಜಸೂಳೇರಿಪಾಳ್ಯ, ಡಾ.ನಾಗೇಂದ್ರಪ್ರಸಾದ್, ನಿರ್ಮಾಪಕರುಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ಅವಸಾನದಲ್ಲಿ ಟೀಸರ್, ಮೂರು ಹಾಡುಗಳನ್ನು ತೋರಿಸಲಾಯಿತು. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವು ಇದೇ ತಿಂಗಳ ಕೊನೆವಾರದಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-01/02/18
ಮೂರು ಕಾಲಘಟ್ಟದ ರಾಮಧಾನ್ಯ
‘ರಾಮಧಾನ್ಯ’ ಎನ್ನುವ ನಾಟಕ ರೂಪಾಂತರ ತಂಡದೊಂದಿಗೆ ನೊರಾರು ಪ್ರದರ್ಶನಗಳು ಕಂಡಿದ್ದವು. ಒಮ್ಮೆ ನಿರ್ದೇಶಕ ಟಿ.ಎನ್.ನಾಗೇಶ್ ಮಗನನ್ನು ಕರೆದುಕೊಂಡು ನಾಟಕ ನೋಡಲು ಹೋಗಿದ್ದಾರೆ. ಅವನು ನೀವು ಸಿನಿಮಾ ಮಾಡುವುದಿದ್ದರೆ ಇಂತಹದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾನೆ. ಪುಟ್ಟ ಮನಸ್ಸಿನಲ್ಲಿ ದೊಡ್ಡ ಆಲೋಚನೆ ಇರುವದನ್ನು ಕಂಡು ಅದರಂತೆ ಇದೇ ಚಿತ್ರ ಮಾಡಲು ನಿರ್ದಾರ ತೆಗೆದುಕೊಂಡಿದ್ದಾರೆ. ಕತೆ ಚೆನ್ನಾಗಿರುವ ಕಾರಣ 10 ಜನರು ಹಣ ಹೂಡಲು ಮುಂದೆ ಬಂದ ಕಾರಣ ದಶಮುಖ ವೆಂಚರ್ಸ್ ಹುಟ್ಟುಹಾಕಿ ಇದೇ ಹೆಸರಿನ ಮೇಲೆ ನಾಟಕವನ್ನು ಚಿತ್ರರೂಪದಲ್ಲಿ ಶೇಕಡ 95ರಷ್ಟು ಚಿತ್ರೀಕರಣ ಮಾಡಿಮುಗಿಸಿದ್ದಾರೆ. ಕನಕದಾಸರ ಮೂಲಜಾಗ ಕಾಗೀನೆಲೆ, ಹಾವೇರಿ , ಬಂಕಾಪುರ, ಬೆಂಗಳೂರು ಕಡೆಗಳಲ್ಲಿ ಕ್ಯಾಮಾರ ಓಡಾಡಿದೆ. ಪೌರಾಣ ಕ, ಐತಿಹಾಸಿಕ, ಸಾಮಾಜಿಕ ಹೀಗೆ ಮೂರು ಕಾಲಘಟ್ಟದಲ್ಲಿ ನಡೆಯುವ ಕಥನವಾಗಿದೆ. ಕನಕದಾಸರು 40 ವರ್ಷ ಪ್ರಾಯುದ ಘಟನೆಗಳನ್ನು ಹೆಕ್ಕಿಕೊಂಡಿರುವುದು ವಿಶೇಷ. ಪೌರಾಣ ಕ ಸನ್ನಿವೇಶಕ್ಕೆ ಚಿತ್ರೀಕರಣ ನಡೆಸುವಾಗ ಕಲಾವಿದರಿಗೆ ಮೇಕಪ್ ಮಾಡುವುದು ಒಂದು ಘಂಟೆ ಸಮಯ ತೆಗೆದುಕೊಂಡಿದೆ.

ಸಾಮಾನ್ಯ ಮನುಷ್ಯನೊಬ್ಬ ಕನಕದಾಸ, ದಂಡನಾಯಕನ ಕನಸನ್ನು ಕಂಡಾಗ ಯಾವ ರೀತಿ ಇರುತ್ತಾನೆ ಎಂಬುದರ ಪಾತ್ರದಲ್ಲಿ ಯಶಸ್‍ಸೂರ್ಯ ನಾಯಕ. ಇವರಿಗೆ ನಟಿಸುವಾಗ ಯಾವ ಕಾಲಘಟ್ಟದ ಪಾತ್ರ ಮಾಡುತ್ತಿದೇನೆಂದು ಗೊಂದಲವಾಗುತ್ತಿತ್ತು ಎನ್ನುತ್ತಾರೆ. ಮಂಗಳೂರು ಮೂಲದ ನಿಮಿಕಾರತ್ನಾಕರ್ ವೃತ್ತಿಯಲ್ಲಿ ಇಂಜಿನಿಯರ್, ಈಗಾಗಲೇ ತುಳು ಚಿತ್ರದಲ್ಲಿ ನಟಿಸಿದ್ದು ಕನ್ನಡದಲ್ಲಿ ಮೊದಲ ಅನುಭವ. ಎನ್.ಟಿ.ರಾಮಸ್ವಾಮಿ ನಾಯಕನ ತಂದೆ ಪಾತ್ರ. ಇವರೊಂದಿಗೆ 85 ಕಲಾವಿದರು ತೆರೆ ಮೇಲೆ ಕಾಣ ಸಿಕೊಂಡಿದ್ದಾರೆ. ಕನಕದಾಸರ ವಚನಗಳು ಮತ್ತು ಡಾ.ನಾಗೇಂದ್ರಪ್ರಸಾದ್ ಬರೆದಿರುವ ಗೀತೆಗಳಿಗೆ ಹಂಸಲೇಖಾ ಶಿಷ್ಯ ದೇಸಿಮೋಹನ್ ರಾಗ ಸಂಯೋಜಿಸಿದ್ದಾರೆ. ಛಾಯಗ್ರಹಣ ಬೆನಕರಾಜು, ಸಾಹಸ ಕುಂಗುಫೂಚಂದ್ರ, ಕೌರವವೆಂಕಟೇಶ್ ಅವರದಾಗಿದೆ.
-17/10/17
RAMA DHAANYA’ TO TURN SPOTLIGHT ON KANAKADASA  
D
irector T N Nagesh will begin work on a semi-historical and mythological film ‘Rama Dhaanya’ which will chronicle Kanakadasa’s contribution. Venkatesh is producing the movie and Desi Mohan will be adapting some of Kanakadasa’s poems to the film.

The director told reporters that it is an experimental movie with three stages tucked in the film’s narrative. He said KSDL Chandru had staged Rama Dhaanya as a play which had completed 70 shows and added that after watching the show he had evinced interest in making the play into a movie.

Nagesh said the three periods that will be created are Kanakadasa period, Sri Ramachandra  and the present generation. Basavaraja has written the script and screenplay. Desi Mohan is scoring music and Benaka Raju is the cameraman.Vadiraj is designer of the film.

Yashas of Shishira will be seen in a prominent role. He said he was tensed about performing in the film. 
-24/06/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore