HOME
CINEMA NEWS
GALLERY
TV NEWS
REVIEWS
CONTACT US
ಕನ್ನಡ ಮೀಡಿಯಂ ರಾಜೂಗೆ ಯುಎ ಮುದ್ರೆ
ಫಸ್ಟ್ ರ್ಯಾಂಕ್ ರಾಜು ನಿರ್ದೇಶಕ ನರೇಶ್‍ಕುಮಾರ್ ಹಾಗೂ ನಾಯಕ ಗುರುನಂದನ್ ಕಾಂಬಿನೇಶನ್‍ನಲ್ಲಿ ಮೂಡಿಬಂದಿರುವ ಎರಡನೆ ಚಿತ್ರ ‘ರಾಜು ಕನ್ನಡ ಮೀಡಿಯಂ’ ಚಿತ್ರಕ್ಕೆ ಯಾವುದೇ ದೃಶ್ಯವನ್ನು ಎಡಿಟ್ ಮಾಡದೆ ಸೆನ್ಸಾರ್‍ನವರು ಯುಎ ಪತ್ರ ನೀಡಿದ್ದಾರೆ. ಕನ್ನಡದಲ್ಲಿ ವ್ಯಾಸಾಂಗ ಮಾಡಿದ್ದರೂ ಇಂಜಿನಿಯರಿಂಗ್ ಮುಗಿಸಿ ವಿದೇಶದಲ್ಲಿ ಒಳ್ಳೆ ಕೆಲಸವನ್ನು ಪಡೆಯುವ ಕತೆಯಾಗಿದೆ. ಹಳ್ಳಿಯಲ್ಲಿ ಕನ್ನಡ ಮಾದ್ಯಮ ಓದಿದ ಹುಡುಗ ಪಟ್ಟಣಕ್ಕೆ ಬಂದಾಗ ಪರಿತಪಿಸುವ ಅನುಭವ ಬವಣೆಗಳನ್ನು ತತ್ವಶಾಸ್ತ್ರದ ಮಾದರಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನಾಯಕ ಜೀವನವನ್ನು ಯಾವ ರೀತಿ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುವ ಶಕ್ತಿಶಾಲಿ ಪಾತ್ರಕ್ಕೆ ಸುದೀಪ್ ನಟನೆ ಇದೆ.

ಬೆಂಗಳೂರು ಹೇಗಿದೆ ಎಂದು ಹೇಳುವ ಗೀತೆಯಲ್ಲಿ ಬಿಗ್‍ಬಾಸ್ ವಿಜೇತ ಪ್ರಥಮ್, ನಿರ್ದೇಶಕರುಗಳಾದ ಇಂದ್ರಜಿತ್‍ಲಂಕೇಶ್, ಓಂಪ್ರಕಾಶ್‍ರಾವ್ ಇವರೊಂದಿಗೆ ಕಿರಿಕ್‍ಕೀರ್ತಿ, ರೇಡಿಯೋ ಜಾಕಿ ರ್ಯಾಪಿಡ್‍ಲಕ್ಷೀ, ವಾಹಿನಿಯ ಸುಗಣ ಕಾಣ ಸಿಕೊಂಡಿದ್ದಾರೆ. ಹಳ್ಳಿಯಲ್ಲಿ ಬರುವ ಆಶಿಕಾರಂಗನಾಥ್, ಮಾಡರ್ನ್ ಹುಡುಗಿಯಾಗಿ ಆವಂತಿಕಶೆಟ್ಟಿ, ವಿದೇಶದಲ್ಲಿ ಕಾಣ ಸಿಕೊಳ್ಳುವ ಅಂಜಲಿನ ಮೂವರು ನಾಯಕಿಯರು. ಹೃದಯಶಿವ, ಜಯಂತ್ ಕಾಯ್ಕಣ ರಚಿಸಿರುವ ಆರು ಗೀತೆಗಳಿಗೆ ಕಿರಣ್‍ರಂಗನಾಥ್ ಸಂಗೀತ ಸಂಯೋಜನೆಯಲ್ಲಿ ಮೂರು ಹಾಡುಗಳು ಹಿಟ್ ಆಗಿವೆ. ಕೆ.ಎ.ಸುರೇಶ್ ನಿರ್ಮಾಣ ಮಾಡಿರುವ ಸಿನಿಮಾವು ಸದ್ಯದಲ್ಲೆ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ
-11/11/17
ಕನ್ನಡ ಮಾದ್ಯಮ ಚಿತ್ರಕ್ಕೆ ಗಣ್ಯರಿಂದ ಹೊಗಳಿಕೆಗಳು
‘ರಾಜು ಕನ್ನಡ ಮೀಡಿಯಂ’ ಬಿಡುಗಡೆಗೆ ಸನಿಹದಲ್ಲಿರುವುದರಿಂದ ಪ್ರಚಾರದ ಸಲುವಾಗಿ ಗಣ್ಯರಿಗೆ ಟ್ರೈಲರ್ ತೋರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನಾಯಕ ಗುರುನಂದನ್ ಚಿತ್ರಕ್ಕೆ ಶ್ರಮವಹಿಸಿ ಅಭಿನಯಿಸಿದ್ದಾರೆ. ಅಶೋಕ್‍ರವರು ಎರಡನೆ ಮದುವೆ, ಶ್ರಾವಣ ಸುಬ್ರಮಣ ಚಿತ್ರದ ಕಾರ್ಯಕ್ರಮಕ್ಕೆ ಬಂದಿದ್ದರಿಂದ ಯಶಸ್ಸು ಕಂಡಿತ್ತು. ಅವರದು ಒಂಥರ ಅದೃಷ್ಟದ ಕೈ ಎನ್ನಬಹುದು. ತಂಡಕ್ಕೆ ಹರಸಲು ಎಲ್ಲರು ಬಂದಿರುವುದಕ್ಕೆ ಥ್ಯಾಂಕ್ಸ್ ಎಂದರು ನಿರ್ಮಾಪಕ ಕೆ.ಎ.ಸುರೇಶ್. ಪ್ರಸಕ್ತ ಕನ್ನಡ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲುಪುತ್ತಿವೆ. ಗುರುನಂದನ್, ಆಶಿಕಾ ಜೋಡಿ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ನಾಯಕಿ ಅಮ್ಮ ಇರುವಾಗ ಗುರೂಗೆ ಕಷ್ಟ ಆಗಿರಬಹುದು ಎಂದು ನಗಿಸಿದರು ಅಂಬರೀಷ್. ಶಾಲಾ ವಿದ್ಯಾರ್ಥಿಯಾಗಿ ಕಾಣ ಸಕೊಂಡಿದ್ದೇನೆ. ಮಾಧ್ಯಮದ ಸಹಕಾರ ಬೇಕೆಂದು ಕೋರಿಕೊಂಡರು ನಾಯಕಿ ಆಶಿಕಾ. ಬಿಗ್‍ಬಾಸ್ ಮನೆಯಿಂದ ಹೂರಬಂದ ನಂತರ ಅವಕಾಶ ಸಿಕ್ಕಿದೆ. 90 ದಿನಗಳ ಕಾಲ ಮನೆಯಲ್ಲಿ ಇರೋದು ಮರೆಯಲಿಕ್ಕೆ ಸಾಧ್ಯವಿಲ್ಲ ಅಂತಾರೆ ಕಿರಿಕ್‍ಕೀರ್ತಿ. ಅಂಬರೀಷ್ ಅವರು ಪೊಲಟಿಕಲ್ ಸೂಪರ್ ಸ್ಟಾರ್, ಆರ್.ಅಶೋಕ್ ಅಲ್ಟಿಮೇಟ್ ಸ್ಟಾರ್ ಎಂದು ಬಣ ್ಣಸಿದರು ಬಿಗ್‍ಬಾಸ್-4 ವಿಜೇತ ಪ್ರಥಮ್.

ಹಾಡುಗಳಲ್ಲಿ ತೋರಿಸುವ ಸುಂದರ ತಾಣಗಳನ್ನು ನೋಡಿಲ್ಲ. ಮುಂಗಾರುಮಳೆಗಿಂತ ಕ್ಯಾಮಾರ ಕೆಲಸ ಚೆನ್ನಾಗಿದೆ. ಪಂಚಿಂಗ್ ಡೈಲಾಗ್ ಚಿತ್ರದ ಮತ್ತೋಂದು ಪ್ಲಸ್ ಪಾಯಿಂಟ್ ಎಂಬ ಮಾತು ಮಾಜಿ ಸಚಿವ ಅಶೋಕ್ ಅವರದಾಗಿತ್ತು. ಫೇಸ್ ಈಸ್ ಇಂಡೆಕ್ಸ್ ಆಫ್ ಮೈಂಡ್ ಎಂದು ಇಂಗ್ಲೀಷಿನಲ್ಲಿ ಹೇಳುವಂತೆ ತುಣುಕುಗಳು ನೋಡಿದಾಗ ಸಿನಿಮಾ ಜನರಿಗೆ ತಲುಪುವ ಸೂಚನೆಗಳು ಕಂಡು ಬರುತ್ತವೆ ಎನ್ನುತ್ತಾರೆ ಮಾಜಿ ಶಾಸಕ ನ.ಲಾ.ನರೇಂದ್ರಬಾಬು. ಗುರುನಂದನ್, ಛಾಯಗ್ರಾಹಕ ಶೇಖರ್‍ಚಂದ್ರು, ಸಂಗೀತ ನಿರ್ದೇಶಕ ಕಿರಣ್‍ರವೀಂದ್ರನಾಥ್ ಚುಟುಕು ಮಾತಿಗೆ ಮೀಸಲಿಟ್ಟರು. ಚಿತ್ರವನ್ನು ಪ್ರಾಮಾಣ ಕತೆಯಿಂದ ಮಾಡಿದ್ದೇವೆ. ಜನರು, ಮಾದ್ಯಮದವರು ಪ್ರೋತ್ಸಾಹ ನೀಡಬೇಕು ಅಂತ ನಿರ್ದೇಶಕ ನರೇಶ್‍ಕುಮಾರ್ ಹೇಳುವಲ್ಲಿಗೆ ಸಮಾರಂಭಕ್ಕೆ ಮಂಗಳ ಹಾಡಲಾಯಿತು. ಇದಕ್ಕೂ ಮುನ್ನ ಕೊಡೆಯಂದರ ಅಡಿಯಲ್ಲಿ, ಸೀದಾಸಾದ ಹಾಡುಗಳು ಮತ್ತು ಟ್ರೈಲರ್‍ನ್ನು ತೋರಿಸಲಾಯಿತು.
-19/10/17ಕನ್ನಡ ಮಾದ್ಯಮ ಹುಡುಗನ ಬವಣೆ, ಸಾಧನೆಗಳು
ವರ್ತಮಾನದಲ್ಲಿ ಕನ್ನಡ ಮಾದ್ಯಮ ವ್ಯಾಸಾಂಗ ಮಾಡಿದವರಿಗೆ ಭವಿಷ್ಯ ಇಲ್ಲ ಅಂತಾರೆ. ಆದರೆ ‘ರಾಜು ಕನ್ನಡ ಮೀಡಿಯಂ’ ಎನ್ನುವ ಸಿನಿಮಾದಲ್ಲಿ ನಾಯಕ ಕನ್ನಡದಲ್ಲಿ ವ್ಯಾಸಾಂಗ ಮಾಡಿದ್ದರೂ ಇಂಜಿನಿಯರಿಂಗ್ ಮುಗಿಸಿ ವಿದೇಶದಲ್ಲಿ ಒಳ್ಳೆ ಕೆಲಸವನ್ನು ಪಡೆಯುವ ಕತೆಯಾಗಿದೆ. ಫಸ್ಟ್ ರ್ಯಾಂಕ್ ನಿರ್ದೇಶಕ ನರೇಶ್‍ಕುಮಾರ್, ನಾಯಕ ಗುರುನಂದನ್ ಜುಗಲ್‍ಬಂದಿಯಲ್ಲಿ ಸಿದ್ದಗೊಂಡಿದೆ. ನಿರ್ದೇಶಕರು ಹೇಳುವಂತೆ ಹಳ್ಳಿಯಲ್ಲಿ ಕನ್ನಡ ಮಾದ್ಯಮ ಓದಿದ ಹುಡುಗ ಪಟ್ಟಣಕ್ಕೆ ಬಂದಾಗ ಅನುಭವ ಬವಣೆಗಳನ್ನು ತತ್ವಶಾಸ್ತ್ರದ ಮಾದರಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನಾಯಕ ಜೀವನವನ್ನು ಯಾವ ರೀತಿ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುವ ಪಾತ್ರ ಶಕ್ತಿಶಾಲಿಯಾಗಿರುವುದರಿಂದ ಅದಕ್ಕೆ ಸೂಕ್ತ ಸುದೀಪ್ ಹೊಂದಿಕೊಳ್ಳುತ್ತಾರೆ. ಕತೆ ಹೇಳಿದಾಗ ಹಸಿರು ನಿಶಾನೆ ನೀಡಿ ನಟಿಸಿರುವುದು ಚಿತ್ರಕ್ಕೆ ಆನೆಬಲ ಬಂದಂತೆ ಆಗಿದೆ. ಅವರು ಸನ್ನಿವೇಶಕ್ಕೆ ಪೂರಕವಾಗಿ ಆಗಾಗ್ಗೆ ಬಂದು ಹೋಗುತ್ತಾರೆ. ಒಂದು ರೀತಿಯಲ್ಲಿ ನಾಯಕ ಅಂತಲೂ ಹೇಳಬಹುದು. ಚಂದನ್‍ಶೆಟ್ಟಿ ಬರೆದು,ಹಾಡಿ ಕುಣ ದಿರುವುದಾಗಿ ಮಾಹಿತಿ ನೀಡುತ್ತಾರೆ.

ಸಿಲಿಕಾನ್ ಸಿಟಿ ಹೇಗಿದೆ ಎಂದು ಹೇಳುವ ಗೀತೆಯಲ್ಲಿ ಬಿಗ್‍ಬಾಸ್ ವಿಜೇತ ಪ್ರಥಮ್, ನಿರ್ದೇಶಕರುಗಳಾದ ಇಂದ್ರಜಿತ್‍ಲಂಕೇಶ್, ಓಂಪ್ರಕಾಶ್‍ರಾವ್ ಇವರೊಂದಿಗೆ ಕಿರಿಕ್‍ಕೀರ್ತಿ, ರೇಡಿಯೋ ಜಾಕಿ ರ್ಯಾಪಿಡ್‍ಲಕ್ಷೀ, ವಾಹಿನಿಯ ಸುಗಣ ಕಾಣ ಸಿಕೊಂಡಿದ್ದಾರೆ. ಚಿಕ್ಕಮಗಳೂರು, ಮಡಕೇರಿ, ಸಕಲೇಶಪುರ, ಸುಶೀಲ ಹಾಗೂ ಹೊಸಹಳ್ಳಿ ಬೆಟ್ಟ, ಬೆಂಗಳೂರು ಮತ್ತು ಯನೈಟೆಡ್ ದೇಶದ ದ್ವೀಪಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಳ್ಳಿಯಲ್ಲಿ ಬರುವ ಆಶಿಕಾರಂಗನಾಥ್, ಮಾಡರ್ನ್ ಹುಡುಗಿಯಾಗಿ ಆವಂತಿಕಶೆಟ್ಟಿ, ವಿದೇಶದಲ್ಲಿ ಕಾಣ ಸಿಕೊಳ್ಳುವ ಅಂಜಲಿನ ಮೂವರು ನಾಯಕಿಯರು. ಶೀರ್ಷಿಕೆ ಆಕರ್ಷಣೆಯಾಗಿರುವುದರಿಂದ ಕೆನಡದ ಕನ್ನಡಿಗರು ಹಾಗೂ ವಿದೇಶದಲ್ಲಿರುವವರು ನಾವು ಸಿನಿಮಾ ಬಿಡುಗಡೆ ಮಾಡುತ್ತವೆಂದು ಮುಂದೆ ಬಂದಿರುವುದರಿಂದ ನಿರ್ಮಾಪಕ ಕೆ.ಎ.ಸುರೇಶ್ ಮೊದಲು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದರ ಜೊತೆಗೆ ಒಳ್ಳೆ ಬೆಲೆ ಬಂದಲ್ಲಿ ಅಲ್ಲಿಯೂ ಪ್ರದರ್ಶಿಸಲು ಚಿಂತನೆ ನಡೆಸಿದ್ದಾರೆ. ಹೃದಯಶಿವ, ಜಯಂತ್ ಕಾಯ್ಕಣ ರಚಿಸಿರುವ ಆರು ಗೀತೆಗಳಿಗೆ ಕಿರಣ್‍ರಂಗನಾಥ್ ಸಂಗೀತ ಸಂಯೋಜಿಸಿದ್ದಾರೆ. ಆನಂದ್ ಆಡಿಯೋ ಕಂಪೆನಿ ಹಾಡುಗಳನ್ನು ಹೊರತಂದಿದೆ. ಸದ್ಯ ಸೆನ್ಸಾರ್ ಅಂಗಳದಲ್ಲಿದ್ದು, ಕನ್ನಡ ರಾಜೋತ್ಸವ ದಿನದ ಒಳಗೆ ಬಿಡುಗಡೆ ಮಾಡಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.
-10/10/17
ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ `ರಾಜು' ಫಸ್ಟ್ ಲುಕ್ & ಟೀಸರ್
ರಾಜು ಕನ್ನಡ ಮೀಡಿಯಂ ಚಿತ್ರ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರೋದು ಕಿಚ್ಚಾ ಸುದೀಪ್ ಅವರ ಎಂಟ್ರಿಯ ಕಾರಣದಿಂದ. ಸುದೀಪ್ ಈ ಚಿತ್ರದಲ್ಲಿ ಪಕ್ಕಾ ಸ್ಟೈಲಿಶ್ ಆಗಿ ಕಾಣ ಸಿಕೊಂಡಿದ್ದಾರೆಂಬ ವಿಚಾರ ಚಿತ್ರ ತಂಡ ಬಿಟ್ಟಿದ್ದ ಒಂದೆರಡು ಫೋಟೋಗಳಿಂದ ಜಾಹೀರಾಗಿತ್ತು.
ಇದೀಗ ಸುದೀಪ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಬಹುಶಃ ಕಿಚ್ಚಾ ಸುದೀಪ್ ಹಿಂದೆಂದಿಗಿಂತಲೂ ಹೆಚ್ಚು ಆಕರ್ಶಕವಾಗಿ ಈ ಪೋಸ್ಟರುಗಳ ಮೂಲಕ ಹೊರ ಹೊಮ್ಮಿದ್ದಾರೆ. ರಾಜು ಕನ್ನಡ ಮೀಡಿಯಂ ಚಿತ್ರದ ಕಿಚ್ಚನ ಲುಕ್ಕಿಗೆ ಅವರ ಇಡೀ ಅಭಿಮಾನಿ ಬಳಗ ಫಿದಾ ಆಗೋದಂತೂ ಗ್ಯಾರೆಂಟಿ.

ನಾಡಿದ್ದು ಕಿಚ್ಚಾ ಸುದೀಪ್ ಅವರ ಬರ್ತಡೇ ಇದೆ. ನಾಳೆಯೇ ರಾಜು ಕನ್ನಡ ಮೀಡಿಯಂ ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಲಿದೆ.
ಸುರೇಶ್ ಆಟ್ರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಕೆ.ಎ. ಸುರೇಶ್ ನಿರ್ಮಿಸುತ್ತಿದ್ದಾರೆ. ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ನರೇಶ್ ಕುಮಾರ್ ರಚನೆ ಮತ್ತು ನಿರ್ದೇಶನ, ಶೇಖರ್ ಚಂದ್ರ ಅವರ ಛಾಯಾಗ್ರಹಣ ಮತ್ತು ಕಿರಣ್ ರವೀಂದ್ರನಾಥ್ ಅವರ ಸಂಗೀತ ಈ ಚಿತ್ರಕ್ಕಿದೆ.
-Cine Circle News
-1/09/17

ರಾಜು ಕನ್ನಡ ಮೀಡಿಯಂ ಸಂಧಾನ ಯಶಸ್ವಿ
`ರಾಜು ಕನ್ನಡ ಮೀಡಿಯಂ' ಚಿತ್ರದ ವಿವಾದ ಸುಖಾಂತ್ಯ ಕಂಡಿದೆ. ನಟಿ ಅವಂತಿಕಾ ಶೆಟ್ಟಿ ಚಿತ್ರದಲ್ಲಿ ಮುಂದುವರೆಯುವುದು ಖಚಿತವಾಗಿದೆ. ಆದರೆ, ನಾಯಕಿ ಪಾತ್ರದ ಡಬ್ಬಿಂಗ್ ಸ್ವತಂತ್ರವನ್ನು ನಿರ್ದೇಶಕರಿಗೆ ನೀಡಲಾಗಿದೆ. ವಾಣ ಜ್ಯ ಮಂಡಳಿ ಅ`À್ಯಕ್ಷ ಸಾ.ರಾ. ಗೋವಿಂದು ನೇತೃತ್ವದಲ್ಲಿ ಗುರುವಾರ ರಾಜಿ ಸಂ`Áನ ಸ`É ನಡೆಯಿತು. ವಾಣ ಜ್ಯ ಮಂಡಳಿ ಪದಾಧಿಕಾರಿಗಳ ಜತೆಗೆ ಚಿತ್ರದ ನಿರ್ಮಾಪಕ ಸುರೇಶ್, ನಿರ್ದೇಶಕ ನರೇಶ್, ನಾಯಕ ನಟ ಗುರುನಂದನ್ ಹಾಗೂ ನಟಿ ಅವಂತಿಕಾ ಶೆಟ್ಟಿ `Áಗವಹಿಸಿದ್ದರು. ಸತತ ಮೂರು ಗಂಟೆಗಳ ಕಾಲ ಸ`Éಯ ಇಬ್ಬರ ವಾದ, ವಿವಾದ ಆಲಿಸಲಾಯಿತು. ಪರಸ್ಪರ ಸಂಪರ್ಕದ ಕೊರತೆ ಮತ್ತು ಬೇಜಬ್ದಾರಿಯಿಂದಲೇ ವಿವಾದ ಈ ಹಂತಕ್ಕೆ ಬರುವಂತಾಗಿದೆ. ಪರಸ್ಪರ ಕೆಸರೆರಚಾಟ ನಡೆದಿದೆ ಎನ್ನುವ ಖಾರವಾದ ಮಾತುಗಳ ಮೂಲಕ ಅ`À್ಯಕ್ಷ ಸಾ.ರಾ.ಗೋವಿಂದು ಚಿತ್ರತಂಡಕ್ಕೆ ತರಾಟೆಗೆ ತೆಗೆದುಕೊಂಡರು.

ಅಷ್ಟೇ ಅಲ್ಲ, ಮುಂಬೈನಲ್ಲಿ ಕುಳಿತು ತಮಗೆ ತೋಚಿದಂತೆ ಹೇಳಿಕೆ ನೀಡಿದ ನಟಿ ಅವಂತಿಕಾ ಶೆಟ್ಟಿ ಅವರ `Éೂೀರಣೆ ಸರಿಯಾದದ್ದಲ್ಲ. ನಟಿಯಾಗಿ ಇನ್ನೂ ಸಾಕಷ್ಟು ಬೆಳೆಯಬೇಕಿದೆ. ಈ ಹಂತದಲ್ಲಿ ಗೊಂದಲ, ವಿವಾದ ಸೃಷ್ಟಿಸಿಕೊಂಡು `Àವಿಷ್ಯಕ್ಕೆ `Àಕ್ಕೆ ತಂದುಕೊಳ್ಳುವುದು ಸರಿಯಲ್ಲ ಎಂದು ಬುದ್ಧಿ ಮಾತು ಹೇಳಿದರೆನ್ನಲಾಗಿದೆ. ಎರಡು ಕಡೆಯವರು ತಮ್ಮ ತಮ್ಮ ಹಠಮಾರಿತನಗಳನ್ನು ಬದಿಗಿಟ್ಟು, ಚಿತ್ರ ಮುಂದುವರೆಸಿ ಎಂದು ತಿಳಿ ಹೇಳಿದ ನಂತರ ಸ`É ಮುಕ್ತಾಯಗೊಂಡಿತ್ತು. ಸ`É ಮುಗಿದ ನಂತರ ವಾಣ ಜ್ಯ ಮಂಡಳಿ ಅ`À್ಯಕ್ಷ ಸಾ.ರಾ. ಗೋವಿಂದು ಉಪಸಿತ್ಥಿಯಲ್ಲಿ ನಟಿ ಅವಂತಿಕಾ ಶೆಟ್ಟಿ ಹಾಗೂ ನಿರ್ಮಾಪಕ ಸುರೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾ.ರಾ. ಗೋವಿಂದು ಸ`Éಯ ತೀರ್ಮಾನ ಪ್ರಕಟಿಸಿದರು. `ಸಂ`Áನ ಸ`É Àಲಪ್ರದವಾಗಿದೆ.ಅನಗತ್ಯವಾಗಿ ಇದನ್ನು ಮುಂದುವರೆಸುವುದು ಬೇಡ. ಚಿತ್ರದಲ್ಲಿ ನಟಿ ಅವಂತಿಕಾ ಶೆಟ್ಟಿ ಮುಂದುವರೆಯುತ್ತಾರೆ. ಉಳಿದ `Áಗದ ಚಿತ್ರೀಕರಣ ಮುಗಿಸಿಕೊಡಲು ಒಪ್ಪಿಕೊಂಡಿದ್ದಾರೆ. ಡಬ್ಬಿಂಗ್ ವಿಚಾರ ಮಾತ್ರ ನಿರ್ದೇಶಕರಿಗೆ ಬಿಟ್ಟಿದ್ದು. ಅವರಿಗೆ ಅಗತ್ಯ ಎನಿಸಿದರೆ, ಅವಂತಿಕಾ ಶೆಟ್ಟಿ ಅವರ `À್ವನಿ ಪಡೆಯಬಹುದು. ಬೇಡವೆನಿಸಿದರೆ ಬೇರೆಯವರ `À್ವನಿ ನೆರವು ಪಡೆಯುವ ಹಕ್ಕು ಅವರಿಗಿದೆ. ಇದಕ್ಕೆ ಅವಂತಿಕಾ ಶೆಟ್ಟಿ ಕೂಡ ಒಪ್ಪಿಕೊಂಡಿದ್ದಾರೆ' ಎಂದರು.

ನಿರ್ಮಾಪಕ ಕೆ.ಎ. ಸುರೇಶ್ ಮಾತನಾಡಿ, ಅವಂತಿಕಾ ಶೆಟ್ಟಿ ಹೇಳಿಕೆಯಿಂದ ಸಾಕಷ್ಟು ನೋವಾಗಿದೆ. ಲೈಂಗಿಕ ಕಿರುಕುಳ ಅಂತಲೇ ತಮ್ಮ ಮೇಲೆ ಆರೋಪ ಮಾಡಲಾಯಿತು. ಇವತ್ತು ಅವರು ತಾವು ಹಾಗೆ ಹೇಳಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈಗಾಲಾದರೂ ಕೆಲವರು ಅನಗತ್ಯ ವಿವಾದ ಸೃಷ್ಟಿಸುವುದನ್ನು ನಿಲ್ಲಿಸಬೇಕು. ಇನ್ನು ಸೆಟ್‍ನಲ್ಲಿ ತಮಗೆ ಮಾನಸಿಕ ಕಿರುಕುಳ ಆಗಿದೆ ಎಂದು ಅವಂತಿಕಾ ಶೆಟ್ಟಿ ನೀಡಿದ್ದ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಸಾಕಷ್ಟು ಸಿನಿಮಾ ಮಾಡಿz್ದÉೀನೆ. ಅಂತಹ ಯಾವುದೇ ಕೆಟ್ಟ ಆರೋಪ ನನ್ನ ಮೇಲೆ ಬಂದಿಲ್ಲ. ಇವೆಲ್ಲವೂ ಸಂಪರ್ಕದ ಕೊರತೆಯಿಂದ ಆಗಿದ್ದು ಅಂಥ ಸ`Éಯಲ್ಲಿ ಹೇಳಿದ್ದಾರೆ. ಸ`É ತೀರ್ಮಾನ ತೃಪ್ತಿ ತಂದಿದೆ. ಚಿತ್ರ ರಸಿಕರಿಗೆ ಒಳ್ಳೆಯ ಸಿನಿಮಾ ಕೊಡುವುದಷ್ಟೇ ನನ್ನ ಮುಂದಿದೆ' ಎಂದರು.

` ಸಮಸ್ಯೆಗಳನ್ನು ಹೀಗೂ ಬಗೆಹರಿಸಿಕೊಳ್ಳಬಹುದೆನ್ನುವುದು ನನಗೆ ಗೊತ್ತಿರಲಿಲ್ಲ. ಈ ಕಾರಣಕ್ಕಾಗಿ ನಾನು ಕೋರ್ಟ್‍ಗೆ ಹೋಗಬೇಕಾಗಿ ಬಂದಿತ್ತು. ಅದಕ್ಕಿಂತ ಮುಖ್ಯವಾಗಿ ಸಣ್ಣ ವಿಚಾರಗಳನ್ನು ದೊಡ್ಡದಾಗಿ ಮಾಡಿಕೊಳ್ಳುವುದಕ್ಕೂ ನನಗೆ ಇಷ್ಟವಿರಲಿಲ್ಲ. ನನ್ನ ವಿರುದ್ಧ ಇಲ್ಲಿ ಸುದ್ದಿಗಳು ಬಂದ ನಂತ್ರ ಸ್ಪಷ್ಟನೆ ಕೊಡಬೇಕಾಗಿ ಬಂತು. ಈಗ ಎಲ್ಲವೂ ಇತ್ಯರ್ಥವಾಗಿದೆ. ಸಾಕಷ್ಟು ಕಾಲ ಎಲ್ಲವೂ ಚರ್ಚೆ ಆಗಿವೆ. ಚಿತ್ರಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸ`É ತೀರ್ಮಾನಕ್ಕೆ ಬದ್ಧಳಾಗಿz್ದÉೀನೆ' ಎಂದರು ನಟಿ ಅವಂತಿಕಾ ಶೆಟ್ಟಿ.

ನಿರ್ಮಾಪಕ ಸುರೇಶ್ ಅವರಿಂದ ಲೈಂಗಿಕ ಕಿರುಕುಳ ಆಗಿದೆ ಅಂಥ ನಾನೆಲ್ಲೂ ಹೇಳಿಲ್ಲ. Éೀಸ್‍ಬುಕ್ ಅಕೌಂಟ್‍ನಲ್ಲಿ ಹಾಕಿದ್ದ ಸ್ಟೇಟಸ್‍ನಲ್ಲೂ ಆ ಪದ ಬಳಕೆ ಆಗಿಲ್ಲ. ಕೆಲವು ಕಡೆ ಅದು ಸುದ್ದಿ ಆಗಿದ್ದು ಹೇಗೋ ನನಗೆ ಗೊತ್ತಿಲ್ಲ ಎಂದ ನಟಿ ಅವಂತಿಕಾ ಶೆಟ್ಟಿ, ಚಿತ್ರೀಕರಣದ ವೇಳೆ ತಮಗೆ ಚಿತ್ರ ತಂಡದಿಂದ ಮಾನಸಿಕ ಕಿರುಕುಳ ಆಗಿದ್ದು ನಿಜ ಅಂಥ ಮತ್ತೊಮ್ಮೆ ಹೇಳಿದರು. ಡಬ್ಬಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‍ನಲ್ಲಿರುವ ಪ್ರಕರಣವನ್ನು ವಾಪಸ್ ಪಡೆಯುವುದಾಗಿ ಹೇಳಿದರು.

ಚಿತ್ರೀಕರಣದ ವೇಳೆ ನಡೆಯಿತ್ತೆನ್ನಲಾದ ಕಿರುಕುಳದ ಪರಸ್ಪರ ಆರೋಪದೊಂದಿಗೆ `ರಾಜು ಕನ್ನಡ ಮೀಡಿಯಂ 'ಚಿತ್ರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಸೆಟ್‍ನಲ್ಲಿ ತಮಗೆ ತೀವ್ರ ತರಹದ ಕಿರುಕುಳ ಆಗಿದೆ ಅಂಥ ನಟಿ ಅವಂತಿಕಾ ಶೆಟ್ಟಿ ಮಾ`À್ಯಮದ ಮೂಲಕ ಹೇಳಿಕೆ ನೀಡಿದ್ದರು. ನಿರ್ಮಾಪಕ ಸುರೇಶ್ ಅವರ ವಾದ ಇದಕ್ಕೆ ಭಿನ್ನವಾಗಿತ್ತು. ನಟಿ ಅವಂತಿಕಾ ಶೆಟ್ಟಿ ಅವರಿಂದಲೇ ಚಿತ್ರತಂಡಕ್ಕೆ ಕಿರುಕುಳ ಅಂಥ ವಾಣ ಜ್ಯ ಮಂಡಳಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಗುರುವಾರ ಸಂ`Áನ ಸ`É ನಡೆಯಿತು. ಸ`Éಯಲ್ಲಿ ವಾಣ ಜ್ಯ ಮಂಡಳಿ ಪದಾಧಿಕಾರಿಗಳಾದ ಎನ್. ಎಂ. ಸುರೇಶ್, ಉಮೇಶ್ ಬಣಕಾರ್, ರಾಮಮೂರ್ತಿ, ಸೂರಪ್ಪ ಬಾಬು ಹಾಗೂ ನಟಿ ಅವಂತಿಕಾ ಶೆಟ್ಟಿ ಚಿಕ್ಕಪ್ಪ ಜಗದೀಶ್ ಹಾಜರಿದ್ದರು.
-16/06/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore