HOME
CINEMA NEWS
GALLERY
TV NEWS
REVIEWS
CONTACT US
ಸಿನಿಮಾ ನೋಡಿ ರಾಜರಥ ಬೈಕ್ ನಿಮ್ಮದಾಗಿಸಿಕೊಳ್ಳಿ
‘ರಾಜರಥ’ ಚಿತ್ರಕ್ಕೆ ಎರಡು ವರ್ಷ ಶ್ರಮಪಟ್ಟಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎನ್ನುತ್ತಾರೆ ನಿರ್ದೇಶಕ ಅನೂಪ್‍ಭಂಡಾರಿ. ಸಂತೋಷಕೂಟದಲ್ಲ ಮಾತನಾಡಿದ ಅನೂಪ್ ಪ್ರಾರಂಭದಲ್ಲಿ ರಂಗಿತರಂಗ ಚಿತ್ರಕ್ಕಿಂತ ಅದ್ಬುತ ಪ್ರಶಂಸೆ ಸಿಕ್ಕಿದೆ. ಹಿಂದಿನ ಚಿತ್ರವನ್ನು ಗಮನದಲ್ಲಿಟುಕೊಂಡು ಬರುವುದು ಬೇಡ. ಕೆಲವರು ರಂಗಿತರಂಗ ಲೆವಲ್‍ಗೆ ಇಲ್ಲ ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ಬಳಸಲಾದ ಹೊಂಡ ವಾಹನವನ್ನು ಹರಾಜು ಮೂಲಕ ವಿಲೇವಾರಿ ಮಾಡಲು ಚಿಂತನೆ ನಡೆಸಲಾಗಿತ್ತು. ನಂತರ ಲಕ್ಕಿ ಡ್ರಾ ಮೂಲಕ ಉಡುಗೊರೆಯಾಗಿ ನೀಡಲು ತೀರ್ಮಾನಿಸಲಾಗಿದೆ ಎಂದರು.

ಚಿತ್ರೀಕರಣ ಸಂದರ್ಭದಲ್ಲಿ ಎಲ್ಲಿಯೋ ರಾಜಿ ಮಾಡಿಕೊಂಡಿಲ್ಲ. ಪ್ರೇಕ್ಷಕರು ರಿಲಾಕ್ಸ್ ಮೂಡ್‍ನಿಂದ ಚಿತ್ರಮಂದಿರಕ್ಕೆ ಬರಬೇಕು. ಅಮೇರಿಕಾದಲ್ಲಿ 215 ಪರದೆಗಳು, ಕರ್ನಾಟಕದಲ್ಲಿ 170 ಕೇಂದ್ರಗಳು, ಆಂದ್ರದಲ್ಲಿ 120 ಸೆಂಟರ್‍ಗಳಲ್ಲಿ ರಾಜರಥ, ರಾಜರಥಂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಮುಂದಿನವಾರದಿಂದ ಯುರೋಪ್, ಯುಕೆದಲ್ಲಿ ಬಿಡುಗಡೆಯಾಗಲಿದ್ದು, ಅಲ್ಲಿಗೆ ಅನೂಪ್,ನಿರೂಪ್ ಭೇಟಿ ನೀಡಲಿದ್ದಾರೆ. ಎರಡು ಭಾಷೆ ಸೇರಿಕೊಂಡು ವಿದೇಶದಲ್ಲಿ ಒಂದು ಲಕ್ಷ ಡಾಲರ್ ಸಂಗ್ರಹವಾಗಿದೆ ಎಂಬುದರ ಮಾಹಿತಿ ನೀಡಿದರು ನಿರ್ಮಾಪಕರಲ್ಲಿ ಒಬ್ಬರಾದ ಶಾಸ್ತ್ರೀ.

ಸಮಾಜಕ್ಕೆ ಒಳ್ಳೆ ಸಂದೇಶ ನೀಡಲಾಗಿದೆ. ಸಿನಿಮಾದ ನಿರೂಪಣೆ ಶೈಲಿ ಮತ್ತು ತಾಂತ್ರಿಕತೆಯನ್ನು ಜನರು ಗುರುತಿಸಿದ್ದಾರೆ. ಅವರಗಳಿಗೆ ಥ್ಯಾಂಕ್ಸ್ ಅಂತಾರೆ ನಾಯಕ ನಿರೂಪ್ ಭಂಡಾರಿ. ಕರ್ನಾಟಕ ಭಾಗದಲ್ಲಿ ಉತ್ತಮ ಗಳಿಕೆ ಬರುತ್ತಿದೆ. ಸ್ಥಳೀಯ ಚಿತ್ರಮಂದಿರಗಳಲ್ಲಿ ಗಳಿಗೆ ಎಷ್ಟು ಎಂಬುದು ವಿತರಕರಿಂದ ತಿಳಿಯಬೇಕಾಗಿದೆ. ಹೋಟೆಲ್‍ನಂತೆ ನಮ್ಮದೇನಿದ್ದರೂ ಅಡುಗೆ ಮಾಡುವುದು, ಕ್ಯಾಸ್ ಬಾಕ್ಸ್‍ನಲ್ಲಿ ಎಷ್ಟು ಬಂದಿದೆ ಎಂದು ಬೇರೆಯವರು ಹೇಳಿದರೆ ತಿಳಿಯತ್ತದೆಂದು ಹೇಳಿದರು ಸುಧಾಕರ್‍ಭಂಡಾರಿ. ನಾಯಕಿ ಆವಂತಿಕಾಶೆಟ್ಟಿ ಪೋಸ್ಟರ್‍ನಲ್ಲಿ ಕಾಣ ಸಿಕೊಂಡರು.

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-28/03/18


ಹೋರಾಟದ ನಡುವೆ ನವಿರಾದ ಪ್ರೀತಿಯ ಬೆಸುಗೆ
ಒಂದು ಲಕ್ಸುರಿ ಬಸ್. ಒಂದು ಸ್ಥಳದಿಂದ ಹೊರಟು ಬೆಂಗಳೂರು, ಚೆನ್ನೈ ಮುಖಾಂತರ ಪ್ರಯಾಣ ಮಾಡುತ್ತದೆ. ಇದರಲ್ಲಿ ಸಂಕೀರ್ಣ ಪ್ರಯಾಣಿಕರು ಇರಲಿದ್ದು, ಒಬ್ಬೊಬ್ಬರದು ಒಂದೊಂದು ಕತೆ. ಇದರ ಮದ್ಯೆ ಕರ್ನಾಟಕ-ತಮಿಳುನಾಡು ಜನರು ಪೆರಿಯಪೆಲ್ಲಿ ಜಾಗ ನಮ್ಮದು ಎಂದು ಹೋರಾಟ ಮಾಡುವುದು. ಇವಿಷ್ಟನ್ನು ‘’ರಾಜರಥ’’ ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಇಷ್ಟನ್ನ್ಕು ಹೇಳಿದರೆ ಸಿನಿಮಾ ಮುಗಿಯುವುದಿಲ್ಲ. ಪ್ರತಿ ಪ್ರಯಾಣಿಕರ ವೈಯಕ್ತಿಕ ವಿವರ, ಯಾವ ಕಾರಣಕ್ಕೆ ಹೋಗುತ್ತಿದ್ದಾರೆಂದು ಸಣ್ಣದಾಗಿ ಪರಿಚಯಿಸುದು ಶೀರ್ಷಿಕೆ ಹೆಸರಿನ ಹಿನ್ನಲೆಯಲ್ಲಿ ಹೇಳುತ್ತಾರೆ ಪುನೀತ್‍ರಾಜ್‍ಕುಮಾರ್. ಇದರ ಮಧ್ಯೆ ರಾಜಕೀಯ ಅವಾಂತರ, ಮುಖ್ಯ ಮಂತ್ರಿಗಳು ಹಗರಣದಲ್ಲಿ ಸಿಲುಕಿಕೊಂಡಾಗ ಮಾದ್ಯಮದವರನ್ನು ಬೇರೆ ವಿಷಯಕ್ಕೆ ತೆಗೆದುಕೊಂಡು ಹೋಗುವಂತೆ ಮಾಡಲು ಪೆರಿಯಪೆಲ್ಲಿ ಜಾಗದ ಬಗ್ಗೆ ಹೇಳಿಕೆ ನೀಡುತ್ತಾರೆ. ಹೀಗೆ ಹೋರಾಟ, ಪ್ರಯಾಣ ಮತ್ತು ಪ್ರೀತಿ ಮೂರು ಅಂಶಗಳನ್ನು ಅಲ್ಲಲ್ಲಿ ತೋರಿಸುತ್ತಾ ಮುಂದೇನು ಆಗುತ್ತದೆ ಎನ್ನುವುದನ್ನು ತೆರೆಯ ಮೇಲೆ ನೋಡಿದರೆ ಚೆನ್ನಾಗಿರುತ್ತೆ.

ರಂಗಿತರಂಗ ಚಿತ್ರಕ್ಕಿಂತಲೂ ನಿರೂಪ್‍ಭಂಡಾರಿ ಲೀಲಜಾಲವಾಗಿ ಅಭಿನಯಿಸಿ ಭರವಸೆಯ ನಾಯಕನಟನೆಂದು ಸಾಬೀತು ಮಾಡುವಲ್ಲಿ ಸಪಲರಾಗಿದ್ದಾರೆ. ನಾಯಕಿ ಆವಂತಿಕಾಶೆಟ್ಟಿ ಹೆಚ್ಚಿಗೇನು ಹೇಳುವಂತಿಲ್ಲ. ತಮಿಳು ನಟ ಆರ್ಯ ರಾಜಕೀಯ ಮುಖಂಡನಾಗಿ ಗಮನ ಸೆಳೆಯುತ್ತಾರೆ. ವಿರಾಮದ ನಂತರ ಬರುವ ರವಿಶಂಕರ್ ಅಂಕಲ್ ಆಗಿ ಸ್ವಲ್ಪ ಮಟ್ಟಿಗೆ ನಗಿಸುತ್ತಾರೆ. ಕ್ಲೈಮಾಕ್ಸ್‍ನಲ್ಲಿ ವಾಹಿನಿ ವರದಿಗಾರಳಾಗಿ ಶೃತಿಹರಿಹರನ್ ಕಾಣಿಸುತ್ತಾರೆ. ಉಳಿದ ಪಾತ್ರಗಳೆಲ್ಲವು ಹಾಗೆ ಬಂದು ಹಾಗೆ ಹೋಗುತ್ತದೆ. ಐದು ನಿಮಿಷಕ್ಕೊಮ್ಮೆ ಪುನೀತ್ ಕಂಠವು ನೋಡುಗರ ಕಿವಿಗೆ ಇÀಂಪು ನೀಡುತ್ತದೆ. ನಿರ್ದೇಶಕ ಅನೂಪ್‍ಭಂಡಾರಿ ಶ್ರಮವಹಿಸಿ ಚಿತ್ರಕತೆಯನ್ನು ಜಾಗರೂಕತೆಯಿಂದ ಬರೆದು ಅದಕ್ಕೆ ತಕ್ಕಂತೆ ಸನ್ನಿವೇಶಗಳನು ಸೃಷ್ಟಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇವರದೆ ಬತ್ತಳಿಕೆಯಲ್ಲಿ ಮೂಡಿಬಂದರುವ ಹಾಡುಗಳಲ್ಲಿ ಎರಡು ಗೀತೆಗಳು ಕೇಳಬಲ್. ಅನಿವಾಸಿ ಭಾರತೀಯರಾಗಿರುವ ಅಜಯ್‍ರೆಡ್ಡಿ, ಅಂಜು ವಲ್ಲಭನೇನಿ, ವಿಶುದಾಕಪ್ಪಗಾರಿ ಮತ್ತು ಸತೀಶ್‍ಶಾಸ್ತ್ರೀ ನಿರ್ಮಾಪಕರುಗಳಾಗಿ ಉತ್ತಮ ಚಿತ್ರವನ್ನು ಜನರಿಗೆ ನೀಡಿದ್ದಾರೆ. ವಿತರಕ ಕಾರ್ತಿಕ್‍ಗೌಡ ಬಿಡುಗಡೆ ಜವಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ.

ಸಿನಿ ಸರ್ಕಲ್.ಇನ್ ನ್ಯೂಸ್
23/03/18ರಾಜರಥ ಬಸ್ ಸಂಚಾರ ಶುರು
ರಂಗಿತರಂಗ ತಂಡದಿಂದ ಸಿದ್ದಗೊಂಡಿರುವ ‘ರಾಜ ರಥ’ ಚಿತ್ರವು ಭಾರತಾದ್ಯಂತ ಹಾಗೂ ಮೊದಲಬಾರಿ ಎನ್ನುವಂತೆ ವಿಶ್ವದಾದ್ಯಂತ ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಾಣಿಲಿದೆ. ಕಮಲಹಾಸನ್ ನಿರ್ವಾಹಕನಾಗಿ ಮುಂದೆ ಬನ್ನಿ ಹಾಡನಲ್ಲಿ ನಟಿಸಿದ್ದು, ಶೀರ್ಷಿಕೆ ಬಸ್ ಆಗಿರುವುದರಿಂದ ಸನ್ನಿವೇಶಕ್ಕೆ ಸೂಕ್ತವೆಂದು ಅದೇ ಗೀತೆಯನ್ನು ಬಳಸಲಾಗಿದೆ. ರಾಜರಥನಾಗಿ ಪುನೀತ್‍ರಾಜ್‍ಕುಮಾರ್ ಆತ್ಮವಾಗಿ ಸಿನಿಮಾಪೂರ್ತಿ ಅವರ ಧ್ವನಿ ಬರುವುದು ವಿಶೇಷವಾಗಿದೆ. ರೋಮಾಂಟಕ್ ಕಾಮಿಡಿ ಕತೆಯಲ್ಲಿ ನಿರೂಪ್‍ಭಂಡಾರಿ- ಆವಂತಿಕಾಶೆಟ್ಟಿ ಕಾಲೇಜು ವಿದ್ಯಾರ್ಥಿಗಳಾಗಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶ್ವ ಹೆಸರಿನ ಮೂಲಕ ತಮಿಳು ನಟ ಆರ್ಯ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸುದೀಪ್ ಡ್ರೆಸ್ ಸ್ಪೂರ್ತಿಯಿಂದ ನಿರ್ದೇಶಕ ಅನೂಪ್‍ಭಂಡಾರಿ ಯೋಚಿಸಿದಂತೆ ಪತ್ನಿ ನೀತಾಶೆಟ್ಟಿ ಇವರಿಗೆ ಅದೇ ರೀತಿ ವಸ್ತ್ರವಿನ್ಯಾಸ ಸಿದ್ದಪಡಿಸಿರುವುದು ಮತ್ತೊಂದು ವಿಶೇಷವಾಗಿದೆ. ಅಂಕಲ್ ರವಿಶಂಕರ್ ಆಗಿ ಎರಡು ರೀತಿಯಲ್ಲಿ ಗೀತೆಯನ್ನು ಹಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ.

ಕನ್ನಡದಲ್ಲಿ ಪುನೀತ್, ತೆಲುಗುದಲ್ಲಿ ಬಾಹುಬಲಿ ಖ್ಯಾತಿಯ ರಾಣದಗ್ಗುಬಾಟಿ ಹಿನ್ನಲೆಯಲ್ಲಿ ಧ್ವನಿ ನೀಡಿದ್ದಾರೆ. ಏಳು ಹಾಡುಗಳಿಗೆ ಸಾಹಿತ್ಯ ರಚಿಸಿ ಸಂಗೀತ ನೀಡಿರುವ ಅನೂಪ್‍ಭಂಡಾರಿ ಗೀತೆಗಳಲ್ಲಿ ಬಾಳೆಹಣ್ಣು ಹಾಡು ಫೇಮಸ್ ಆಗಿದೆಯಂತೆ. ಛಾಯಗ್ರಹಣ ವಿಲಿಯಂಡೇವಿಡ್, ಹಿನ್ನಲೆ ಸಂಗೀತ ಬಿ.ಅಜನೀಶ್‍ಲೋಕನಾಥ್, ಸಂಕಲನ ಶಾಂತಕುಮಾರ್ ಅವರದಾಗಿದೆ. ಅನಿವಾಸಿ ಭಾರತೀಯರುಗಳಾದ ಅಜಯ್‍ರೆಡ್ಡಿ, ಅಂಜುವಲ್ಲಭನೇನಿ, ದಿಶುದಾಕಪ್ಪಗಾರಿ ಮತ್ತು ಸತೀಶ್ ಶಾಸ್ತ್ರೀ ನಿರ್ಮಾಣ ಮಾಡಿರುವ ಸಿನಿಮಾವನ್ನು ಕೆ.ಆರ್.ಜಿ. ಸ್ಟುಡಿಯೋದವರು ವಿಶ್ವದಾದ್ಯಂತ ಇದೇ 23ರಂದು ತೆರೆಗೆ ತರಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

ಸಿನಿ ಸರ್ಕಲ್.ಇನ್ ನ್ಯೂಸ್
20/03/18
ರಾಜರಥನಾಗಿ ಪುನೀತ್‍ರಾಜ್‍ಕುಮಾರ್
ರಂಗಿತರಂಗ ತಂಡದಿಂದ ಸಿದ್ದಗೊಳ್ಳುತ್ತಿರುವ ‘ರಾಜರಥ’ ಚಿತ್ರದ ವಿವರವು ಇಲ್ಲಿಯವರೆಗೂ ತಿಳಿಸದೆ ಚಿತ್ರೀಕರಣವನ್ನು ಮುಗಿಸಿದ್ದಾರೆ. ಚಿತ್ರವು ಬಿಡುಗಡೆ ಹಂತಕ್ಕೆ ಬರುತ್ತಿರುವುದರಿಂದ ಟ್ರೈಲರ್ ಅನಾವರಣ ಕಾರ್ಯಕ್ರಮವು ನಡೆಯಿತು. ಚಿತ್ರದ ತುಣುಕುಗಳನ್ನು ಬಿಡುಗಡೆ ಮಾಡಿದ ಪುನೀತ್‍ರಾಜ್‍ಕುಮಾರ್ ತಾನು ರಾಜರಥನಾಗಿ ರಾಯಲ್ ಪಾರಿಯೆಟ್ ಪಾತ್ರದಲ್ಲಿ ಧ್ವನಿಯ ಮೂಲಕ ಜೀವ ತುಂಬಲಾಗಿದೆ. ಬುದ್ದಿವಂತರ ತಂಡದಲ್ಲಿ ಕೆಲಸ ಮಾಡಿದ್ದು ಒಂಥರ ಹೊಸ ಅನುಭವ. ಯಶಸ್ಸು ಸಿಗಲಿ ಎಂದರು. ರಂಗಿತರಂಗ ಹಿಟ್ ಆಗಿದ್ದಕ್ಕೆ ಮಾದ್ಯಮ, ಜನರು ಕಾರಣರಾಗಿದ್ದಾರೆ. ರೆಡಿಮೇಡ್ ಮಿಕ್ಸ್ ತಕ್ಷಣ ಸಿದ್ದಗೊಳ್ಳುತ್ತದೆ. ನಾವುಗಳು ಎಲ್ಲವನ್ನು ತಂದು ಮಾಡಬೇಕಾಗಿರುವುದರಿಂದ ತಡವಾಗಿದೆ. ಪುನೀತ್ ಚಿತ್ರದ ಭಾಗವಾಗಿದ್ದಾರೆ ಎಂದು ನಾಯಕ ನಿರೂಪ್‍ಭಂಡಾರಿ ಹೇಳಿದರು. ಎರಡು ಭಾಷೆಯಲ್ಲಿ ನಟಿಸಿದ್ದು ಛಾಲೆಂಜಿಂಗ್ ಆಗಿತ್ತು ಎಂಬುದು ನಾಯಕಿ ಆವಂತಿಕಾಶೆಟ್ಟಿ ಮಾತು.

ನಿರ್ಮಾಪಕರಲ್ಲಿ ಒಬ್ಬರಾದ ಸತೀಶ್‍ಶಾಸ್ತ್ರೀ ನಿರ್ದೇಶಕರ ಹಿಂದಿನ ಚಿತ್ರವನ್ನು ವಿದೇಶದಲ್ಲಿ ನಮ್ಮ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿತ್ತು. ಯುಎಸ್‍ನಲ್ಲಿ 50 ದಿನ ಪ್ರದರ್ಶನಗೊಂಡ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇವರ ಕೆಲಸ ನೋಡಿ ನಾಲ್ಕು ಜನ ಸೇರಿಕೊಂಡು ಜಾಲಿಹಿಟ್ಸ್ ಮುಖಾಂತರ ನಿರ್ಮಾಣ ಮಾಡಿದ್ದೇವೆ ಎಂದರು. ನಿರ್ದೇಶಕ ಅನೂಪ್‍ಭಂಡಾರಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದು ಹೀಗೆ:

ಕನ್ನಡದಲ್ಲಿ ಪುನೀತ್ ಸರ್, ತೆಲುಗುನಲ್ಲಿ ಬಾಹುಬಲಿ ಖ್ಯಾತಿಯ ರಾಣದಗ್ಗುಭಾಟಿ ಕಂಠದಾನ ಮಾಡಿದ್ದಾರೆ. ಪುನೀತ್ ಅವರಿಗೆ ಕತೆಯ ತಿರುಳನ್ನು ಹೇಳಿದಾಗ ಸಂತೋಷದಿಂದ ಒಪ್ಪಿಕೊಂಡು ಎರಡು ದಿವಸ ಡಬ್ಬಿಂಗ್‍ನಲ್ಲಿ ಪಾಲ್ಗೋಂಡಿದ್ದರು. ರಾಜರಥನಾಗಿ ಕನ್ನಡಿಗರ ರಾಜರತ್ನ ಧ್ವನಿ ನೀಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಏಳು ಹಾಡುಗಳಿಗೆ ಸಾಹಿತ್ಯ,ಸಂಗೀತ ಒದಗಿಸಿದ್ದೇನೆ. ಅದರಲ್ಲೂ ಕನ್ನಡ ಏನು ಬಗ್ಗೆ ವಿಶೇಷ ಹಾಡನ್ನು ಸಂಯೋಜಿಸಲಾಗಿದೆ. ಕಳೆದ ಚಿತ್ರದ ಗೀತೆಗಳು ಸ್ಲೋಪಾಯಿಸನ್ ತರಹ ಇತ್ತು. ಇದು ಒಂದು ಸಲ ಕೇಳಿದರೆ ಮಾರುಹೋಗುತ್ತೇವೆ. ರೋಮಾಂಟಿಕ್ ಕಾಮಿಡಿಯಲ್ಲಿ ಸಂಪೂರ್ಣ ಮನರಂಜನೆ ನೀಡಲಿದೆ. ಊಟಿ, ಮಹಾಬಲೇಶ್ವರ, ಪುಣೆ ಬಳಿ ಇರುವ ಮಾಲ್‍ಶೇಠ್, ಮೈಸೂರು, ಬಾಂಬೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಪ್ಪ ಒಂದು ಬಾರಿಯೂ ನಮಗೆ ಹೊಡೆದಿಲ್ಲ. ಚಿತ್ರದ ಒಂದು ಸನ್ನಿವೇಶದಲ್ಲಿ ಅವರು ಕೆನ್ನೆಗೆ ಬಾರಿಸಿದ್ದಾರೆ. ನಾನು ಸಹ ಸೆಕೆಂಡ್‍ಗಳಲ್ಲಿ ಕಾಣ ಸಿಕೊಳ್ಳುತ್ತೇನೆ ಎಂದರು. ಅನಿವಾಸಿ ಭಾರತೀಯ ಅಂಜುವಲ್ಲಭನೇನಿ, ವಿಶುದಾಕಪ್ಪಗರಿ, ಅಜಯ್‍ರೆಡ್ಡಿ ಬಂಡವಾಳ ಹೂಡಿದ್ದು ಇವರುಗಳ ನುಡಿಗಳು ಪರದೆ ಮೇಲೆ ಬಿತ್ತರಗೊಂಡವು. ಹೊಸ ವರ್ಷದ ಮೊದಲ ತಿಂಗಳ ಕೊನೆವಾರದಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-29/12/17


ರಾಜರಥದಲ್ಲಿ ಬಾಹುಬಲಿಯ ಬಲ್ಲಾಳದೇವ
ರಂಗಿತರಂಗ ಹಿಟ್ ಚಿತ್ರ ನೀಡಿರುವ ಅನೂಪ್ ಮತ್ತು ನಿರೂಪ್ ಭಂಡಾರಿ ಸಹೋದರರ ಮುಂದಿನ ಚಿತ್ರ ‘ರಾಜರಥ’ ಸದ್ಯ ಕಂಠೀರವದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈಗ ಬಂದ ಮಾಹಿತಿಯಂತೆ ಟಾಲಿವುಡ್ ಸ್ಟಾರ್ ನಟ ಬಾಹುಬಲಿದಲ್ಲಿ ಬಲ್ಲಾಳದೇವ ಪಾತ್ರದಲ್ಲಿ ಕಾಣ ಸಿಕೊಂಡಿದ್ದ ರಾಣಾದಗ್ಗುಪಾಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಪಾತ್ರದ ವಿವರ ಬಿಟ್ಟುಕೊಡದ ಚಿತ್ರತಂಡವು ರಾಣಾ ತಂಡಕ್ಕೆ ಸೇರ್ಪಡೆಯಾಗಿರುವುದು ನಿಜ ಅಂತ ಒಪ್ಪಿಕೊಂಡಿದೆ. ಆರಂಭದಲ್ಲಿ ದಕ್ಷಿಣ ಭಾರತದ ಮೂವರು ತಾರಕದ ಕಲಾವಿದರು ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಅದರಂತೆ ಪುನೀತ್‍ರಾಜ್‍ಕುಮಾರ್ ಮಾತ್ತು ಕಾಲಿವುಡ್‍ನ ಆರ್ಯ ಕೂಡ ರಥ ಏರಿದ್ದಾರೆ. ಅಂತೂ ಇದೊಂದು ಮಲ್ಟಿಸ್ಟಾರ್ ಸಿನಿಮಾ ಅನ್ನೋದಕ್ಕೆ ಇವರೆಲ್ಲಾ ಇರುವುದು ಕಾರಣವಾಗಿದೆ. ಏಕಕಾಲದಲ್ಲಿ ಎರಡು ಕೆಲಸಗಳನ್ನು ನಿಭಾಯಿಸುತ್ತಿರುವ ನಿರ್ದೇಶಕ ಅನೂಪ್‍ಭಂಡಾರಿ ಸಿನಿಮಾವನ್ನು ಜನವರಿ 26ಕ್ಕೆ ವಿಶ್ವದಾದ್ಯಂತ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
-4/12/17

'ರಾಜರಥ'ದ ಫರ್ಸ್ಟ್ ಲುಕ್ಸ್
ಅನೂಪ್ ಭಂಡಾರಿ ನಿರ್ದೇಶನ ಹಾಗೂ ನಿರೂಪ್ ಭಂಡಾರಿ ಅಭಿನಯದ 'ರಾಜರಥಚಲನಚಿತ್ರದ ಮೂರು ಮುಖ್ಯ ಪಾತ್ರಧಾರಿಗಳ ಲುಕ್ಸ್ ಇವತ್ತು ರಿವೀಲ್ ಆಗಿದೆ.  'ರಾಜರಥ’ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರತ್ಯೇಕವಾಗಿ ತಯಾರಾಗುತ್ತಿರುವ ಬಹು ನಿರೀಕ್ಷಿತ ಚಿತ್ರ. ಈ ಚಿತ್ರದ ‘ಫಸ್ಟ್ ಲುಕ್ ಪೋಸ್ಟರ್ಇಂದು ಬಿಡುಗಡೆಯಾಗಿದೆ.

ಈ ಸಂದರ್ಭದಲ್ಲಿ ಮಾತಾಡಿದ ನಿರ್ಮಾಪಕ ಅಜಯ್ ರೆಡ್ಡಿ " ನಮ್ಮ 'ಜಾಲಿಹಿಟ್ಸ್ಸಂಸ್ಥೆ ಇಲ್ಲಿನ ಅನೇಕ ಸಿನಿಮಾಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ನಾವು ಸಿನಿಮಾ ಮಾಡಿದರೆ ಅದು ವಿಶಿಷ್ಟವಾಗಿರಬೇಕು. ವಿಶಿಷ್ಟ ಸಿನಿಮ ಮಾಡಲು ವಿಶೇಷ ಪ್ರತಿಭೆ ಬೇಕು. ಅದಕ್ಕಾಗಿ ಮೊದಲನೆಯ ಪ್ರಯತ್ನದಲ್ಲೇ ಆಸ್ಕರ್ಸ್ ಕದ ತಟ್ಟಿದ ನಿರ್ದೇಶಕ ಅನೂಪ್ ಭಂಡಾರಿ ನೇತೃತ್ವದಲ್ಲಿ 'ರಂಗಿತರಂಗ'ದ ಯಶಸ್ವೀ ಜೋಡಿ ನಿರೂಪ್ ಭಂಡಾರಿ ಮತ್ತು ಆವಂತಿಕ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ 'ರಾಜರಥನಿರ್ಮಿಸುತಿದ್ದೇವೆ. ಇದರಲ್ಲಿ ಮೊದಲ ಬಾರಿಗೆ ತಮಿಳುತೆಲುಗಿನ  ಸೂಪರ್ ಸ್ಟಾರ್ ಆರ್ಯ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ.” ಎಂದು ಹೇಳಿದರು. 

 ನಿರ್ದೇಶಕ ಅನೂಪ್ ಭಂಡಾರಿ ಮಾತಾಡಿ " 'ರಾಜರಥ'ದ 'ಫಸ್ಟ್ ಲುಕ್ ಪೋಸ್ಟರ್ಸಿನಿಮಾ ಪ್ರಿಯರಿಗಾಗಿ ಈ ದಿನ ಬಿಡುಗಡೆ ಮಾಡುತ್ತಿದ್ದೇವೆ. ಇದರಲ್ಲಿ ನಾಯಕ ಹಾಗೂ ನಾಯಕಿಯ ಲುಕ್ಸ್ ಮಾತ್ರವಲ್ಲದೆ ರವಿಶಂಕರ್ ಅವರ ವಿಶೇಷ ಗೆಟಪ್ಪನ್ನು ನೋಡಬಹುದು. ಹಾಗೆ ಈ ಪೊಸ್ಟರ್ ಸಿನಿಮಾದ ಫೀಲನ್ನು ತಿಳಿಸುತ್ತದೆ." ಎಂದು ಹೇಳಿದರು. 'ರಾಜರಥದ ಫಸ್ಟ್ ಲುಕ್ ಪೋಸ್ಟರನ್ನುಒಕ್ಟೋಬರ್ 2 ರಂದು ಸಂಜೆ ಆರು ಘಂಟೆಗೆ ಬಿಡುಗಡೆ ಮಾಡಲಾಯಿತು. ಉತ್ತಮ ಗುಣ ಮಟ್ಟಕ್ಕಾಗಿ ನಿರ್ದೇಶಕ ಅನೂಪ್ ಅತ್ಯುತ್ತಮ ತಂತ್ರಜ್ಞಾನದ ಕ್ಯಾಮರ ಹಾಗೂ ಬಾಲಿವುಡ್ ನ ಮನೀಷ್ ಠಾಕೂರ್ರಂಥಹ ಶ್ರೇಷ್ಠ  ದರ್ಜೆಯ ತಂತ್ರಜ್ಞರನ್ನು ಬಳಸಿಕೊಂಡಿದ್ದಾರೆ. ಡಿಸೈನರ್ಸ್ 'ಕಾನಿ ಸ್ಟುಡಿಯೋಸ್ತಮ್ಮ ಕ್ರಿಯೇಟಿವ್ ಪರಿಶ್ರಮದಿಂದ ನಿರ್ದೇಶಕರ ಕಲ್ಪನೆಗೆ ಸಾಕಾರ ರೂಪ ನೀಡಿದ್ದಾರೆ.

ಪೋಸ್ಟರಲ್ಲಿ ನಿರೂಪ್ ಸ್ಟೈಲಿಶ್ ಟುಕ್ಸೆಡೋ ಧರಿಸಿದ್ದರೆ, ನಾಯಕಿ ಅವಂತಿಕ ಗೌನ್ ಮತ್ತು ತಲೆಯ ಮೇಲೆ ಹಳದಿ ಹೆಲ್ಮೆಟ್ ಧರಿಸಿಕೈಯಲ್ಲಿ ಹಳದಿ ಕೊಡೆ ಹಿಡಿದಿದ್ದಾರೆ. ರವಿಶಂಕರ್ ಅಂತೂ ವಿಚಿತ್ರ ಕೇಶ ವಿನ್ಯಾಸದೊಂದಿಗೆ ಟ್ವೀಡ್ ಕೋಟ್ ಧರಿಸಿದ್ದಾರೆ. ಈ ಸ್ಟೈಲಿಶ್ ಉಡುಗೆಗಳನ್ನು ಡಿಸೈನ್ ಮಾಡಿದವರು ನೀತಾ ಶೆಟ್ಟಿ.

ಈ ಪೋಸ್ಟರ್ ಬಿಡುಗಡೆಯೊಂದಿಗೆ 'ರಾಜರಥಭರ್ಜರಿ ಬಿಡುಗಡೆಯತ್ತ ಪ್ರಯಾಣ ಪ್ರಾರಂಭಿಸಿದೆ. 'ರಾಜರಥತಂಡ ಸೂಪರ್ ಸ್ಟಾರ್ ಆರ್ಯ ಅವರ ಲುಕ್ ರಿವೀಲ್ ಮಾಡುವ ಪೊಸ್ಟರ್ ಸಧ್ಯದಲ್ಲೇ ಬಿಡುಗಡೆ ಮಾಡಲಿದ್ದಾರೆ. 'ಜಾಲಿಹಿಟ್ಸ್ನ ಅಜಯ್ ರೆಡ್ಡಿಅಂಜು ವಲ್ಲಭ್ವಿಶು ಡಾಕಪ್ಪಗಾರಿ ಮತ್ತು ಸತೀಶ ಶಾಸ್ತ್ರಿ ನಿರ್ಮಾಣದ  'ರಾಜರಥ'ಕ್ಕೆ ಅನೂಪ್ ಭಂಡಾರಿಯವರ ಸಂಗೀತಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತಶಾಂತಕುಮಾರ್ ಸಂಕಲನ ಹಾಗೂ ವಿಲಿಯಂ ಡೇವಿಡ್ ಛಾಯಗ್ರಹಣವಿದೆ.
-10/10/17

RANGITARANGA TEAM LAUNCHES ‘RAJARATHA
‘Rajaratha’ is the name of a new Kannada film that was launched by the Rangitaranga team on Sunday evening at a temple in Bengaluru. The film is being directed by Anup Bhandari. The film is produced by Vishu and Ajay Reddy under the aegis of their banner Jolly Hits Pvt Ltd, an overseas distributor of Kannada films. The director’s brother Nirup Bhandari will play the romantic lead in Rajaratha and Avantika Shetty will play his female counterpart in the movie.

For the first time an overseas distributor of Kannada films has forayed into film production. Vishu and Ajay Reddy have distributed Kannada films Godhi Banna Sadharana Mykattu, U-Turn and Rangitaranga in the US. Rangitaranga has grossed Rs 30 crore out of which Rs 3 crore came from the overseas distribution.

Rajaratha will have William David work as an independent cinematographer who earlier worked with Lance Kaplan in Rangitaranga. Ajneesh Lokanath will score the background music for the film. The film will start shoot in Ooty from July 12.

Anup Bhandari said the film will have a shoot schedule in four schedules and the film is a romantic comedy.  The director said the budget of the film will exceed that of Rangitaranga. Anup Bhandari will be composing six songs. Ravishankar will be playing the villain in the movie.

Nirup Bhandari said he is playing a college-going student in the film and added that the success of Rangitaranga had made him more responsible besides going back to his college days to play his role in the movie.
-11/07/16


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore